»   » ಕನ್ನಡ ಸಿನೆಮಾ ನಿರ್ಮಾಪಕರು ಬಡವರು ಅಂತ ಹೇಳಿದ್ಯಾರು?

ಕನ್ನಡ ಸಿನೆಮಾ ನಿರ್ಮಾಪಕರು ಬಡವರು ಅಂತ ಹೇಳಿದ್ಯಾರು?

Posted By: ಜೀವನರಸಿಕ
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಈ ವರ್ಷ ಸ್ಯಾಂಡಲ್ವುಡ್ ಹತ್ತು ಹಲವು ಬಿಗ್ ಬಜೆಟ್ ಸಿನಿಮಾಗಳು ತೆರೆಗೆ ಬರಲಿವೆ. ಸ್ಟಾರ್ಗಳ ಸೂಪರ್ಸ್ಟಾರ್ಳ ಸಿನಿಮಾ ಮಾತ್ರವಲ್ಲದೇ ಹೊಸದಾಗಿ ಎಂಟ್ರಿಕೊಡ್ತಿರೋ ಹೀರೋಗಳೂ ಕೂಡ ಈ ವರ್ಷ ಭರ್ಜರಿ ಬಜೆಟ್ ಸಿನಿಮಾ ಮೂಲಕ ತೆರೆ ಬರಲಿದ್ದಾರೆ.

  ಸ್ಯಾಂಡಲ್ವುಡ್ನಲ್ಲಿ ಹತ್ತುಕೋಟಿ ಬಜೆಟ್ ಹಾಕೋದೇ ಹೆಚ್ಚು. ಇನ್ನು ಹೊಸಬರಾದ್ರಂತೂ ಒಂದೆರಡು ಕೋಟಿಯಲ್ಲಿ ಸಿನಿಮಾ ಮುಗಿಸಿ ರಿಲೀಸ್ಗೆ ರೆಡಿಯಾಗ್ತಾರೆ. ಕೆಲವೊಂದು ಸಿನಿಮಾಗಳು ರಿಲೀಸಾಗೋಕೂ ಒದ್ದಾಡ್ತವೆ. ಆದ್ರೆ 2015 ಹಾಗಲ್ಲ ನಿಜಕ್ಕೂ ನೀವು ಕಣ್ಣರಳಿಸಿ ನೋಡೋ ಸಿನಿಮಾಗಳು ತೆರೆಗಪ್ಪಳಿಸಲಿವೆ.

  ಈ ವರ್ಷ ಅಂತಹಾ ಅದ್ಭುತ ಅದೇನು ನಡೆಯುತ್ತೆ? ಹಾಗಾದ್ರೆ ತೆರೆಯ ಮೇಲೆ ಭರ್ಜರಿಯಾಗಿ ವಿಜೃಂಭಿಸೋ ಆ ಹೊಸ ನಟರ್ಯಾರು? ಯಾವ ಸ್ಟಾರ್ಗಳ ಸಿನಿಮಾ ಕೋಟಿ ಕೋಟಿಗಳಲ್ಲಿ ತಯಾರಾಗುತ್ತೆ? ಸ್ಲೈಡ್ನಲ್ಲಿ ಸಂಪೂರ್ಣ ಮಾಹಿತಿ ಇದೆ... ನೋಡ್ತಾ ಹೋಗಿ..

  ಹ್ಯಾಪಿ ಬರ್ತಡೇ.. ಮಗ್ನೆ ಐತೆ ನಿಂಗೆ

  ಇದು ಮಾಜಿ ಸಚಿವ ಚೆಲುವರಾಯಸ್ವಾಮಿ ಪುತ್ರ ಸಚಿನ್ ಸಿನಿಮಾ. ಸಿನಿಮಾದ ಮುಹೂರ್ತಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಬಂದಿದ್ರು. ಫೋಟೋಶೂಟ್ ಮುಹೂರ್ತ ಮತ್ತು ಸಿನಿಮಾ ಶುರುವಾಗೋಕೂ ಮೊದಲೇ ಮಾಜಿ ಸಚಿವರು ತಮ್ಮ ಮಗನ ಸಿನಿಮಾ ಪಬ್ಲಿಸಿಟಿಗೆ ಯಥೇಚ್ಚವಾಗಿ ಹಣ ಸುರಿದಿದ್ದಾರೆ.

  ಮಹೇಶ್ `ಸುಖ'ಧರೆ

  ಇನ್ನು ಈ ಚಿತ್ರವನ್ನ ನಿರ್ದೇಶನ ಮಾಡ್ತಿರೋದು ಮಾಸ್ ಸಿನಿಮಾ ನಿರ್ದೇಶಕ ಮಹೇಶ್ ಸುಖಧರೆ. ಸಿನಿಮಾ ಲೆಕ್ಕಾಚಾರ ಗೊತ್ತಿಲ್ಲದ ರಾಜಕೀಯದ ಮಂದಿ ತಮ್ಮ ಮಕ್ಕಳನ್ನ ಮೊದಲ ಸಿನಿಮಾದಲ್ಲೇ ಸ್ಟಾರ್ ಮಾಡೋಕೆ ಕೇಳಿದಷ್ಟು ಹಣಕೊಡ್ತಿದ್ದಾರೆ. ಇದರಿಂದ ಮಹೇಶ್ ಧರೆಯಲ್ಲಿ ಸುಖವಾಗಿರುವಷ್ಟು ದುಡ್ಡು ಪಡ್ಕೊಂಡಿದ್ದಾರೆ ಅಂತ ಮಾತಾಡಿಕೊಳ್ತಿದೆ ಗಾಂಧಿನಗರ.

  ಲಕ್ಷ್ಮಣ ಪಣ

  ಇನ್ನು ಎಚ್ ಎಂ ರೇವಣ್ಣ ಪುತ್ರ ಅನೂಪ್ ಎಂಟ್ರಿಗೆ ಶುಭ ಹಾರೈಸಿದ್ದು ಸಿ ಎಂ ಸಿದ್ಧರಾಮಯ್ಯ. ತಮ್ಮ ಮಗನ ಸಿನಿಜೀವನ ಎಂಟ್ರಿಗೆ ಎಷ್ಟು ಖರ್ಚಾದ್ರೂ ಪರ್ವಾಗಿಲ್ಲ ಅಂತ ಪಣತೊಟ್ಟಿದ್ದಾರೆ ಈ ಮಾಜಿ ಸಚಿವರು.

  ರಾಜ್ಯಾದ್ಯಂತ ಲಕ್ಷ್ಮಣನ ಪೋಸ್ಟರ್

  ಲಕ್ಷ್ಮಣ ರಂಗು ರಂಗಾಗಿ ಶೂಟಿಂಗ್ ಆರಂಭಿಸೋಕೆ ರಾಜ್ಯಾದ್ಯಂತ ಪೋಸ್ಟರ್ ಅಂಟಿಸಿ ಫೋಟೋಶೂಟ್ಗೆ ಲಕ್ಷಗಟ್ಟಲೆ ಕೊಟ್ಟಿರೋ ಮಾಜಿ ಸಚಿವರು ಬಾಂಬೆಯಿಂದ ಎಕ್ಸ್ಪರ್ಟ್ ಗಳನ್ನ ಕರೆಸಿ ಫೋಟೋಶೂಟ್ ಮಾಡಿಸಿದ್ದಾರೆ. ಈ ಚಿತ್ರ ಕೂಡ ತೆರೆಗೆ ಬರೋ ವೇಳೆಗೆ 15 ಕೋಟಿ ಬಜೆಟ್ನ ಸಿನಿಮಾವಾಗುತ್ತೆ ಅನ್ನೋ ಲೆಕ್ಕಾಚಾರ ನಿರ್ದೇಶಕ ಚಂದ್ರು ಮತ್ತು ತಂಡದ್ದು.

  ಜಾಗ್ವಾರ್ ಬಂದ್ರೆ ಕೇಳ್ಬೇಕಾ

  ಮತ್ತೊಂದು ಬಹುನಿರೀಕ್ಷಿತ ಚಿತ್ರ ರಾಜ್ಯದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಗೌಡ ಅವ್ರ ಜಾಗ್ವಾರ್. ಜಾಗ್ವಾರ್ ಚಿತ್ರದ ಮೂಹೂರ್ತ ಆಗಸ್ಟ್ ಎರಡರಂದು ನಡೆಯಲಿದ್ದು ಅದ್ರ ಅದ್ಧೂರಿತನ ಮತ್ತೊಂದು ಪಟ್ಟು ಹೆಚ್ಚಿರಲಿದೆ.

  15 ಕೋಟಿಯ ಸಿನಿಮಾ

  ಜಾಗ್ವಾರ್ ಸಿನಿಮಾ 15 ಕೋಟಿಯಲ್ಲಾಗುತ್ತೆ ಅಂತ ಮೊದಲಿಗೇ ಚಿತ್ರತಂಡ ಹೇಳಿದೆ. ಹೇಳಿದ್ದೇ 15 ಕೋಟಿಯಾದ್ರೆ ಇನ್ನು ಸಿನಿಮಾ ರಿಲೀಸ್ ವೇಳೆಗೆ ಬಜೆಟ್ ಎಷ್ಟಿರುತ್ತೆ ಅನ್ನೋದನ್ನ ನೀವೇ ಯೋಚನೆ ಮಾಡಿ

  ಉಪ್ಪಿ-2

  ರಿಯಲ್ ಸ್ಟಾರ್ ಉಪೇಂದ್ರ ಅವ್ರ ಈ ವರ್ಷದ ಬಹು ನಿರೀಕ್ಷಿತ ಚಿತ್ರ ಉಪ್ಪಿ-2. ಉಪ್ಪಿ-2 ಚಿತ್ರ ಉಪ್ಪಿ ಹೋಂ ಪ್ರೊಡಕ್ಷನ್ಸ್ನ ಮೊದಲ ಚಿತ್ರ. ಉಪೇಂದ್ರ ಚಿತ್ರವನ್ನ ಹುಚ್ಚೆದ್ದು ನೋಡಿದ್ದ ಅಭಿಮಾನಿಗಳಿಗೆ ಈಗ ಉಪ್ಪಿ-2 ಬಗ್ಗೆ ಇನ್ನಿಲ್ಲದ ನಿರೀಕ್ಷೆಗಳಿವೆ. ಸೋ ಚಿತ್ರ ಬಿಗ್ ಬಜೆಟ್ನಲ್ಲಿ ತಯಾರಾಗ್ತಿದೆ. ಉಪೇಂದ್ರ ಬರ್ತಡೇಗೇ ಸೆಪ್ಟೆಂಬರ್ 18ಕ್ಕೆ ತೆರೆಗೆ ಬರೋ ಸಾಧ್ಯತೆ ಇದೆ.

  ಐರಾವತ ಆನೆಯಂತಹಾ ಚಿತ್ರ

  ಐರಾವತ ಅಂದ್ರೆ ಬಿಳಿ ಬಣ್ಣದ ಗಜ, ದೊಡ್ಡ ಗಾತ್ರದ ಆನೆ. ಈ ಆನೆಯನ್ನ ತಯಾರು ಮಾಡೋಕೆ ಕೋಟಿಗಟ್ಟಲೆ ಖರ್ಚು ಮಾಡಿದ್ದಾರೆ. ಅದಕ್ಕಾಗೀನೇ ಚಿತ್ರ ತಡವಾಗ್ತಿದೆ. ಆಗಸ್ಟ್ಗೆ ತೆರೆಗೆ ಬಂದಾಗ ಚಿತ್ರದ ಬಜೆಟ್ ನಿಮ್ಗೆ ಗೊತ್ತಾಗತ್ತೆ ಅಂತ ಹೇಳ್ತಿದೆ ಚಿತ್ರತಂಡ.

  ಕೋಟಿಗೊಬ್ಬ-2

  ಕೋಟಿಗೊಬ್ಬ-2. ಕಿಚ್ಚ ಸುದೀಪ್ ಅಭಿನಯದ ಮುಂದಿನ ಸಿನಿಮಾ. ಹೆಸ್ರಲ್ಲೇ ಕೋಟಿಗೊಬ್ಬ ಅಂತಿದ್ದಮೇಲೆ ಕೋಟಿಗೊಬ್ಬನನ್ನ ತಯಾರಿಸೋಕೆ ಕೋಟಿಗಟ್ಟಲೇ ಸುರಿಯೋಕೆ ಕೋಟಿ ಶೂರ ಸೂರಪ್ಪ ಬಾಬು ತಯಾರಾಗಿದ್ದಾರೆ. ಚಿತ್ರದ ಶೂಟಿಂಗ್ ಸದ್ಯದಲ್ಲೇ ಶುರುವಾಗಲಿದೆ.

  ಹೆಬ್ಬುಲಿ

  ಗಜಕೇಸರಿ ಕೃಷ್ಣ ನಿರ್ದೇಶನದ ಚಿತ್ರ ಹೆಬ್ಬುಲಿ. ಕಾರ್ಗಿಲ್ ಲಢಾಕ್ ಭಾಗಗಳಲ್ಲಿ ಚಿತ್ರೀಕರಣವಾಗಲಿರೋ ಚಿತ್ರ ಇದು. ಇಲ್ಲಿ ಸುದೀಪ್ ಮಿಲಿಟರಿ ಆಫೀಸರ್ ಪಾತ್ರದಲ್ಲಿ ಮಿಂಚಲಿದ್ದಾರೆ. ಚಿತ್ರದಲ್ಲಿ ಬಾಲಿವುಡ್ ತಾರಾಗಣವೂ ಇರಲಿದ್ದು, ಮೂರುಭಾಷೆಗಳಲ್ಲಿ ತಯಾರಾಗಲಿರೋ ಬಜೆಟ್ 25 ಕೋಟಿ ದಾಟಲಿದೆ ಅನ್ನೋ ನಿರೀಕ್ಷೆ ಚಿತ್ರತಂಡದ್ದು.

  ಭರ್ಜರಿ ಹೆಸ್ರಿಗೆ ತಕ್ಕಂತೆ

  ಇತ್ತೀಚೆಗೆ ಮುಹೂರ್ತ ಮುಗಿಸಿದ ಭರ್ಜರಿ ಹೆಸ್ರಿಗೆ ತಕ್ಕಂತೇನೇ ಇರಲಿದೆ. ಇಲ್ಲಿರೋ ತಾರಾಗಣ ಮತ್ತು ಚಿತ್ರದ ಮೇಕಿಂಗ್ ಕೋಟಿಗಳನ್ನ ಕೇಳಲಿದ್ದು ಇದು ಧ್ರುವ ಸರ್ಜಾ ಕೆರಿಯರ್ನ ಬಿಗ್ ಬಜೆಟ್ ಚಿತ್ರವಂತೆ. ಎಷ್ಟು ಕೋಟಿಯೋ? ಲೆಕ್ಕ ಸಿಕ್ಕಿಲ್ಲ.

  ಮಾಸ್ಟರ್ಪೀಸ್

  ಯಶ್ ಅಭಿನಯದ ಮಾಸ್ಟರ್ಪೀಸ್ ಕೂಡ ಕೋಟಿಗಳನ್ನ ನೀರಿನಂತೆ ನುಂಗಲಿದೆ. ಯಾಕಂದ್ರೆ ಇಲ್ಲಿ ದೇಶಭಕ್ತಿಯ ಶೇಡ್ ಕೂಡ ಇದೆ. ಭಗತ್ ಸಿಂಗ್ ಗೆಟಪ್ನಲ್ಲಿ ಯಶ್ ರಂಗೇರಿಸಲಿದ್ದಾರೆ. ಯಶ್ ಚಿತ್ರಗಳು ಇತ್ತೀಚೆಗೆ ಬಾಕ್ಸಾಫೀಸಲ್ಲಿ ಕೋಟಿಗಳನ್ನ ಲೂಟಿ ಮಾಡ್ತಿವೆ. ಇದ್ರಿಂದಾಗಿ ಭಯಬಿಟ್ಟು ನಿರ್ಮಾಪಕರು ಚಿತ್ರಕ್ಕೆ ಕೇಳಿದಷ್ಟು ಹಣ ಸುರೀತಿದ್ದಾರಂತೆ.

  ದೊಡ್ಮನೆ ಹುಡುಗ

  ದೊಡ್ಮನೆ ಹುಡುಗ ದೊಡ್ಡ ತಾರಾಗಣದ ಚಿತ್ರ, ಇಲ್ಲಿ ಅಂಬರೀಷ್ ಸುಮಲತಾ ಜೋಡಿ ಇದೆ. ಮತ್ತೊಂದಷ್ಟು ಸ್ಟಾರ್ಗಳಿರಲಿದ್ದಾರೆ. ಚಿತ್ರ ನೂರು ದಿನಗಳಿಗೂ ಹೆಚ್ಚು ಶೂಟಿಂಗ್ ನಡೆಸಲಿದೆ. ಹಾಗಾಗಿ ಪುನೀತ್ ಕೆರಿಯರ್ನಲ್ಲಿ ಇದು ಬಡಾ ಬಜೆಟ್ ಚಿತ್ರ ಹೌದು ಅಂತಿದ್ದಾರೆ ನಿರ್ದೇಶಕ ಸೂರಿ.

  English summary
  Who said Kannada movie producers are poor? Look at these news movies coming up in 2015, many producers are pouring in crores to make the films with big stars. Happy Birthday, Hebbuli, Lakshmana, Jaguar, Bharjari, Uppi2, Dodmane Huduga are all in the queue with big budget. ಕನ್ನಡ ಸಿನೆಮಾ ನಿರ್ಮಾಪಕರು ಬಡವರು ಅಂತ ಹೇಳಿದ್ಯಾರು?

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more