»   » ಬುಕ್ಕಾಪಟ್ಟಣ ವಾಸು ಸೆಂಚುರಿ ಫಿಲ್ಮ್ ಇನ್ಸ್ ಟಿಟ್ಯೂಟ್

ಬುಕ್ಕಾಪಟ್ಟಣ ವಾಸು ಸೆಂಚುರಿ ಫಿಲ್ಮ್ ಇನ್ಸ್ ಟಿಟ್ಯೂಟ್

Posted By:
Subscribe to Filmibeat Kannada

ಕಳೆದ ಎರಡು ದಶಕಗಳಿಗಿಂತಲೂ ಮಿಕ್ಕು ಕನ್ನಡ ಕಿರುತೆರೆಯಲ್ಲಿ ಧಾರವಾಹಿ, ಟೆಲಿಫಿಲ್ಮ್, ಸಾಕ್ಷ್ಯಚಿತ್ರ ಕ್ಷೇತ್ರದಲ್ಲಿ ನಿರ್ಮಾಪಕರಾಗಿ, ನಿರ್ದೇಶಕರಾಗಿ ಕೆಲಸ ಮಾಡುತ್ತಿರುವ ಬುಕ್ಕಾಪಟ್ಟಣ ವಾಸು ಈ ಎಲ್ಲ ಕ್ಷೇತ್ರಗಳಲ್ಲಿ ನಟ, ನಟಿಯರನ್ನು ಮತ್ತು ತಂತ್ರಜ್ಞರಿಗೆ ತರಬೇತಿ ನೀಡುವ ಕೆಲಸವನ್ನು ಶೀಘ್ರದಲ್ಲಿ ಆರಂಭಿಸಲಿದ್ದಾರೆ.

ಇವರ ನೇತೃತ್ವದಲ್ಲಿ ಬೆಂಗಳೂರಿನ ಮಾಗಡಿ ರಸ್ತೆಯ ಹೌಸಿಂಗ್ ಬೋರ್ಡ್ ಸಮೀಪದಲ್ಲಿ 'ಸೆಂಚುರಿ ಫಿಲ್ಮ್ ಇನ್ ಸ್ಟಿಟ್ಯೂಟ್' ಎಂಬ ಸಂಸ್ಥೆ ಇಷ್ಟರಲ್ಲೇ ಕಾರ್ಯಾರಂಭ ಮಾಡಲಿದೆ. ಭಾರತೀಯ ಚಲನಚಿತ್ರರಂಗಕ್ಕೆ 100 ವರ್ಷ ತುಂಬಿರುವ ಸಂದರ್ಭದಲ್ಲಿ ಸಂಸ್ಥೆಗೆ 'ಸೆಂಚುರಿ' ಎಂಬ ಹೆಸರನ್ನು ಇಡಲಾಗಿದೆ.

Century film Institute by Bukkapattana Vasu

ಸೆಂಚುರಿ ಫಿಲ್ಮ್ ಇನ್ಸ್ ಟಿಟ್ಯೂಟ್ ನಲ್ಲಿ ಚಲನಚಿತ್ರ ಅಭಿನಯ, ಛಾಯಾಗ್ರಹಣ, ಸಂಕಲನ, ನಿರ್ದೇಶನ, ನೃತ್ಯ, ಸಂಗೀತ, ವಾದ್ಯ ಮುಂತಾದ ವಿಭಾಗಗಳಲ್ಲಿ ಅಭ್ಯರ್ಥಿಗಳಿಗೆ ನುರಿತ ಅಧ್ಯಾಪಕರಿಂದ ತರಬೇತಿ ನೀಡಲಾಗುತ್ತದೆ.

ಸಂಸ್ಥೆಗೆ ಹೊಂದಿಕೊಂಡಂತೆ "ಸೆಂಚುರಿ ಫಿಟ್ ನೆಸ್ ಹಬ್" ಎಂಬ ಅತ್ಯಾಧುನಿಕ ಜಿಮ್ ವ್ಯವಸ್ಥೆಯೂ ಇದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಕಂಡ ದೂರವಾಣಿಗಳಿಗೆ ಕರೆ ಮಾಡಬಹುದು. 94493 86181, 080-22748349, 080-23482809. (ಒನ್ಇಂಡಿಯಾ ಕನ್ನಡ)

English summary
Kannada films director, producer Bukkapattana Vasu soon starts Century Film Institute. It offers various courses in the stream of film direction, Cinematography, production, sound. Interested candidates may contact 94493 86181, 080-22748349, 080-23482809.
Please Wait while comments are loading...