For Quick Alerts
  ALLOW NOTIFICATIONS  
  For Daily Alerts

  'ಯಶ್ ನನ್ನ ಅಭಿಮಾನಿ' ಎಂದ ಸಿಎಂ: ಒಂದೇ ವೇದಿಕೆಯಲ್ಲಿ ರಾಕಿಭಾಯ್-ರಾಜಾಹುಲಿ!

  |

  ಕರ್ನಾಟಕದಲ್ಲಿ ರಾಜಾಹುಲಿ ಅಂದ್ರೆ ಇಬ್ಬರು ನೆನಪಾಗ್ತಾರೆ. ಒಬ್ಬರು ರಾಜಾಹುಲಿ ಎಂಬ ಸಿನಿಮಾ ಮಾಡಿದ್ದ ರಾಕಿಂಗ್ ಸ್ಟಾರ್ ಯಶ್. ಇನ್ನೊಬ್ಬರು ರಾಜಾಹುಲಿಯಂತೆ ಫೈಟ್ ಮಾಡಿ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತಂದ ಬಿಎಸ್ ಯಡಿಯೂರಪ್ಪ.

  Recommended Video

  ವೇದಿಕಾ ಮೇಲೆ ಯಶ್ ಹೆಸರು ಮರೆತ ಸಿಎಂ , ಕೊನೆಗೆ ಮಾಡಿದ್ದೇನು ? | Yash | CM | Film Festival

  ಸಿನಿಮಾ ಇಂಡಸ್ಟ್ರಿಯಲ್ಲಿ ರಾಜಾಹುಲಿ ಅಂದ್ರೆ ಯಶ್. ರಾಜಕೀಯದಲ್ಲಿ ರಾಜಾಹುಲಿ ಅಂದ್ರೆ ಯಡಿಯೂರಪ್ಪ ಎನ್ನುವಂತಾಗಿದೆ. ಈ ಇಬ್ಬರು ರಾಜಾಹುಲಿಗಳು ನಿನ್ನೆ (ಫೆಬ್ರವರಿ 26) ನಡೆದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ ಸಮಾರಂಭದಲ್ಲಿ ಒಟ್ಟಿಗೆ ವೇದಿಕೆ ಹಂಚಿಕೊಂಡರು. ಮುಂದೆ ಓದಿ....

  ಯಶ್ ಹೆಸರು ಹೇಳಲು ಮರೆತ ಸಿಎಂ

  ಯಶ್ ಹೆಸರು ಹೇಳಲು ಮರೆತ ಸಿಎಂ

  ಸಿನಿಮೋತ್ಸವ ಉದ್ಘಾಟನೆ ಬಳಿಕ ಭಾಷಣ ಮಾಡಿದ ಸಿಎಂ ಯಡಿಯೂರಪ್ಪ ವೇದಿಕೆ ಮೇಲೆ ಕುಳಿತಿದ್ದ ಎಲ್ಲರ ಹೆಸರು ಹೇಳಿ ಮಾತು ಆರಂಭಿಸಿದರು. ಬೋನಿ ಕಪೂರ್, ಜಯಪ್ರದಾ, ಸೋನು ನಿಗಮ್, ಸುನೀಲ್ ಪುರಾಣಿಕ್, ಜೈರಾಜ್ ಹಾಗೂ ಅಧಿತಿ ಪ್ರಭುದೇವ ಹೆಸರು ಉಲ್ಲೇಖಿಸಿದ ಸಿಎಂ ಯಶ್ ಅವರ ಹೆಸರು ಮರೆತರು. ಇದು ನೆರದಿದ್ದವರ ಗಮನಕ್ಕೆ ಬಂತು. ಒಂದು ಕ್ಷಣ ಯಡಿಯೂರಪ್ಪ ಅವರು ಯಶ್ ಹೆಸರು ಬಿಟ್ಟರಲ್ಲ ಎಂಬ ಗುಸುಗುಸು ಆರಂಭವಾಯಿತು.

  ಬೆಂಗಳೂರು ಚಿತ್ರೋತ್ಸವ ವೇದಿಕೆಯಲ್ಲಿ ಸಿಎಂ ಬಳಿ ಬೇಡಿಕೆ ಇಟ್ಟ ನಟ ಯಶ್ಬೆಂಗಳೂರು ಚಿತ್ರೋತ್ಸವ ವೇದಿಕೆಯಲ್ಲಿ ಸಿಎಂ ಬಳಿ ಬೇಡಿಕೆ ಇಟ್ಟ ನಟ ಯಶ್

  ಮತ್ತೆ ಯಶ್ ಅವರನ್ನು ನೆನಪಿಸಿಕೊಂಡ ಬಿಎಸ್ ವೈ

  ಮತ್ತೆ ಯಶ್ ಅವರನ್ನು ನೆನಪಿಸಿಕೊಂಡ ಬಿಎಸ್ ವೈ

  ಸಿನಿಮೋತ್ಸವ ಹಾಗೂ ಸಿನಿಮಾ ಇಂಡಸ್ಟ್ರಿಗೆ ಮಾತನಾಡಿದ ಮುಗಿಸಿದ ಬಳಿಕ ಕೊನೆಯಲ್ಲಿ ಮತ್ತೆ ಯಶ್ ಅವರನ್ನು ನೆನಪಿಸಿಕೊಂಡರು. ''ನನ್ನ ಅಭಿಮಾನಿ ಯಶ್ ಅವರ ಹೆಸರು ಹೇಳಲು ಮರೆತೆ. ಬಹುಶಃ ಜಾಸ್ತಿ ಪ್ರೀತಿ ಇದ್ದ ಕಡೆ ಹೀಗಾಗುತ್ತೆ'' ಎಂದು ಹೇಳಿ ಯಶ್ ಅವರನ್ನು ಸ್ವಾಗತಿಸಿದರು.

  ''ನಾನೊಬ್ಬ ಕನ್ನಡಿಗ, ಹಿಂದಿನ ಜನ್ಮದಲ್ಲಿ ಇಲ್ಲೇ ಹುಟ್ಟಿದ್ದೆ''- ಸೋನು ನಿಗಮ್''ನಾನೊಬ್ಬ ಕನ್ನಡಿಗ, ಹಿಂದಿನ ಜನ್ಮದಲ್ಲಿ ಇಲ್ಲೇ ಹುಟ್ಟಿದ್ದೆ''- ಸೋನು ನಿಗಮ್

  ಮುಖ್ಯಮಂತ್ರಿ ಮುಂದೆ ಯಶ್ ಮನವಿ

  ಮುಖ್ಯಮಂತ್ರಿ ಮುಂದೆ ಯಶ್ ಮನವಿ

  ಬಳಿಕ ರಾಕಿಂಗ್ ಸ್ಟಾರ್ ಯಶ್ ಮಾತನಾಡುವ ವೇಳೆ ಮುಖ್ಯಮಂತ್ರಿ ಬಳಿ ಒಂದು ಮನವಿ ಮಾಡಿದರು. ''ಕರ್ನಾಟಕದಲ್ಲಿ ಸ್ಟುಡಿಯೋ ನಿರ್ಮಿಸಿ ಕೊಡಿ, ಎಲ್ಲರೂ ಇಲ್ಲೇ ಕೆಲಸ ಮಾಡಬಹುದು. ಅನೇಕ ಪ್ರತಿಭೆಗಳಿಗೆ ಪ್ರೋತ್ಸಾಹ ಸಿಗುತ್ತೆ'' ಎಂದು ಕೇಳಿಕೊಂಡರು.

  ಜಯಪ್ರದಾ, ಸೋನು ನಿಗಮ್ ಅತಿಥಿ

  ಜಯಪ್ರದಾ, ಸೋನು ನಿಗಮ್ ಅತಿಥಿ

  12ನೇ ಆವೃತ್ತಿಯ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆಗೆ ಬಾಲಿವುಡ್ ಖ್ಯಾತ ನಿರ್ಮಾಪಕ ಬೋನಿ ಕಪೂರ್, ಗಾಯಕ ಸೋನು ನಿಗಮ್, ಪಂಚಭಾಷೆ ನಟಿ ಜಯಪ್ರದಾ ಹಾಗೂ ಕನ್ನಡ ನಟಿ ಅಧಿತಿ ಪ್ರಭುದೇವ ಆಗಮಿಸಿದ್ದರು.

  English summary
  Karnataka chief minister BS Yediyurappa has missed mentioning the name of Yash and later he realised and welcomed Yash at BIFFES2020.
  Thursday, February 27, 2020, 12:37
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X