»   » ದರ್ಶನ್ ಗೆ ಟ್ವಿಟ್ಟರ್, ಫೇಸ್ ಬುಕ್ ಬಳಸಲು ಬರಲ್ವಂತೆ! ಟ್ವೀಟ್ ಮಾಡೋದ್ಯಾರು?

ದರ್ಶನ್ ಗೆ ಟ್ವಿಟ್ಟರ್, ಫೇಸ್ ಬುಕ್ ಬಳಸಲು ಬರಲ್ವಂತೆ! ಟ್ವೀಟ್ ಮಾಡೋದ್ಯಾರು?

By: BK
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್, ತಮ್ಮ ಆಪ್ತಮಿತ್ರ ಸುದೀಪ್ ಅವರ ಮೇಲೆ ಟ್ವಿಟ್ಟರ್ ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದು, ಸ್ಯಾಂಡಲ್ ವುಡ್ ನಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಈ ನಿರ್ಧಾರದಿಂದ ಅಭಿಮಾನಿ ಬಳಗದಲ್ಲಿ ಆತಂಕ ಮೂಡಿದ್ರೆ, ಇಬ್ಬರ ಸ್ನೇಹಿತರ ಮುಖದಲ್ಲಿ ಅನುಮಾನ ಮೂಡಿದೆ.

ದರ್ಶನ್ ಮತ್ತು ಸುದೀಪ್ ಅವರ ಭಿನ್ನಭಿಪ್ರಾಯದ ಮಧ್ಯೆ ಕಾಣದ ಕೈಗಳ ಕೈವಾಡವಿದೆ ಎಂಬುದು ಚಿತ್ರ ವಲಯದಲ್ಲಿ ಜೋರಾಗಿ ಕೇಳಿಬರುತ್ತಿದೆ. ಎರಡೂ ಬಣದಲ್ಲೂ ಹುಳಿ ಹಿಂಡುವವರು ಇದ್ದಾರೆ. ಹೀಗಾಗಿ, ಇಬ್ಬರ ಸ್ನೇಹವನ್ನ ಸಹಿಸದವರು ಹೀಗೆ, ಮಾಡ್ತಿದ್ದಾರೆ ಎನ್ನಲಾಗುತ್ತಿದೆ.['ದರ್ಶನ್-ಸುದೀಪ್' ಸ್ನೇಹದ ಬಿರುಕಿಗೆ ಕಾರಣವಾಗಿದ್ದು 'ಸುದೀಪ್ ಕೊಟ್ಟ ಆ ಹೇಳಿಕೆ'!]

ಈ ಅನುಮಾನ ಬರಲು ಕಾರಣ ಹಾಸ್ಯನಟ ಬುಲೆಟ್ ಪ್ರಕಾಶ್. ಎಸ್, ದರ್ಶನ್ ಅವರಿಗೆ ಟ್ವಿಟ್ಟರ್, ಫೇಸ್ ಬುಕ್ ಬಳಸಲು ಬರಲ್ಲ ಎಂಬ ಮಾಹಿತಿಯನ್ನ ಹೊರಹಾಕಿರುವ ಬುಲೆಟ್ ಪ್ರಕಾಶ್, ಇದರ ಇದೆ ದೊಡ್ಡ ಕಥೆಯಿದೆ ಎಂದ್ದಿದ್ದಾರೆ.

ದರ್ಶನ್ ಗೆ ಟ್ವಿಟ್ಟರ್ ಬಳಸೋಕೆ ಬರಲ್ವಾ!

ನಟ ದರ್ಶನ್ ತೂಗುದೀಪ ಅವರಿಗೆ ಟ್ವಿಟ್ಟರ್ ಬಳಸೋಕೆ ಬರಲ್ವಾ ಎಂಬ ಪ್ರಶ್ನೆಯೊಂದು ಉದ್ಭವವಾಗಿದೆ. ಇದಕ್ಕೆ ಕಾರಣ ಹಾಸ್ಯ ನಟ ಬುಲೆಟ್ ಪ್ರಕಾಶ್. ಹೌದು, ದರ್ಶನ್ ಅವರು ಟ್ವಿಟ್ಟರ್ ಹಾಗೂ ಫೇಸ್ ಬುಕ್ ಬಳಸೋಲ್ಲ ಎಂದು ಪಬ್ಲಿಕ್ ಟಿವಿಗೆ ಹೇಳಿಕೆ ನೀಡಿದ್ದಾರೆ.[ದರ್ಶನ್ 'ಮೆಜೆಸ್ಟಿಕ್' ಬಗ್ಗೆ ಸಂದರ್ಶನದಲ್ಲಿ ಸುದೀಪ್ ಹೇಳಿದ್ದೇನು? ಇಲ್ಲಿದೆ ನೋಡಿ]

ದರ್ಶನ್ ಟೈಪ್ ಮಾಡಲ್ವಂತೆ!

''ದರ್ಶನ್ ಗೆ ಫೇಸ್ ಬುಕ್, ಟ್ವಿಟ್ಟರ್ ಬಳಸೋಕೆ ಗೊತ್ತಿಲ್ಲ, ದರ್ಶನ್ ಗೆ ಟೈಪ್ ಮಾಡೋದು ಗೊತ್ತಿಲ್ಲ, ದರ್ಶನ್ ಮೊಬೈಲ್ ಆನ್ ಅಂಡ್ ಆಫ್ ಮಾಡ್ತಾನೆ ಅಷ್ಟೇ''.

ಎರಡೂ ಕಡೆ ಕಳ್ಳರು ಇದ್ದಾರೆ!

''ಟ್ವೀಟ್ ಮಾಡ್ತಿರೋರು ಎರಡೂ ಕಡೆ ಕಳ್ಳರೇ ಇದ್ದಾರೆ. ಅವ್ರ ಬೇಳೆ ಬೇಯಿಸಿಕೊಳ್ಳೋಕೆ ವಿವಾದ ಸೃಷ್ಟಿಸ್ತಿದ್ದಾರೆ. ಎಲ್ಲರೂ ಕಳ್ಳರೇ, ಇದರ ಹಿಂದೆ ದೊಡ್ಡ ಕಥೆಯಿದೆ. ದರ್ಶನ್ ಮತ್ತು ಸುದೀಪ್ ಚೆನ್ನಾಗಿರಬೇಕು'' ಎಂದು ಬುಲೆಟ್ ಪ್ರಕಾಶ್ ಪಬ್ಲಿಕ್ ಟಿವಿಗೆ ಹೇಳಿದ್ದಾರೆ.[ಕುಚಿಕು ಗೆಳೆಯರ ಗಲಾಟೆ; ಬುಲೆಟ್ ಪ್ರಕಾಶ್ ಬಾಯ್ಬಿಟ್ಟ ಸತ್ಯ]

ದರ್ಶನ್ ಅಕೌಂಟ್ ಹ್ಯಾಕ್ ಆಗಿದ್ಯಾ?

ದರ್ಶನ್ ತೂಗುದೀಪ ಎಂಬ ಹೆಸರಿನಲ್ಲಿ ನಟ ದರ್ಶನ್ ಅಧೀಕೃತವಾದ ಖಾತೆ ಹೊಂದಿದ್ದಾರೆ. ಆದ್ರೆ, ಆ ಖಾತೆಯನ್ನ ಯಾರಾದ್ರೂ ಹ್ಯಾಕ್ ಮಾಡಿರಬಹುದು ಎನ್ನಲಾಗುತ್ತಿದೆ.[ದಿನಕರ್ ಮತ್ತು ಬುಲೆಟ್ ಪ್ರಕಾಶ್ ಮಧ್ಯೆ ಹುಳಿ ಹಿಂಡಿದವರು ಯಾರು?]

'ನನ್ನದೇ ಅಕೌಂಟ್' ಎಂದ ದರ್ಶನ್

ಮಾಧ್ಯಮಗಳಲ್ಲಿ ದರ್ಶನ್ ಅವರ ಟ್ವಿಟ್ಟರ್ ಅಕೌಂಟ್ ಹ್ಯಾಕ್ ಆಗಿದೆ ಎಂಬ ಸುದ್ದಿಯನ್ನ ಗಮನಿಸಿದ ದರ್ಶನ್, ನನ್ನ ಅಕೌಂಟ್ ಹ್ಯಾಕ್ ಆಗಿಲ್ಲ. ಇದು ನನ್ನದೇ ಅಧೀಕೃತ ಎಂದು ಸ್ವಷ್ಟಪಡಿಸಿದ್ದಾರೆ.

ಟ್ವಿಟ್ಟರ್ ಅಕೌಂಟ್ ಬಗ್ಗೆ ಕ್ಲಾರಿಟಿ ಕೊಟ್ಟ ದಾಸ

''ಕೆಲ ಚಾನೆಲ್ಸ್ ಹೇಳುವಂತೆ ಯಾರೇನು ಹ್ಯಾಕ್ ಮಾಡಿಲ್ಲ. ಇದು ನನ್ನ ಖಾತೆ, ನನ್ನ ಮಾತುಗಳೇ. ನನ್ನ ಗಮನಕ್ಕೆ ಬಂದ ಸಂಗತಿಗಳನ್ನು ಆಲೋಚಿಸಿಯೇ ನಾನು ಹೇಳಲು ಬಯಸುವ ವೇದಿಕೆ'' ಎಂದು ದರ್ಶನ್ ಟ್ವಿಟ್ಟರ್ ಅಕೌಂಟ್ ಬಗ್ಗೆ ಮೂಡಿದ್ದ ಅನುಮಾನವನ್ನ ಬಗೆಹರಿಸಿದ್ದಾರೆ.[ಟ್ವಿಟ್ಟರ್ ಹ್ಯಾಕ್ ಆಗಿಲ್ಲ, ಇದು ನನ್ನದೇ ಖಾತೆ : ದರ್ಶನ್]

English summary
Comedy Actor Bullet Prakash Says, Challenging Star Darshan Does Not Using Twitter And FaceBook is Manually and He Does Not Type Him Self.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada