For Quick Alerts
  ALLOW NOTIFICATIONS  
  For Daily Alerts

  ಸ್ವಾತಂತ್ರ್ಯ ದಿನಾಚರಣೆ ದಿನ 'ಭರಾಟೆ'ಯ ಮೊದಲ ನೋಟ

  By Pavithra
  |

  ರೋರಿಂಗ್ ಸ್ಟಾರ್ ಶ್ರೀ ಮುರಳಿ ಬಹದ್ದೂರ್ ಚೇತನ್ ಕಾಂಬಿನೇಶನ್ ನಲ್ಲಿ ಮೂಡಿ ಬರುತ್ತಿರುವ ಮೊದಲ ಸಿನಿಮಾ 'ಭರಾಟೆ'. ಈಗಾಗಲೇ ಫೋಟೋಶೂಟ್ ಮೂಲಕವೇ ಭರ್ಜರಿಯಾಗಿ ಸುದ್ದಿ ಮಾಡಿರುವ 'ಭರಾಟೆ' ಸಿನಿಮಾದ ಫಸ್ಟ್ ಲುಕ್ ಬಿಡುಗಡೆಗೆ ದಿನಾಂಕ ನಿಗದಿ ಆಗಿದೆ.

  ಹೌದು 'ಭರಾಟೆ' ಸಿನಿಮಾದ ಮೋಷನ್ ಪೋಸ್ಟರ್ ಸ್ವಾತಂತ್ರ್ಯ ದಿನಾಚರಣೆ ಅಂದರೆ ಆಗಷ್ಟ್ 15 ರಂದು ಬಿಡುಗಡೆ ಆಗಲಿದೆ. 'ಭರಾಟೆ' ಸಿನಿಮಾವನ್ನು ಚೇತನ್ ಕುಮಾರ್ ನಿರ್ದೇಶನ ಮಾಡುತ್ತಿದ್ದು ಸುಪ್ರಿತ್ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ.

  ಶ್ರೀ ಮುರಳಿ ಜೋಡಿಯಾಗಿ ಶ್ರೀಲೀಲಾ ಇದೇ ಮೊದಲ ಬಾರಿಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು ಮೊಟ್ಟಮೊದಲ ಬಾರಿಗೆ ರಾಜಸ್ಥಾನದಲ್ಲಿ ಫೋಟೋ ಶೂಟ್ ಮಾಡಿರುವ ಕನ್ನಡ ಸಿನಿಮಾ 'ಭರಾಟೆ' ಆಗಲಿದೆ.

   Bharate first look is being released on August 15th

  ಸ್ವಾತಂತ್ರ್ಯ ದಿನಾಚರಣೆ ದಿನದಂದು ಹುಬ್ಬಳ್ಳಿಯಲ್ಲಿ ನಡೆಲಿರುವ ಸಂಗೊಳ್ಳಿ ರಾಯಣ್ಣ ಜಯಂತಿ ಉತ್ಸವದಲ್ಲಿ 'ಭರಾಟೆ' ಸಿನಿಮಾತಂಡ ಭಾಗಿ ಆಗಲಿದೆ. ಅದೇ ಸಮಾರಂಭದಲ್ಲಿ ಸಿನಿಮಾದ ಮೋಷನ್ ಪೋಸ್ಟರ್ ರಿಲೀಸ್ ಪ್ಲಾನ್ ಮಾಡಲಾಗಿದೆ. ಈಗಾಗಲೇ ಹಿಟ್ ಸಿನಿಮಾಗಳನ್ನು ನೀಡುರುವ ಶ್ರೀ ಮುರಳಿ ಮತ್ತು ಚೇತನ್ ಕಾಂಬಿನೇಶನ್ ನಲ್ಲಿ ಮೂಡಿ ಬರುತ್ತಿರುವ ಚಿತ್ರದ ಬಗ್ಗೆ ಮತ್ತಷ್ಟು ನಿರೀಕ್ಷೆಗಳು ಹುಟ್ಟುಕೊಂಡಿವೆ.

  English summary
  Kannada movie Bharate first look is being released on August 15th, Bharat Cinema is directed by Chetan Kumar. sri Murali and Sri Leela are acted in movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X