twitter
    For Quick Alerts
    ALLOW NOTIFICATIONS  
    For Daily Alerts

    2016ರ ರಿಮೇಕ್ ಚಿತ್ರಗಳಲ್ಲಿ ನಿಮ್ಮ ಆಯ್ಕೆ ಯಾವುದು?

    By Bharath Kumar
    |

    ಪ್ರತಿವರ್ಷದಂತೆ ಈ ವರ್ಷವೂ ಕನ್ನಡದಲ್ಲಿ ರಿಮೇಕ್ ಸಿನಿಮಾಗಳು ಸ್ಯಾಂಡಲ್ ವುಡ್ ಗೆದ್ದು ಬೀಗಿವೆ. ಕಳೆದ ವರ್ಷಕ್ಕೆ ಹೋಲಿಸಿದ್ರೆ, ಈ ವರ್ಷ ರಿಮೇಕ್ ಸಿನಿಮಾಗಳ ಸಂಖ್ಯೆಯಲ್ಲಿ ಹೇಳಿಕೊಳ್ಳುವಂತಹ ವ್ಯತ್ಯಾಸವೇನು ಆಗಿಲ್ಲ.

    ಆದ್ರೆ, ಈ ಬಾರಿ ತೆರೆಕಂಡ ರಿಮೇಕ್ ಸಿನಿಮಾಗಳು ಬಹುತೇಕ ಯಶಸ್ವಿಯಾಗಿರುವುದು ಈ ವರ್ಷದ ಸಾಧನೆ. ಹಾಗಾದ್ರೆ, 2016 ರಲ್ಲಿ ರಿಲೀಸ್ ಆಗಿರುವ ರಿಮೇಕ್ ಚಿತ್ರಗಳಲ್ಲಿ ಯಾವ ಸಿನಿಮಾ ನಿಮ್ಗೆ ಇಷ್ಟವಾಗಿದೆ.[2016ರ ಅತ್ಯುತ್ತಮ ಚಿತ್ರ-ನಟ-ನಟಿ-ನಿರ್ದೇಶಕರನ್ನ ಆಯ್ಕೆ ಮಾಡಿ!]

    ಈ ವರ್ಷ ಕನ್ನಡದಲ್ಲಿ ಬಿಡುಗಡೆಯಾದ ರಿಮೇಕ್ ಸಿನಿಮಾಗಳ ವಿವರಗಳನ್ನ ಕೆಳಗಿರುವ ಸ್ಲೈಡ್ ಗಳಲ್ಲಿ ನೀಡಲಾಗಿದೆ. ಯಾವುದು ಅತ್ಯುತ್ತಮ ರಿಮೇಕ್ ಚಿತ್ರವೆಂದು ನಿಮ್ಮ ಅಭಿಪ್ರಾಯ ತಿಳಿಸಿ.

    ಕಥೆ-ಚಿತ್ರಕಥೆ-ನಿರ್ದೇಶನ ಪುಟ್ಟಣ್ಣ

    ಕಥೆ-ಚಿತ್ರಕಥೆ-ನಿರ್ದೇಶನ ಪುಟ್ಟಣ್ಣ

    ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ 'ಕಥೆ-ಚಿತ್ರಕಥೆ-ನಿರ್ದೇಶನ ಪುಟ್ಟಣ್ಣ' ರಿಮೇಕ್ ಸಿನಿಮಾ. ಕನ್ನಡದಲ್ಲಿ ಕೋಮಲ್ ಅಭಿನಯಿಸಿದ್ದ ಈ ಚಿತ್ರ, ತೆಲುಗಿನ 'ಗೀತಾಂಜಲಿ' ಚಿತ್ರದ ಕನ್ನಡ ಅವತರಣಿಕೆ. ತೆಲುಗಿನಲ್ಲಿ ಶ್ರೀನಿವಾಸ ರೆಡ್ಡಿ, ಅಂಜಲಿ ಅಭಿನಯಿಸಿದ್ದ ಪಾತ್ರಗಳಲ್ಲಿ, ಕನ್ನಡದಲ್ಲಿ ಕೋಮಲ್ ಹಾಗೂ ಪ್ರಿಯಾಮಣಿ ಕಾಣಿಸಿಕೊಂಡಿದ್ರು.[2016ರ ಅತ್ಯುತ್ತಮ ಕನ್ನಡದ ನವ ನಟಿ ಯಾರು? ]

    ಭಲೇ ಜೋಡಿ

    ಭಲೇ ಜೋಡಿ

    ಸುಮಂತ್ ಶೈಲೇಂದ್ರ ಅಭಿನಯಿಸಿದ್ದ 'ಭಲೇ ಜೋಡಿ' ಸಿನಿಮಾ ತೆಲುಗಿನಲ್ಲಿ ಹಿಟ್ ಆಗಿದ್ದ 'ಅಲಾ ಮೊದಲಾಯಿಂದಿ' ಚಿತ್ರದ ರಿಮೇಕ್. ತೆಲುಗಿನಲ್ಲಿ ನಾನಿ, ನಿತ್ಯ ಮೆನನ್ ಕಾಣಿಸಿಕೊಂಡಿದ್ದರು. ಕನ್ನಡದಲ್ಲಿ ಸುಮಂತ್ ಮತ್ತು ಶಾನ್ವಿ ಶ್ರೀವತ್ಸವ್ ಅಭಿನಯಿಸಿದ್ದರು. ಇನ್ನೂ 'ಭಲೇಜೋಡಿ'ಗಳಿಗೆ ಸಾಧುಕೋಕಿಲಾ ನಿರ್ದೇಶನದ ಜೊತೆಗೆ ಸಂಗೀತ ನಿರ್ದೇಶನ ಕೂಡ ಮಾಡಿದ್ದರು.[2016 ರಲ್ಲಿ ಭರವಸೆ ಮೂಡಿಸಿದ ಯುವನಟ ಯಾರು? ]

    ಮಿ.ಮಿಸ್ಟರ್ ಮೊಮ್ಮಗ

    ಮಿ.ಮಿಸ್ಟರ್ ಮೊಮ್ಮಗ

    ರವಿಗೌಡ, ರಂಗಾಯಣ ರಘು, ಓವಿಯಾ ನಟಿಸಿದ್ದ 'ಮಿ.ಮಿಸ್ಟರ್ ಮೊಮ್ಮಗ' ತಮಿಳಿನ 'ಮಂಜಪ್ಪೈ' ಚಿತ್ರದ ರಿಮೇಕ್. ತಾತ ಮತ್ತು ಮೊಮ್ಮಗನ ಕಥಾಹಂದರವನ್ನ ಹೊಂದಿದ್ದ ಈ ಚಿತ್ರ ಕಾಮಿಡಿ ಕಮ್ ಎಮೋಷನಲ್ ಎಂಟರ್ ಟೈನ್ಮೆಂಟ್ ಆಗಿತ್ತು. ಎನ್ ಆರ್ ರಾಘವನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಸಂಗೀತವನ್ನ ಕೂಡ ಅವರೇ ಒದಗಿಸಿದ್ದರು.[2016: ಈ ವರ್ಷದ ಅತ್ಯುತ್ತಮ ನಾಯಕಿ ಯಾರು? ]

    ಜಿಗರ್ ಥಂಡಾ

    ಜಿಗರ್ ಥಂಡಾ

    ತಮಿಳಿನ ಬ್ಲ್ಯಾಕ್ ಬಸ್ಟರ್ ಸಿನಿಮಾ 'ಜಿಗರ್ ಥಂಡಾ' ಕನ್ನಡದಲ್ಲೂ ಈ ವರ್ಷ ಅದೇ ಹೆಸರಿನಲ್ಲಿ ಮೂಡಿಬಂತು. ತಮಿಳಿನಲ್ಲಿ ಸಿದ್ಧಾರ್ಥ ಮತ್ತು ಬಾಬಿಸಿಂಹ ಅಭಿನಯಿಸಿದ್ದ ಪಾತ್ರಗಳಲ್ಲಿ, ಕನ್ನಡದಲ್ಲಿ ರಾಹುಲ್ ಹಾಗೂ ರವಿಶಂಕರ್ ಅಬ್ಬರಿಸಿದ್ದರು. ತಮಿಳಿನಲ್ಲಿ ಹಿಟ್ ಆದಂತೆ ಕನ್ನಡದಲ್ಲೂ ಸಿನಿಮಾ ಸಕ್ಸಸ್ ಕಂಡಿತ್ತು. ಶಿವಗಣೇಶ್ ಈ ಚಿತ್ರವನ್ನ ಕನ್ನಡದಲ್ಲಿ ನಿರ್ದೇಶನ ಮಾಡಿದ್ರು.[2016ರ ಅತ್ಯುತ್ತಮ ಕನ್ನಡ ನಟ ಯಾರು? ನಿಮ್ಮ ಆಯ್ಕೆ? ]

    ಲಕ್ಷ್ಮಣ

    ಲಕ್ಷ್ಮಣ

    ಆರ್.ಚಂದ್ರು ನಿರ್ದೇಶನ ಮಾಡಿದ್ದ 'ಲಕ್ಷ್ಮಣ' ಈ ವರ್ಷ ಬಿಡುಗಡೆಯಾದ ಮತ್ತೊಂದು ರಿಮೇಕ್ ಸಿನಿಮಾ. ತೆಲುಗಿನಲ್ಲಿ ಕಲ್ಯಾಣ್ ರಾಮ್ ಅಭಿನಯಿಸಿದ್ದ 'ಅತನೋಕ್ಕಡೆ' ಚಿತ್ರದ ಕನ್ನಡ ಅವತರಣಿಕೆ 'ಲಕ್ಷ್ಮಣ'. ಈ ಚಿತ್ರದಲ್ಲಿ ರಾಜಕಾರಣಿ ಎಚ್.ಎಂ.ರೇವಣ್ಣ ಅವರ ಪುತ್ರ ಅನೂಪ್ ರೇವಣ್ಣ ಹಾಗೂ ಮೇಘನಾ ರಾಜ್ ಅಭಿನಯಿಸಿದ್ದರು.

    ಕಲ್ಪನಾ-2

    ಕಲ್ಪನಾ-2

    ರಿಯಲ್ ಸ್ಟಾರ್ ಉಪೇಂದ್ರ ಅಭಿನಯಿಸಿದ್ದ 'ಕಲ್ಪನಾ-2' ತಮಿಳಿನ 'ಕಾಂಚನ-2' ಚಿತ್ರದ ರಿಮೇಕ್. ತಮಿಳಿನಲ್ಲಿ ರಾಘವ ಲಾರೆನ್ಸ್ ನಿರ್ದೇಶನ ಮಾಡಿ ಅಭಿನಯಿಸಿದ್ದ 'ಕಾಂಚನಾ-2, 'ಕನ್ನಡದಲ್ಲಿ 'ಕಲ್ಪನಾ-2 'ಆಗಿತ್ತು. ಅನಂತ್ ರಾಜು ನಿರ್ದೇಶನದ ಈ ಚಿತ್ರದಲ್ಲಿ ಉಪೇಂದ್ರಗೆ ಪ್ರಿಯಾಮಣಿ, ಮತ್ತು ಆವಂತಿಕಾ ಶೆಟ್ಟಿ ನಾಯಕಿಯರಾಗಿ ಸಾಥ್ ಕೊಟ್ಟಿದ್ದರು.

    ಅಸ್ತಿತ್ವ

    ಅಸ್ತಿತ್ವ

    ನೂತನ್ ಉಮೇಶ್ ನಿರ್ದೇಶನ ಮಾಡಿದ್ದ 'ಅಸ್ತಿತ್ವ' ತಮಿಳಿನ 'ನಾನ್' ಚಿತ್ರದ ರಿಮೇಕ್. ತಮಿಳಿನಲ್ಲಿ ವಿಜಯ್ ಆಂಟೋನಿ ಕಾಣಿಸಿಕೊಂಡಿದ್ದು, ಕನ್ನಡದಲ್ಲಿ ಯುವರಾಜ್, ಪ್ರಜ್ವಲ್ ಪೂವಯ್ಯ ಅಭಿನಯಿಸಿದ್ದರು.

    ಗೋಲಿಸೋಡ

    ಗೋಲಿಸೋಡ

    ತಮಿಳಿನ ಸೂಪರ್ ಹಿಟ್ ಚಿತ್ರ 'ಗೋಲಿಸೋಡ', ಅದೇ ಹೆಸರಿನಲ್ಲಿ ಕನ್ನಡದಲ್ಲೂ ತಯಾರಾಗಿತ್ತು. ಕನ್ನಡದಲ್ಲಿ ತಾರಾ, ಪ್ರಿಯಾಂಕ ಜೈನ್, ಶಿಲ್ಲೆ ಮಂಜುನಾಥ್, ವಿಕ್ರಮ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದರು. ಕನ್ನಡದಲ್ಲಿ ರಘು ಜಯ ಆಕ್ಷನ್ ಕಟ್ ಹೇಳಿದ್ದು, ತಮಿಳಿನಲ್ಲಿ ಈ ಚಿತ್ರವನ್ನ ವಿಜಯ್ ಮಿಲ್ಟನ್ ನಿರ್ದೇಶನ ಮಾಡಿದ್ದರು.

    ಇದೊಳ್ಳೆ ರಾಮಾಯಣ

    ಇದೊಳ್ಳೆ ರಾಮಾಯಣ

    ಪ್ರಕಾಶ್ ರೈ ನಿರ್ದೇಶನ ಮಾಡಿ, ನಟಿಸಿದ್ದ 'ಇದೊಳ್ಳೆ ರಾಮಾಯಣ' ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಿತ್ತು. ಪ್ರಿಯಾಮಣಿ, ಅಚ್ಯುತ್ ಕುಮಾರ್ ಪ್ರಕಾಶ್ ರೈ ಜೊತೆ ತೆರೆ ಹಂಚಿಕೊಂಡಿದ್ದರು. ಕನ್ನಡದ 'ಇದೊಳ್ಳೆ ರಾಮಾಯಣ,' ಮಲಯಾಳಂನ 'ಶಟ್ಟರ್' ಚಿತ್ರದ ರಿಮೇಕ್. ಮಲಯಾಳಂನ 'ಶಟ್ಟರ್' ಚಿತ್ರವನ್ನ ಜಾಯ್ ಮ್ಯಾಥ್ಯೂವ್ ನಿರ್ದೇಶನ ಮಾಡಿದ್ದು, ಲಾಲ್, ಶ್ರೀನಿವಾಸ ಪ್ರಮುಖ ಪಾತ್ರಗಳನ್ನ ನಿರ್ವಹಿಸಿದ್ದರು.

    ಮುಕುಂದ ಮುರಾರಿ

    ಮುಕುಂದ ಮುರಾರಿ

    ಕಿಚ್ಚ ಸುದೀಪ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಅಭಿನಯಿಸಿದ್ದ 'ಮುಕುಂದ ಮುರಾರಿ' ಈ ವರ್ಷದ ಬಿಗ್ಗೆಸ್ಟ್ ಹಿಟ್ ಸಿನಿಮಾಗಳಲ್ಲಿ ಒಂದು. 'ಮುಕುಂದ ಮುರಾರಿ' ಹಿಂದಿಯ 'ಓ ಮೈ ಗಾಡ್' ಚಿತ್ರದ ರಿಮೇಕ್. ಹಿಂದಿಯಲ್ಲಿ ಪರೇಶ್ ರಾವಲ್ ಮತ್ತು ಅಕ್ಷಯ್ ಕುಮಾರ್ ಕಾಣಿಸಿಕೊಂಡಿದ್ದರು. ಅದೇ ಪಾತ್ರಗಳನ್ನ ಕನ್ನಡದಲ್ಲಿ ಉಪೇಂದ್ರ ಹಾಗೂ ಸುದೀಪ್ ನಿರ್ವಹಿಸಿದ್ದರು. ಈ ಚಿತ್ರವನ್ನ ನಂದಕಿಶೋರ್ ನಿರ್ದೇಶನ ಮಾಡಿದ್ದರು.

    ಸುಂದರಾಂಗ ಜಾಣ

    ಸುಂದರಾಂಗ ಜಾಣ

    ರಮೇಶ್ ಅರವಿಂದ್ ನಿರ್ದೇಶನ ಮಾಡಿ, ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯಿಸಿರುವ ಚಿತ್ರ 'ಸುಂದರಾಂಗ ಜಾಣ'. ತೆಲುಗಿನ 'ಭಲೇ ಭಲೇ ಮೊಗಾಡಿವೂಯ್' ಚಿತ್ರದ ಕನ್ನಡ ಅವತರಣಿಕೆ. ಈ ಚಿತ್ರದಲ್ಲಿ ಶಾನ್ವಿ ಶ್ರೀವತ್ಸವ್, ಗಣೇಶ್ ಗೆ ನಾಯಕಿಯಾಗಿದ್ದಾರೆ. ತೆಲುಗಿನಲ್ಲಿ ನಾನಿ ಮತ್ತು ಲಾವಣ್ಯ ತ್ರಿಪತಿ ಕಾಣಿಸಿಕೊಂಡಿದ್ದರು. ಸುಂದರಾಂಗ ಜಾಣ ಡಿಸೆಂಬರ್ 23 ರಂದು ತೆರೆಕಾಣಬೇಕಿದೆ.['ಬೆಸ್ಟ್ ಆಫ್-2016' ಫಿಲ್ಮಿಬೀಟ್ ಮತದಾನಕ್ಕೆ ಕನ್ನಡ ತಾರೆಯರು ಸಾಥ್! ]

    English summary
    When compared to original movies, the official remake films have collected good at the box office. Jigarthanda, kalpana2, mukunda murari, lakshaman, bhale jodi and the yet to be released 'sundaranga jaana' are some of the best remakes in this year. which is the Best Remake Movie in Sanadlwood 2016.
    Thursday, December 29, 2016, 9:52
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X