»   » ಕುಚಿಕು ಗೆಳೆಯನಿಗೆ ಕಾಲ್ ಶೀಟ್ ಕೊಟ್ಟ ಆ ನಟ ಯಾರು?

ಕುಚಿಕು ಗೆಳೆಯನಿಗೆ ಕಾಲ್ ಶೀಟ್ ಕೊಟ್ಟ ಆ ನಟ ಯಾರು?

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಪ್ರೀತಿಯ ಗೆಳೆಯನೊಬ್ಬನಿಗೆ ಕಾಲ್ ಶೀಟ್ ನೀಡಿರುವ ಸಂಗತಿ ಇದೀಗ ಸಖತ್ ಸುದ್ದಿಯಾಗ್ತ ಇದೆ.

ಯಾವಾಗಲೂ ದರ್ಶನ್ ಚಿತ್ರದಲ್ಲಿ ಕಾಣಿಸಿಕೊಳ್ಳುವ ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರಿಗೆ ದರ್ಶನ್ ಅವರಿಗೊಂದು ಚಿತ್ರ ಮಾಡಬೇಕೆನ್ನುವ ಬಹು ದಿನಗಳ ಕನಸು ಈಡೇರುವ ಸಮಯ ಇದೀಗ ಹತ್ತಿರವಾಗುತ್ತಿದೆ.

Bullet prakash gets actor Darshan's call sheet

ಇದೀಗ ಬುಲೆಟ್ ಪ್ರಕಾಶ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಹೊಸ ಚಿತ್ರವೊಂದರಲ್ಲಿ ಅಭಿನಯಿಸಲು ದರ್ಶನ್ ಒಪ್ಪಿಗೆ ನೀಡಿದ್ದಾರೆ. ತುಂಬಾ ದಿನಗಳಿಂದ ದರ್ಶನ್ ಗೆ ಚಿತ್ರ ನಿರ್ಮಾಣ ಮಾಡುವ ಆಸೆಯನ್ನು ಆಪ್ತರ ಬಳಿ ಹೇಳಿಕೊಂಡಿದ್ದರು. ಇದು ದರ್ಶನ್ ಕಿವಿಗೆ ಬಿದ್ದಿದೆ.[ಬುಲ್ಲೆಟ್ ಪ್ರಕಾಶ್ ನಿರ್ಮಾಣದಲ್ಲಿ ದರ್ಶನ್ ಚಿತ್ರ]

ಆದರೆ ತುಂಬಾ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ದರ್ಶನ್ ಸದ್ಯಕ್ಕೆ ಸಿಗಲಿಕ್ಕಿಲ್ಲ ಅಂತ ತಮ್ಮ ಕನಸನ್ನು ಬದಿಗೊತ್ತಿ ಕುಳಿತಿದ್ದ, ಸಂದರ್ಭದಲ್ಲಿ ದರ್ಶನ್ ಗೆ ವಿಷಯ ತಿಳಿದು ತಕ್ಷಣ ಬುಲೆಟ್ ಪ್ರಕಾಶ್ ಅವರನ್ನು ತಮ್ಮ ಹತ್ತಿರ ಕರೆಸಿಕೊಂಡು, 'ನಿನಗಾಗಿ ಸಿನಿಮಾ ಮಾಡ್ತೀನಿ ತಯಾರಾಗಿರು ಅಂತ ಹೇಳಿದ್ದಾರೆ.

Bullet prakash gets actor Darshan's call sheet

ಈ ವಿಷಯ ಕೇಳಿ ಫುಲ್ ಖುಷ್ ಆಗಿರುವ ಬುಲೆಟ್ ಪ್ರಕಾಶ್ ಅವರು ಚಿತ್ರದ ನಿರ್ದೇಶಕ ಹಾಗೂ ಮೂಹೂರ್ತ ಸಮಾರಂಭದ ಬಗ್ಗೆ ಸದ್ಯದಲ್ಲೇ ತಿಳಿಸುವುದಾಗಿ ನುಡಿದಿದ್ದಾರೆ. ಇದು ಪಕ್ಕಾ ಆದರೆ ಕುಚಿಕು ಕಾಂಬಿನೇಷನ್ ನಲ್ಲಿ, ಶೀಘ್ರದಲ್ಲಿ ಒಂದು ಚಿತ್ರ ನಿರ್ಮಾಣವಾಗಲಿದೆ.

English summary
Kannada Actor Bullet Prakash is all set to turn Producer. According to the reports, Bullet Prakash is producing film for Challenging Star Darshan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada