»   » 'ಯು ಟರ್ನ್' ತಂಡ ಸೇರಿಕೊಂಡ ಭೂಮಿಕಾ ಚಾವ್ಲಾ

'ಯು ಟರ್ನ್' ತಂಡ ಸೇರಿಕೊಂಡ ಭೂಮಿಕಾ ಚಾವ್ಲಾ

Posted By:
Subscribe to Filmibeat Kannada
ಯು ಟರ್ನ್ ಹೊಡೆದ ಭೂಮಿಕಾ ಚಾವ್ಲಾ | Filmibeat Kannada

'ಯು-ಟರ್ನ್' ಚಿತ್ರ ಕನ್ನಡದಲ್ಲಿ ಬೇರೆಯದ್ದೇ ರೀತಿಯ ಫೀಲ್ ಕೊಟ್ಟಂತ ಸಿನಿಮಾ. ಸ್ಯಾಂಡಲ್ ವುಡ್ ನಲ್ಲಿ ಹಿಟ್ ಲೀಸ್ಟ್ ಸೇರಿದ ಯು ಟರ್ನ್ ಸಿನಿಮಾವನ್ನ ನಿರ್ದೇಶಕ ಪವನ್ ಕುಮಾರ್ ಕಾಲಿವುಡ್ ಮತ್ತು ಟಾಲಿವುಡ್ ನಲ್ಲಿಯೂ ನಿರ್ದೇಶನ ಮಾಡುತ್ತಾರೆ ಎನ್ನುವುದು ಹಳೆಯ ವಿಚಾರ.

ಈಗಾಗಲೇ ಒಂದು ಹಂತದ ಚಿತ್ರೀಕರಣ ಮುಗಿಸಿ ಎರಡನೇ ಶೆಡ್ಯೂಲ್ಸ್ ನ ಚಿತ್ರೀಕರಣ ಆರಂಭ ಮಾಡಿದ್ದಾರೆ ನಿರ್ದೇಶಕ ಪವನ್ ಕುಮಾರ್. ಕನ್ನಡದಲ್ಲಿ ಶ್ರದ್ಧಾ ಶ್ರೀನಾಥ್ ಮಾಡಿದ್ದ ಪಾತ್ರವನ್ನು ರಿಮೇಕ್​ನಲ್ಲಿ ಸಮಂತಾ ಅಕ್ಕಿನೇನಿ ನಿರ್ವಹಿಸುತ್ತಿದ್ದಾರೆ. ಆದರೆ ರಾಧಿಕಾ ಚೇತನ್ ಮಾಡಿದ್ದ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳಬಹುದು ಎನ್ನುವ ವಿಚಾರಕ್ಕೆ ಪ್ರಶ್ನೆ ಶುರುವಾಗಿತ್ತು. ಅದಕ್ಕೆ ಈಗ ಉತ್ತರ ಸಿಕ್ಕಿದೆ.

ನನ್ನ ಮೊದಲ ಸಿನಿಮಾ : 'ಲೈಫು ಇಷ್ಟೇನೆ' ಇಷ್ಟ ಆಗಿಲ್ಲವೆಂದಿದ್ದರೇ 'ಲೂಸಿಯ'

Bhumika Chawla joins Samanthas U-Trun remake

ಬಹುಬಾಷ ನಟಿ ಭೂಮಿಕಾ ಚಾವ್ಲಾ ಇತ್ತೀಚಿಗಷ್ಟೆ 'ಯು-ಟರ್ನ್' ಚಿತ್ರತಂಡ ಸೇರಿಕೊಂಡಿದ್ದಾರೆ. 'ಯು ಟರ್ನ್' ತಂಡದ ಜೊತೆ ತೆಗೆದುಕೊಂಡ ಸೆಲ್ಪಿಯನ್ನು ಪವನ್ ತಮ್ಮ ಇನ್‌ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ. ಪೋಟೋದಲ್ಲಿ ಸಮಂತಾ, ಆದಿ ಮೊದಲಾದ ಕಲಾವಿದರ ಜತೆ ಭೂಮಿಕಾ ಕೂಡ ಕಾಣಿಸಿಕೊಂಡಿದ್ದಾರೆ. 'ಯು ಟರ್ನ್' ರಿಮೇಕ್​ಗೆ ಭೂಮಿಕಾ ಸೇರ್ಪಡೆಯಾಗಲಿದ್ದಾರೆ ಎಂದು ಈ ಹಿಂದೆಯೇ ಚರ್ಚೆಯಾಗಿತ್ತು.

Bhumika Chawla joins Samanthas U-Trun remake

ಇದೀಗ ಸ್ವತಃ ಪವನ್ ಆ ಸುದ್ದಿಯನ್ನು ಖಚಿತ ಪಡಿಸಿದಂತಾಗಿದೆ. ತೆಲುಗು, ತಮಿಳು ಸೇರಿ ಅನೇಕ ಭಾಷೆಗಳಲ್ಲಿ ಭೂಮಿಕಾ ನಟಿಸಿದ್ದಾರೆ. ಕನ್ನಡದ ಎರಡು ಚಿತ್ರಗಳಲ್ಲಿ ಭೂಮಿಕಾ ಅಭಿನಯಿಸಿದ್ದರು. 'ಯು-ಟರ್ನ್' ಎರಡು ವರ್ಷದ ಹಿಂದೆ ಸ್ಯಾಂಡಲ್ ವುಡ್ ನಲ್ಲಿ ತೆರೆಕಂಡು ಪ್ರೇಕ್ಷಕರ ಮೆಚ್ಚುಗೆಯನ್ನು ಪಡೆದುಕೊಂಡಿತ್ತು. ಅದರ ಜೊತೆಯಲ್ಲಿ ರಸ್ತೆ ನಿಯಮಗಳನ್ನ ತಪ್ಪದೆ ಪಾಲಿಸಬೇಕು ಎನ್ನುವ ಸಂದೇಶವನ್ನೂ ಸಾರಿತ್ತು. ಕನ್ನಡದಲ್ಲಿ ಸೂಪರ್ ಹಿಟ್ ಆದ ಯು ಟರ್ನ್ ಕಥೆಯನ್ನ ಪರಭಾಷೆಯ ಪ್ರೇಕ್ಷಕರು ಎಷ್ಟರ ಮಟ್ಟಿಗೆ ಇಷ್ಟಪಡುತ್ತಾರೆ ಎನ್ನುವುದನ್ನು ಕಾದು ನೋಡಬೇಕು.

English summary
Actress Bhumika Chawla has joined the sets and has started shooting for the U -Trun remake. According to reports, Bhumika will be reprising the role originally played by Radhika Chetan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X