»   » 'ನಾನಿನ್ನು ಸತ್ತಿಲ್ಲ ಬದುಕಿದ್ದೇನೆ': ಸಾವಿನ ಸುದ್ದಿ ಬಗ್ಗೆ ಬುಲೆಟ್ ಕೆಂಡಾಮಂಡಲ

'ನಾನಿನ್ನು ಸತ್ತಿಲ್ಲ ಬದುಕಿದ್ದೇನೆ': ಸಾವಿನ ಸುದ್ದಿ ಬಗ್ಗೆ ಬುಲೆಟ್ ಕೆಂಡಾಮಂಡಲ

Posted By:
Subscribe to Filmibeat Kannada
ಬುಲೆಟ್ ಪ್ರಕಾಶ್ ಅವರಿಂದ ಸುಳ್ಳು ಸುದ್ದಿ ಹಬ್ಬಿಸುತ್ತಿರುವವರಿಗೆ ವಾರ್ನಿಂಗ್ | Filmibeat Kannada

ನಟ ಬುಲೆಟ್ ಪ್ರಕಾಶ್ ಕನ್ನಡ ಸಿನಿಮಾರಂಗದಲ್ಲಿ ಖ್ಯಾತ ಹಾಸ್ಯ ನಟನಾಗಿ ಗುರುತಿಸಿಕೊಂಡಿರುವ ಕಲಾವಿದ, ಸಾಕಷ್ಟು ಸಿನಿಮಾಗಳಲ್ಲಿ ಸ್ಟಾರ್ ನಟರ ಜೊತೆಯಲ್ಲಿ ಅಭಿನಯಿಸಿರುವ ಬುಲೆಟ್ ಪ್ರಕಾಶ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಆಪ್ತರಾಗಿದ್ದವರು. ಕೆಲವೊಂದು ಇರಿಸು ಮುರಿಸಿನಿಂದ ಬುಲೆಟ್ ಹಾಗೂ ಡಿ ಬಾಸ್ ಸ್ನೇಹ ಹಾಳಾಗಿತ್ತು.

ಆದರೆ ದರ್ಶನ್ ಅವರ ಹುಟ್ಟುಹಬ್ಬಕ್ಕೂ ಮುಂಚೆ ಬುಲೆಟ್ ಪ್ರಕಾಶ್ ದರ್ಶನ್ ಅವರನ್ನ ಭೇಟಿ ಮಾಡಿ ಪೋಟೋ ತೆಗೆದುಕೊಂಡಿದ್ದರು. ಸುಮಾರು ಎರಡು ವರ್ಷಗಳು ದೂರವಿದ್ದ ನಂತರ ಬುಲೆಟ್ ಪ್ರಕಾಶ್ ತಮ್ಮ ಸ್ನೇಹಿತನನ್ನ ಹುಡುಕಿಕೊಂಡು ಹೋಗಿದ್ದರು. ಆಗಲೇ ಬುಲೆಟ್ ಭಾರಿ ಸಣ್ಣಗಾಗಿರುವುದು ಗೊತ್ತಾಗಿತ್ತು.

ಬುಲೆಟ್ ಪ್ರಕಾಶ್ ರವರ ಈ ಪ್ರಯತ್ನಕ್ಕೆ 'ಭೇಷ್' ಎಂದು ಬೆನ್ನು ತಟ್ಟಲೇಬೇಕು.!

ಬುಲೆಟ್ ಸಿಕ್ಕಾಪಟ್ಟೆ ಸಣ್ಣ ಆಗಿರುವುದನ್ನ ಕಂಡ ಜನರು ಇಷ್ಟು ಬೇಗ ಸಣ್ಣಗಾಗಲೂ ಹೇಗೆ ಸಾಧ್ಯ ಎಂದಿದ್ದರು. ಅದರ ಬೆನ್ನಲ್ಲೇ ಬುಲೆಟ್ ಪ್ರಕಾಶ್ ಆಸ್ಪತ್ರೆಗೆ ದಾಖಲಾಗಿರುವ ಸುದ್ದಿ ಹರಿದಾಡಿತ್ತು. ಆದರೆ ಯಾವುದೋ ವಿಚಾರಕ್ಕೆ ಆಸ್ಪತ್ರೆಗೆ ಭೇಟಿ ನೀಡಿದ್ದಕ್ಕೆ ಬುಲೆಟ್ ಪ್ರಕಾಶ್ ಸಾವು ಎಂದು ಸುದ್ದಿ ಮಾಡಿದ್ದಾರೆ ಎಂದು ಬುಲೆಟ್ ಪ್ರಕಾಶ್ ಆರೋಪ ಮಾಡಿದ್ದಾರೆ. ಅದರ ಜೊತೆಯಲ್ಲಿ ನಾನಿನ್ನು ಬದುಕಿದ್ದೇನೆ ಎಂದು ಸಿಡಿದಿದ್ದಾರೆ. ಹಾಗಾದರೆ ಬುಲೆಟ್ ಪ್ರಕಾಶ್ ಬಗ್ಗೆ ಸುದ್ದಿ ಹಬ್ಬಿಸಿದವರು ಯಾರು? ಫೇಸ್ ಬುಕ್ ನಲ್ಲಿ ಬುಲೆಟ್ ಹಾಕಿರುವ ವಿಡಿಯೋದಲ್ಲಿ ಏನಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ.

ನಾನಿನ್ನು ಸತ್ತಿಲ್ಲ ಎಂದ ಬುಲೆಟ್

ಕನ್ನಡದ ಹಾಸ್ಯ ನಟ ಬುಲೆಟ್ ಪ್ರಕಾಶ್ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕೋಪಗೊಂಡಿದ್ದಾರೆ. ನಾನು ಸತ್ತೇ ಹೋಗಿದ್ದೇನೆ ಎಂದು ಸುದ್ದಿ ಮಾಡುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನೆ ಮಾಡಿದ್ದಾರೆ.

ಆಸ್ಪತ್ರೆಗೆ ಹೋಗಿದ್ದು ಸತ್ಯ

ನಟ ಬುಲೆಟ್ ಪ್ರಕಾಶ್ ಕಳೆದ ಹದಿನೈದು ದಿನಗಳ ಹಿಂದೆ ವಿಕ್ರಂ ಆಸ್ಪತ್ರೆಗೆ ಬೇಟಿ ನೀಡಿದ್ದು ಸತ್ಯ. ಆಸ್ಪತ್ರೆಯ ಮೂಲಗಳೇ ಬುಲೆಟ್ ಪ್ರಕಾಶ್ ಚಿಕಿತ್ಸೆಗೆ ಬಂದಿರುವ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು.

ಸೆಲಬ್ರೆಟಿಗಳಿಗೂ ಕುಟುಂಬವಿದೆ

ಸುಳ್ಳು ಸುದ್ದಿ ಹಬ್ಬಿಸಿದವರ ಬಗ್ಗೆ ಮಾತನಾಡಲು ಫೇಸ್ ಬುಕ್ ಗೆ ವಿಡಿಯೋ ಅಪ್ಲೋಡ್ ಮಾಡಿದ ನಟ ಬುಲೆಟ್ ಪ್ರಕಾಶ್ ಸೆಲಬ್ರೆಟಿಗಳು ಆದ ಮಾತ್ರಕ್ಕೆ ಹೇಗೆಬೇಕಾದರು ಸುದ್ದಿ ಮಾಡುವ ಹಕ್ಕು ಯಾರಿಗೂ ಇಲ್ಲ. ನಮಗೂ ಕುಟುಂಬ ಇರುತ್ತೆ, ನಮ್ಮ ಮಕ್ಕಳು ಹಾಗೂ ಪೋಷಕರಿಗೂ ತೊಂದರೆ ಎನ್ನುವುದನ್ನು ಖಾರವಾಗಿ ತಿಳಿಸಿದ್ದಾರೆ.

ಸಾವಿನ ರಹಸ್ಯ ಕಂಡುಕೊಂಡ ನಟ

ಇದೇ ವಿಡಿಯೋದಲ್ಲಿ ಸಾವಿನ ಬಗ್ಗೆ ಮಾತನಾಡಿರುವ ಬುಲೆಟ್ ಪ್ರಕಾಶ್ ನನಗೆ ನನ್ನ ಸಾವು ಯಾವಾಗ ಆಗುತ್ತದೆ ಎನ್ನುವುದು ತಿಳಿದಿದೆ. ನನ್ನ ಗುರುಗಳು ನನ್ನ ಸಾವಿನ ರಹಸ್ಯವನ್ನು ಹೇಳಿದ್ದಾರೆ ಎಂದು ತಿಳಿಸಿದ್ದಾರೆ.

ಹಾಸ್ಯ ನಟ ಬುಲೆಟ್ ಪ್ರಕಾಶ್ ಆರೋಗ್ಯದಲ್ಲಿ ಏರುಪೇರು

English summary
Kannada comedian Bullet Prakash has spoken about taking treatment at the hospital. Bullet Prakash is angry with the false news spreaders about his treatment .

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X