»   » ಬೆಳ್ಳಿತೆರೆ ಮೇಲೆ 'ಕೆಂಗುಲಾಬಿ' ಕೃತಿಕಾ ಬರ್ತಾರೆ.!

ಬೆಳ್ಳಿತೆರೆ ಮೇಲೆ 'ಕೆಂಗುಲಾಬಿ' ಕೃತಿಕಾ ಬರ್ತಾರೆ.!

Posted By:
Subscribe to Filmibeat Kannada

'ಬಿಗ್ ಬಾಸ್-3' ಕಾರ್ಯಕ್ರಮದಿಂದ ನಟಿ ಕೃತಿಕಾ ಔಟ್ ಆದರೆ ಸಾಕು ಅಂತ ಕಾಯುತ್ತಿದ್ದವರ ಸಂಖ್ಯೆ ಅದೆಷ್ಟೋ. ಹಾಗೂ ಹೀಗೂ, ಕಳೆದ ವಾರ ನಟಿ ಕೃತಿಕಾ 'ಬಿಗ್ ಬಾಸ್' ಮನೆಯಿಂದ ಹೊರ ಬಿದ್ದರು.

ಇದು ವೀಕ್ಷಕರಿಗೆ ಮಾತ್ರ ಅಲ್ಲ, 'ಕೆಂಗುಲಾಬಿ' ಚಿತ್ರದ ನಿರ್ಮಾಪಕರಿಗೂ ಖುಷಿ ಕೊಟ್ಟಿದೆ. ಯಾಕಂದ್ರೆ, 'ಕೆಂಗುಲಾಬಿ' ಚಿತ್ರದ ನಾಯಕಿ ಈ ಕೃತಿಕಾ. ['ಬಿಗ್ ಬಾಸ್' ಮಾಡಿದ ಒಳ್ಳೆ ಕೆಲಸಕ್ಕೆ ವೀಕ್ಷಕರು ಫುಲ್ ಖುಷ್.!]

Bigg Boss Kannada 3 fame Kruthika starrer 'Kengulabi' kick starts again

ಹೌದು, 'ಬಿಗ್ ಬಾಸ್' ಮನೆಗೆ ಹೋಗುವ ಮುನ್ನ ನಟಿ ಕೃತಿಕಾ, 'ಕೆಂಗುಲಾಬಿ' ಚಿತ್ರಕ್ಕೆ ಸಹಿ ಹಾಕಿದ್ದರು. ಆದ್ರೆ, ಚಿತ್ರೀಕರಣ ಶುರುವಾಗುವ ಮುನ್ನ ಅವರು ರಿಯಾಲಿಟಿ ಶೋನಲ್ಲಿ ಭಾಗಿಯಾದ ಕಾರಣ 'ಕೆಂಗುಲಾಬಿ' ಶೂಟಿಂಗ್ ನಿಂತುಹೋಗಿತ್ತು. [ಅಂತೂ ಇಂತೂ 'ತಂಬೂರಿ ಪೆಟ್ಟಿ' ಕೃತಿಕಾ ಔಟ್ ಆದ್ರಪ್ಪಾ!]

ಈಗ ಕೃತಿಕಾ ವಾಪಸ್ ಬಂದಿರುವುದರಿಂದ ಮತ್ತೆ ಚಿತ್ರೀಕರಣಕ್ಕೆ ಚಾಲನೆ ನೀಡಿ, ಆದಷ್ಟು ಬೇಗ ಶೂಟಿಂಗ್ ಕಂಪ್ಲೀಟ್ ಮಾಡುವ ತಯಾರಿಯಲ್ಲಿದ್ದಾರೆ ನಿರ್ಮಾಪಕರು ಮತ್ತು ನಿರ್ದೇಶಕರು.

ಅಂದ್ಹಾಗೆ, 'ಕೆಂಗುಲಾಬಿ' ಚಿತ್ರಕ್ಕೆ ಮೊದಲು ನಾಯಕಿಯಾಗಿ ಆಯ್ಕೆ ಆಗಿದ್ದು ರಜಿನಿ. ಅನಿವಾರ್ಯ ಕಾರಣಗಳಿಂದ ರಜಿನಿ 'ಕೆಂಗುಲಾಬಿ' ಕೈಬಿಟ್ಟಿದ್ದಕ್ಕೆ, ಆ ಜಾಗಕ್ಕೆ ಕೃತಿಕಾ ಎಂಟ್ರಿಕೊಟ್ಟರು. 'ಕೆಂಗುಲಾಬಿ' ಚಿತ್ರದ ಹೆಚ್ಚಿನ ಮಾಹಿತಿಗೆ 'ಫಿಲ್ಮಿಬೀಟ್ ಕನ್ನಡ' ಓದುತ್ತಿರಿ...

English summary
Kannada Actress Kruthika of Bigg Boss Kannada 3 fame starrer 'Kengulabi' gets kick start again. The shooting of 'Kengulabi' was postponed as Kruthika entered Bigg Boss house.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada