»   » ರಾಹುಲ್ ಕನ್ನಡ ಉಚ್ಚಾರಣೆ ಕೇಳಿ ಭಾವನಾ 'ನಿರುತ್ತರ'

ರಾಹುಲ್ ಕನ್ನಡ ಉಚ್ಚಾರಣೆ ಕೇಳಿ ಭಾವನಾ 'ನಿರುತ್ತರ'

Posted By:
Subscribe to Filmibeat Kannada

ಬಾಲಿವುಡ್ ನ ಖ್ಯಾತ ನಟ ರಾಹುಲ್ ಬೋಸ್ ಸ್ಯಾಂಡಲ್ ವುಡ್ ಗೆ ಕಾಲಿಟ್ಟಿರುವ ವಿಷಯ ಗೊತ್ತಲ್ವಾ...ನಟಿ ಭಾವನಾ ಜೊತೆ 'ನಿರುತ್ತರ' ಚಿತ್ರದಲ್ಲಿ ನಟಿಸುತ್ತಿರುವ ರಾಹುಲ್ ಬೋಸ್, ಈಗಾಗಲೇ ತಮ್ಮ ಭಾಗದ ಚಿತ್ರೀಕರಣವನ್ನ ಪೂರ್ಣಗೊಳಿಸಿದ್ದಾರೆ.

ನಟನೆಯಲ್ಲಿ ಪರ್ಫೆಕ್ಷನಿಸ್ಟ್ ಆಗಿರುವ ರಾಹುಲ್ ಬೋಸ್, ಕನ್ನಡದಲ್ಲಿ ಪ್ರಪ್ರಥಮ ಬಾರಿ ಆಕ್ಟ್ ಮಾಡುತ್ತಿದ್ದಾರೆ. ಹೀಗಾಗಿ ರಾಹುಲ್ ಗೆ ಭಾಷೆಯ ಮೇಲೆ ಅಷ್ಟು ಹಿಡಿತ ಇಲ್ಲ. ಆದರೂ, ಪ್ರತಿ ಡೈಲಾಗ್ ನ ಕಲಿತು, ಸ್ಪಷ್ಟವಾಗಿ ಕನ್ನಡ ಪದಗಳನ್ನ ಉಚ್ಚರಿಸಿರುವ ರಾಹುಲ್, ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡುತ್ತಿದ್ದಾರೆ.

Bollywood Actor Rahul Bose dubs for kannada movie Niruttara

ಬಾಲಿವುಡ್ ನಿಂದ ಬರುವ ಅದೆಷ್ಟೋ ಹೀರೋಯಿನ್ ಗಳು, ಆಕ್ಟಿಂಗ್ ಮುಗಿದ್ಮೇಲೆ ಟಾಟಾ ಮಾಡಿ ಜೂಟ್ ಹೇಳ್ತಾರೆ. ಆದ್ರೆ, ತನ್ನ ಪಾತ್ರಕ್ಕೆ ತಾನೇ ಡಬ್ ಮಾಡುತ್ತೇನೆ ಅಂತ ಎಕ್ಸ್ ಟ್ರಾ ಹೋಮ್ ವರ್ಕ್ ಮಾಡಿ, ರಾಹುಲ್ ಬೋಸ್ ಇದೀಗ ಡಬ್ಬಿಂಗ್ ಕಾರ್ಯದಲ್ಲೂ ಬಿಜಿಯಾಗಿದ್ದಾರೆ.

ಬೆಂಗಳೂರಿನ ವಿಜಯನಗರದಲ್ಲಿರುವ ಅಶ್ವಿನಿ ಸ್ಟುಡಿಯೋದಲ್ಲಿ ಡಬ್ಬಿಂಗ್ ಕಾರ್ಯ ಭರದಿಂದ ಸಾಗುತ್ತಿದೆ. 'ನಿರುತ್ತರ' ಚಿತ್ರದಲ್ಲಿ ಕಾರ್ಪರೇಟ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ರಾಹುಲ್, ನಟಿ ಭಾವನಾಗೆ ಜೋಡಿಯಾಗಿದ್ದಾರೆ.

Bollywood Actor Rahul Bose dubs for kannada movie Niruttara

ಪ್ರೀತಿ, ಪ್ರೇಮ, ಭಾವನೆಗಳ ಸಂಗಮವಾಗಿರುವ 'ನಿರುತ್ತರ' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ಅಪೂರ್ವ ಕಾಸರವಳ್ಳಿ. ಐಂದ್ರಿತಾ ರೇ, ಕಿರಣ್ ಶ್ರೀನಿವಾಸ್ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರದಲ್ಲಿದೆ. [ಕಾಂಗ್ರೆಸ್ ಸ್ಟಾರ್ ಪ್ರಚಾರಕಿ ನಟಿ ಭಾವನಾ ಸಂದರ್ಶನ]

'ನಿರುತ್ತರ' ಮೂಲಕ ಮೊದಲ ಬಾರಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿರುವ ರಾಹುಲ್ ಬೋಸ್, ಮೊದಲ ಕನ್ನಡ ಚಿತ್ರದಲ್ಲೇ ಡಬ್ ಕೂಡ ಮಾಡುತ್ತಿದ್ದಾರೆ ಅಂದ್ರೆ ಅವರ ವೃತ್ತಿಪರತೆಗೆ ಮೆಚ್ಚಲೇಬೇಕು.

English summary
Bollywood Actor Rahul Bose, who has entered Kannada Film Industry with the movie Niruttara. Having acted Bollywood, it is commendable that the actor is dubbing himself for Niruttara in Kannada.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada