For Quick Alerts
  ALLOW NOTIFICATIONS  
  For Daily Alerts

  ಕಾವೇರಿ ನೀರಿನ ಸಮಸ್ಯೆ ಪರಿಹಾರಕ್ಕೆ ರಮ್ಯಾ ನೀಡಿದ ಉಪಾಯ

  By ಮಹೇಶ್ ಮಲ್ನಾಡ್
  |

  'ಕಾವೇರಿ ನೀರು ವಿವಾದ'ದ ಬಗ್ಗೆ ಇಡೀ ಕರ್ನಾಟಕದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ. ಬೆಂಗಳೂರಿನಲ್ಲಿ ಕಾವೇರಿ ನೀರಿಗಾಗಿ ಹಾಹಾಕಾರ ಆರಂಭವಾದ ಹಿನ್ನಲೆಯಲ್ಲಿ ನಟಿ ಕಮ್ ರಾಜಕೀಯ ವ್ಯಕ್ತಿ ನೀರಿನ ಸಮಸ್ಯೆಗೆ ಐಡಿಯಾ ಕೊಟ್ಟಿದ್ದಾರೆ.

  ಮಂಡ್ಯ ಮಾಜಿ ಸಂಸದೆ ಆಗಿದ್ದರೂ ಕೂಡ, ಕಾವೇರಿ ವಿವಾದದ ಬಗ್ಗೆ ತುಟಿಪಿಟಕ್ ಅನ್ನದೆ, ಸುಮ್ಮನಿದ್ದ ನಟಿ ರಮ್ಯಾ ಅವರು ಇದೀಗ ನೀರಿನ ಸಮಸ್ಯೆಗೆ ಉಪಾಯ ಕೊಟ್ಟಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ನಟ ಉಪೇಂದ್ರ ಅವರು ಕೂಡ ನೀರಿನ ಸಮಸ್ಯೆ ಬಗ್ಗೆ ಹೇಳಿದ್ದರು. ಇದೀಗ ರಮ್ಯಾ ಅವರ ಸರದಿ.[ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ: ಉಪೇಂದ್ರ ಕೊಟ್ಟ ಸೂಪರ್ ಸುಪ್ರೀಂ ಐಡಿಯಾ!]

  ಇದೀಗ ರಮ್ಯಾ ಅವರು ಉಪಾಯವನ್ನು ತಮ್ಮದೇ ರೀತಿಯಲ್ಲಿ ಹೇಳಿಕೊಂಡಿದ್ದಾರೆ. ನಮ್ಮ ರಾಜ್ಯವನ್ನು, ದೇಶವನ್ನು ಅಷ್ಟೇ ಏಕೆ ಇಡೀ ಪ್ರಪಂಚವನ್ನೇ ಬಾಧಿಸುತ್ತಿರುವ ನೀರಿನ ಸಮಸ್ಯೆಯ ಕುರಿತು ನನ್ನ ಹಾಗೂ ನನ್ನ ತಂದೆಯವರ ನಡುವೆ ಬಹುವರ್ಷಗಳಿಂದಲೂ ಆಗಾಗ ಚರ್ಚೆ ನಡೆಯುತ್ತಿತ್ತು.

  ಈ ಸಂದರ್ಭದಲ್ಲೆಲ್ಲಾ ಅವರು ಹೇಳುತ್ತಿದ್ದ ಒಂದು ಮಾತೆಂದರೆ ನಾವು ನೀರನ್ನು ಉಳಿಸಿ - ಬಳಸುವ ವಿಷಯದಲ್ಲಿ ಸೂಕ್ತ ಮಾರ್ಪಾಡು ಮಾಡಿಕೊಳ್ಳದೇ ಇದ್ದಲ್ಲಿ ಖಂಡಿತವಾಗಿಯೂ ಮುಂದೆ ನೀರಿಗಾಗಿ ಯುದ್ಧ, ಮಹಾಯುದ್ಧಗಳೇ ಸಂಭವಿಸುತ್ತವೆ. ಹೀಗೆ ಹೇಳುತ್ತಾ ರಮ್ಯಾ ಅವರು ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ....

  ಮನುಷ್ಯ ಕುಲಕ್ಕೆ ಆಪತ್ತು ತರುವ ನೀರಿನ ಸಮಸ್ಯೆ

  ಮನುಷ್ಯ ಕುಲಕ್ಕೆ ಆಪತ್ತು ತರುವ ನೀರಿನ ಸಮಸ್ಯೆ

  'ಈ ನೀರಿನ ಸಮಸ್ಯೆ ಎಷ್ಟು ಅಗಾಧವಾದದು ಮತ್ತು ಮನುಷ್ಯ ಕುಲಕ್ಕೆ ಎಂತಹ ಆಪತ್ತು ತರಬಲ್ಲದು ಎಂಬ ಕುರಿತು ನಾನು 2008ನೇ ಇಸವಿಯಿಂದಲೂ ನನ್ನ ಅಭಿಪ್ರಾಯಗಳನ್ನು ಲೇಖನ, ಬರಹಗಳ ಮೂಲಕ ಹಂಚಿಕೊಳ್ಳುತ್ತಾ ಬಂದಿದ್ದೇನೆ. ಈಗ ಕಾವೇರಿ ನದಿ ನೀರಿನ ಹಂಚಿಕೆಯ ವಿಷಯದಲ್ಲಿ ನಮಗೂ, ತಮಿಳುನಾಡಿಗೂ ನಡುವೆ ಸುದೀರ್ಘ ಕಾಲದಿಂದ ವಿವಾದ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಹ ಈ ವಿಷಯ ಬಹಳ ಮುಖ್ಯವಾಗಿದೆ'.-ರಮ್ಯಾ[ಬೆಂಗಳೂರಿನ ನೀರಿನ ಸಮಸ್ಯೆಗೆ 'ದಿವ್ಯ' ಉಪಾಯ ನೀಡಿದ ರಮ್ಯಾ]

  ನಮ್ಮ ರಾಜ್ಯಕ್ಕೆ ದ್ರೋಹ ಬಗೆದ ಐತೀರ್ಪು (Award)

  ನಮ್ಮ ರಾಜ್ಯಕ್ಕೆ ದ್ರೋಹ ಬಗೆದ ಐತೀರ್ಪು (Award)

  ಕಾವೇರಿ ಜಲವಿವಾದಕ್ಕೆ ಸಂಬಂಧಿಸಿ ರಚಿಸಲಾಗಿದ್ದ ಟ್ರಿಬ್ಯುನಲ್ ನೀಡಿದ್ದ ಐತೀರ್ಪು (Award) ನಮ್ಮ ರಾಜ್ಯಕ್ಕೆ ನ್ಯಾಯ ಒದಗಿಸದ ಕಾರಣ ನಾವು ಸುಪ್ರೀಂ ಕೋರ್ಟಿಗೆ ವಿಶೇಷ ಅರ್ಜಿ (Special Leave Petition) ಸಲ್ಲಿಸಿದ್ದೇವೆ. 1892 ಹಾಗೂ 1924 ರ ಒಪ್ಪ೦ದಗಳ ಪ್ರಕಾರ ಈ ಹಿಂದೆ 380 TMC ನೀರನ್ನು ತಮಿಳು ನಾಡಿಗೆ ಬಿಡಬೇಕು ಎಂದಿದ್ದನ್ನು 192 TMCಗೆ ಇಳಿಸಲಾಗಿದೆಯಾದರೂ ಮಳೆ ಇಲ್ಲದ ದಿನಗಳಲ್ಲಿ ತಮಿಳುನಾಡಿಗೆ ಅವರು ಕೇಳಿದಷ್ಟು ನೀರು ಬಿಡಲು ಅಸಾಧ್ಯವಾದ ಪರಿಸ್ಥಿತಿ ಏರ್ಪಡುತ್ತದೆ.

  ಮುಂದಿನ ತಿಂಗಳು ವಿಚಾರಣೆ

  ಮುಂದಿನ ತಿಂಗಳು ವಿಚಾರಣೆ

  ಈ ನಿಟ್ಟಿನಲ್ಲಿ ನ್ಯಾಯಮಂಡಳಿಯ ಐತೀರ್ಪನ್ನು ಪ್ರಶ್ನಿಸಿ ನಮ್ಮ ರಾಜ್ಯವು ಸಲ್ಲಿಸಿರುವ ಅರ್ಜಿಯು ಮುಂದಿನ ತಿಂಗಳು ವಿಚಾರಣೆಗೆ ಬರಲಿದೆ. ನಮ್ಮ ವಾದವನ್ನು ಆಲಿಸಿ ಸುಪ್ರೀಂ ಕೋರ್ಟು ನಮ್ಮ ಪರವಾಗಿ ತೀರ್ಪು ನೀಡುತ್ತದೆ ಎಂಬ ಆಶಯ ನನಗಿದೆ.

  ಅಕ್ಟೋಬರ್ ನಲ್ಲಿ ಬರುವ ತೀಪು೯ 192 ಖಿಒಅ ಗಿ೦ತ ಕಡಿಮೆ ಆದ ಪಕ್ಷದಲ್ಲೂ ಸಹ ನೀರಿನ ಸ೦ರಕ್ಷಣೆಯ ಬಗ್ಗೆ ಗಮನ ಹರಿಸದಲ್ಲಿ ಮು೦ದಿನ ದಿನಗಳಲ್ಲಿ ಮತ್ತೆ ಇದೇ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.

  ಸರ್ವಪಕ್ಷ ಸಭೆಯಲ್ಲಿ ಪಾಲ್ಗೊಂಡ ರಮ್ಯಾ

  ಸರ್ವಪಕ್ಷ ಸಭೆಯಲ್ಲಿ ಪಾಲ್ಗೊಂಡ ರಮ್ಯಾ

  ತಮಿಳುನಾಡಿಗೆ ಹೆಚ್ಚುವರಿ ನೀರು ಬಿಡಲು ಇತ್ತೀಚೆಗೆ ಸುಪ್ರೀಂ ಕೋರ್ಟು ಆದೇಶ ನೀಡಿದ್ದ ಹಿನ್ನೆಲೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಸರ್ವಪಕ್ಷ ಪ್ರತಿನಿಧಿಗಳ ಸಭೆ ಕರೆದಿದ್ದರು. ಆ ಸಂದರ್ಭದಲ್ಲಿ ನಾನು ಮುಖ್ಯಮಂತ್ರಿಗಳಲ್ಲಿ, ನಮ್ಮ ಜಿಲ್ಲೆಯ ರೈತರಿಗೆ ಆದ್ಯತೆಯ ಮೇಲೆ ನೀರು ಬಿಡುವುದನ್ನು ಖಾತ್ರಿಪಡಿಸಬೇಕು ಎಂಬ ಕೋರಿಕೆ ಮುಂದಿಟ್ಟಿದ್ದೆ. ನಂತರ ಈ ಭರವಸೆಯನ್ನೂ ಮುಖ್ಯಮಂತ್ರಿಗಳಿಂದ ಪಡೆದಿದ್ದೆ. ಮಂಡ್ಯದ ಜನತೆಗೆ ನೀಡಿದ್ದ ಭರವಸೆಯಂತೆ ಕರ್ನಾಟಕ ಸರ್ಕಾರವು ನಮ್ಮ ಜಿಲ್ಲೆಗೆ ನೀರು ಒದಗಿಸಿದೆ. ಈ ನಡುವೆ ಕೋರ್ಟ್ ಆದೇಶದಿಂದ ಆತಂಕಗೊಂಡಿದ್ದ ಜನರು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದ್ದರು.

  ರೈತರ ಪ್ರತಿಭಟನೆ ನ್ಯಾಯಯುತ

  ರೈತರ ಪ್ರತಿಭಟನೆ ನ್ಯಾಯಯುತ

  ನಮ್ಮ ರೈತರು ಮತ್ತು ಕನ್ನಡಿಗರು ತಮಗಾಗುವ ಅನ್ಯಾಯದ ವಿರುದ್ಧ ಯಾವತ್ತೂ ನ್ಯಾಯಯುತವಾಗಿಯೇ ಪ್ರತಿಭಟನೆ ಮಾಡಿಕೊಂಡು ಬಂದವರು. ದುರದೃಷ್ಟವಶಾತ್ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದಿರುವ ಹಿಂಸೆಗಳು ರೈತರಿಗೆ ಮತ್ತು ಕನ್ನಡಿಗರಿಗೆ ಕೆಟ್ಟ ಹೆಸರು ತರುವ ರೀತಿಯಲ್ಲಿವೆ.

  ಮುಂದಿನ ದಿನಗಳಲ್ಲಿ ನೀರಿನ ಬೇಡಿಕೆ ಹೆಚ್ಚಳ

  ಮುಂದಿನ ದಿನಗಳಲ್ಲಿ ನೀರಿನ ಬೇಡಿಕೆ ಹೆಚ್ಚಳ

  ಮುಂದಿನ ದಿನಗಳಲ್ಲಿ ನಮ್ಮ ಜನಸಂಖ್ಯೆ ಮತ್ತು ನಗರಗಳು ಬೆಳೆದಂತೆ ನೀರಿನ ಮೇಲಿನ ಬೇಡಿಕೆಯೂ ಹೆಚ್ಚುತ್ತಾ ಹೋಗುತ್ತದೆ. ಈ ಕಾರಣದಿಂದ ಮುಂದೆ ಸಂಭವಿಸಬಹುದಾದ ಅವಘಡಗಳನ್ನು ತಪ್ಪಿಸಲು ನಾವು ಹತ್ತು ಹಲವು ರೀತಿಯ ಪರ್ಯಾಯ ಮಾರ್ಗೋಪಾಯಗಳನ್ನು ಶೋಧಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಬೆಂಗಳೂರು ಮತ್ತು ಮಂಡ್ಯಗಳನ್ನು ದೃಷ್ಟಿಯಿರಿಸಿಕೊಂಡು ನಾನು ಯೋಚಿಸಿದ ಪರ್ಯಾಯಗಳು ಹೀಗಿವೆ.

  ರಮ್ಯಾ ರೂಪಿಸಿದ ಪರ್ಯಾಯ ಮಾರ್ಗ

  ರಮ್ಯಾ ರೂಪಿಸಿದ ಪರ್ಯಾಯ ಮಾರ್ಗ

  ಮುಖ್ಯವಾಗಿ ಕಾವೇರಿ ನದಿ ತೀರದಲ್ಲಿ ವ್ಯಾಪಕವಾಗಿರುವ ಅಕ್ರಮ ಮರಳು ದಂದೆಯನ್ನು ಹೇಗಾದರೂ ಮಾಡಿ ಕೊನೆಗೊಳಿಸಬೇಕು. ಕಾವೇರಿ ಮತ್ತು ಅದರ ಉಪನದಿಗಳಾದ ಶಿಂಶಾ, ಹೇಮಾವತಿ, ಲೋಕಪಾವನಿ ಮತ್ತು ವೀರವೈಷ್ಣವಿಗಳಲ್ಲಿ ವ್ಯಾಪಕವಾಗಿರುವ ಅಕ್ರಮ ಮರಳು ದಂದೆಯಿಂದಾಗಿ ರೈತರಿಗೆ ಆಗಿರುವ ಹಾನಿ ಅಪಾರ. ನದಿ ನೀರಿನ ಹರಿವನ್ನು ಸುಗಮಗೊಳಿಸುವುದು ನದಿಯ ಎರಡೂ ದಂಡೆಗಳಲ್ಲಿರುವ ಮರಳಾಗಿರುತ್ತದೆ. ಆದರೆ ಈಗ ಬೇಕಾಬಿಟ್ಟಿಯಾಗಿ ನಡೆಯುತ್ತಿರುವ ಮರಳುದಂದೆಯಿಂದಾಗಿ ನದಿಹರಿವಿನ ಮೇಲೆ ಪ್ರತಿಕೂಲ ಪರಿಣಾಮಗಳಾಗಿವೆ. ಹಾಗೆಯೇ ಪ್ರತಿನಿತ್ಯ ಸಾವಿರಾರು ಲಾರಿಗಳು ಸಾಗಿಸುವ ಮರಳಿನಲ್ಲಿ ಪೋಲಾಗುತ್ತಿರುವ ನೀರನ ಪ್ರಮಾಣ ಕಡಿಮೆಯೇನಲ್ಲ.

  ಆಣೆಕಟ್ಟುಗಳ ಆಧುನೀಕರಣ

  ಆಣೆಕಟ್ಟುಗಳ ಆಧುನೀಕರಣ

  ಮಂಡ್ಯ ಜಿಲ್ಲೆಯಲ್ಲಿ ದೊಡ್ಡ ಮತ್ತು ಚಿಕ್ಕ 12 ಅಣೆಕಟ್ಟೆಗಳಿವೆ. ಒಂದು ಅಂದಾಜಿನ ಪ್ರಕಾರ ಇಂದು ಈ ಅಣೆಕಟ್ಟೆಗಳ ಒಂದು TMC ನೀರಿನಿಂದ 2000 ಎಕರೆ ಜಮೀನಿಗೆ ನೀರು ಹರಿಸಬಹುದಾಗಿದ್ದರೆ, ಅದೇ ಈ ಅಣೆಕಟ್ಟೆಗಳನ್ನು ಆಧುನೀಕರಿಸಿದರೆ 1 TMC ನೀರಿನಿಂದ ಸುಮಾರು 4000 ಸಾವಿರ ಎಕರೆ ಜಮೀನಿಗೆ ನೀರು ಹರಿಸಬಹುದಾಗಿದೆ.

  ರೈತರು ಜಮೀನಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು

  ರೈತರು ಜಮೀನಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು

  ಈ ಹಿಂದೆ ಕಾವೇರಿ ಹರಿಯುವೆಡೆಯಲ್ಲಿ ತಮಿಳುನಾಡು 16,000 ಎಕರೆ ಜಮೀನಿನಲ್ಲಿ ಭತ್ತ ಬೆಳೆಯುತ್ತಿದ್ದರೆ ಇಂದು ಅದು 28,000 ಎಕರೆಗೆ ಹೆಚ್ಚಿದೆ. ಇದರಲ್ಲಿ ನ್ಯಾಯಾಲಯ ಗುರುತಿಸಿರುವುದು 24,000 ಎಕರೆ ಜಮೀನು ಮಾತ್ರ. ಹಾಗೆಯೇ ಕರ್ನಾಟಕದಲ್ಲಿ ಕಬ್ಬು ಬೆಳೆಯುವ 80,000 ಎಕರೆಯಲ್ಲಿ ನ್ಯಾಯಾಲಯ ಗುರುತಿಸಿರುವುದು ಕೇವಲ 40,000 ಎಕರೆ ಜಮೀನು ಮಾತ್ರ. ಇದರ ಅರ್ಥ ನ್ಯಾಯಾಲಯ ಗುರುತಿಸಿರುವುದನ್ನು ಹೊರತುಪಡಿಸಿದ ಜಮೀನಿಗೆ ನಾವು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲೇಬೇಕು.

  ಹೆಚ್ಚು ಲಾಭ ಬರುವ ಬೆಳೆ ಬೆಳೆಯಬೇಕು

  ಹೆಚ್ಚು ಲಾಭ ಬರುವ ಬೆಳೆ ಬೆಳೆಯಬೇಕು

  ಈ ನಿಟ್ಟಿನಲ್ಲಿ ನಮ್ಮ ರೈತರು ಸಾಧ್ಯವಾದಷ್ಟು ಕಡಿಮೆ ನೀರು ಬಳಕೆಯಾಗುವಂತಹ ಅದೇ ಸಮಯದಲ್ಲಿ ಹೆಚ್ಚು ಲಾಭ ತರುವಂತಹ ಬೆಳೆಗಳನ್ನು ಬೆಳೆಯುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು.ರೈತರಿಗೆ ಬೆಳೆದ ಉತ್ಪನ್ನದ ಬೆಲೆಗಿ೦ತ ಬೆಳೆಯಲು ಆಗುವ ವೆಚ್ಚವೇ ಹೆಚ್ಚುತ್ತಿದೆ.ಕಡಿಮೆ ನೀರು ಸಾಕಾಗುವ ಹೈಬ್ರೀಡ್ ಕಬ್ಬು ಕೂಡ ಒ೦ದು ಪರ್ಯಾಯ ಬೆಳೆ. ಹಾಗೆಯೇ ನಮ್ಮ ರೈತರಿಗೆ ಹೆಚ್ಚಿಗೆ ನೀರು ಬಳಸುವ ಬೆಳೆಗಳ ಬದಲಿಗೆ ಚಯಾ, ಮೊರಿಂಗಾ, ಫ್ಲಾಕ್ಸ್ ಸೀಡ್ ನಂತಹ ಬೆಳೆಗಳು ಹಾಗೂ ದ್ವಿದಳ ಧಾನ್ಯಗಳನ್ನು ಹೆಚ್ಚು ಬೆಳೆಯುವ ನಿಟ್ಟಿನಲ್ಲಿ ಪ್ರೇರೇಪಿಸುವ ಪ್ರಯತ್ನಗಳಾಗಬೇಕು. ಇಂತಹ ಬೆಳೆಗಳ ಬೀಜಗಳು ನಮ್ಮ ರೈತರಿಗೆ ಲಭ್ಯವಾಗುವಂತೆ ಮಾಡಬೇಕು.

  ತುಂತುರು ನೀರಾವರಿ ಯೋಜನೆ

  ತುಂತುರು ನೀರಾವರಿ ಯೋಜನೆ

  ನೀರು ಪೋಲಾಗುವುದನ್ನು ತಡೆಯುವ ನಿಟ್ಟಿನಲ್ಲಿ ತುಂತುರು ನೀರಾವರಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು. ಜಲಸಂರಕ್ಷಣೆಯ ಪರಿಣಾಮಕಾರಿ ವಿಧಾನಗಳನ್ನು ಕಟ್ಟುನಿಟ್ಟಾಗಿ ಅಳವಡಿಸುವ ಮೂಲಕ ಮಾತ್ರ ನೀರಿನ ಅಭಾವದಿಂದ ಪಾರಾಗಬಹುದು. ನಾನು ಸ೦ಸದೆಯಾಗಿದ್ದಾಗ ಸಹ ಬಹಳಷ್ಟು ರೈತರಿಗೆ ಅನುಕೂಲವಾಗುವ೦ತೆ ಹನಿ ನೀರಾವರಿ ಕಿಟ್ ಗಳನ್ನು ನೀಡಿದ್ದೆ.

  ನೀರಿನ ಬಳಕೆ-ಉಳಿಕೆಗೆ ಉತ್ತಮ ವಿಧಾನ ಅನುಸರಿಸಬೇಕು

  ನೀರಿನ ಬಳಕೆ-ಉಳಿಕೆಗೆ ಉತ್ತಮ ವಿಧಾನ ಅನುಸರಿಸಬೇಕು

  ನಮ್ಮ ರಾಜ್ಯದಲ್ಲಿ ಮಳೆ ಮಾರುತಗಳನ್ನು ತಡೆ ಹಿಡಿದು ಮಳೆನೀರನ್ನು ಹಿಡಿದಿಟ್ಟುಕೊಂಡು, ಇಡೀ ನಾಡಿಗೆ ವರ್ಷಪೂರ್ತಿ ನೀರು ಪೂರೈಸುತ್ತಿರುವ ಪಶ್ಚಿಮ ಘಟ್ಟದ ಕಾಡುಗಳ ಸಂರಕ್ಷಣೆ ನಮ್ಮ ಆದ್ಯ ಕರ್ತವ್ಯವಾಗಬೇಕಿದೆ. ನೀರಿನ ಉಳಿಕೆ ಹಾಗೂ ಬಳಕೆಯಲ್ಲಿ ನಾವು ನೀರು ನಿರ್ವಹಣೆಯ ಉತ್ತಮ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಅತಿಮುಖ್ಯ.

  ನಗರೀಕರಣ ತಡೆಯಬೇಕು

  ನಗರೀಕರಣ ತಡೆಯಬೇಕು

  ಇಂದು ತಡೆಯಿಲ್ಲದೆ ತೀವ್ರಗತಿಯಲ್ಲಿ ನಡೆಯುತ್ತಿರುವ ನಗರೀಕರಣ ಹಾಗೂ ಅರಣ್ಯನಾಶಗಳೆರಡೂ ಸೇರಿಕೊಂಡು ಮುಂದೆ ನಮಗೆ ನೀರಿನ ತೀವ್ರ ಅಭಾವ ತಲೆದೋರುವಂತೆ ಮಾಡುವುದರಲ್ಲಿ ಅನುಮಾನವಿಲ್ಲ. ಪರಿಸ್ಥಿತಿ ಹೀಗಿರುವಾಗ ಮುಂದೆ ಯಾವ ನ್ಯಾಯಾಲಯಗಳೂ ನಮ್ಮ ನೆರವಿಗೆ ಬರಲು ವಿಫಲವಾಗಬಹುದು. ನ್ಯಾಯಾಲಯಗಳಲ್ಲಿ ನಾವು ವಸ್ತುಸ್ಥಿತಿಯನ್ನಾಧರಿಸಿ ವಾದ ಮಾಡುವುದಿಲ್ಲ. ಬದಲಾಗಿ ಅಫಿಡವಿಟ್ ಸಲ್ಲಿಸಿ ವಾದಿಸುತ್ತಿರುತ್ತೇವೆ. ಇಂತ ಪರಿಸ್ಥಿತಿಗಳನ್ನು ಸಮಗ್ರವಾಗಿ ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ಈಗಿರುವ ದೋಷಪೂರಿತ ಕಾನೂನುಗಳನ್ನು ತಿದ್ದುಪಡಿ ಮಾಡುವ ಅಗತ್ಯವನ್ನು ನಮ್ಮ ಜನಪ್ರತಿನಿಧಿಗಳು , ಕಾನೂನು ತಜ್ಞರು ಮನಗಾಣಬೇಕಿದೆ.

  ನಾರೀಮನ್ ಭೇಟಿ ಮಾಡಿದ ರಮ್ಯಾ

  ನಾರೀಮನ್ ಭೇಟಿ ಮಾಡಿದ ರಮ್ಯಾ

  ರಾಜ್ಯದ ಪರವಾಗಿ ಸುಪ್ರೀಂ ಕೋರ್ಟಿನಲ್ಲಿ ವಾದ ನಡೆಸುತ್ತಿರುವ ಕಾನೂನು ತಜ್ಞರಾದ ಫಾಲಿ ಎಸ್ ನಾರಿಮನ್ ಅವರನ್ನು ನಾನು ಭೇಟಿಯಾಗಿದ್ದೇನೆ. ಅವರು ನಿಜಕ್ಕೂ ತಮ್ಮ ಅಪಾರ ಜ್ಞಾನ ಮತ್ತು ಜಲಸಂಬಂಧಿ ಕಾನೂನುಗಳ ತಿಳುವಳಿಕೆ ಹಾಗೂ ಅನುಭವಗಳ ಮೂಲಕ ಇದುವರೆಗೆ ರಾಜ್ಯಕ್ಕೆ ಅನುಕೂಲ ಮಾಡಿಕೊಟ್ಟಿರುವುದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಆದರೆ ಮೂಲದಲ್ಲಿ ನಮ್ಮ ಕಾನೂನುಗಳು ಮತ್ತು ಒಪ್ದಂದಗಳಲ್ಲಿಯೇ ದೋಷವಿದ್ದಾಗ ಕೇವಲ ಕಾನೂನುಗಳನ್ನೇ ಆಧರಿಸಿ ವಾದ ಮಾಡಬೇಕಾದ ನ್ಯಾಯವಾದಿಗಳಿಗೂ ಮಿತಿಯಿರುತ್ತವೆ. ಇದನ್ನು ಪರಿಗಣಿಸದೇ ನಾವು ನ್ಯಾಯವಾದಿಗಳನ್ನೇ ದೂರುತ್ತಾ ಕೂರುವುದರಿಂದ ಪ್ರಯೋಜನವಿಲ್ಲ.

  ನೀರಿನ ಜೊತೆಗೆ ರಾಜಕಾರಣ ತರವಲ್ಲ

  ನೀರಿನ ಜೊತೆಗೆ ರಾಜಕಾರಣ ತರವಲ್ಲ

  ಇದೆಲ್ಲ ಬದಿಗಿಟ್ಟು ನೋಡಿದರೆ ನೀರು ನಮ್ಮ ಬದುಕಿನ ವಿಷಯವೇ ಹೊರತು ರಾಜಕಾರಣ ಮಾಡುವ ವಿಷಯ ಅಲ್ಲ. ಹೀಗಾಗಿ ನೀರಿನ ಸಮಸ್ಯೆಯನ್ನು ನಮ್ಮ ರಾಜಕೀಯ ಉದ್ದೇಶಗಳಿಗಾಗಿ ಬಳಸಿಕೊಳ್ಳದೇ ಇದನ್ನು ಸೂಕ್ತ ರೀತಿಯಲ್ಲಿ ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸೋಣ. ರಮ್ಯಾ ಅವರ ಪರಿಹಾರೋಪಾಯ ನೋಡಲು ಇಲ್ಲಿ ಕ್ಲಿಕ್ ಮಾಡಿ...

  English summary
  Actress-Politician Ramya who had given solution to Cauvery Water Dispute. Former MP from Mandya Divya Spandana Ramya's Facebook page is back with solution to Cauvery Issue and Drinking water crisis. She has shared her interaction with ET's Divya Shekhar, Divya Spandana (Ramya), actor and politician explains why Bengaluru is her favourite city.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X