»   » ಮೇ ತಿಂಗಳಲ್ಲಿ ಪ್ರೇಕ್ಷಕರ ಬಾಯಿಗೆ 'ಬಾಂಬೆ ಮಿಠಾಯಿ'

ಮೇ ತಿಂಗಳಲ್ಲಿ ಪ್ರೇಕ್ಷಕರ ಬಾಯಿಗೆ 'ಬಾಂಬೆ ಮಿಠಾಯಿ'

Posted By: ರವಿಕಿಶೋರ್
Subscribe to Filmibeat Kannada

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ 'ಬಾಂಬೆ ಮಿಠಾಯಿ' ಚಿತ್ರ ಇಷ್ಟೊತ್ತಿಗೆ ತೆರೆಗೆ ಬರಬೇಕಾಗಿತ್ತು. ಹೋಗ್ಲಿ ಏಪ್ರಿಲ್ ತಿಂಗಳಲ್ಲಾದರೂ ತೆರೆಗೆ ಬರುತ್ತಾ ಅಂದ್ರೆ ಅದೂ ಇಲ್ಲ. ಇನ್ನೂ ಸೆನ್ಸಾರ್ ಆಗಿಲ್ಲ ಅನ್ನುತ್ತಿದೆ ಚಿತ್ರತಂಡ.

ಒಂದು ವೇಳೆ ಏಪ್ರಿಲ್ ನಲ್ಲಿ ಸೆನ್ಸಾರ್ ಆದರೂ 'ಬಾಂಬೆ ಮಿಠಾಯಿ' ತೆರೆಗೆ ಬರಲು ಹಿಂದೇಟು ಹಾಕುತ್ತಿದೆ. ಇದಕ್ಕೆ ಕಾರಣವಾಗಿರುವುದು ಎರಡು ಬಿಗ್ ಬಜೆಟ್ ಸಿನಿಮಾಗಳು. ಒಂದು ಪವರ್ ಸ್ಟಾರ್ ಪುನೀತ್ ಅವರ 'ರಣವಿಕ್ರಮ' ಹಾಗೂ ಇನ್ನೊಂದು ಕಿಚ್ಚ ಸುದೀಪ್ ಅವರ 'ರನ್ನ'. [ಪೂನಂ ಪಾಂಡೆ ಅಲ್ಲ ಈ 'ಬಾಂಬೆ ಮಿಠಾಯಿ']


bombay-mithayi-releases-in-may

ಇವೆರಡೂ ಚಿತ್ರಗಳ ಬಳಿಕ ಬಾಂಬೆ ಮಿಠಾಯಿ ತಿನ್ನಿಸ್ತೀವಿ ಎನ್ನುತ್ತಿದೆ ಚಿತ್ರತಂಡ. ಸ್ವಲ್ಪ ತಡವಾದರೂ ಪರ್ವಾಗಿಲ್ಲ ಮೇ ತಿಂಗಳಲ್ಲಿ ಪ್ರೇಕ್ಷಕರ ಬಾಯಿಗೆ ಖಂಡಿತ 'ಬಾಂಬೆ ಮಿಠಾಯಿ' ಹಾಕ್ತೀವಿ ಎನ್ನುತ್ತಾರೆ ನಿರ್ದೇಶಕ ಚಂದ್ರಮೋಹನ್.


ಈ ಚಿತ್ರ ಪ್ರೇಕ್ಷಕರನ್ನು ಖಂಡಿತ ನಿರಾಸೆಗೊಳಿಲ್ಲ. ಅವರ ನೀರೀಕ್ಷೆಗಳನ್ನು ಹುಸಿ ಮಾಡಲ್ಲ. ಬಿಗ್ ಬಜೆಟ್ ಚಿತ್ರಗಳ ಜೊತೆಗೆ ನಮ್ಮ ಚಿತ್ರವನ್ನೂ ರಿಲೀಸ್ ಮಾಡಿದರೆ 'ಮಿಠಾಯಿ' ರುಚಿ ಸಿಗದೇ ಹೋಗಬಹುದು. ಹಾಗಾಗಿ ಸ್ವಲ್ಪ ತಡವಾಗಿ ತೆರೆಗೆ ತರುತ್ತಿದ್ದೇವೆ ಎನ್ನುತ್ತಾರೆ ನಿರ್ದೇಶಕರು.


ಚಿತ್ರದಲ್ಲಿ ಏಳು ಪ್ರಮುಖ ಪಾತ್ರಗಳು ಬರುತ್ತವೆ. ಆ ಪಾತ್ರಗಳು ಕಾಮನಬಿಲ್ಲಿನ ಏಳು ಬಣ್ಣಗಳನ್ನು ಸಂಕೇತಿಸುತ್ತವೆ. ಮೂವರು ಹುಡುಗರು, ಒಬ್ಬ ಹುಡುಗಿ ಒಂದೇ ಕಾರಿನಲ್ಲಿ ಪ್ರಕಾಣಿಸಬೇಕಾದರೆ ಅನುಭವಿಸುವ ಪತೀಜಿ ಪ್ರಸಂಗಗಳು ಪ್ರೇಕ್ಷಕರಿಗೆ ಮಜಾ ಕೊಡುತ್ತವೆ.


ಈ ಚಿತ್ರದ ಮಿಠಾಯಿ ಎಂದರೆ ಮುಂಬೈ ಬೆಡಗಿ ದಿಶಾ ಪಾಂಡೆ. ವೀರ್ ಸಮರ್ಥ್ ಅವರ ಸಂಗೀತ ಇರುವ ಚಿತ್ರದಲ್ಲಿ ನಿರಂಜನ್ ದೇಶಪಾಂಡೆ, ವಿಕ್ರಮ್​, ಚಿಕ್ಕಣ್ಣ, ಬುಲೆಟ್ ಪ್ರಕಾಶ್ ಮತ್ತು ಕಿಶೋರಿ ಬಲ್ಲಾಳ್ ಇದ್ದಾರೆ. ಸೌಧ ಷರೀಫ್ ಮತ್ತು ಆಮೀರ್ ಷರೀಫ್ ಚಿತ್ರದ ನಿರ್ಮಾಪಕರು.

English summary
Kannada movie Bombay Mithayi release postponed to May. The movie directed by Chandra Mohan and stars Niranjan Deshpande, Disha Pandey and others

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada