For Quick Alerts
  ALLOW NOTIFICATIONS  
  For Daily Alerts

  ಕರ್ನಾಟಕದಾಚೆಯೂ ಸುನಾಮಿ ಎಬ್ಬಿಸಲು 'ಚಕ್ರವರ್ತಿ' ರೆಡಿ!

  By Bharath Kumar
  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾಗಳು ಇಷ್ಟು ದಿನ ಕರ್ನಾಟಕ ರಾಜ್ಯದಲ್ಲಿ ಗ್ರ್ಯಾಂಡ್ ಒಪನಿಂಗ್ ಮಾಡುತ್ತಿದ್ದವು. ಆದ್ರೆ, ಇದೇ ಮೊದಲ ಬಾರಿಗೆ ದರ್ಶನ್ ಅವರ ಸಿನಿಮಾ ದೇಶಾದ್ಯಂತ ಘರ್ಜಿಸುತ್ತಿದೆ.

  ಹೌದು, ಕರ್ನಾಟಕ ರಾಜ್ಯದಲ್ಲಿ ಸುಮಾರು 400ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿರುವ 'ಚಕ್ರವರ್ತಿ', ಹೊರ ರಾಜ್ಯಗಳಲ್ಲಿ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 'ಡಿ-ಬಾಸ್' ಸಿನಿಮಾ ಪ್ರದರ್ಶನವಾಗುತ್ತಿದೆಯಂತೆ.['ಚಕ್ರವರ್ತಿ' ಬಗ್ಗೆ ಇದ್ದ ಡೌಟ್ ಕ್ಲಿಯರ್!]

  ಅಷ್ಟಕ್ಕೂ, ದರ್ಶನ್ 'ಚಕ್ರವರ್ತಿ' ಯಾವ ಯಾವ ರಾಜ್ಯದಲ್ಲಿ, ಎಷ್ಟೆಷ್ಟು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ ಎಂಬ ಮಾಹಿತಿಯನ್ನ ತಿಳಿದುಕೊಳ್ಳಲು ಮುಂದೆ ಓದಿ.....

  ಭಾರತದ 11 ನಗರಗಳಲ್ಲಿ 'ಚಕ್ರವರ್ತಿ' ರಿಲೀಸ್!

  ಭಾರತದ 11 ನಗರಗಳಲ್ಲಿ 'ಚಕ್ರವರ್ತಿ' ರಿಲೀಸ್!

  ಇದೇ ಮೊದಲ ದರ್ಶನ್ ಸಿನಿಮಾ ದಾಖಲೆಯ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದ್ದು, ದೇಶದ ಪ್ರಮುಖ 11 ನಗರಗಳಲ್ಲಿ ಪ್ರದರ್ಶನವಾಗುತ್ತಿದೆ. [ದಿನಕರ್ 'ಕೇಡಿ' ಆಗಲು ಕಾರಣ 'ಆ' ಒಬ್ಬ ವ್ಯಕ್ತಿ! ಯಾರದು?]

  ಮುಂಬೈ, ಪುಣೆಯಲ್ಲಿ 'ದಾಸ'ನ ಚಿತ್ರ

  ಮುಂಬೈ, ಪುಣೆಯಲ್ಲಿ 'ದಾಸ'ನ ಚಿತ್ರ

  ವಾಣಿಜ್ಯ ನಗರಿ ಮುಂಬೈನ 4 ಚಿತ್ರಮಂದಿರದಲ್ಲಿ ದರ್ಶನ್ ಅಭಿನಯದ 'ಚಕ್ರವರ್ತಿ' ರಿಲೀಸ್ ಆಗುತ್ತಿದೆ. ಇನ್ನು ಪುಣೆಯ 3 ಚಿತ್ರಮಂದಿರಗಳಲ್ಲಿ 'ಚಕ್ರವರ್ತಿ' ಪ್ರದರ್ಶನವಾಗುತ್ತಿದೆ. [ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ 'ಚಕ್ರವರ್ತಿ']

  ಗುಜರಾತ್, ಉತ್ತರ ಪ್ರದೇಶದಲ್ಲಿ ದಾಖಲೆ

  ಗುಜರಾತ್, ಉತ್ತರ ಪ್ರದೇಶದಲ್ಲಿ ದಾಖಲೆ

  ದಾಖಲೆಗಳ ಪ್ರಕಾರ ಗುಜರಾತ್ ಮತ್ತು ಉತ್ತರ ಪ್ರದೇಶದಲ್ಲಿ ಇದುವರೆಗೂ ಕನ್ನಡ ಸಿನಿಮಾ ಬಿಡುಗಡೆಯಾಗಿಲ್ಲ ಎಂದು ಹೇಳಲಾಗುತ್ತಿದೆ. ಈಗ 'ಚಕ್ರವರ್ತಿ' ಬಿಡುಗಡೆಯಾಗುವುದರ ಮೂಲಕ ಇವೆರೆಡು ರಾಜ್ಯಗಳಲ್ಲಿ ಮೊದಲ ಬಾರಿಗೆ ಕನ್ನಡ ಸಿನಿಮಾ ರಿಲೀಸ್ ಆಗುತ್ತಿದೆ.

  ಉತ್ತರ ಭಾರತದಲ್ಲಿ 'ಡಿ ಬಾಸ್' ಕ್ರೇಜ್

  ಉತ್ತರ ಭಾರತದಲ್ಲಿ 'ಡಿ ಬಾಸ್' ಕ್ರೇಜ್

  ಮುಂಬೈ ಮತ್ತು ಪುಣೆ ನಗರಗಳನ್ನ ಬಿಟ್ಟು ಮಹಾರಾಷ್ಟದ ಇತರೆ ಪ್ರಮುಖ ನಗರಗಳಲ್ಲಿ 9 ಚಿತ್ರಮಂದಿರದಲ್ಲಿ ದರ್ಶನ್ ಸಿನಿಮಾ ರಿಲೀಸ್ ಆಗುತ್ತಿದೆ. ಹಾಗೇಯೆ ಗೋವಾದ 3 ಮತ್ತು ದೆಹಲಿಯ 2 ಥಿಯೇಟರ್ ನಲ್ಲಿ 'ಚಕ್ರವರ್ತಿ' ಬಿಡುಗಡೆಯಾಗುತ್ತಿದೆ.

  ದಕ್ಷಿಣ ಭಾರತದಲ್ಲಿ 'ಚಕ್ರವರ್ತಿ' ಹವಾ

  ದಕ್ಷಿಣ ಭಾರತದಲ್ಲಿ 'ಚಕ್ರವರ್ತಿ' ಹವಾ

  ಇನ್ನು ದಕ್ಷಿಣ ಭಾರತದಲ್ಲೂ 'ಚಕ್ರವರ್ತಿ' ಹವಾ ಜೋರಾಗಿದೆ. ಆಂಧ್ರಪ್ರದೇಶ 1, ಚೆನ್ನೈ 1 ಮತ್ತು ಕೇರಳ ರಾಜ್ಯದ 1 ಚಿತ್ರಮಂದಿರದಲ್ಲಿ ದರ್ಶನ್ ಚಿತ್ರ ತೆರೆಕಾಣುತ್ತಿದೆ.

  English summary
  Kannada Actor Darshan Starrer 'Chakravarthy' Movie Releasnig Over All India on April 14th. The Movie Directed by Chinthan A.V

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X