»   » ದರ್ಶನ್ ಗೆ ಅಭಿಮಾನಿಗಳಿಂದ ಜೋರಾದ ಚಪ್ಪಾಳೆ ಬರಲೇಬೇಕು.!

ದರ್ಶನ್ ಗೆ ಅಭಿಮಾನಿಗಳಿಂದ ಜೋರಾದ ಚಪ್ಪಾಳೆ ಬರಲೇಬೇಕು.!

Posted By:
Subscribe to Filmibeat Kannada

ದರ್ಶನ್ ಬರೀ 'ಚಾಲೆಂಜಿಂಗ್ ಸ್ಟಾರ್' ಮಾತ್ರ ಅಲ್ಲ, 'ಪ್ರಾಣಿ ಪ್ರಿಯ' ಕೂಡ ಹೌದು ಅನ್ನೋದು ನಿಮಗೆಲ್ಲ ಗೊತ್ತಿರುವ ವಿಷಯ. ದರ್ಶನ್ 'ಪ್ರಾಣಿ ಪ್ರೀತಿ' ಎಂಥದ್ದು ಅಂತ ಸಾರಿ ಸಾರಿ ಹೇಳಲು ಮೈಸೂರಿನಲ್ಲಿ ಇರುವ ಅವರ ಫಾರ್ಮ್ ಹೌಸ್ ಉತ್ತಮ ನಿದರ್ಶನ.

ಮೊನ್ನೆ ಮೊನ್ನೆತಾನೆ ದರ್ಶನ್ ಫಾರ್ಮ್ ಹೌಸ್ ಗೆ ಜೋಡಿ ಎತ್ತು ಬಲಗಾಲಿಟ್ಟು ಬಂದ ವಿಚಾರ ನಿಮಗೆ ತಿಳಿಸಿದ್ವಿ. [ಚಾಲೆಂಜಿಂಗ್ ಸ್ಟಾರ್ ಗಜ ಮತ್ತು ಟಾಕಿಂಗ್ ಸ್ಟಾರ್ ಸುಜ!]

ಈಗ ಅದೇ ಮೈಸೂರಿನ ಮೃಗಾಲಯದಿಂದ ಒಂದು ಇಂಟ್ರೆಸ್ಟಿಂಗ್ ಮಾಹಿತಿ ಹೊತ್ತು ತಂದಿದ್ದೀವಿ ಕೇಳಿ...

challenging-star-darshan-adopts-elephant-and-tiger-at-mysuru-zoo

'ಮೈಸೂರು ಝೂ'ನಲ್ಲಿ ಇರುವ ಒಂದು ಆನೆ ಹಾಗೂ ಒಂದು ಹುಲಿಯನ್ನು ದರ್ಶನ್ ದತ್ತು ಪಡೆದಿದ್ದಾರೆ.

ಕಳೆದ ವರ್ಷವಷ್ಟೇ ಆನೆ ಮರಿಯೊಂದನ್ನ ದರ್ಶನ್ ದತ್ತು ಪಡೆದಿದ್ದರು. ಈ ಬಾರಿ 1.75 ಲಕ್ಷ ರೂಪಾಯಿ ಶುಲ್ಕ ಭರಿಸಿ ಆನೆ ಹಾಗೂ 1 ಲಕ್ಷ ರೂಪಾಯಿ ಪಾವತಿಸಿ ಹುಲಿಯೊಂದನ್ನು 'ತೂಗುದೀಪ' ಪುತ್ರ ದತ್ತು ಪಡೆದಿದ್ದಾರೆ. [ದಕ್ಷಿಣ ಅಮೆರಿಕದಿಂದ ದರ್ಶನ್ ಮನೆಗೆ ಬಂದ ಹೊಸ ಅತಿಥಿ]

ಮೂಕಪ್ರಾಣಿಗಳ ಜೊತೆ ಸುಖ-ದುಃಖ ಹಂಚಿಕೊಳ್ಳುವ ದರ್ಶನ್ ರವರ ಈ ನಡೆಗೆ ಅಭಿಮಾನಿಗಳಿಂದ ಜೋರಾದ ಚಪ್ಪಾಳೆ ಬರಲೇಬೇಕು.

English summary
Kannada Actor Darshan has adopted an Elephant and Tiger from Mysuru Zoo. The adoption fee for Elephant is Rs.1.75 Lakh and Tiger is Rs.1 Lakh.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada