»   » ಗೆಲ್ಲೋದು ಗೋಲ್ಡನ್ ಸ್ಟಾರಾ, ಬ್ಲ್ಯಾಕ್ ಕೋಬ್ರಾನಾ?

ಗೆಲ್ಲೋದು ಗೋಲ್ಡನ್ ಸ್ಟಾರಾ, ಬ್ಲ್ಯಾಕ್ ಕೋಬ್ರಾನಾ?

Posted By: ಜೀವನರಸಿಕ
Subscribe to Filmibeat Kannada

2006ರಲ್ಲಿ ಹೆಚ್ಚೂ ಕಡಿಮೆ ಒಂದೇ ಸಮಯದಲ್ಲಿ 'ದುನಿಯಾ' ಹಾಗೂ 'ಮುಂಗಾರುಮಳೆ' ಸಿನಿಮಾ ಮೂಲಕ ಮುಖಾಮುಖಿಯಾಗಿ ಸ್ಟಾರ್ ಗಳಾದವ್ರು ಕನ್ನಡದ ಕರಿಚಿರತೆ ದುನಿಯಾ ವಿಜಯ್ ಮತ್ತು ಗೋಲ್ಡನ್ ಸ್ಟಾರ್ ಗಣೇಶ್. ಈಗ ಹೊಸ ವರ್ಷಕ್ಕೆ ಮತ್ತೆ ವಿಜಿ ಮತ್ತು ಗಣೇಶ್ ವೀರಾವೇಶದ ಹೋರಾಟ ಶುರುವಾಗಲಿದೆ.

ಹೌದು ವಿಜಿ ಅಭಿನಯದ 'ಜಾಕ್ಸನ್' ಸಿನಿಮಾ ವಿಭಿನ್ನ ವಿಶಿಷ್ಟ ಗೆಟಪ್ ಗಳೊಂದಿಗೆ ಸೌಂಡ್ ಮಾಡ್ತಿದೆ. ಈಗಾಗ್ಲೇ ನಾಲ್ಕು ಹಾಡುಗಳನ್ನ ಪ್ರೇಕ್ಷಕರ ಮುಂದಿಟ್ಟಿರೋ ಬ್ಲ್ಯಾಕ್ ಕೋಬ್ರಾ ವಿಜಿ ಹೊಸ ವರ್ಷಕ್ಕೆ ಹೊಸ ಉತ್ಸಾಹದಿಂದ ನುಗ್ಗೋಕೆ ರೆಡಿಯಾಗಿದ್ದಾರೆ. [2015ರ ಮೊಟ್ಟಮೊದಲ ಕನ್ನಡ ಸಿನಿಮಾ ಯಾವುದು?]

Big fight2

ಗೋಲ್ಡನ್ ಸ್ಟಾರ್ ಗಣೇಶ್ - ಗೋಲ್ಡನ್ ಕ್ವೀನ್ ಅಮೂಲ್ಯಾ ಜೋಡಿಯ ಮತ್ತೊಂದು ಲವ್ಲೀ ರೋಮ್ಯಾಂಟಿಕ್ ಥ್ರಿಲ್ಲರ್ 'ಖುಷಿ ಖುಷಿಯಾಗಿ' ಚಿತ್ರ ಕೂಡ ಹೊಸ ವರ್ಷಕ್ಕೆ ತೆರೆಗೆ ಬರುತ್ತೆ. ಈ ಇಬ್ಬರೂ ಸ್ಟಾರ್ ಗಳ ಚಿತ್ರಗಳು ಒಂದಕ್ಕಿಂತ ಮತ್ತೊಂದು ಸಂಪೂರ್ಣ ವಿಭಿನ್ನ ಕಥೆ ಹೊಂದಿವೆ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

ಚಿತ್ರಪ್ರೇಮಿಗಳು ವಿಜಿಗೆ ವಿಜಯಮಾಲೆ ಹಾಕ್ತಾರೋ ಗೋಲ್ಡನ್ ಸ್ಟಾರ್ ಗೆ ಜೈ ಅಂತಾರೋ? ಗೆಲುವು ಯಾರಿಗೆ ಅನ್ನೋದು ಸ್ಯಾಂಡಲ್ ವುಡ್ ಕೌತುಕದಿಂದ ಎದುರು ನೋಡುತ್ತಿದೆ. ವಿಶೇಷ ಎಂದರೆ ಜಾಕ್ಸನ್ ಹಾಗೂ ಖುಷಿ ಖುಷಿಯಾಗಿ ಎರಡೂ ರೀಮೇಕ್ ಎಂಬುದು.

Big fight2

'ಜಾಕ್ಸನ್' ಚಿತ್ರ ತಮಿಳಿನ 'ಇದಕುತಾನ ಆಸೈ ಪಟ್ಟೈ ಬಾಲಕುಮರ' ಚಿತ್ರದ ರೀಮೇಕ್ ಆದರೆ 'ಖುಷಿ ಖುಷಿಯಾಗಿ' ಚಿತ್ರ ತೆಲುಗಿನ 'ಗುಂಡೆಜಾರಿ ಗಲ್ಲಂತಯಿಂದಿ' ಚಿತ್ರದ ರೀಮೇಕ್. ಈ ಎರಡು ರೀಮೇಕ್ ಚಿತ್ರಗಳ ಮೂಲಕ ಹೊಸ ವರ್ಷದಲ್ಲಿ ಖಾತೆ ತೆರೆಯುತ್ತಿದೆ ಸ್ಯಾಂಡಲ್ ವುಡ್.

English summary
Two Kannada movie all set to release on January 1st, 2015. Golden Star Ganesh and Amoolya starre Khushi Khushiyaagi and Duniya Vijya lead Jackson releases on the same day. Sandalwood should observing big fight between Viji and Ganesh.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada