»   » ಸಿಸಿಎಲ್: ವಿಮಾನದಲ್ಲಿ ಕೇರಳ ತಂಡ ಆಸಭ್ಯ ವರ್ತನೆ

ಸಿಸಿಎಲ್: ವಿಮಾನದಲ್ಲಿ ಕೇರಳ ತಂಡ ಆಸಭ್ಯ ವರ್ತನೆ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಸೆಲೆಬ್ರಿಟಿ ಕ್ರಿಕೆಟ್ ಲೀಗ್ 2014 ಸೆಮಿ ಫೈನಲ್ ಹಂತ ತಲುಪಿರುವ ವೇಳೆಗೆ ಕೇರಳ ಸ್ಟ್ರೈಕರ್ಸ್ ತಂಡ ತಲೆ ತಗ್ಗಿಸಿ ನಿಂತಿದೆ. ಸೆಲಬ್ರಿಟಿ ಕ್ರಿಕೆಟ್ ಲೀಗ್'ನ ಸೆಮಿಫೈನಲ್ ಪಂದ್ಯಕ್ಕೆ ತೆರಳಲು ವಿಮಾನವೇರಿದ ಕೇರಳ ಸ್ಟ್ರೈಕರ್ಸ್ ತಂಡದ ಆಟಗಾರರು ತಮ್ಮ ಅಸಭ್ಯ ವರ್ತನೆಯಿಂದಾಗಿ ವಿಮಾನ ನಿಲ್ದಾಣ ಸಿಬ್ಬಂದಿ ಮುಂದೆ ಅಪಮಾನಕ್ಕೀಡಾದ ಪ್ರಸಂಗ ನಡೆದಿದೆ.

ಕೊಚ್ಚಿಯಿಂದ ಹೈದರಾಬಾದಿಗೆ ತೆರಳುತ್ತಿದ್ದ ಇಂಡಿಗೋ ವಿಮಾನದೊಳಗೆ ಕೇರಳ ಸ್ಟ್ರೈಕರ್ಸ್ ತಂಡದ ಆಟಗಾರರು ಅಸಭ್ಯವಾಗಿ ವರ್ತಿಸಿದ್ದಾರೆ. ವಿಮಾನ ಸಿಬ್ಬಂದಿ ಎಷ್ಟೇ ಮನವಿ ಮತ್ತು ಎಚ್ಚರಿಕೆ ನೀಡಿದರೂ ಈ ಆಟಗಾರರು ಕಿವಿಗೊಡಲಿಲ್ಲ. ಹೀಗಾಗಿ, ಕೊಚ್ಚಿ ಏರ್ಪೋರ್ಟ್ ಸಿಬ್ಬಂದಿ ಈ ಆಟಗಾರರನ್ನ ವಿಮಾನದಿಂದ ಕೆಳಗಿಳಿಸಿದರು ಎಂಬ ಮಾಹಿತಿ ಲಭ್ಯವಾಗಿದೆ.

ಸುಮಾರು 28 ಮಂದಿ ಇದ್ದ ತಂಡದಲ್ಲಿ ಸ್ಟಾರ್ ನಟ, ನಟಿಯರು, ಸಿಬ್ಬಂದಿ ಹಾಗೂ ಇತರೆ ಟೀಂ ಸದಸ್ಯರು ಇದ್ದರು. ಆಟಗಾರರು ಕ್ಷಮಾಪಣೆ ಕೋರಬೇಕೆಂದು ವಿಮಾನನಿಲ್ದಾಣ ಸಿಬ್ಬಂದಿ ಒತ್ತಾಯಿಸಿದರು. ಆಟಗಾರರು ತಾವು ತಪ್ಪು ಮಾಡಿಲ್ಲಹೀಗಾಗಿ ಕ್ಷಮೆ ಕೋರುವುದಿಲ್ಲ ಎಂದು ರಚ್ಚೆ ಹಿಡಿದಿದ್ದಾರೆ. ಪೈಲಟ್ ವಿಮಾನ ಮೇಲಕ್ಕೇರಿಸುವುದಿಲ್ಲ ಎಂದು ಕೈಕಟ್ಟಿ ಕುಳಿತ್ತಿದ್ದು ಪರಿಸ್ಥಿತಿಯನ್ನು ಬಿಗಡಾಯಿಸಿದೆ.

ವಿಮಾನದೊಳಗೆ ಸೀಟ್ ಬೆಲ್ಟ್ ಹಾಕಿಕೊಳ್ಳಲು ಹೇಳಿದಾಗ ಆಟಗಾರರು ಚಪ್ಪಾಳೆ ಹೊಡೆದು ವಿಮಾನಪರಿಚಾರಿಕೆಯರನ್ನ ಅಮಾನಿಸಿದ್ದಾರೆ ಎಂದು ತಿಳಿದು ಬಂದಿದೆ.

Celebrity cricket team Kerala Strikers struck off plane in Kochi

ಫೆಬ್ರವರಿ 22ರಂದು ಹೈದರಾಬಾದಿನಲ್ಲಿ ಭೋಜಪುರಿ ದಬಾಂಗ್ಸ್ ತಂಡದ ವಿರುದ್ಧ ಕೊಚ್ಚಿ ಸ್ಟ್ರೈಕರ್ಸ್ ಸೆಮಿಫೈನಲ್ ಪಂದ್ಯವನ್ನ ಆಡಲಿದೆ. ಅದೇ ದಿನ ನಡೆಯಲಿರುವ ಮತ್ತೊಂದು ಸೆಮಿಫೈನಲ್'ನಲ್ಲಿ ಕರ್ನಾಟಕ ಬುಲ್ಡೋರ್ಸ್ ಮತ್ತು ಮುಂಬೈ ಹೀರೋಸ್ ನಡುವೆ ಹಣಾಹಣಿ ನಡೆಯಲಿದೆ. [ವಿವರ ಇಲ್ಲಿ ಓದಿ]

ಸೂಪರ್ ಸ್ಟಾರ್ ಮೋಹನ್ ಲಾಲ್, ರಾಜೀವ್ ಪಿಳ್ಳೈ, ಸುರೇಶ್ ನಾಯರ್, ವಿವೇಕ್ ಗೋಪನ್ ಮೊದಲಾದವರು ಕೇರಳ ಸ್ಟ್ರೈಕರ್ಸ್ ತಂಡದಲ್ಲಿದ್ದಾರೆ. ಲೀಗ್ ಹಂತದಲ್ಲಿ 3 ಪಂದ್ಯಗಳನ್ನು ಗೆದ್ದು ಅಜೇಯವಾಗಿ ಉಳಿದಿದೆ. ಬೆಂಗಾಳ್ ಟೈಗರ್ಸ್ ವಿರುದ್ಧದ ಪಂದ್ಯ ರದ್ದಾಗಿತ್ತು. ಉತ್ತಮ ಬೌಲಿಂಗ್ ಪಡೆ ಜತೆಗೆ ಫೀಲ್ಡಿಂಗ್ ಸುಧಾರಣೆ ಮಾಡಿಕೊಂಡರೆ ಫೈನಲ್ ಹಂತ ತಲುಪುವ ಸಾಧ್ಯತೆ ಇದೆ ಎನ್ನಬಹುದು.

English summary
In a shocking and shameful incident, a team of celebrity cricketers was asked to get off the flight for allegedly misbehaving with the crew.The celebrity team - Kerala Strikers - is one of the teams in a non-professional Celebrity Cricket League that comprises of actors and celebrities representing Kerala.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada