ಆಟೋಗ್ರಾಫ್ ಕೇಳಿದ ಅಭಿಮಾನಿಗೆ ಡಿ-ಬಾಸ್ ಕೊಟ್ಟಿದ್ದೇನು.?
Recommended Video

ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಅಭಿಮಾನಿಗಳಿಗೆ ಎಲ್ಲ ರೀತಿಯಲ್ಲೂ ಸ್ಪಂಧಿಸುತ್ತಾರೆ. ಮನೆಗೆ ಬರುವ ಫ್ಯಾನ್ಸ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಕಳುಹಿಸುತ್ತಾರೆ. ಶೂಟಿಂಗ್ ಸೆಟ್ ಗೆ ಬರುವ ಅಭಿಮಾನಿಗಳ ಜೊತೆಯೂ ಫೋಟೋ ತೆಗಿಸಿಕೊಂಡು ಖುಷಿ ಪಡಿಸುತ್ತಾರೆ. ಹೀಗೆ, ಸಂಕಷ್ಟದಲ್ಲಿರುವ ಅಭಿಮಾನಿಗಳಿಗೂ ನೆರವಾಗುವ ದಾಸ ಈಗೊಂದು ಹೊಸ ವಿಚಾರಕ್ಕೆ ಸುದ್ದಿಯಾಗಿದ್ದಾರೆ.
ಜೀಪ್ ಮೇಲೆ ಆಟೋಗ್ರಾಫ್ ಕೇಳಿದ ಅಭಿಮಾನಿಗೆ ದರ್ಶನ್ ವಿಶೇಷವಾದ ಸಂದೇಶವನ್ನ ನೀಡುವ ಮೂಲಕ ವಿಶೇಷವಾದ ಅಭಿಮಾನಿ ಪಡೆದುಕೊಂಡಿದ್ದಾರೆ. ಸಾಮಾನ್ಯವಾಗಿ ತಾರೆಯರು ಅಭಿಮಾನಿಗಳಿಗೆ ನೀಡುವ ಆಟೋಗ್ರಾಫ್ ನಲ್ಲಿ ಶುಭವಾಗಲಿ, ಒಳ್ಳೆಯದಾಗಲಿ, ಪ್ರೀತಿ ಇರಲಿ ಹೀಗೆ ಏನೇನೋ ಬರೆಯುತ್ತಾರೆ. ಆದ್ರೆ, ದರ್ಶನ್ ಆಟೋಗ್ರಾಫ್ ಜೊತೆಗೆ 'ಡ್ರೈವ್ ಸೇಫ್' ಅಂತ ಬರೆದಿದ್ದಾರೆ.

ಹೌದು, ದರ್ಶನ್ ಅಭಿಮಾನಿಯೊಬ್ಬ ಕಪ್ಪ ಬಣ್ಣದ ಜೀಪ್ ಇಟ್ಟುಕೊಂಡಿದ್ದು, ಅದರ ಮೇಲೆ ಬಾದಲ್ ಎಂದು ಬರೆಸಿದ್ದಾರೆ. ಬಾದಲ್ ಎಂಬುದು ದರ್ಶನ್ ಕುದುರೆಯ ಹೆಸರು. ಅಷ್ಟೇ ಅಲ್ಲ ಬಾದಲ್ ಕುದುರೆಯ ಫೋಟೋ ಕೂಡ ಜೀಪ್ ಮೇಲೆ ಪೊಸ್ಟರ್ ಹಾಕಿಸಿಕೊಂಡಿದ್ದಾರೆ ಆ ಅಭಿಮಾನಿ. ಈ ವ್ಯಕ್ತಿಯ ಜೀಪ್ ಮೇಲೆ ದರ್ಶನ್ ಅವರ ಆಟೋಗ್ರಾಫ್ ಕೇಳಿದ್ದಾರೆ. ಅದಕ್ಕೆ ಅಭಿಮಾನದಿಂದ ಆಟೋಗ್ರಾಫ್ ನೀಡಿರುವ ದರ್ಶನ್ ಜೊತೆಗೆ 'ಡ್ರೈವ್ ಸೇಫ್' ಜಾಗೃತಿ ಮೂಡಿಸಿದ್ದಾರೆ.

ಮುನಿರತ್ನ ನಿರ್ಮಾಣದ 'ಕುರುಕ್ಷೇತ್ರ' ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿ ಮುಗಿಸಿರುವ ಡಿ ಬಾಸ್ ಈಗ 'ಯಜಮಾನ' ಚಿತ್ರದ ಶೂಟಿಂಗ್ ನಲ್ಲಿ ತೊಡಗಿಕೊಂಡಿದ್ದಾರೆ. ಮೈಸೂರು ಭಾಗದಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಪ್ರತಿದಿನವೂ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸುತ್ತಿದ್ದಾರಂತೆ.


Click it and Unblock the Notifications











