»   » 2014ರ ಟಾಪ್ ಹೀರೋಯಿನ್ ಗಳ ಕಂಪ್ಲೀಟ್ ಲಿಸ್ಟ್

2014ರ ಟಾಪ್ ಹೀರೋಯಿನ್ ಗಳ ಕಂಪ್ಲೀಟ್ ಲಿಸ್ಟ್

Posted By:
Subscribe to Filmibeat Kannada

ಹೊಸ ವರ್ಷಾರಂಭಕ್ಕೆ ಕೌಂಟ್ ಡೌನ್ ಶುರುವಾಗಿದೆ. ಹಾಗೇ 2014, ಯಾರ್ಯಾರಿಗೆ ಲಕ್ಕಿ ಅನ್ನುವುದರ ಬಗ್ಗೆ ಚರ್ಚೆ ಕೂಡ ಶುರುವಾಗಿದೆ. ಈ ವರ್ಷವನ್ನು ಕಂಪ್ಲೀಟ್ ತಿರುವಿ ಹಾಕಿ ನೋಡಿದರೆ, ಗಾಂಧಿನಗರದ ಮಟ್ಟಿಗೆ ಹೀರೋಯಿನ್ ಗಳಿಗೆ ಅಷ್ಟು ಅದೃಷ್ಟ ಪ್ರಾಪ್ತಿಯಾಗಿಲ್ಲ. ಕೆಲವರಿಗೆ ಒಂದು ಸಿನಿಮಾದಲ್ಲೇ ಸಕ್ಸಸ್ ಸವಿ ಸಿಕ್ಕಿದ್ರೆ, ಇನ್ನೂ ಕೆಲವರಿಗೆ ಅವಕಾಶಗಳು ಹೆಚ್ಚಿದ್ರೂ, ಯಶಸ್ಸು ಮಾತ್ರ ಸೊನ್ನೆ.

ಗಾಂಧಿನಗರದ ಹೆಣ್ ಚಿರತೆ ಬಗ್ಗೆ ಹೇಳೋದಾದರೆ, ಈ ವರ್ಷ ಎಲ್ಲರಿಗಿಂತ ಮೊದಲು 'ಘರ್ಷಣೆ' ಚಿತ್ರದ ಮೂಲಕ ತೆರೆಮೇಲೆ ಆರ್ಭಟಿಸಿದ್ದು ಲೇಡಿ ರ್ಯಾಂಬೋ ಮಾಲಾಶ್ರೀ. ಘರ್ಷಣೆ ಹಿಟ್ ಅಂತ ಘೋಷಿಸಿಕೊಳ್ಳದೇ ಇದ್ದರೂ, ನಿರ್ಮಾಪಕರಿಗೆ ಮಾಲಾಶ್ರೀ ಮೋಸ ಮಾಡ್ಲಿಲ್ಲ. ಅಷ್ಟರಮಟ್ಟಿಗೆ 'ಕನ್ನಡದ ಕಿರಣ್ ಬೇಡಿ', ದೊಡ್ಡ ದೊಡ್ಡ ನಾಯಕರಿಗೆ ಸಮ. [2014ರ ಸ್ಯಾಂಡಲ್ ವುಡ್ ನ ಲಕ್ಕಿ ಸ್ಟಾರ್ ಗಳು ಯಾರು?]

ಹಾಗೇ, 'ಕ್ರೇಜಿ ಸ್ಟಾರ್' ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ, 'ನಿನ್ನಿಂದಲೇ' ಚಿತ್ರದ ನಾಯಕಿ ಎರಿಕಾ ಫರ್ನಾಂಡಿಸ್, 'ಶಿವಾಜಿನಗರ' ಚಿತ್ರದ ನಾಯಕಿ ಪಾರುಲ್ ಯಾದವ್, 'ಬಹುಪರಾಕ್' ಚಿತ್ರದಲ್ಲಿ ದ್ವಿಪಾತ್ರ ಪೋಷಿಸಿದ್ದ ನಟಿ ಮೇಘನಾ ರಾಜ್. ಇವ್ರೆಲ್ಲಾ ಈ ವರ್ಷ ಕೇವಲ ಒಂದೇ ಚಿತ್ರದಲ್ಲಿ ಕಾಣಿಸಿಕೊಂಡಿದ್ರೂ, ಪ್ರೇಕ್ಷಕರ ಮನಗೆದ್ದಿದ್ದಾರೆ. ಇವ್ರೊಂದಿಗೆ 2014ರ ಟಾಪ್ ಹೀರೋಯಿನ್ ಗಳ ಕಂಪ್ಲೀಟ್ ಲಿಸ್ಟ್ ಇಲ್ಲಿದೆ, ಸ್ಲೈಡ್ ಗಳನ್ನು ಕ್ಲಿಕ್ ಮಾಡಿ......[ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

'ಆರ್ಯನ್' ಜೊತೆ ಓಡಿದ ರಮ್ಯಾ

ರಾಜಕೀಯದ ಜೊತೆ ಜೊತೆಗೆ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಜೊತೆ ಮೊಟ್ಟಮೊದಲ ಬಾರಿ ನಟಿಸಿದ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ, ಬಹುದಿನಗಳ ನಂತ್ರ ತೆರೆಮೇಲೆ ಕಾಣಿಸಿಕೊಂಡಿದ್ದು 'ಆರ್ಯನ್' ಚಿತ್ರದಲ್ಲಿ. ಇದೇ ಕಾರಣಕ್ಕೆ ಚಿತ್ರದ ಬಗ್ಗೆ ಬಹುನಿರೀಕ್ಷೆ ಇತ್ತು. ಕ್ರೀಡಾಪಟುವಾಗಿ ಪರದೆಮೇಲೆ ಮಿಂಚಿದ ರಮ್ಯಾ, ಅದೆಷ್ಟೋ ಅಭಿಮಾನಿಗಳ ಮನದಲ್ಲಿ ಈಗಲೂ ಅಚ್ಚುಮೆಚ್ಚಿನ ನಾಯಕಿ. ['ಆರ್ಯನ್' ವಿಮರ್ಶೆ: ಅಭಿಮಾನಿಗಳ ಆಸೆಗೆ ತಣ್ಣೀರು]

'ಬಹದ್ದೂರ್' ರಾಣಿ ರಾಧಿಕಾ ಪಂಡಿತ್

ಸ್ಯಾಂಡಲ್ ವುಡ್ ನಲ್ಲಿ ಸಖತ್ ಬಿಜಿಯಾಗಿರುವುದರ ಜೊತೆಗೆ ಬಹುಬೇಡಿಕೆ ಹೊಂದಿರುವ ನಟಿ ರಾಧಿಕಾ ಪಂಡಿತ್, ಈ ವರ್ಷ ಅಭಿಮಾನಿಗಳೆದುರಿಗೆ ಪ್ರತ್ಯಕ್ಷವಾಗಿದ್ದು 'ಬಹುದ್ದೂರ್' ಚಿತ್ರದಲ್ಲಿ ಮಾತ್ರ. ಆದ್ರೆ, ನೂರು ದಿನಗಳತ್ತ 'ಬಹದ್ದೂರ್' ಪಯಣ ಸಾಗುತ್ತಿರುವುದನ್ನ ನೋಡಿದ್ರೆ ಕಳೆದ ಎರಡು ವರ್ಷಗಳಂತೆ ಈ ವರ್ಷವೂ ರಾಧಿಕಾ ಪಾಲಿಗೆ ಸಖತ್ ಲಕ್ಕಿ. [ಬಹದ್ದೂರ್ ವಿಮರ್ಶೆ : ಅದ್ದೂರಿ, ಕಲರ್ ಫುಲ್ ಪ್ರೇಮ ಪಯಣ]

ಕೃತಿಗೆ ಅವಕಾಶದ ಜೊತೆ ಅದೃಷ್ಟ

ಕನ್ನಡತಿ ಅಲ್ಲದೇ ಇದ್ದರೂ ಕೃತಿ ಖರಬಂಧ ಸ್ಯಾಂಡಲ್ ವುಡ್ ನಲ್ಲೇ ನೆಲೆಯೂರುವ ಸಾಧ್ಯತೆ ಹೆಚ್ಚಿದೆ. ಅದಕ್ಕೆ ಕಾರಣ ಈ ವರ್ಷ ಆಕೆ ನಟಿಸಿದ ಚಿತ್ರಗಳು. ಸುಮಂತ್ ಜೊತೆ 'ತಿರುಪತಿ ಎಕ್ಸ್ ಪ್ರೆಸ್' ನಲ್ಲಿ ಮೋಡಿ ಮಾಡಿದ ಕೃತಿ, ಉಪ್ಪಿ ಜೊತೆ 'ಸೂಪರ್ ರಂಗ' ಚಿತ್ರದಲ್ಲಿ ಸೂಪರ್ರಾಗಿ, ಶಿವರಾಜ್ ಕುಮಾರ್ ಜೊತೆ 'ಬೆಳ್ಳಿ' ಚಿತ್ರದಲ್ಲಿ ನಟಿಸಿ, ಹ್ಯಾಟ್ರಿಕ್ ಬಾರಿಸಿದ್ದಾರೆ. [ಚಿತ್ರ ವಿಮರ್ಶೆ: ರಂಗನ ಕಿಕ್ ಗೆ ಪ್ರೇಕ್ಷಕ ಕ್ಲೀನ್ ಬೌಲ್ಡ್]

ಜಂಬದ ಹುಡುಗಿ ಪ್ರಿಯಾಮಣಿ

ಬರುವ ಅವಕಾಶಗಳನ್ನು ಅಳೆದು ತೂಗಿ ಒಪ್ಪಿಕೊಳ್ಳುವ ಪ್ರಿಯಾಮಣಿ ಅಭಿನಯದ 2014ರ ಏಕೈಕ ಚಿತ್ರ 'ಅಂಬರೀಶ'. ಆದ್ರೂ, ಪ್ರಿಯಾಮಣಿಗೆ ಡಿಮ್ಯಾಂಡು, ಅಭಿಮಾನಿಗಳ ಸಂಖ್ಯೆ ದೊಡ್ಡದಿದೆ. [ಚಿತ್ರ ವಿಮರ್ಶೆ: 'ಅಂಬರೀಶ' ಅಭಿಮಾನಿಗಳಿಗೆ ವಿಶೇಷ]

'ಫೇರ್ ಅಂಡ್ ಲವ್ಲಿ' ಶ್ವೇತಾ

'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ'ಯಾದ್ಮೇಲೆ ಪಡ್ಡೆ ಹೈಕ್ಳ ಕನಸಿನ ರಾಣಿಯಾಗಿರುವ ಶ್ವೇತಾ ಶ್ರೀವಾತ್ಸವ್ ಈ ವರ್ಷ 'ಫೇರ್ ಅಂಡ್ ಲವ್ಲಿ' ಚಿತ್ರದ ಮೂಲಕ ಭಾರಿ ಸದ್ದು ಮಾಡಿದರು. ಅದಕ್ಕೂ ಮುನ್ನ 'ಆತ್ಮಸಾಕ್ಷಿ' ಅನ್ನುವ ಚಿತ್ರದಲ್ಲಿ ಅಭಿನಯಿಸಿದ್ದರೂ, 'ಫೇರ್ ಅಂಡ್ ಲವ್ಲಿ' ಶ್ವೇತಾರ ಬೋಲ್ಡ್ ಪಾತ್ರವೇ ಪ್ರೇಕ್ಷಕರಿಗಿಷ್ಟ. ['ಫೇರ್ ಅಂಡ್ ಲವ್ಲಿ' ಫಿಲ್ಮಿಬೀಟ್ ಚಿತ್ರ ವಿಮರ್ಶೆ]

'ಹೆಣ್ ಹುಲಿ' ರಾಗಿಣಿ

ತಮ್ಮ ಎಂದಿನ ಸೆಕ್ಸಿ ಇಮೇಜ್ ಪಕ್ಕಕ್ಕಿಟ್ಟು ರಾಗಿಣಿ, ಈ ವರ್ಷ ಎಲ್ಲರಿಗೂ ಸರ್ಪ್ರೈಸ್ ನೀಡಿದ್ದು 'ರಾಗಿಣಿ ಐಪಿಎಸ್' ಚಿತ್ರದ ಮೂಲಕ. ಮೊದಲ ಬಾರಿಗೆ ಖಾಕಿ ಧರಿಸಿದ ರಾಗಿಣಿ, ದುಷ್ಟರ ಎದೆಸೀಳಿ ಎಲ್ಲರಿಂದ ಶಿಳ್ಳೆ-ಚಪ್ಪಾಳೆ ಗಿಟ್ಟಿಸಿದರು. ಜೊತೆಗೆ ಹಿಂದಿನ ರಾಗಿಣಿಯನ್ನ ನೋಡಬೇಕು ಅಂತ ಕಾಯ್ತಿದ್ದವರಿಗೂ 'ನಮಸ್ತೆ ಮೇಡಂ' ಆಗಿ ರಸದೌತಣ ನೀಡಿದರು. [ಚಿತ್ರ ವಿಮರ್ಶೆ: ಮೇಡಂಗೆ 'ಒಮ್ಮೆ' ನಮಸ್ತೇ ಹಾಕಿ]

'ಗಜಕೇಸರಿ' ಏರಿದ ಅಮೂಲ್ಯ

ಸಖತ್ ಸ್ಲಿಮ್ ಆಗಿ, ಹಿಂದಿಗಿಂತಲೂ ಅಲ್ಟ್ರಾ ಮಾಡರ್ನ್ ಆಗಿ, ಅಮೂಲ್ಯ ನಾಯಕಿಯಾಗಿ ನಟಿಸಿದ ಚಿತ್ರ 'ಗಜಕೇಸರಿ' ಹಿಟ್ ಆಯ್ತು. ಅಮೂಲ್ಯಗೆ ಒಳ್ಳೆ ಹೆಸರೂ ಸಿಕ್ತು.

ಅಭಿಮಾನಿಗಳ ದಿಲ್ ಗೆದ್ದ ರಚಿತಾ ರಾಮ್

ಈಗಷ್ಟೇ ಸ್ಯಾಂಡಲ್ ವುಡ್ ನಲ್ಲಿ ಅಂಬೆಗಾಲಿಡುತ್ತಿರುವ 'ಬುಲ್ ಬುಲ್' ಬೆಡಗಿ ರಚಿತಾ ರಾಮ್, 2014ರಲ್ಲಿ 'ದಿಲ್ ರಂಗೀಲಾ' ಮತ್ತು 'ಅಂಬರೀಶ' ಚಿತ್ರದಲ್ಲಿ ನಟಿಸುವ ಮೂಲಕ ಭರ್ಜರಿ ಚಾನ್ಸ್ ಗಿಟ್ಟಿಸಿಕೊಂಡರು.

ಸದ್ದು ಮಾಡಿದ ಸೌಂದರ್ಯ

ಕಳೆದ ವರ್ಷ ಸೈಲೆಂಟಾಗಿದ್ದ ಹಿರಿಯ ನಟಿ ಜಯಮಾಲ ಪುತ್ರಿ ಸೌಂದರ್ಯ, 2014ರಲ್ಲಿ ಸದ್ದು ಮಾಡಿದ್ದು ಎರಡು ಚಿತ್ರಗಳಿಂದ. 'ಪಾರು ವೈಫ್ ಆಫ್ ದೇವದಾಸ್' ಮತ್ತು 'ಸಿಂಹಾದ್ರಿ' ಚಿತ್ರಗಳ ಮೂಲಕ ಸೌಂದರ್ಯ ಈ ವರ್ಷ ಜನಮೆಚ್ಚುಗೆ ಗಳಿಸಿದ್ದಾರೆ. [ಸಿಂಹಾದ್ರಿ ಚಿತ್ರವಿಮರ್ಶೆ: ನಾಡಿನ ಸಮಸ್ತ ತಂಗಿಯರಿಗೆ ಅರ್ಪಣೆ]

ತ್ರಿಷಾ 'ಪವರ್'

'ಪವರ್ ***' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಬಹುಭಾಷಾ ನಟಿ ತ್ರಿಷಾ. ಹಾಡುಗಳಲ್ಲಿ ಗ್ಲಾಮರ್ ರಂಗನ್ನ ತುಂಬಿದರೂ, ತೆಲುಗು-ತಮಿಳಿನಲ್ಲಿ ಮೋಡಿ ಮಾಡಿದ ಹಾಗೆ, ತ್ರಿಷಾ ಇಲ್ಲಿ ಮಾಡ್ಲಿಲ್ಲ. [ಚಿತ್ರ ವಿಮರ್ಶೆ: ಪುನೀತ್ 'ಪವರ್'ಫುಲ್ ಪರಮಾತ್ಮ]

ಪೂಜಾ ಗಾಂಧಿಗೆ ಪ್ರಾಪ್ತಿಯಾಗ್ಲಿಲ್ಲ 'ಕಲ್ಯಾಣಮಸ್ತು'

ಪೂಜಾ ಗಾಂಧಿ ಅಭಿನಯದ 'ಕಲ್ಯಾಣ ಮಸ್ತು' ಸಿನಿಮಾ ಯಾವಾಗ ರಿಲೀಸ್ ಆಯ್ತು ಅನ್ನುವುದೇ ಪ್ರೇಕ್ಷಕರಿಗೆ ಗೊತ್ತಿಲ್ಲ. ನಿಜಜೀವನದಲ್ಲಿ ನಿಶ್ಚಿತಾರ್ಥ ಮುರಿದು ಬೀಳ್ತಿದ್ದ ಹಾಗೆ ರೀಲ್ ಜೀವನದ 'ಕಲ್ಯಾಣಮಸ್ತು' ಕೂಡ ಹೇಳಹೆಸರಿಲ್ಲದಂತೆ ಕಣ್ಮರೆಯಾಯ್ತು.

ಸಿಂಧುಗೆ ಸಕ್ಸಸ್ ಸಿಗ್ಲಿಲ್ಲ!

ಎಲ್ಲಾ ದೊಡ್ಡ ನಟೀಮಣಿಯರನ್ನು ಸೈಡಿಗೆ ತಳ್ಳಿ, ಈ ವರ್ಷ ಸಿಂಧು ಲೋಕನಾಥ್ ನಟಿಸಿದ್ದು ಬರೋಬ್ಬರಿ ಮೂರು ಚಿತ್ರಗಳಲ್ಲಿ. 'ನನ್ ಲೈಫಲ್ಲಿ', 'ಎಂದೆಂದೂ ನಿನಗಾಗಿ' ಮತ್ತು 'ಲವ್ ಇನ್ ಮಂಡ್ಯ' ಚಿತ್ರಗಳಲ್ಲಿ ನಟಿಸಿರುವ ಸಿಂಧುಗೆ, ಕನಿಷ್ಟ ಒಂದು ಚಿತ್ರವೂ 'ಯಶಸ್ವಿ' ಅನ್ನುವ ಹಣೆಪಟ್ಟಿ ತಂದುಕೊಡಲಿಲ್ಲ.

ಪ್ರಣೀತಾ ಪರದಾಟ

ಸ್ಯಾಂಡಲ್ ವುಡ್, ಕಾಲಿವುಡ್ ಮತ್ತು ಟಾಲಿವುಡ್. ಹೀಗೆ ಮೂರು ಕಡೆ ಜಿಗಿಯುತ್ತಿರುವ ಪ್ರಣೀತಾಗೆ ಈ ವರ್ಷ ಅವಕಾಶಗಳ ಸಂಖ್ಯೆ ಹೆಚ್ಚಾಗಿದ್ದರೂ, ಸಕ್ಸಸ್ ರೇಟ್ ತುಂಬಾ ಕಮ್ಮಿ. ಅದಕ್ಕೆ ಕನ್ನಡ ಚಿತ್ರಗಳ ಉದಾಹರಣೆ ಅಂದ್ರೆ 'ಅಂಗಾರಕ' ಮತ್ತು 'ಬ್ರಹ್ಮ'. ['ಬ್ರಹ್ಮ' ಚಿತ್ರ ವಿಮರ್ಶೆ: ಎಲ್ಲಾ ಓಕೆ ಕನ್ಫ್ಯೂಸ್ ಯಾಕೆ?]

ಕಂಡರೂ ಕಾಣದ ನಟೀಮಣಿಯರು

ಯಜ್ಞಾ ಶೆಟ್ಟಿ, ದೀಪಾ ಸನ್ನಿಧಿ, ಹರ್ಷಿಕಾ ಪೂಣಚ್ಚ, ನಿವೇದಿತಾ, ಹರಿಪ್ರಿಯಾ, ಐಂದ್ರಿತಾ ರೇ...ಈ ಎಲ್ಲಾ ನಟೀಯರೂ ಕೂಡ ಈ ವರ್ಷ ತೆರೆಮೇಲೆ ಪ್ರತ್ಯಕ್ಷವಾಗಿದ್ದಾರೆ. ಆದ್ರೆ, ಅದ್ಯಾವ್ಯಾವ ಸಿನಿಮಾಗಳಲ್ಲಿ ಅಂತ ನೆನಪಿಸಿಕೊಳ್ಳುವುದಕ್ಕೆ ಪ್ರೇಕ್ಷಕರು ತಿಣುಕಾಡಬೇಕು. ಅಷ್ಟರಮಟ್ಟಿಗೆ ಸಿನಿಪ್ರಿಯರನ್ನ ರಂಜಿಸುವಲ್ಲಿ ಈ ನಟಿಯರು ಎಡವಿದ್ದಾರೆ.

English summary
2014 saw a huge string of flop and hit series of Kannada Movies. Here is the list of Top Actresses of Sandalwood, who managed to impress the Audience this year.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada