»   » ಇಂಥ ಅಭಿಮಾನಿಗಳಿದ್ರೆ, ಕಿಚ್ಚನ ಸ್ವರ್ಗಕ್ಕೆ ಕಿಚ್ಚು ಹಚ್ಚಿದಂತೆ.!

ಇಂಥ ಅಭಿಮಾನಿಗಳಿದ್ರೆ, ಕಿಚ್ಚನ ಸ್ವರ್ಗಕ್ಕೆ ಕಿಚ್ಚು ಹಚ್ಚಿದಂತೆ.!

Posted By:
Subscribe to Filmibeat Kannada

ಕಿಚ್ಚ ಸುದೀಪ್ 'ಯಾರು?' ಎಂಬುದನ್ನು ಕ್ರಿಕೆಟಿಗ ಅಲೆಕ್ಸ್ ಗೆ ಮಾತ್ರ ಅಲ್ಲ, ಇಡೀ ಜಗತ್ತಿಗೆ ಬಣ್ಣಿಸಲು 'ಅಭಿನಯ ಚಕ್ರವರ್ತಿ' ಸುದೀಪ್ ಅಭಿಮಾನಿಗಳು ಪಣತೊಟ್ಟಿರುವಂತಿದೆ. ಸುದೀಪ್ ಕುರಿತು ಟ್ವಿಟ್ಟರ್ ನಲ್ಲಿ ಅಭಿಮಾನಿಗಳ ವರ್ಣನೆ ಬಲು ಜೋರಾಗಿ ನಡೆಯುತ್ತಿದೆ.

ಕ್ರಿಕೆಟ್ ಕಾಶಿ 'ಲಾರ್ಡ್ಸ್' ಮೈದಾನದಲ್ಲಿ ಕ್ರಿಕೆಟ್ ಆಡಲು ಲಂಡನ್ ಗೆ ಹಾರಿದ್ದ ಕಿಚ್ಚ ಸುದೀಪ್, ಅಲ್ಲಿನ ಕ್ರಿಕೆಟರ್ ಅಲೆಕ್ಸ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು. 'ಲಾರ್ಡ್ಸ್' ಮೈದಾನದಲ್ಲಿ ಗೆಲುವಿನ ಮಂದಹಾಸ ಬೀರಿದ ಸುದೀಪ್ ರವರೊಂದಿಗಿನ ಫೋಟೋ ಸಮೇತ, ''ಈ ಬಾಲಿವುಡ್ ನಟ ಯಾರು? ಎಂಬುದು ನಿಮಗೆ ಗೊತ್ತೇ'' ಎಂದು ಕ್ರಿಕೆಟಿಗ ಅಲೆಕ್ಸ್ ಟ್ವಿಟ್ಟರ್ ನಲ್ಲಿ ಪ್ರಶ್ನೆ ಕೇಳಿದ್ದರು.['ಸುದೀಪ್ ಯಾರು.?' ಎಂದು ಕೇಳಿದ ಮಹಾನುಭಾವ 'ಕ್ರಿಕೆಟಿಗ' ಈತ.!]

ಇದಕ್ಕೆ ಒಬ್ಬೊಬ್ಬರಾಗಿ ಉತ್ತರ ಕೊಡುತ್ತಿರುವ 'ಕಿಚ್ಚ'ನ ಭಕ್ತರು, ಸುದೀಪ್ ರವರನ್ನ ಟ್ವಿಟ್ಟರ್ ನಲ್ಲಿ ಹಾಡಿ ಹೊಗಳುವ ಮೂಲಕ ಅಲೆಕ್ಸ್ ರವರಿಗೆ ಪರಿಚಯ ಮಾಡಿಕೊಡುತ್ತಿದ್ದಾರೆ. ಮುಂದೆ ಓದಿ....

ಕರ್ನಾಟಕದ ಹೆಮ್ಮೆ

ಕ್ರಿಕೆಟರ್ ಅಲೆಕ್ಸ್ ಕೇಳಿದ ಪ್ರಶ್ನೆಗೆ, ''ಅವರು ಸ್ಯಾಂಡಲ್ ವುಡ್ ನಟ. ಅತ್ಯುತ್ತಮ ಚಿತ್ರಗಳನ್ನ ಮಾಡುವ ಮೂಲಕ ಕರುನಾಡ ಜನತೆಗೆ ಸುದೀಪ್ ಹೆಮ್ಮೆ ತಂದಿದ್ದಾರೆ'' ಎಂದು ಅಭಿಮಾನಿಯೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.

ಆಲ್ ರೌಂಡರ್

ಕಿಚ್ಚ ಸುದೀಪ್ ಬಗ್ಗೆ ಕಿಚ್ಚ ಸುದೀಪ್ ಅಭಿಮಾನಿಗಳು ನೀಡಿರುವ ಕಿರು ಪರಿಚಯ ಇದು.

'ಅಭಿನಯ ಚಕ್ರವರ್ತಿ'

''ಕಿಚ್ಚ ಸುದೀಪ್ 'ಅಭಿನಯ ಚಕ್ರವರ್ತಿ' ಅಂದ್ರೆ ''ನಟನೆಯಲ್ಲಿ ಚಕ್ರವರ್ತಿ' ಎಂದು ಅರ್ಥ'' - ಹೀಗಂತ ಕಿಚ್ಚನ ಭಕ್ತರೊಬ್ಬರು ಬಣ್ಣಿಸಿದ್ದಾರೆ.

ಬಾಲಿವುಡ್ ಸ್ಟಾರ್.!

''ಬಾಲಿವುಡ್ ನಟನಂತೆ ಕಿಚ್ಚ ಸುದೀಪ್ ಕಾಣುತ್ತಾರೆ ಎಂಬುದು ಅಕ್ಷರಶಃ ಸತ್ಯ'' - ನರಸಿಂಹ

ಗುಡ್ ಕ್ಯಾಪ್ಟನ್

''ಕಿಚ್ಚ ಸುದೀಪ್ ಕನ್ನಡ ಚಿತ್ರರಂಗ ದಿಗ್ಗಜ. ಜೊತೆಗೆ ನಟರ ಕ್ರಿಕೆಟ್ ತಂಡದ ಕ್ಯಾಪ್ಟನ್. ಉತ್ತಮ ವಿಕೆಟ್ ಕೀಪರ್ ಮತ್ತು ಕ್ಯಾಪ್ಟನ್'' - ಮನು ಜಾರ್ಜ್

ಸೂಪರ್ ಸ್ಟಾರ್

''ಬೆಂಗಳೂರಿನಲ್ಲಿ ನೆಲೆಸಿರುವ ಕಿಚ್ಚ ಸುದೀಪ್ ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್'' - ಮಂಜು

'ಈಗ' ಸಿನಿಮಾ ನೋಡಿ ಸಾಕು

''ಯೂಟ್ಯೂಬ್ ನಲ್ಲಿ 'ಈಗ' ಚಿತ್ರವನ್ನ ಹುಡುಕಿ, ವೀಕ್ಷಿಸಿ ಸಾಕು. ನಿಮಗೆ ಸುದೀಪ್ ಎಂಥ ದೊಡ್ಡ ನಟ ಅಂತ ಅರ್ಥವಾಗುತ್ತೆ'' ಎಂದು ಅಭಿಮಾನಿಯೊಬ್ಬರು ತಿಳಿಸಿದ್ದಾರೆ.

ಸಂಜನಾ ಕೂಡ ರಿಪ್ಲೈ ಮಾಡಿದ್ದಾರೆ.!

ಕ್ರಿಕೆಟರ್ ಅಲೆಕ್ಸ್ ಕೇಳಿರುವ ಪ್ರಶ್ನೆಗೆ 'ಬಿಗ್ ಬಾಸ್ ಕನ್ನಡ-4' ಖ್ಯಾತಿಯ ಸಂಜನಾ ಕೂಡ ಉತ್ತರ ಕೊಟ್ಟಿದ್ದಾರೆ. ''ಕಿಚ್ಚ ಸುದೀಪ್ ಸ್ಯಾಂಡಲ್ ವುಡ್ಡಿನ ಹೆಮ್ಮೆ'' ಎಂದಿದ್ದಾರೆ ಸಂಜನಾ.

ಅಲೆಕ್ಸ್ ಮಾಡಿದ ಟ್ವೀಟ್ ಏನು.?

ಸುದೀಪ್ ಜೊತೆಗಿನ ಸೆಲ್ಫಿ ಸಮೇತ, ''ಈ ಬಾಲಿವುಡ್ ಸ್ಟಾರ್ ಯಾರು ಎಂದು ನನ್ನ ಭಾರತೀಯ ಅಭಿಮಾನಿಗಳಿಗೆ ಗೊತ್ತಾ.?'' ಎಂದು ಅಲೆಕ್ಸ್ ಟ್ವೀಟ್ ಮೂಲಕ ಪ್ರಶ್ನೆ ಮಾಡಿದ್ದರು.

ಸುದೀಪ್ ಯಾರು ಅನ್ನೋದೇ ಅವರಿಗೆ ಗೊತ್ತಿರಲಿಲ್ಲ.!

ಅಷ್ಟಕ್ಕೂ ಸುದೀಪ್ ಯಾರು ಎನ್ನುವುದೇ ಕ್ರಿಕೆಟಿಗ ಅಲೆಕ್ಸ್ ಗೆ ಗೊತ್ತಿರಲಿಲ್ಲ. ಟ್ವಿಟ್ಟರ್ ನಲ್ಲಿ ಸುದೀಪ್ ಕುರಿತು ಪ್ರಶ್ನೆ ಕೇಳುತ್ತಿದ್ದಂತೆಯೇ, ಸಿನಿಪ್ರಿಯರು ಸುದೀಪ್ ರವರನ್ನ ಬಣ್ಣಿಸಲು ಆರಂಭಿಸಿದರು. ಈ ಮೂಲಕ ಟ್ವಿಟ್ಟರ್ ನಲ್ಲಿ ಅಲೆಕ್ಸ್ ಟ್ರೆಂಡಿಂಗ್ ಆಗಿದ್ದಾರೆ.

ಕಿಚ್ಚನ ಸ್ವರ್ಗಕ್ಕೆ ಕಿಚ್ಚು ಹಚ್ಚಿದಂತೆ

ಇಂಥ ಅಭಿಮಾನಿಗಳಿರುವಾಗ, ಕಿಚ್ಚನ ಸ್ವರ್ಗಕ್ಕೆ ಕಿಚ್ಚು ಹಚ್ಚಿದಂತೆಯೇ.! ಅಲ್ಲವೇ.?

English summary
Best Replies to Cricketer Alex Tudor by Fans about Kiccha Sudeep

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada