»   » 'ಲಂಡನ್'ನಲ್ಲಿ ನಟ ದರ್ಶನ್ ಗೆ ಮಹೋನ್ನತ ಪ್ರಶಸ್ತಿ.!

'ಲಂಡನ್'ನಲ್ಲಿ ನಟ ದರ್ಶನ್ ಗೆ ಮಹೋನ್ನತ ಪ್ರಶಸ್ತಿ.!

Posted By:
Subscribe to Filmibeat Kannada
ಲಂಡನ್ ಪಾರ್ಲಿಮೆಂಟ್'ನಿಂದ ನಟ ದರ್ಶನ್ ಗೆ ಮಹೋನ್ನತ ಪ್ರಶಸ್ತಿ.! | Filmibeat Kannada

ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಸುಲ್ತಾನ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಲಂಡನ್ ನಲ್ಲಿ ಮಹೋನ್ನತ ಗೌರವಕ್ಕೆ ಪಾತ್ರರಾಗುತ್ತಿದ್ದಾರೆ. ಬ್ರಿಟನ್ ಪಾರ್ಲಿಮೆಂಟ್'ನಲ್ಲಿ 'ಗ್ಲೋಬಲ್ ಇಂಟಿಗ್ರಿಟಿ ಅವಾರ್ಡ್' (Global integrity award) ಗೆ ಕನ್ನಡದ ನಟ ದರ್ಶನ್ ಭಾಜನರಾಗುತ್ತಿದ್ದಾರೆ.

ಇದುವರೆಗೂ ನಾಲ್ಕು ಜನ ಬಾಲಿವುಡ್ ನಟರು ಲಂಡನ್ ನಲ್ಲಿ 'ಗ್ಲೋಬಲ್ ಡೈರ್ವಸಿಟಿ ಪ್ರಶಸ್ತಿ' (global diversity award) ಪಡೆದುಕೊಂಡಿದ್ದಾರೆ. ಈಗ ಕನ್ನಡದ ನಟನೊಬ್ಬ ಲಂಡನ್ ನಲ್ಲಿ ವಿಶೇಷವಾದ ಪುಸ್ಕಾರಕ್ಕೆ ಒಳಗಾಗುತ್ತಿರುವುದು ಕನ್ನಡ ಚಿತ್ರರಂಗಕ್ಕೆ ಹಿರಿಮೆ ತಂದಿದೆ.

ಅಷ್ಟಕ್ಕೂ, ದರ್ಶನ್ ಅವರನ್ನ ಲಂಡನ್ ನಲ್ಲಿ ಗೌರವಿಸುತ್ತಿರುವುದೇಕೆ? ಪ್ರಶಸ್ತಿ ಯಾವಾಗ ಸ್ವೀಕರಿಸಲಿದ್ದಾರೆ ಎಂಬ ಸಂಪೂರ್ಣ ಮಾಹಿತಿ ಮುಂದೆ ಓದಿ......

ದರ್ಶನ್ ಗೆ 'ಲಂಡನ್ ಪಾರ್ಲಿಮೆಂಟ್'ನಲ್ಲಿ ಗೌರವ

ಕನ್ನಡ ಚಿತ್ರರಂಗಕ್ಕೆ ನಟ ದರ್ಶನ್ ಅವರು ನೀಡಿರುವ ಕೊಡುಗೆಯನ್ನ ಪರಿಗಣಿಸಿ 'ಲಂಡನ್'ನಲ್ಲಿ ದರ್ಶನ್ ಅವರನ್ನ ಗೌರವಿಸಲು ಆಹ್ವಾನಿಸಿದೆ. ಬ್ರಿಟನ್ ನಲ್ಲಿ ನೀಡುವ 'ಗ್ಲೋಬಲ್ ಇಂಟಿಗ್ರಿಟಿ ಅವಾರ್ಡ್ (Global integrity award) ' ನೀಡಿ ಸನ್ಮಾನಿಸಲಿದೆ.

'ಕುರುಕ್ಷೇತ್ರ'ಕ್ಕೆ ಹಿಂದಿಯಲ್ಲಿ ಇಷ್ಟೊಂದು ಬೆಲೆನಾ? ಇತಿಹಾಸ ನಿರ್ಮಿಸಿದ ಕನ್ನಡ ಚಿತ್ರ.!

ದಕ್ಷಿಣ ಭಾರತದ ಮೊದಲ ನಟ

ಲಂಡನ್ ಪಾರ್ಲಿಮೆಂಟ್ ನಲ್ಲಿ ಈ ಗೌರವಕ್ಕೆ ಪಾತ್ರವಾಗುತ್ತಿರುವ ದಕ್ಷಿಣ ಭಾರತದ ಮೊದಲ ನಟ ಹಾಗೂ ಕನ್ನಡದ ಮೊದಲ ನಟ ಎಂಬ ಹೆಗ್ಗಳಿಕೆಗೆ ನಟ ದರ್ಶನ್ ಗೆ ಸಲ್ಲುತ್ತದೆ.

ಅಕ್ಟೋಬರ್ 19 ರಂದು ಕಾರ್ಯಕ್ರಮ

ಅಕ್ಟೋಬರ್ 19 ರಂದು ಲಂಡನ್ ಪಾರ್ಲಿಂಮೆಂಟ್ ನಲ್ಲಿ ದರ್ಶನ್ ಅವರಿಗೆ ಪ್ರಶಸ್ತಿ ಪ್ರಧಾನ ಸಮಾರಂಭ ಹಮ್ಮಿಕೊಂಡಿದ್ದು, ದರ್ಶನ್ ಅವರು ಅಕ್ಟೋಬರ್ 18 ರಂದು ಬೆಳಿಗ್ಗೆ ಲಂಡನ್ ಗೆ ತೆರಳಲಿದ್ದಾರೆ.

ಗಾಳಿ ಸುದ್ದಿ ಹಬ್ಬಿಸಬೇಡಿ, ಎಲ್ಲ ವದಂತಿಗಳಿಗೆ ಬ್ರೇಕ್ ಹಾಕಿದ ಡಿ-ಬಾಸ್.!

ಬಾಲಿವುಡ್ ನಟರಿಗೆ ಗೌರವ

ಈ ಮುಂಚೆ ಬಾಲಿವುಡ್ ನಟರಾದ ಅಮಿತಾಬ್ ಬಚ್ಚನ್, ಐಶ್ವರ್ಯ ರೈ ಬಚ್ಚನ್, ಶಾರೂಖ್ ಖಾನ್ ಮತ್ತು ಸಲ್ಮಾನ್ ಖಾನ್ 'ಲಂಡನ್ ಪಾರ್ಲಿಮೆಂಟ್'ನಲ್ಲಿ ಈ ಗೌರವಕ್ಕೆ ಪಾತ್ರರಾಗಿದ್ದರು. ಅವರಿಗೆ 'ಗ್ಲೋಬಲ್ ಡೈರ್ವಸಿಟಿ ಪ್ರಶಸ್ತಿ' (global diversity award) ನೀಡಲಾಗಿತ್ತು.

'ಕುರುಕ್ಷೇತ್ರ' ಸೆಟ್ ನಲ್ಲಿ ಸಂಭ್ರಮ

ಅಕ್ಟೋಬರ್ 18 ರಂದು ಪ್ರಶಸ್ತಿ ಸ್ವೀಕರಿಸಲು ಲಂಡನ್ ಗೆ ದರ್ಶನ್ ತೆರಳುತ್ತಿರುವ ಹಿನ್ನೆಲೆ ಕುರುಕ್ಷೇತ್ರ ಸೆಟ್ ನಲ್ಲಿ ಸಂತಸವನ್ನ ಸಂಭ್ರಮಿಸಲಾಗುತ್ತಿದೆಯಂತೆ. 'ಯು.ಕೆ' ಯಲ್ಲಿ ಪ್ರಶಸ್ತಿ ಪಡೆದ ನಂತರ ಅಕ್ಟೋಬರ್ 26 ರಂದು 'ಕುರುಕ್ಷೇತ್ರ' ಚಿತ್ರತಂಡವನ್ನ ಮತ್ತೆ ದಾಸ ಸೇರಿಕೊಳ್ಳಲಿದ್ದಾರೆ.

ಲಂಡನ್ ನಿಂದ ನಟ ದರ್ಶನ್ ಗೆ ಆಹ್ವಾನ ನೀಡಿರುವ ವಿಡಿಯೋ ನೋಡಿ

English summary
Challenging star Darshan will be honored in the British Parliament. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ 'ಲಂಡನ್'ನಲ್ಲಿ 'ಗ್ಲೋಬಲ್ ಇಂಟಿಗ್ರಿಟಿ ಅವಾರ್ಡ್' ನೀಡಿ ಗೌರವಿಸಲಾಗುತ್ತಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X