»   » ಧುಮ್ಮುಕ್ಕಿದ ಇಂಗ್ಲಿಷ್ ಸೂಪರ್ ಮಾಡೆಲ್ ಸೌಂದರ್ಯ

ಧುಮ್ಮುಕ್ಕಿದ ಇಂಗ್ಲಿಷ್ ಸೂಪರ್ ಮಾಡೆಲ್ ಸೌಂದರ್ಯ

Posted By: ರವಿಕಿಶೋರ್
Subscribe to Filmibeat Kannada

ಹಾಲಿವುಡ್ ಚಿತ್ರಜಗತ್ತಿನಲ್ಲಿ ಬಟ್ಟೆ ಕಳಚುವುದು ನೀರು ಕುಡಿದಷ್ಟೇ ಸುಲಭದ ಕೆಲಸ. ಹಲವಾರು ತಾರೆಗಳು, ರೂಪರ್ಶಿಗಳು ತಮ್ಮ ರೂಪಲಾವಣ್ಯವನ್ನು ಅನಾವರಣಗೊಳಿಸುತ್ತಾ ತಮ್ಮ ಬೇಳೆಬೇಯಿಸಿಕೊಳ್ಳುತ್ತಿರುವುದನ್ನು ನೋಡಿರುತ್ತೀರಾ.

Cara Delevingne

ಈಗ ಇಂಗ್ಲಿಷ್ ತಾರೆ, ಫ್ಯಾಷನ್ ಮಾಡೆಲ್ ಹಾಗೂ ಗಾಯಕಿ ಕಾರಾ ಡೆಲೆವೀನ್ ಅವರು ಜಾನ್ ಹಾರ್ಡಿ ಚಿನ್ನಾಭರಣ ಬ್ರ್ಯಾಂಡ್ ಗಾಗಿ ತಮ್ಮ ಬಟ್ಟೆ ಕಳಚಿದ್ದಾರೆ. ಕಳೆದ ವರ್ಷ ಬೀಚ್ ಶೂಟ್ ನಲ್ಲಿ ಮಿಂಚಿದ್ದರು ಈ ಸೂಪರ್ ಮಾಡೆಲ್. ಇದೀಗ 'ಜಾನ್ ಹಾರ್ಡಿ'ಗಾಗಿ ಹೊಸ ಅವತಾರದಲ್ಲಿ ಪ್ರತ್ಯಕ್ಷವಾಗಿದ್ದಾರೆ.

ಈ ರೀತಿಯ ಫೋಟೋಗಳನ್ನು ಸೆರೆಹಿಡಿಯಬೇಕಾದರೆ ಛಾಯಾಗ್ರಾಹಕರಿಗೂ ಒಂದು ರೀತಿಯ ಸವಾಲಿನ ಕೆಲಸ. ಒಂಚೂರು ಕ್ಯಾಮೆರಾ ಕಣ್ಣು ಗುರಿತಪ್ಪಿದರೂ ಅಶ್ಲೀಲತೆ ಇಣುಕು ಸಾಧ್ಯತೆಗಳೇ ಹೆಚ್ಚು. ಸಭ್ಯತೆಯ ಎಲ್ಲೆ ಮೀರದಂತೆ ಕಾರಾಳನ್ನು ಸೆರೆಹಿಡಿಯಲಾಗಿದೆ.

Cara Delevingne

ಆಕೆಯ ಅಂದಚೆಂದದ ಜೊತೆಗೆ ಚಿನ್ನಾಭರಣಳು ಪ್ರಮುಖ ಆಕರ್ಷಣೆಯಾಗಿ ನಿಲ್ಲುತ್ತವೆ. ಕೇವಲ ಚಿತ್ರಗಳಷ್ಟೇ ಅಲ್ಲದೆ ಇದರ ವಿಡಿಯೋವನ್ನು ಬಿಡುಗಡೆ ಮಾಡಲಾಗಿದೆ. ಈಜುಕೊಳಕ್ಕೆ ಇಳಿಯುವ, ಅಲ್ಲಿ ಮೈಮರೆಸುವ, ಹಾಸಿಗೆ ಮೇಲೆ ತೇಲಾಡಿಸುವ ಸೌಂದರ್ಯ ದೃಶ್ಯಗಳು ಧುಮ್ಮುಕ್ಕಿವೆ.

ಅಂದಹಾಗೆ ಇನ್ನೂ ಅಧಿಕೃತ ಚಿತ್ರಗಳು ಬಿಡುಗಡೆಯಾಗಿಲ್ಲ. ಹಾಗಿದ್ದರೆ ಇವೇನು ಎಂಬ ಅನುಮಾನ ನಿಮಗೆ ಬರಬಹುದು. ಇದು ಸ್ವತಃ ಕಾರಾ ಡೆಲೆವೀನ್ ಅವರು ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ಚಿತ್ರಗಳು. ಇನ್ನೂ 22ರ ಹರೆಯದ ಈ ಬೆಡಗಿಗೆ 9 ದಶಲಕ್ಷ ಫಾಲೋವರ್ಸ್ ಇದ್ದಾರೆ.

English summary
Cara Delevingne just shed her clothes for a new ad campaign of a jewellery brand which is none other than John Hardy! The supermodel did a beach shoot last year, and now she is back for John Hardy's Spring 2015 ad campaign.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada