Don't Miss!
- Sports
PSL 2023: ಪಿಎಸ್ಎಲ್ ಸೌಹಾರ್ದ ಪಂದ್ಯದ ವೇಳೆ ಬಾಂಬ್ ಸ್ಫೋಟ ವರದಿ: ಕೆಲ ಕಾಲ ಪಂದ್ಯ ಸ್ಥಗಿತ
- News
ಶಿಕ್ಷಕರಾಗಿ ಆಯ್ಕೆಯಾದರೂ ನೇಮಕಾತಿಯಲ್ಲಿ ಕಾನೂನು ತೊಡಕು, ಭವಿಷ್ಯದ ಆತಂಕದಲ್ಲಿ 13,363 ಅಭ್ಯರ್ಥಿಗಳು
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Lifestyle
ತಿಂದ ಆಹಾರ ಸರಿಯಾಗಿ ಜೀರ್ಣವಾಗ್ತಿಲ್ವಾ ಹಾಗಾದ್ರೆ ಈ ಆಸನಗಳನ್ನ ಮಾಡಿ
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Finance
LIC Jeevan Umang: ದಿನಕ್ಕೆ 150 ರೂ ಹೂಡಿಕೆ ಮಾಡಿ, 10 ಲಕ್ಷ ಪಡೆಯಿರಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅಮ್ಮನ ಮುಂದೆಯೇ 'ಲವ್ ಮ್ಯಾರೇಜ್ ಆಗ್ತೀನಿ' ಎಂದ ಚಂದನ್ ಶೆಟ್ಟಿ.!
Recommended Video

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ವಿನ್ನರ್ ಆದ್ಮೇಲಂತೂ ಕನ್ನಡ Rapper ಚಂದನ್ ಶೆಟ್ಟಿ ಹರೆಯದ ಹುಡುಗಿಯರ ದಿಲ್ ಕದ್ದುಬಿಟ್ಟಿದ್ದಾರೆ. ಚಂದನ್ ಶೆಟ್ಟಿಗೆ ಲೆಕ್ಕವಿಲ್ಲದಷ್ಟು ಫೀಮೇಲ್ ಫ್ಯಾನ್ಸ್ ಇದ್ದಾರೆ.
ಇದರ ನಡುವೆಯೇ ಚಂದನ್ ಶೆಟ್ಟಿ ಮದುವೆ ಬಗ್ಗೆ ಆಗಾಗ ಗಾಸಿಪ್ ಕೇಳಿಬರುತ್ತಲೇ ಇತ್ತು. 'ಅಗ್ನಿ ಸಾಕ್ಷಿ' ವೈಷ್ಣವಿ ಗೌಡ ರನ್ನ ಚಂದನ್ ಶೆಟ್ಟಿ ಮದುವೆ ಆಗ್ತಾರಂತೆ ಎಂಬ ಅಂತೆ-ಕಂತೆ ರೆಕ್ಕೆ ಪುಟ್ಟ ಕಟ್ಟಿಕೊಂಡು ಎಲ್ಲರ ಕಿವಿ ಬಡಿಯಿತು.
ಅದಾದ್ಮೇಲೆ, ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಮಧ್ಯೆ ಸಂಥಿಂಗ್ ಸಂಥಿಂಗ್ ನಡೆಯುತ್ತಿದೆ ಎಂಬ ಗುಸುಗುಸು ಕೂಡ ಕೇಳಿಬಂತು. ಆದ್ರೆ, ''ನಿವೇದಿತಾ ಮತ್ತು ನಾನು ಜಸ್ಟ್ ಫ್ರೆಂಡ್ಸ್'' ಅಂತ ಚಂದನ್ ಶೆಟ್ಟಿ ಸ್ಪಷ್ಟನೆ ಕೊಟ್ಟಿದ್ದರು.
ಇದೀಗ ತಮ್ಮ ತಾಯಿ ಮುಂದೆಯೇ ''ನಾನು ಲವ್ ಮ್ಯಾರೇಜ್ ಆಗ್ತೀನಿ'' ಎಂದು ಚಂದನ್ ಶೆಟ್ಟಿ ಹೇಳಿದ್ದಾರೆ. ಅರೇ... ಚಂದನ್ ಶೆಟ್ಟಿ ಹೀಗೆ ಹೇಳಿದ್ಯಾಕೆ.? ಸಂಪೂರ್ಣ ಮಾಹಿತಿ ಓದಿರಿ ಫೋಟೋ ಸ್ಲೈಡ್ ಗಳಲ್ಲಿ....

'ಕನ್ನಡ ಕೋಗಿಲೆ' ಕಾರ್ಯಕ್ರಮ
ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುವ 'ಕನ್ನಡ ಕೋಗಿಲೆ' ಕಾರ್ಯಕ್ರಮದಲ್ಲಿ ಚಂದನ್ ಶೆಟ್ಟಿ ತೀರ್ಪುಗಾರರಾಗಿರುವುದು ನಿಮಗೆಲ್ಲ ಗೊತ್ತೇ ಇದೆ. ಇದೇ ಶೋನಲ್ಲಿ ''ನಾನು ಪ್ರೀತಿಸಿ ಮದುವೆ ಆಗುವೆ'' ಎಂದು ಚಂದನ್ ಶೆಟ್ಟಿ ನುಡಿದಿದ್ದಾರೆ.
ಪದೇ
ಪದೇ
ಚಂದನ್
ಶೆಟ್ಟಿ
ಮದುವೆ
ಬಗ್ಗೆಯೇ
ಗುಸುಗುಸು
ಕೇಳಿಬರ್ತಿದ್ಯಲ್ಲಾ.!
ಯಾಕ್ಹೀಗೆ.?

ನಿರೂಪಕಿ ಕೇಳಿದ ಪ್ರಶ್ನೆ
''ನೀವು ಲವ್ ಮ್ಯಾರೇಜ್ ಆಗ್ತೀರಾ ಅಥವಾ ಅರೇಂಜ್ಡ್ ಮ್ಯಾರೇಜ್ ಆಗ್ತೀರಾ.?'' ಎಂದು ಚಂದನ್ ಶೆಟ್ಟಿಗೆ ಅನುಪಮಾ ಗೌಡ ಪ್ರಶ್ನೆ ಮಾಡಿದರು. ಎಷ್ಟೇ ಆಗಲಿ, ಅನುಪಮಾ ಗೌಡ ಹಾಗೂ ಚಂದನ್ ಶೆಟ್ಟಿ ಒಟ್ಟಿಗೆ 'ಬಿಗ್ ಬಾಸ್' ಮನೆಯಲ್ಲಿ ಇದ್ದವರು. ಹೀಗಾಗಿ, ಚಂದನ್ ಶೆಟ್ಟಿ ಕಾಲೆಳೆಯಲು ಅನುಪಮಾ ಈ ರೀತಿ ಪ್ರಶ್ನೆ ಮಾಡಿದರು.
ಚಂದನ್
ಶೆಟ್ಟಿ-ವೈಷ್ಣವಿ
ಗೌಡ
ಮದುವೆ
ಆಗ್ತಾರಂತೆ.!
ಇದು
ನಿಜವೇ.?

ಚಂದನ್ ತಾಯಿ ಹೇಳಿದ್ದೇನು.?
ಚಂದನ್ ಉತ್ತರ ಕೊಡುವ ಮುನ್ನವೇ ಮಧ್ಯ ಪ್ರವೇಶಿಸಿದ ಆತನ ತಾಯಿ, ''ಲವ್ ಮ್ಯಾರೇಜ್ ಅಥವಾ ಅರೇಂಜ್ಡ್ ಮ್ಯಾರೇಜ್.. ಯಾವುದು ಆದರೂ ನನಗೆ ಒಪ್ಪಿಗೆ ಇದೆ'' ಎಂದು ಚಂದನ್ ಶೆಟ್ಟಿ ತಾಯಿ ಹೇಳಿದರು. ಅದಕ್ಕೆ, ''ಅಮ್ಮನೇ ಒಪ್ಪಿಕೊಂಡ ಮೇಲೆ ನಾನು ಲವ್ ಮ್ಯಾರೇಜ್ ಆಗ್ತೀನಿ'' ಎಂದು ಚಂದನ್ ಶೆಟ್ಟಿ ಉತ್ತರಿಸಿದರು.
ಚಂದನ್
ಶೆಟ್ಟಿ
ಜೊತೆಗಿನ
ನಿಶ್ಚಿತಾರ್ಥದ
ಬಗ್ಗೆ
ಸತ್ಯ
ಹೇಳಿದ
ವೈಷ್ಣವಿ
ಗೌಡ

'ಬಿಗ್ ಬಾಸ್' ಮನೆಯಲ್ಲಿ ಪ್ರೇಮ ಪುರಾಣ
'ಬಿಗ್ ಬಾಸ್' ಮನೆಯಲ್ಲಿ ಇರುವಾಗ ಗಾಯಕಿ ಶ್ರುತಿ ಪ್ರಕಾಶ್ ಮೇಲೆ ಚಂದನ್ ಶೆಟ್ಟಿಗೆ ಕ್ರಷ್ ಆಗಿತ್ತು. ಹೀಗಾಗಿ, 'ಬಿಗ್ ಬಾಸ್' ಮನೆಯಲ್ಲಿ ಇದ್ದಾಗಿನಿಂದಲೂ, ಚಂದನ್ ಶೆಟ್ಟಿ ಮದುವೆ ಬಗ್ಗೆ ಸುದ್ದಿ ಆಗುತ್ತಲೇ ಇದೆ.