»   » ಕನ್ನಡ ಚಿತ್ರಪ್ರೇಮಿಗಳೇ ನೀವು ಮಾಡುತ್ತಿರುವುದು ಎಷ್ಟು ಸರಿ ನೀವೇ ಹೇಳಿ?

ಕನ್ನಡ ಚಿತ್ರಪ್ರೇಮಿಗಳೇ ನೀವು ಮಾಡುತ್ತಿರುವುದು ಎಷ್ಟು ಸರಿ ನೀವೇ ಹೇಳಿ?

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಚಕ್ರವರ್ತಿ' ಚಿತ್ರ ಕಳೆದ ವಾರವಷ್ಟೇ ರಾಜ್ಯಾದ್ಯಂತ ಬಿಡುಗಡೆಯಾಗಿ ಅದ್ಧೂರಿ ಪ್ರದರ್ಶನ ಕಾಣುತ್ತಿದೆ. ಅಷ್ಟರಲ್ಲಲಾಗ್ಲೇ ಕೆಲವರು 'ಚಕ್ರವರ್ತಿ' ಚಿತ್ರಕ್ಕೆ ಶತ್ರುಗಳಂತೆ ಕಾಡುತ್ತಿದ್ದಾರೆ.

ಥಿಯೇಟರ್ ನಲ್ಲಿ ಹೌಸ್ ಪುಲ್ ಪ್ರದರ್ಶನ ಕಾಣುತ್ತಿರುವ ಸಮಯದಲ್ಲಿ, ಚಿತ್ರದ ಕೆಲವು ಮುಖ್ಯವಾದ ದೃಶ್ಯಗಳು, ಹಾಡುಗಳು, ಹಾಗೂ ಸಾಹಸ ದೃಶ್ಯಗಳನ್ನ ಸೇರಿದಂತೆ 'ಚಕ್ರವರ್ತಿ' ಚಿತ್ರದ ಹಲವು ದೃಶ್ಯಗಳನ್ನ ಪೈರಸಿ ಮಾಡುತ್ತಿದ್ದಾರೆ. 'ಚಕ್ರವರ್ತಿ' ಚಿತ್ರದ ದೃಶ್ಯಗಳನ್ನ ತಮ್ಮ ಮೊಬೈಲ್ ಗಳಲ್ಲಿ ರೆಕಾರ್ಡ್ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೌಡ್ ಮಾಡುತ್ತಿದ್ದಾರೆ.[ಹಿಂದಿನ ರೆಕಾರ್ಡ್ಸ್ ಪೀಸ್ ಪೀಸ್: ಬಾಕ್ಸ್ ಆಫೀಸ್ ಚಿಂದಿ ಉಡಾಯ್ಸಿದ 'ಚಕ್ರವರ್ತಿ']

ಇದು ಕೇವಲ 'ಚಕ್ರವರ್ತಿ' ಚಿತ್ರಕ್ಕೆ ಮಾತ್ರವಲ್ಲ, ಕಳೆದ ದಿನಗಳಲ್ಲಿ ಬಿಡುಗಡೆಯಾಗಿದ್ದ 'ರಾಜಕುಮಾರ' ಮತ್ತು 'ಹೆಬ್ಬುಲಿ' ಚಿತ್ರಗಳಿಗೂ ಇದೇ ಸಮಸ್ಯೆ ಎದುರಾಗಿತ್ತು. ಮುಂದೆ ಓದಿ....

'ಚಕ್ರವರ್ತಿ' ಇಂಟ್ರೋ ಸೀನ್ ಲೀಕ್!

ಒಬ್ಬ ಹೀರೋಗೆ ಇಂಟ್ರಡಕ್ಷನ್ ಸೀನ್ ತುಂಬಾನೇ ಮುಖ್ಯ. ಈ ದೃಶ್ಯವನ್ನ ನಿರ್ದೇಶಕರು ತುಂಬಾ ಚಾಲೆಂಜಿಂಗ್ ಆಗಿ ಚಿತ್ರೀಕರಣ ಮಾಡಿರುತ್ತಾರೆ. ಇಂತಹ ದೃಶ್ಯಗಳಲ್ಲಿ ಗೌಪ್ಯತೆಯನ್ನ ಕಾಪಾಡಿಕೊಂಡಿರುತ್ತಾರೆ. ಆದ್ರೆ, 'ಚಕ್ರವರ್ತಿ' ಚಿತ್ರದಲ್ಲಿ ದರ್ಶನ್ ಅವರ ಇಂಟ್ರೋಡಕ್ಷನ್ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಬಹುತೇಕರು ಮೊಬೈಲ್ ಗಳಲ್ಲಿ ರೆಕಾರ್ಡ್ ಮಾಡಿ ಅಪ್ ಲೌಡ್ ಮಾಡಿದ್ದಾರೆ.['ಚಕ್ರವರ್ತಿ' ಚಕ್ರಾಧಿಪತ್ಯ: ಮತ್ತೆ 'ಬಾಕ್ಸ್ ಆಫೀಸ್ ಸುಲ್ತಾನ್' ಆದ ದರ್ಶನ್]

ದಿನಕರ್ ಇಂಟ್ರೋ ಸೀನ್ ಲೀಕ್!

ಇದೇ ಮೊದಲ ಬಾರಿಗೆ ಬಣ್ಣ ಹಚ್ಚಿರುವ ದಿನಕರ್ ತೂಗುದೀಪ ಚಿತ್ರದಲ್ಲಿ ಹೇಗೆ ಕಾಣಿಸಿಕೊಳ್ತಾರೆ ಎಂಬ ಕುತೂಹಲ ಪ್ರತಿಯೊಬ್ಬ ಚಿತ್ರಪ್ರೇಮಿಗೂ ಇತ್ತು. ಹೀಗಿರುವಾಗ, 'ಚಕ್ರವರ್ತಿ' ಚಿತ್ರದಲ್ಲಿ ದಿನಕರ್ ಅವರ ದೃಶ್ಯಗಳನ್ನ ಕೂಡ ರೆಕಾರ್ಡ್ ಮಾಡಿ ಯ್ಯೂಟ್ಯೂಬ್ ಗೆ ಅಪ್ ಲೌಡ್ ಮಾಡಿದ್ದಾರೆ.[ವಿಮರ್ಶೆ: ಭೂಗತ ಲೋಕಕ್ಕೆ ದೇಶಪ್ರೇಮದ ಪಾಠ ಹೇಳುವ 'ಚಕ್ರವರ್ತಿ']

ದರ್ಶನ್ ಮಾಸ್ ಫೈಟ್ ಪೈರಸಿ

'ಚಕ್ರವರ್ತಿ' ಚಿತ್ರದಲ್ಲಿ ನಟ ದರ್ಶನ್ ಅವರ ಮಾಸ್ ಸೀನ್ ಒಂದನ್ನ ರೆಕಾರ್ಡ್ ಮಾಡಿ, ಯ್ಯೂಟ್ಯೂಬ್ ನಲ್ಲಿ ಅಪ್ ಲೌಡ್ ಮಾಡಿದ್ದಾರೆ. ಚಿತ್ರದಲ್ಲಿ ದರ್ಶನ್ ಅವರು ಲಾಂಗ್ ಹಿಡಿಯುವ ಬಹುಮುಖ್ಯ ದೃಶ್ಯವನ್ನ ಕೂಡ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ.[ಚಕ್ರವರ್ತಿ ಮೊದಲ ಪ್ರದರ್ಶನ, ಅಭಿಮಾನಿಗಳ ವಿಮರ್ಶೆ ಸಂಭ್ರಮ]

ಮನವಿ ಮಾಡಿಕೊಂಡಿದ್ದ ದರ್ಶನ್

ಸಿನಿಮಾ ಬಿಡುಗಡೆಗೂ ಮುಂಚೆ ದಾಸ ದರ್ಶನ್, ತಮ್ಮ ಅಭಿಮಾನಿಗಳಲ್ಲಿ ಮತ್ತು ಕನ್ನಡ ಕಲಾಭಿಮಾನಿಗಳಲ್ಲಿ, ದಯವಿಟ್ಟು ಚಿತ್ರದ ಯಾವುದೇ ದೃಶ್ಯಗಳನ್ನ, ಹಾಡುಗಳ ತುಣುಕಗಳನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೌಡ್ ಮಾಡಬೇಡಿ ಎಂದು ಫೇಸ್ ಬುಕ್ ಲೈವ್ ನಲ್ಲಿ ಕೇಳಿಕೊಂಡಿದ್ದರು. ಆದ್ರೆ, ಕೊನೆಗೂ ಚಾಲೆಂಜಿಂಗ್ ಸ್ಟಾರ್ ಮಾತು ಕೆಲವರು ಕೇಳಲೇ ಇಲ್ಲ.['ಚಕ್ರವರ್ತಿ'ಗೆ ರಾಜ್ಯಾದ್ಯಂತ ಸಿಕ್ತು ಭರ್ಜರಿ ಓಪನಿಂಗ್]

ಇಂತವರನ್ನ ಏನು ಮಾಡಬೇಕು?

'ಕನ್ನಡದಲ್ಲಿ ಒಳ್ಳೆ ಸಿನಿಮಾಗಳು ಬರಲ್ಲ'' ಎಂಬ ಕೆಟ್ಟ ಅಪವಾದವನ್ನ ಸ್ಯಾಂಡಲ್ ವುಡ್ ಇಂಡಸ್ಟ್ರಿಯ ಮೇಲೆ ಕೆಲವು ಬುದ್ಧಿ ಜೀವಿಗಳು ವರ್ಷಗಳಿಂದ ಹೊರಿಸುತ್ತಾ ಬಂದಿದ್ದಾರೆ. ಆದ್ರೆ, ಒಂದೊಳ್ಳೆ ಸಿನಿಮಾ ಬಂದಾಗ ಮಾತ್ರ, ಅದನ್ನ ಪ್ರೋತ್ಸಾಹಿಸುವುದಕ್ಕಿಂತ ಆ ಚಿತ್ರವನ್ನ ತುಳಿಯುವುದೇ ಹೆಚ್ಚು. ಈಗ ಇಂತವರನ್ನ ಏನು ಮಾಡಬೇಕು.

ಸ್ಟಾರ್ ನಟರ ಸಿನಿಮಾಗಳಿಗೆ ಹೀಗೆ..

ಮೊದಲೇ ಥಿಯೇಟರ್ ಸಮಸ್ಯೆ ಅದು ಇದು ಅಂತ ಕನ್ನಡ ಚಿತ್ರಗಳನ್ನ ಥಿಯೇಟರ್ ನಲ್ಲಿ ಉಳಿಸಿಕೊಳ್ಳುವುದೇ ಕಷ್ಟ. ಇದರ ಮಧ್ಯೆ ಥಿಯೇಟರ್ ನಲ್ಲಿ ನೋಡಬೇಕಾದ ದೃಶ್ಯಗಳನ್ನ, ಮೊಬೈಲ್ ಗಳಲ್ಲಿ, ಯ್ಯೂಟ್ಯೂಬ್ ಗಳಲ್ಲಿ ನೋಡುತರ ಮಾಡ್ತಿದ್ದಾರೆ.

'ರಾಜಕುಮಾರ', 'ಹೆಬ್ಬುಲಿ'ಗೂ ಎದುರಾಗಿತ್ತು!

'ರಾಜಕುಮಾರ'ನನ್ನ ಕದ್ದುಮುಚ್ಚಿ ವಿಡಿಯೋ ಮಾಡ್ತಿದ್ದಾರೆ! ಕೇಳೋರು ಇಲ್ವಾ?ಇದು ಕೇವಲ ಚಕ್ರವರ್ತಿ ಚಿತ್ರಕ್ಕೆ ಮಾತ್ರವಲ್ಲ, ಕಳೆದ ದಿನಗಳಲ್ಲಿ ಬಿಡುಗಡೆಯಾಗಿ ಇನ್ನು ಥಿಯೇಟರ್ ನಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ 'ರಾಜಕುಮಾರ' ಹಾಗೂ 'ಹೆಬ್ಬುಲಿ' ಚಿತ್ರಗಳಿಗೂ ಇದೇ ಸಮಸ್ಯೆ ಎದುರಾಗಿದೆ.['ರಾಜಕುಮಾರ'ನನ್ನ ಕದ್ದುಮುಚ್ಚಿ ವಿಡಿಯೋ ಮಾಡ್ತಿದ್ದಾರೆ! ಕೇಳೋರು ಇಲ್ವಾ?]

English summary
Kannada Actor Challenging Star Darshan Starrer Chakravarthy Movie Video Songs and Scenes Getting Piracy in Youtube.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada