»   » ಅಣ್ಣಾವ್ರ ಪಾದದ ಧೂಳಿಗೆ ನಾ ಸಮನಲ್ಲ, ದರ್ಶನ್

ಅಣ್ಣಾವ್ರ ಪಾದದ ಧೂಳಿಗೆ ನಾ ಸಮನಲ್ಲ, ದರ್ಶನ್

Posted By:
Subscribe to Filmibeat Kannada
Challenging Star Darshan 36th Birthday today
ಕನ್ನಡ ಚಿತ್ರರಂಗದ 'ಸಾರಥಿ' ದರ್ಶನ್ ತೂಗುದೀಪ್ ಅವರಿಗಿಂದು 36ನೇ (ಫೆ 16) ಹುಟ್ಟುಹಬ್ಬದ ಸಂಭ್ರಮ. ಬೆಂಗಳೂರಿನ ಅವರ ರಾಜರಾಜೇಶ್ವರಿ ನಗರದ ಮನೆಯಲ್ಲಿ ಮಧ್ಯರಾತ್ರಿಯಿಂದಲೇ ರಾಜ್ಯದ ಮೂಲೆ ಮೂಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದಾರೆ.

'ಅಂದು ರಾಜಣ್ಣ, ಇಂದು ರಾಯಣ್ಣ' ಎನ್ನುವ ಅಭಿಮಾನಿಗಳ ಘೋಷಣೆಯ ಬಗ್ಗೆ ಪಬ್ಲಿಕ್ ಟಿವಿ ವರದಿಗಾರರ ಜೊತೆ ಮಾತನಾಡುತ್ತಿದ್ದ ದರ್ಶನ್, ಅಂಥಹಾ ಮಹಾನ್ ನಟನ ಜೊತೆ ನನ್ನ ಹೋಲಿಕೆ ಬೇಡ. ಬಾಲ್ಯದಿಂದ ಅವರ ಚಿತ್ರ ನೋಡಿ ಬೆಳೆದವನು ನಾನು. ಅವರೆಲ್ಲಿ, ನಾನೆಲ್ಲಿ. ಅವರ ಪಾದದ ಧೂಳಿಗೆ ನಾನು ಸಮನಲ್ಲ ಎಂದು ಹೇಳಿದ್ದಾರೆ.

ಡಾ.ರಾಜ್ ಜೊತೆ ನನ್ನ ಹೋಲಿಕೆ ಮಾಡಬೇಡಿ ಎಂದು ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ. ಇಂದು ನಾವು ಏನು ಗಳಿಸಿದ್ದೇವೋ, ಪಡೆದಿದ್ದೇವೋ ಅದೆಲ್ಲಾ ನಮ್ಮ ಅಭಿಮಾನಿಗಳಿಂದ. ಅಭಿಮಾನಿಗಳು ನನಗೆ ತಂದೆ ತಾಯಿಗಿಂತಲೂ ಜಾಸ್ತಿ ಎಂದು ದರ್ಶನ್ ಈ ಸಂದರ್ಭದಲ್ಲಿ ಹೇಳಿದ್ದಾರೆ.

ದರ್ಶನ್ ಅವರ ಮನೆ ಮುಂದೆ ಭಾರೀ ಕಟೌಟ್ ಗಳು ರಾರಾಜಿಸುತ್ತಿವೆ. ಸರತಿಯಲ್ಲಿ ಬಂದು ಅಭಿಮಾನಿಗಳು ದರ್ಶನ್ ಗೆ ಹುಟ್ಟುಹಬ್ಬದ ಶುಭಾಷಯ ತಿಳಿಸುತ್ತಿದ್ದಾರೆ. ಮೆಚ್ಚಿನ ನಟನ ಜೊತೆ ಕೇಕ್ ಕತ್ತರಿಸಿ ಸಂಭ್ರಮಿಸುತ್ತಿದ್ದಾರೆ.

ದರ್ಶನ್ ಹುಟ್ಟುಹಬ್ಬದ ದಿನವಾದ ಇಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ' ಬೃಂದಾವನ ' ಚಿತ್ರ ಸೆಟ್ಟೇರಲಿದೆ. ಸುರೇಶ್ ಗೌಡ, ಶ್ರೀನಿವಾಸ ಮೂರ್ತಿ ನಿರ್ಮಿಸುತ್ತಿರುವ ಈ ಚಿತ್ರವನ್ನು ಕೆ ಮಾದೇಶ್ ನಿರ್ದೇಶಿಸುತ್ತಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ನಮ್ಮ ಕಡೆಯಿಂದ ಮತ್ತು ನಮ್ಮ ಓದುಗರ ಕಡೆಯಿಂದ 'ಜನ್ಮ ದಿನದ ಹಾರ್ಥಿಕ ಶುಭಾಷಯಗಳು". ಇನ್ನೂ ಎತ್ತರಕ್ಕೆ ಬೆಳೆಯಿರಿ, ಕನ್ನಡ ಚಿತ್ರರಂಗವನ್ನೂ ಬೆಳಿಸಿರಿ.

English summary
Challenging star Darshan 36th Birthday today (Feb 16).
Please Wait while comments are loading...