»   » ಬುಲ್ಲೆಟ್ ಪ್ರಕಾಶ್ ನಿರ್ಮಾಣದಲ್ಲಿ ದರ್ಶನ್ ಚಿತ್ರ

ಬುಲ್ಲೆಟ್ ಪ್ರಕಾಶ್ ನಿರ್ಮಾಣದಲ್ಲಿ ದರ್ಶನ್ ಚಿತ್ರ

Posted By:
Subscribe to Filmibeat Kannada

'ಕರಿ ಇಡ್ಲಿ'ಯಾಗಿ ಅನೇಕ ಸಿನಿಮಾಗಳಲ್ಲಿ ಕಾಮಿಡಿ ಕಚಗುಳಿ ಇಟ್ಟು ಎಲ್ಲರನ್ನ ನಗೆಗಡಲಲ್ಲಿ ತೇಲಿಸುವ ನಟ 'ಬುಲ್ಲೆಟ್' ಪ್ರಕಾಶ್. ಕಾಮಿಡಿ ಖಿಲಾಡಿಯಾಗಿ ಇಲ್ಲಿವರೆಗೂ ಗುರುತಿಸಿಕೊಂಡಿರುವ ಬುಲ್ಲೆಟ್ ಪ್ರಕಾಶ್ ಈಗ ಹೊಸ ಸಾಹಸಕ್ಕೆ ಕೈಹಾಕುತ್ತಿದ್ದಾರೆ.

ಅಂತಹ ಸಾಹಸ ಏನಪ್ಪಾ ಅಂದ್ರೆ, ಚಿತ್ರ ನಿರ್ಮಾಣಕ್ಕೆ ಬುಲ್ಲೆಟ್ ಪ್ರಕಾಶ್ ಕೈಹಾಕಿದ್ದಾರೆ. ಹೌದು, ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಾಗಿನಿಂದಲೂ ನಿರ್ಮಾಪಕನಾಗುವ ಹುಮ್ಮಸ್ಸು ಹೊಂದಿದ್ದ ಬುಲ್ಲೆಟ್ ಪ್ರಕಾಶ್, ಈಗ ತಮ್ಮ ಆಸೆಯನ್ನ ಈಡೇರಿಸಿಕೊಳ್ಳುತ್ತಿದ್ದಾರೆ.

Bullet Prakash to produce Darshan's next

ಅಂದ್ಹಾಗೆ, ಬುಲ್ಲೆಟ್ ಪ್ರಕಾಶ್ ಚಿತ್ರ ನಿರ್ಮಾಣ ಮಾಡುತ್ತಿರುವುದು ಯಾರಿಗೆ ಗೊತ್ತಾ? ಬೇರಾರಿಗೂ ಅಲ್ಲ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಗಾಗಿ. ವರ್ಷಗಳಿಂದಲೂ ದರ್ಶನ್ ಮತ್ತು ಬುಲ್ಲೆಟ್ ಪ್ರಕಾಶ್ ಆಪ್ತ ಸ್ನೇಹಿತರು. [ನೋಡಿ ಸ್ವಾಮಿ ಸ್ಯಾಂಡಲ್ ವುಡ್ ಅಪೂರ್ವ ಜೋಡಿ]

ದರ್ಶನ್ ಜೊತೆ 'ಕಲಾಸಿಪಾಳ್ಯ', 'ಸುಂಟರಗಾಳಿ' ಸೇರಿದಂತೆ ಸಾಲು ಸಾಲು ಚಿತ್ರಗಳಲ್ಲಿ ದರ್ಶನ್ ಜೊತೆಯಾಗಿ ಬುಲ್ಲೆಟ್ ಪ್ರಕಾಶ್ ನಟಿಸಿದ್ದಾರೆ. ಈಗ ನಿರ್ಮಾಪಕನಾಗುವ ಬಯಕೆಯನ್ನ ಬುಲ್ಲೆಟ್ ಪ್ರಕಾಶ್ ವ್ಯಕ್ತಪಡಿಸಿದ ತಕ್ಷಣ, ಸ್ನೇಹಕ್ಕಾಗಿ ದರ್ಶನ್ ಓಗೊಟ್ಟು, ಕುಚ್ಚಿಕ್ಕು ಗೆಳೆಯನಿಗೆ ಕಾಲ್ ಶೀಟ್ ನೀಡಿದ್ದಾರೆ. [ದರ್ಶನ್ ಮಾರ್ಕೆಟ್ ಡೌನ್ ಅಂದೋರಿಗೆ ಇಲ್ಲಿದೆ ಉತ್ತರ]

ಸದ್ಯಕ್ಕೆ ದರ್ಶನ್ ಚಿತ್ರಕ್ಕೆ ಬುಲ್ಲೆಟ್ ಪ್ರಕಾಶ್ ಬಂಡವಾಳ ಹಾಕುತ್ತಿದ್ದಾರೆ ಅನ್ನೋದು ಬಿಟ್ಟರೆ, ಕಥೆ-ಚಿತ್ರಕಥೆ-ನಿರ್ದೇಶನ ಮತ್ತು ಬಾಕಿ ವಿಚಾರಗಳ ಬಗ್ಗೆ ನಿರ್ಧಾರವಾಗಿಲ್ಲ. ಅಷ್ಟಕ್ಕೂ, 'ಐರಾವತ' ಸಿನಿಮಾ ಮೊದಲು ಕಂಪ್ಲೀಟ್ ಆಗಿ ತೆರೆಗೆ ಬರಬೇಕು. ಅದು ಮುಗಿದ ಬಳಿಕ 'ಜಗ್ಗುದಾದಾ' ಮತ್ತು 'ವಿರಾಟ್' ಇದೆ. ಇವೆಲ್ಲಾ ಮುಗಿದ ಮೇಲೆ ಬುಲ್ಲೆಟ್ ಪ್ರಕಾಶ್-ದರ್ಶನ್ ಚಿತ್ರದ ಮಾತು.

English summary
Kannada Actor Bullet Prakash is all set to turn Producer. According to the reports, Bullet Prakash is producing film for Challenging Star Darshan.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada