»   » ಯೋಧನ ಕಥೆ ಹೇಳಲಿದೆ 'ಬೊಂಬೆ ಹೇಳುತೈತೆ' ಕವರ್ ಸಾಂಗ್

ಯೋಧನ ಕಥೆ ಹೇಳಲಿದೆ 'ಬೊಂಬೆ ಹೇಳುತೈತೆ' ಕವರ್ ಸಾಂಗ್

Posted By:
Subscribe to Filmibeat Kannada

ಕನ್ನಡದಲ್ಲಿ ಕವರ್ ಸಾಂಗ್ ಗಳ ಸಂಸ್ಕೃತಿ ಹೆಚ್ಚಾಗುತ್ತಿದೆ. ಯ್ಯೂಟ್ಯೂಬ್ ಗಳಲ್ಲಿ ಮೂಲ ಹಾಡುಗಳನ್ನ ಹುಡುಕಿದರೇ ಅದಕ್ಕಿಂತ ಕವರ್ ಸಾಂಗ್ ಗಳೂ ಹೆಚ್ಚು ಕಾಣುತ್ತವೆ. ಈಗ ಇಂತಹದ್ದೇ ಟ್ರೆಂಡ್ ಸೃಷ್ಟಿಸಿ ಗಮನ ಸೆಳೆಯುತ್ತಿರುವ ಗುರುಚರಣ್ ಕಂಬೈನ್ಸ್ ಹಾಗೂ ಟಿಲ್ಟ್ ಎನ್.ಸಿ ಪ್ರೊಡಕ್ಷನ್ಸ್ ನ ಯುವಕರ ತಂಡವೊಂದು ಕನ್ನಡದ ಸೂಪರ್ ಹಿಟ್ ಹಾಡುಗಳನ್ನ ತಮ್ಮದೇ ಆದ ಸ್ಟೈಲ್ ನಲ್ಲಿ ನಿರ್ಮಾಣ ಮಾಡುತ್ತಿವೆ.

ಈ ವರ್ಷದ ಸೂಪರ್ ಹಿಟ್ ಸಿನಿಮಾ 'ರಾಜಕುಮಾರ' ಚಿತ್ರದ 'ಬೊಂಬೆ ಹೇಳುತೈತೆ' ಹಾಡಿಗೆ ಈ ಹುಡುಗರು ಅದ್ಭುತವಾದ ದೃಶ್ಯಕಾವ್ಯವೊಂದನ್ನ ಕಟ್ಟಿಕೊಟ್ಟಿದ್ದಾರೆ. 'ಬೊಂಬೆ ಹೇಳುತೈತೆ' ಹಾಡಿನ ಮೂಲಕ ಯುದ್ಧ ಸನ್ನದ್ಧ ಯೋಧನೊಬ್ಬನ ಕಥೆ ಹೇಳಿರುವುದು ವಿಶೇಷ. ಈ ಹಾಡು ಸಂಪೂರ್ಣವಾಗಿ ರೂಪುಗೊಂಡಿದ್ದು, ಬಿಡುಗಡೆ ಮಾಡಲು ಸಜ್ಜಾಗಿದೆ.

Bombe Helutaite Cover Song

ಲೋಹಿತ್ ನಿರ್ದೇಶನದ ಈ ಕವರ್ ಸಾಂಗ್ ಗೆ ನಿತಿನ್ ಛಾಯಾಗ್ರಹಣ, ಸುಹಾಸ್ ಸಹ ಛಾಯಾಗ್ರಹಣ, ವಿಜೇತ್ ಅವರ ಸಂಕಲನ ಹೊಂದಿದೆ. ಶಶಾಂಕ್, ಚೈತ್ರ, ನಂದನ್ ಮತ್ತು ಅನ್ಸುಲಿಕಾ ಅಷ್ಟೇ ಸೊಗಸಾಗಿ ಅಭಿನಯಿಸಿದ್ದಾರೆ. ಗುರುಚರಣ್ ಗೌಡ ಈ ಕವರ್ ಸಾಂಗ್ ಗೆ ಬಂಡವಾಳ ಹಾಕಿದ್ದಾರೆ. ಈ ತಂಡದಲ್ಲಿರುವವರು ಬಹುತೇಕರು ಐಟಿ ಬಿಟಿಗಳಲ್ಲಿ ಕೆಲಸ ಮಾಡುತ್ತಿರುವವರು. ಶನಿವಾರ ಮತ್ತು ಭಾನುವಾರದ ರಜೆಗಳಲ್ಲಿ ಇಂತಹ ಪ್ರಯತ್ನ ಮಾಡಿ ತಮ್ಮ ಕನಸನ್ನ ಸಾಕಾರ ಮಾಡಿಕೊಳ್ಳುತ್ತಿದ್ದಾರೆ.

ಇನ್ನು ಕವರ್ ಸಾಂಗ್ ನೋಡಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಕೆಪಿ ಶ್ರೀಕಾಂತ್, ಸುಧೀಂದ್ರ, ಸಂತೋಷ್ ಆನಂದರಾಮ್, ಶೈಲಜಾ ನಾಗ್, ಬಿ. ಸುರೇಶ , ಕಾರ್ತಿಕ್ ಗೌಡ ಮುಂತಾದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಶೇಷ ಅಂದ್ರೆ, ಇದೇ ಪ್ರತಿಭಾನ್ವಿತ ಯುವಕರು ತಂಡ ಈ ಹಿಂದೆ 'ಕಿರಿಕ್ ಪಾರ್ಟಿ' ಚಿತ್ರದ ಕವರ್ ಸಾಂಗ್ ಒಂದನ್ನು ಮಾಡಿ ಭೇಷ್ ಎನ್ನಿಸಿಕೊಂಡಿತ್ತು.

English summary
Bombe Helutaite Cover song Made by Gurucharan Combains. Originally Sung by Vijay Prakash Music by V Harikrishna.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada