For Quick Alerts
  ALLOW NOTIFICATIONS  
  For Daily Alerts

  'ಜಟ್ಟ' ಗಿರಿರಾಜ್ 'ಅದ್ವೈತ' ಬಿಡುಗಡೆ ಡೇಟ್ ಫಿಕ್ಸ್

  By Mahesh
  |

  ಕೇವಲ 35 ಸಾವಿರ ಬಂಡವಾಳದೊಂದಿಗೆ ಡಿಜಿಟಿಲ್ ಕೆಮೆರಾ ಬಳಸಿ "ನವಿಲಾದವರು" ಎಂಬ ಸದಭಿರುಚಿ ಚಿತ್ರ ನಿರ್ದೇಶಿಸಿದ್ದ ಗಿರಿರಾಜ್ ಹಾಗೂ ಏಕ್ಸ್ ಕ್ಯೂಸ್ ಮಿ ಖ್ಯಾತಿ ನಿರ್ಮಾಪಕ ಎನ್ ಎಂ ಸುರೇಶ್ ಅವರ ಕಾಂಬಿನೇಷನ್ ಚಿತ್ರ 'ಅದ್ವೈತ' ಕೊನೆಗೂ ಬಿಡುಗಡೆ ಭಾಗ್ಯ ಕಾಣುತ್ತಿದೆ. ಡಿ.6 ರಂದು ಬೆಂಗಳೂರಿನ ಕೆಂಪೇಗೌಡ ರಸ್ತೆ ಸೇರಿದಂತೆ ರಾಜ್ಯದೆಲ್ಲೆಡೆ ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಗಿರಿರಾಜ್ ಒನ್ ಇಂಡಿಯಾಗೆ ತಿಳಿಸಿದ್ದಾರೆ.

  ಸೋಲಿನ ಮೇಲೆ ಸೋಲು ಕಂಡರೂ ಎದೆಗುಂದರೆ ಹೊಸಬರಿಗೆ ಅವಕಾಶ ನೀಡುವ ಸುರೇಶ್ ಅವರ ಧೈರ್ಯದ ಬಗ್ಗೆ ಗಾಂಧಿನಗರದಲ್ಲಿ ಮೆಚ್ಚುಗೆ ಮಾತುಗಳು ಆಗಾಗ ಕೇಳಿಬರುತ್ತದೆ. ಈಗ ಕಿಶೋರ್, ಸುಕೃತಾ ಅಭಿನಯದ ಸಿನಿರಸಿಕರು, ವಿಮರ್ಶಕರ ಮೆಚ್ಚುಗೆಯ 'ಜಟ್ಟ' ಚಿತ್ರವನ್ನು ನೀಡಿರುವ ಗಿರಿರಾಜ್ ಅವರು ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ. ಆದರೆ, ಅದ್ವೈತ ನಿರ್ದೇಶಿಸಿದಾಗ ಗಿರಿರಾಜ್ ಕೂಡಾ ಹೊಸಬರಾಗಿದ್ದರು. ಎಲ್ಲವೂ ಸರಿಯಾಗಿ ಆಗಿದ್ದರೆ ಜಟ್ಟ ಚಿತ್ರಕ್ಕಿಂತ ಮೊದಲು ಅದ್ವೈತ ಬಿಡುಗಡೆಯಾಗಬೇಕಿತ್ತು.

  ಮೊದಲಿಗೆ ನಾಯಕ ಅಜಯ್ ರಾವ್ ಗೆ ಸೂಕ್ತ ನಾಯಕಿ ಸಿಗದೇ ತುಂಬಾ ದಿನ ಒದ್ದಾಟ ನಡೆಸಿದ ಚಿತ್ರ ತಂಡ ಕೊನೆಗೆ ಹರ್ಷಿಕಾ ಪೂಣಚ್ಚ ಅವರನ್ನು ಹಾಕಿಕೊಂಡು ಚಿತ್ರ ಪೂರೈಸಿತು. ಏಕ್ಸ್ ಕ್ಯೂಸ್ ಮಿ ಚಿತ್ರದ ಮೂಲಕ ತನ್ನನ್ನು ಚಿತ್ರರಂಗಕ್ಕೆ ಕರೆತಂದ ಸುರೇಶ್ ಅವರು ಕೇಳಿದ ತಕ್ಷಣ ಈ ಪ್ರಾಜೆಕ್ಟ್ ಅನ್ನು ಅಜಯ್ ರಾವ್ ಒಪ್ಪಿಕೊಂಡಿದ್ದರು.

  2010 ವರ್ಷಾರಂಭದಲ್ಲಿ ಸೆಟ್ಟೇರಿದ ಅದ್ವೈತ ಚಿತ್ರ ಪಕ್ಕಾ ಕಮರ್ಷಿಯಲ್ ಅಂಶಗಳುಳ್ಳ ಚಿತ್ರವಾಗಿದ್ದು, ಮನರಂಜನೆ ಗ್ಯಾರಂಟಿ ಎನ್ನಲಾಗಿದೆ. ಏಕ್ಸ್ ಕ್ಯೂಸ್ ಮಿ ಚಿತ್ರದ ಮೂಲಕ ತನ್ನನ್ನು ಚಿತ್ರರಂಗಕ್ಕೆ ಕರೆತಂದ ಸುರೇಶ್ ಅವರು ಕೇಳಿದ ತಕ್ಷಣ ಪ್ರಾಜೆಕ್ಟ್ ಗೆ ಅಜಯ್ ರಾವ್ ಒಪ್ಪಿಕೊಂಡಿದ್ದರು.

  <center><center><iframe width="100%" height="480" src="//www.youtube.com/embed/YI_QdmhC1VQ" frameborder="0" allowfullscreen></iframe></center></center>

  ಎಕ್ಸ್ ಕ್ಯೂಸ್ ಮಿ ಭರ್ಜರಿ ಯಶಸ್ಸಿನ ನಂತರ 7"ಓ ಕ್ಲಾಕ್, ಚಪ್ಪಾಳೆ, ತನನಂ ಹಾಗೂ ತೆಲುಗಿನಲ್ಲಿ ಸೀನು ವಾಸಂತಿ ಲಕ್ಷ್ಮಿ ಎಂಬ ಚಿತ್ರಗಳನ್ನು ನಿರ್ಮಿಸಿ ಸಾಲು ಸಾಲಾಗಿ ಕೈ ಸುಟ್ಟುಕೊಂಡ ಸುರೇಶ್ ಎರಡನೇ ಇನ್ನಿಂಗ್ಸ್ ನಲ್ಲಿ ಕೂಡಾ ಅವರ ಬಹು ನಿರೀಕ್ಷಿತ ಚಿತ್ರ ರಾವಣ ಗೆಲುವು ಕಾಣಲಿಲ್ಲ. 'ರಾಯಲ್ ಸ್ಟಾರ್' ಅಜಯ್ ರಾವ್ ಅವರಿಗೂ ಒಳ್ಳೆ ಬ್ರೇಕ್ ಬೇಕಿದೆ. ಗಿರಿ ಅವರಿಗೂ ಒಂದು ಕಮರ್ಷಿಯಲ್ ಯಶಸ್ಸು ಸಿಗಬೇಕಿದೆ. ಎಲ್ಲವೂ ಪ್ರೇಕ್ಷಕ ಪ್ರಭುಗಳ ಕೈಲಿದೆ.

  English summary
  Jatta Movie fame Director BM Giriraj's film Adwaitha, starring Ajay Rao and Harshika Poonacha is set to hit the silver screen on December 6. Both Producer NM Suresh and Director Giriraj has confirmed the release date.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X