»   » 'ಭರ್ಜರಿ' ಕಲೆಕ್ಷನ್ ಸುಳ್ಳು: ಲಾಭ ಬಂದಿದ್ದು ಕೇವಲ 3 ಕೋಟಿಯಂತೆ.!

'ಭರ್ಜರಿ' ಕಲೆಕ್ಷನ್ ಸುಳ್ಳು: ಲಾಭ ಬಂದಿದ್ದು ಕೇವಲ 3 ಕೋಟಿಯಂತೆ.!

Posted By:
Subscribe to Filmibeat Kannada

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯಿಸಿದ್ದ 'ಭರ್ಜರಿ' ಸಿನಿಮಾ ಕಳೆದ ವರ್ಷ ತೆರೆಕಂಡಿತ್ತು. ನೂರು ದಿನಗಳನ್ನ ಪೂರೈಸಿದ್ದ ಸಿನಿಮಾ ಬಾಕ್ಸ್ ಅಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಒಂದು ಮೂಲಗಳ ಪ್ರಕಾರ ಕನ್ನಡದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ದಾಖಲೆಯನ್ನ ಭರ್ಜರಿ ಸಿನಿಮಾ ಮಾಡಿದೆ ಎನ್ನಲಾಗಿತ್ತು.

ಇದರ ಬೆನ್ನಲ್ಲೇ ಚಿತ್ರದ ನಾಯಕ ನಟ ಧ್ರುವ ಸರ್ಜಾ ಅವರ ಸಂಭಾವನೆ ಕೂಡ ಹೆಚ್ಚಿದೆ. ಮುಂದಿನ ಸಿನಿಮಾಗಳಲ್ಲಿ 6 ಕೋಟಿ ಸಂಭಾವನೆ ಪಡೆಯಲಿದ್ದಾರೆ ಎಂಬ ಸುದ್ದಿ ಹರಿದಾಡಿತು. ಇಷ್ಟರ ಮಟ್ಟಿಗೆ ಭರ್ಜರಿ ಸಿನಿಮಾ ಸದ್ದು ಮಾಡಿತ್ತು.

ಸಿನಿಮಾ ರಿಲೀಸ್ ಆಗಿ 7 ತಿಂಗಳು ಆಗೋಗಿದೆ. ಈಗ ಭರ್ಜರಿ ಚಿತ್ರದ ಕಲೆಕ್ಷನ್ ಬಗ್ಗೆ ಹೊಸ ಸುದ್ದಿ ಹೊರಬಿದ್ದಿದೆ. ಅಷ್ಟು ಕೋಟಿ ಮಾಡಿದೆ, ಇಷ್ಟು ಕೋಟಿ ಮಾಡಿದೆ ಅಂತ ಬಿಲ್ಡಪ್ ಕೊಟ್ಟಿದ್ದೆಲ್ಲ ಸುಳ್ಳು ಅಂತಿದ್ದಾರೆ ನಿರ್ಮಾಪಕರು. ಮುಂದೆ ಓದಿ...

ಭರ್ಜರಿ 50 ಕೋಟಿ ಗಳಿಸಿಲ್ಲ

ಸ್ವತಃ ಚಿತ್ರತಂಡವೇ ಹೇಳಿಕೊಂಡಿದ್ದ ಪ್ರಕಾರ ಭರ್ಜರಿ ಸಿನಿಮಾ ದೊಡ್ಡ ಮಟ್ಟದ ಕಲೆಕ್ಷನ್ ಮಾಡಿದೆ. ಬಂಡವಾಳಕ್ಕಿಂತ ಎರಡು ಪಟ್ಟು ಕಲೆಕ್ಷನ್ ಮಾಡಿದೆ ಎಂದಿದ್ದರು. ಒಂದು ಮೂಲಗಳ ಪ್ರಕಾರ ಸಿನಿಮಾ ಸುಮಾರು 50 ಕೋಟಿಗಿಂತ ಹೆಚ್ಚು ಗಳಿಸಿದೆ ಎನ್ನಲಾಗಿತ್ತು. ಆದ್ರೀಗ, ನಿರ್ಮಾಪಕರು ಇದನ್ನ ಸುಳ್ಳು ಎನ್ನುತ್ತಿದ್ದಾರೆ.

ಲಾಭ ಬಂದಿದ್ದು ಕೇವಲ 3 ಕೋಟಿ

ಭರ್ಜರಿ ಸಿನಿಮಾ ಗೆದ್ದಿದ್ದು ನಿಜ. ಆದ್ರೆ, ಸಿನಿಮಾ ಲಾಭ ಮಾಡಿದ್ದು ಕೇವಲ 3 ಕೋಟಿ ಮಾತ್ರವಂತೆ. ಹೌದು, ಚಿತ್ರಕ್ಕೆ 17 ಕೋಟಿ ಬಂಡವಾಳ ಹಾಕಿದ್ದರಂತೆ. ಸಿನಿಮಾ ಗಳಿಸಿದ್ದ 21 ಕೋಟಿ. ಲೆಕ್ಕಾಚಾರದಿಂದ ನೋಡಿದ್ರೆ ಎರಡರಿಂದ ಮೂರು ಕೋಟಿ ಲಾಭ ಸಿಕ್ಕಿರಬಹುದು ಅಷ್ಟೇ ಎನ್ನುತ್ತಿದ್ದಾರೆ ಪ್ರೊಡೂಸ್ಯರ್.

ಬೇಕು ಅಂತನೇ ಸುಳ್ಳು ಹೇಳಿದ್ದಾರೆ

''ಯಾರೋ ಕೆಲವರು ಸಂಭಾವನೆ ಹೆಚ್ಚುತ್ತೆ ಎಂಬ ಕಾರಣಕ್ಕೆ ಈ ರೀತಿ ಕಲೆಕ್ಷನ್ ಜಾಸ್ತಿ ಹೇಳಿದ್ದಾರೆ. ಇದು ಸುಳ್ಳು. ಅಷ್ಟು ಕೋಟಿ ಹಣ ಗಳಿಸಿಲ್ಲ. ಸಿನಿಮಾ ಹಿಟ್ ಆಗಿದೆ. ಇದು ನಮಗೆ ಹೆಮ್ಮೆ'' ಎನ್ನುತ್ತಿದ್ದಾರೆ.

ಶತದಿನ ಆಚರಿಸಿದ್ದ 'ಭರ್ಜರಿ'

ಚೇತನ್ ಕುಮಾರ್ ನಿರ್ದೇಶನ ಮಾಡಿದ್ದ ಈ ಚಿತ್ರದಲ್ಲಿ ಧ್ರುವ ಸರ್ಜಾ, ರಚಿತಾ ರಾಮ್, ಹರಿಪ್ರಿಯಾ ಅಭಿನಯಿಸಿದ್ದರು. ಹರಿಕೃಷ್ಣ ಸಂಗೀತ ನೀಡಿದ್ದರು. 100 ದಿನಗಳನ್ನ ಪೂರೈಸಿದ್ದ ಈ ಸಿನಿಮಾ ಕಮರ್ಷಿಯಲ್ ದೊಡ್ಡ ಸಕ್ಸಸ್ ಕಂಡಿತ್ತು.

ಅರ್ಧ ಶತಕ ಬಾರಿಸಿದ 'ಭರ್ಜರಿ' ಸಿನಿಮಾದ ಕಲೆಕ್ಷನ್ ಎಷ್ಟು ಗೊತ್ತಾ?

English summary
Kannada actor dhruva sarja starrer bharjari has collected 21 crore only says Producer kanakapura srinivas. the movie directed by chethan kumar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada