For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ನಟ ಧರ್ಮೇಂದ್ರ ಕಂಡಂತೆ 'ಜಯಲಲಿತಾ' !

  By Bharath Kumar
  |

  ''ಜಯಲಲಿತಾ ಅವರು ಆಕರ್ಷಕ, ಶಾಂತ ಸ್ವಭಾವ ಹಾಗೂ ತುಂಬಾ ಗಂಭೀರ. ತಮ್ಮ ಕೆಲಸದ ಬಗ್ಗೆ ಮಾತ್ರ ಕೇಂದ್ರಿಕರಿಸುತ್ತಿದ್ದರು. ಶೂಟಿಂಗ್ ವೇಳೆ ಹೆಚ್ಚು ಮಾತನಾಡುತ್ತಿರಲಿಲ್ಲ. ನಾವೂ ಅಷ್ಟೇ ಅವರ ಖಾಸಗಿತನವನ್ನ ಗೌರವಿಸುತ್ತಿದ್ದೆವು''- ಧರ್ಮೇಂದ್ರ, ನಟ

  ಬಾಲಿವುಡ್ ಸೂಪರ್ ಸ್ಟಾರ್ ಧರ್ಮೇಂದ್ರ, ತಮ್ಮ ಚಿತ್ರದಲ್ಲಿ ನಾಯಕಿಯಾಗಿದ್ದ ಜಯಲಲಿತಾ ಅವರ ಬಗ್ಗೆ ಮಾತನಾಡಿದ್ದಾರೆ. ಬಹುಭಾಷೆ ತಾರೆಯಾಗಿದ್ದ ಜಯಲಲಿತಾ ಸುಮಾರು 140ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದರು, ಹಿಂದಿಯಲ್ಲಿ ಮಾಡಿದ್ದು ಒಂದೇ ಒಂದು ಚಿತ್ರ. ಅದು ನಟ ಧರ್ಮೇಂದ್ರ ಅವರ ಸಿನಿಮಾ ಎನ್ನುವುದು ವಿಶೇಷ.

  1968 ರಲ್ಲಿ ತೆರೆಕಂಡಿದ್ದ 'ಇಜ್ಜತ್' ಚಿತ್ರದಲ್ಲಿ ಜಯಲಲಿತಾ ಹಾಗೂ ಧರ್ಮೇಂದ್ರ ಒಟ್ಟಿಗೆ ಕಾಣಿಸಿಕೊಂಡಿದ್ದರು. ಹಿಂದಿಯಲ್ಲಿ ಮಾಡಿದ್ದು ಒಂದೇ ಸಿನಿಮಾವಾದ್ರೂ, ಅಲ್ಲಿನ ಕಲಾವಿದರಿಂದ ಜಯಾ ಮೆಚ್ಚುಗೆಗಳಿಸಿಕೊಂಡಿದ್ದರು. ಹೀಗೆ, ಸಿನಿಮಾ, ರಾಜಕೀಯದಿಂದ ಜನರ ಪ್ರೀತಿಗಳಿಸಿದ್ದ ಜಯಲಲಿತಾ ಇಹಲೋಕ ತ್ಯಜಿಸಿದ್ದಾರೆ.['ಅಮ್ಮ'ನ ಅಗಲಿಕೆಗೆ ಕಂಬನಿ ಮಿಡಿದ ಸಿನಿ ತಾರೆಯರು]

  ಹೀಗೆ, ದಶಕದ ಹಿಂದೆ ತಮ್ಮ ಸಹಕಲಾವಿದೆಯಾಗಿದ್ದ ಜಯಲಲಿತಾ ಅವರ ಬಗ್ಗೆ ಧರ್ಮೇಂದ್ರ ಕೆಲವು ಇಂಟ್ರಸ್ಟಿಂಗ್ ವಿವಾರಗಳನ್ನ ಹಂಚಿಕೊಂಡಿದ್ದಾರೆ.

  60 & 70ರ ದಶಕದ ನಟಿ ಜಯಲಲಿತಾ

  60 & 70ರ ದಶಕದ ನಟಿ ಜಯಲಲಿತಾ

  ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜೆ ಜಯಲಲಿತಾ ಅವರು, ರಾಜಕೀಯಕ್ಕೆ ಬರುವ ಮುಂಚೆ, ಸಿನಿಮಾ ನಟಿಯಾಗಿದ್ದರು. 1950 ,60 & 70ರ ದಶಕದಲ್ಲಿ ದಕ್ಷಿಣ ಭಾರತದ ಖ್ಯಾತ ನಟಿ ಎನಿಸಿಕೊಂಡಿದ್ದರು.['ಅಮ್ಮ' ಜಯಲಲಿತಾ, ಕರ್ನಾಟಕ ಮತ್ತು ಕನ್ನಡ ಚಿತ್ರರಂಗ]

  ಹಿಂದಿಯಲ್ಲಿ ಜಯಾ ಮಾಡಿದ್ದು 1 ಚಿತ್ರ

  ಹಿಂದಿಯಲ್ಲಿ ಜಯಾ ಮಾಡಿದ್ದು 1 ಚಿತ್ರ

  ಕನ್ನಡ, ತಮಿಳು, ತೆಲುಗು, ಮಲಯಾಳಂ ಸೇರಿದಂತೆ ಸುಮಾರು 140ಕ್ಕೂ ಅಧಿಕ ಸಿನಿಮಾಗಳನ್ನ ಮಾಡಿರುವ ಜಯಲಲಿತಾ, ಹಿಂದಿಯಲ್ಲಿ ಅಭಿನಯಿಸಿದ್ದು ಕೇವಲ ಒಂದೇ ಚಿತ್ರ. ಅದು, 1968 ರಲ್ಲಿ ತೆರೆಕಂಡಿದ್ದ 'ಇಜ್ಜತ್'.

  ಧರ್ಮೇಂದ್ರ ನಾಯಕ ನಟ

  ಧರ್ಮೇಂದ್ರ ನಾಯಕ ನಟ

  'ಇಜ್ಜತ್' ಚಿತ್ರದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಧರ್ಮೇಂದ್ರ ನಾಯಕನಟನಾಗಿದ್ದರು. ಧರ್ಮೇಂದ್ರ ಅವರು ಚಿತ್ರದಲ್ಲಿ ದ್ವಿಪಾತ್ರದಲ್ಲಿ ಅಭಿನಯಿಸಿದ್ದು, ಜಯಲಲಿತಾ ಅವರ ಜೊತೆ ಮಿಂಚಿದ್ದರು.

  ಬುಡಕಟ್ಟು ಹುಡುಗಿ ಪಾತ್ರದಲ್ಲಿ ಜಯಾ

  ಬುಡಕಟ್ಟು ಹುಡುಗಿ ಪಾತ್ರದಲ್ಲಿ ಜಯಾ

  'ಇಜ್ಜತ್' ಚಿತ್ರದಲ್ಲಿ ಜಯಲಲಿತಾ ಅವರದ್ದು ಬುಡುಕಟ್ಟು ಹುಡುಗಿ ಪಾತ್ರ. ಧರ್ಮೇಂದ್ರ ಅವರು ಮೇಲ್ವರ್ಗದ ಹುಡುಗನ ಪಾತ್ರವನ್ನ ನಿರ್ವಹಿಸಿದ್ದರು. ಬುಡುಕಟ್ಟು ಹುಡುಗಿಗೆ, ಧರ್ಮೇಂದ್ರ ಅವರ ಜೊತೆ ಪ್ರೀತಿಯಾಗುತ್ತೆ. ಇದನ್ನ ಹುಡುಗನ ಮನೆಯವರು ವಿರೋಧಿಸುತ್ತಾರೆ. ಕೊನೆಯಲ್ಲಿ ಇವರಿಬ್ಬರ ಪ್ರೀತಿ ಒಂದಾಗುತ್ತಾ ಇಲ್ವಾ ಎನ್ನುವುದು ಚಿತ್ರದ ಕಥೆ.

  ಹಿಂದಿಗೆ ಪರಿಚಯಿಸಿದ ನಿರ್ದೇಶಕ ಪ್ರಕಾಶ್ ರಾವ್

  ಹಿಂದಿಗೆ ಪರಿಚಯಿಸಿದ ನಿರ್ದೇಶಕ ಪ್ರಕಾಶ್ ರಾವ್

  ದಕ್ಷಿಣದಲ್ಲಿ ಖ್ಯಾತ ನಟಿಯಾಗಿದ್ದ ಜಯಲಲಿತಾ ಅವರನ್ನ ಹಿಂದಿ ಚಿತ್ರರಂಗಕ್ಕೆ ಪರಿಚಯಿಸಿದ ಖ್ಯಾತಿ ಟಿ ಪ್ರಕಾಶ್ ರಾವ್ ಅವರದ್ದು. ಬಿ ಸರೋಜಾ ದೇವಿ, ವೈಜಯಂತಿಮಾಲ ಅಂತಹವರನ್ನ ಹಿಂದಿಗೆ ಪರಿಚಯಿಸಿದ್ದ ಪ್ರಕಾಶ್ ರಾವ್ ಅವರು ಜಯಲಲಿತಾ ಅವರನ್ನ 'ಇಜ್ಜತ್' ಚಿತ್ರದ ಮೂಲಕ ಬಾಲಿವುಡ್ ಲೋಕಕ್ಕೆ ಎಂಟ್ರಿ ಕೊಡಿಸಿದ್ದರು.

  ಧರ್ಮೇಂದ್ರ ಕಂಡಂತೆ ಜಯಾ

  ಧರ್ಮೇಂದ್ರ ಕಂಡಂತೆ ಜಯಾ

  ''ಜಯಲಲಿತಾ ಅವರು ತುಂಬಾ ಶಾಂತ ಸ್ವಭಾವ ಹಾಗೂ ಆಕರ್ಷಕವಾಗಿದ್ದರು. ತಮ್ಮ ಕೆಲಸದ ಬಗ್ಗೆ ಮಾತ್ರ ಕೇಂದ್ರಿಕರಿಸುತ್ತಿದ್ದರು. ಶೂಟಿಂಗ್ ವೇಳೆ ಹೆಚ್ಚು ಮಾತನಾಡುತ್ತಿರಲಿಲ್ಲ. ನಾವೂ ಅಷ್ಟೇ ಅವರ ಖಾಸಗಿತನವನ್ನ ಗೌರವಿಸುತ್ತಿದ್ದೇವು. 'ಇಜ್ಜತ್' ಚಿತ್ರದಲ್ಲಿ ಅವರದ್ದು, ಬಬ್ಲಿ ಕ್ಯಾರೆಕ್ಟರ್. 'ಶೋಲೆ' ಚಿತ್ರದಲ್ಲಿ ಹೇಮಮಾಲಿನ ಪಾತ್ರವನ್ನ ಹೋಲುವಂತಿತ್ತು. ಬಟ್, ಜಯಲಲಿತಾ ಅವರದ್ದು ಈ ಪಾತ್ರಕ್ಕೆ ವಿರುದ್ದವಾದ ಸ್ವಭಾವ. ತುಂಬಾ ಗಂಭೀರ, ಶಾಂತವಾಗಿರುತ್ತಿದ್ದರು''- ಧರ್ಮೇಂದ್ರ, ನಟ

  ಜಯಲಲಿತಾ ಅವರ ಸೂಪರ್ ಹಿಟ್ ಹಿಂದಿ ಹಾಡು

  ಜಯಲಲಿತಾ ಅವರ ಸೂಪರ್ ಹಿಟ್ ಹಿಂದಿ ಹಾಡು

  'ಇಜ್ಜತ್' ಚಿತ್ರದ ಹಾಡೊಂದಕ್ಕೆ ಲತಾ ಮಂಗೇಶ್ಕರ್ ಅವರು ದ್ವನಿಯಾಗಿದ್ದರು. ಈ ಹಾಡಿಗೆ ಜಯಾ ಹಾಗೂ ಧರ್ಮೇಂದ್ರ ಹೆಜ್ಜೆ ಹಾಕಿದ್ದರು. ಇಂದಿಗೂ ಈ ಹಾಡು ಎವರ್ ಗ್ರೀನ್ ಸಾಂಗ್ ಎನಿಸಿಕೊಂಡಿದೆ. ['ಇಜ್ಜತ್' ಚಿತ್ರದ ಹಾಡು ಇಲ್ಲಿದೆ ನೋಡಿ]

  English summary
  Bollywood Actor Dharmendra Remembers Co-Star Jayalalithaa In Her Only Hindi Film. Surprisingly she did only one Hindi film as a leading lady. This was a 1968 melodrama called Izzat which featured Dharmendra in a double role.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X