For Quick Alerts
  ALLOW NOTIFICATIONS  
  For Daily Alerts

  ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿಗೆ ಮುದ್ದಾದ ಗಂಡು ಮಗು

  By Srinath
  |

  ಬಾಲಿವುಡ್ ನಟಿ, ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ ಅವರು ಸೋಮವಾರ ಬೆಳಗ್ಗೆ ಮುಂಬೈನ ಹಿಂದೂಜಾ ಆಸ್ಪತ್ರೆಯಲ್ಲಿ ಚೊಚ್ಚಲ ಮಗುವಿಗೆ (ಗಂಡು ಮಗು) ಜನ್ಮ ನೀಡಿದ್ದಾರೆ.

  ತಾಯಿ ಮಗು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಸಹ twitterನಲ್ಲಿ ಈ ಕುರಿತು ಸಂತಸ ಹಂಚಿಕೊಂಡಿದ್ದಾರೆ. ಮೂರು ವರ್ಷಗಳ ಹಿಂದೆ ಶಿಲ್ಪಾ ಮತ್ತು ರಾಜ್ ಕುಂದ್ರಾ ಮದುವೆಯಾಗಿತ್ತು.

  'ದೇವರು ನಮಗೆ ಮುದ್ದಾದ ಗಂಡು ಮಗುವನ್ನು ಕರುಣಿಸಿದ್ದಾನೆ. ತಾಯಿ-ಮಗು ಆರೋಗ್ಯವಾಗಿದ್ದಾರೆ. ನನಗಂತೂ ಸಖತ್ ಖುಷಿಯಾಗಿದೆ. ಆಸ್ಪತ್ರೆ ಸಿಬ್ಬಂದಿಗೆ ಕೈಜೋಡಿಸಿ ಮುಗಿಯುತ್ತೇನೆ. ಅತ್ಯುತ್ತಮ ಗಿಫ್ಟ್ ಕೊಟ್ಟ ಶಿಲ್ಪಾಗೂ ಥ್ಯಾಂಕ್ಸ್ ಹೇಳುವೆ' ಎಂದು ರಾಜ್ ಟ್ವೀಟ್ ಮಾಡಿದ್ದಾರೆ.

  ಮುಂಬೈನ ಖಾರ್ ನಲ್ಲಿರುವ ಹಿಂದೂಜಾ ಹೆಲ್ತ್ ಕೇರ್ ಆಸ್ಪತ್ರೆಯಲ್ಲಿ ಶಿಲ್ಪಾ-ರಾಜ್ ಕುಂದ್ರಾ ಅವರ ಇಡೀ ಕುಟುಂಬ ಸೇರಿದ್ದು, ಅಲ್ಲಿ ಸಂಭ್ರಮದ ವಾತಾವರಣ ನೆಲೆಸಿದೆ.

  ಶಿಲ್ಪಾ ಈಗ ಬಾಲಿವುಡ್ ನ ಅಮ್ಮನಾಗಿದ್ದಾಳೆ. ಮತ್ತೊಬ್ಬ ಕನ್ನಡತಿ ಐಶ್ವರ್ಯ ಏಳು ತಿಂಗಳ ಹಿಂದೆ ಮುಂಬೈನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

  English summary
  Bollywood actress Shilpa Shetty gives birth to a baby boy. Actress Shilpa Shetty gave birth to a baby boy today morning at Hinduja Healthcare hospital in Khar, Mumbai. Shilpa's husband Raj, who is on the seventh heaven with the baby's birth, took to the twitter to break the news.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X