For Quick Alerts
  ALLOW NOTIFICATIONS  
  For Daily Alerts

  ಸಿ ಎಂ ಕನಸಿನ ಸಿನಿಮಾ ಇನ್ನೂ ನನಸಾಗಿಲ್ಲ

  By Pavithra
  |

  ಹೆಚ್ ಡಿ ಕುಮಾರಸ್ವಾಮಿ ರಾಜಕೀಯದಲ್ಲಿ ಹೆಸರು ಮಾಡಿರುವಂತೆಯೇ ಕನ್ನಡ ಸಿನಿಮಾರಂಗದಲ್ಲಿಯೂ ಸಾಕಷ್ಟು ಹೆಸರು ಗಳಿಸಿದ್ದಾರೆ. ಸುಮಾರು 9 ಸಿನಿಮಾಗಳನ್ನು ನಿರ್ಮಾಣ ಮಾಡಿದ್ದು 200ಕ್ಕೂ ಹೆಚ್ಚು ಚಿತ್ರಗಳನ್ನು ವಿತರಣೆ ಮಾಡಿದ್ದಾರೆ.

  ಇಷ್ಟೆಲ್ಲಾ ಚಿತ್ರರಂಗದಲ್ಲಿ ತೊಡಗಿಸಿಕೊಂಡಿರುವ ಮುಖ್ಯಮಂತ್ರಿಗಳಿಗೆ ಕನಸಿನ ಸಿನಿಮಾವೊಂದು ಇದ್ಯಂತೆ. ಆ ಚಿತ್ರಕ್ಕೆ ನಿರ್ಮಾಪಕನಾಗಬೇಕು ಎನ್ನುವ ಹಂಬಲವನ್ನು ಇಟ್ಟುಕೊಂಡಿದ್ದಾರಂತೆ ಕುಮಾರಸ್ವಾಮಿ ಅವರು.

  'ದರ್ಶನ್' ಜೊತೆಗಿನ ಆಂತರಿಕ ಕದನಕ್ಕೆ ಬ್ರೇಕ್ ಹಾಕಿದ 'ಅಭಿಮನ್ಯು' 'ದರ್ಶನ್' ಜೊತೆಗಿನ ಆಂತರಿಕ ಕದನಕ್ಕೆ ಬ್ರೇಕ್ ಹಾಕಿದ 'ಅಭಿಮನ್ಯು'

  ಹೌದು ವ್ಯಾಸರಾಯ ಬಲ್ಲಾಳ್ ಅವರ 'ಹೆಜ್ಜೆ' ಕಾದಂಬರಿಯನ್ನು ಚಿತ್ರವನ್ನಾಗಿ ತೆರೆ ಮೇಲೆ ತರಲು ಕುಮಾರಸ್ವಾಮಿ ಅವರು ಪ್ರಯತ್ನ ಪಡುತ್ತಿದ್ದಾರೆ. ಐದು ಭಾಷೆಯಲ್ಲಿ ಚಿತ್ರವನ್ನು ನಿರ್ಮಾಣ ಮಾಡಬೇಕು ಎನ್ನು ಆಸೆಯನ್ನು ಹೊಂದಿದ್ದಾರೆ.

  ಈ ಹಿಂದೆಯೇ 'ಹೆಜ್ಜೆ' ಕಾದಂಬರಿ ಆಧಾರಿತ ಚಿತ್ರವನ್ನು ಎಸ್ ನಾರಾಯಣ್ ನಿರ್ದೇಶನ ಮಾಡುತ್ತಾರೆ ಎನ್ನುವ ಸುದ್ದಿ ಇತ್ತು. ಆದರೆ ಇದರ ಬಗ್ಗೆ ಇತ್ತೀಚಿಗಷ್ಟೆ ಮಾತನಾಡಿದ ಸಿ ಎಂ ಕುಮಾರಸ್ವಾಮಿ 'ಹೆಜ್ಜೆ' ಕಾದಂಬರಿ ಮೇಲೆ ಚಿತ್ರ ಮಾಡುವ ಆಸೆ ಇದೆ ಅದಕ್ಕೆ ಸಾಕಷ್ಟು ತಯಾರಿ ಮಾಡಿಕೊಳ್ಳಬೇಕಿದೆ. ಆದರೆ ಖಂಡಿತವಾಗಿಯೂ ಮಾಡಿಯೇ ಮಾಡುತ್ತೇನೆ ಎಂದಿದ್ದಾರೆ.

  English summary
  C.M Kumaraswamy's forthcoming film is based on the novel. Vyasaraya Ballal wrote the novel.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X