»   » ಟ್ರ್ಯಾಕ್ ಬದಲಾಯಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್!

ಟ್ರ್ಯಾಕ್ ಬದಲಾಯಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್!

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಷ್ಟು ದಿನ ಹೆಚ್ಚಾಗಿ ಅಭಿನಯಿಸಿದ್ದು ಪಕ್ಕಾ ಮಾಸ್ ಮಸಾಲಾ ಚಿತ್ರಗಳಲ್ಲಿ. ಈಗವರು ತಮ್ಮ ರೂಟನ್ನು ಸ್ವಲ್ಪ ಬದಲಾಯಿಸಿದ್ದಾರೆ. ಆಕ್ಷನ್ ನಿಂದ ಕಾಮಿಡಿ ಕಡೆಗೆ ಹೊರಳಿದ್ದಾರೆ.

ದರ್ಶನ್ ಅವರ ಜಗ್ಗು ದಾದಾ ಚಿತ್ರ ಪ್ರಕಟವಾದಾಗ ಎಲ್ಲರೂ ಇದೂ ಒಂದು ಪಕ್ಕಾ ಆಕ್ಷನ್ ಪ್ರಧಾನ ಚಿತ್ರ ಎಂದೇ ಭಾವಿಸಿದ್ದರು. ಆದರೆ ಇದೊಂದು ಪಕ್ಕಾ ಕಾಮಿಡಿ ಎಂಟರ್ ಟೇನರ್ ಎನ್ನುತ್ತದೆ ಚಿತ್ರತಂಡ. [ಚಾಲೆಂಜಿಂಗ್ ಸ್ಟಾರ್ ಹುಟ್ಟುಹಬ್ಬಕ್ಕೆ ಹೊಸ ಚಿತ್ರ]

Challenging Star Darshan changes his track

ಈ ಹಿಂದೆ 2007ರಲ್ಲಿ ದರ್ಶನ್ ಅಭಿನಯಿಸಿದ್ದ 'ಸ್ನೇಹಾನಾ ಪ್ರೀತಿನಾ' ಚಿತ್ರದ ರೀತಿಯಲ್ಲಿ ಇದು ಇರುತ್ತದಂತೆ. "ಜಗ್ಗು ದಾದಾ ಚಿತ್ರ ಔಟ್ ಅಂಡ್ ಔಟ್ ಕಾಮಿಡಿ ಚಿತ್ರವಾಗಿದ್ದು, ಇದುವರೆಗೂ ತಾನು ಹೆಚ್ಚಾಗಿ ಮಾಸ್ ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ತಮ್ಮನ್ನು ಮಾಸ್ ಹೀರೋ ಎಂದೇ ಗುರುತಿಸುತ್ತಿದ್ದಾರೆ. ಅದು ಕಾಮಿಡಿ ಇರಲಿ ಆಕ್ಷನ್ ಇರಲಿ ಒಟ್ಟಾರೆ ರಂಜಿಸುವುದು ತಮ್ಮ ಗುರಿ" ಎನ್ನುತ್ತಾರೆ ದರ್ಶನ್.

ರಾಘವೇಂದ್ರ ಹೆಗಡೆ ಆಕ್ಷನ್ ಕಟ್ ಹೇಳಲಿರುವ ಚಿತ್ರ 'ಜಗ್ಗು ದಾದಾ'. ಚಾಲೆಂಜಿಂಗ್ ಸ್ಟಾರ್ ಮೂವತ್ತೆಂಟನೆ ಹುಟ್ಟುಹಬ್ಬದ ದಿನ ಅಂದರೆ ಫೆಬ್ರವರಿ 16ರಂದು ಚಿತ್ರಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ವಿ ಹರಿಕೃಷ್ಣ ಸಂಗೀತ ಹಾಗೂ ಪಿ ಆರ್ ಸೌಂದರ್ ರಾಜ್ ಅವರ ಸಂಕಲನ ಚಿತ್ರಕ್ಕಿರುತ್ತದೆ.

ಯೂನುಸ್ ಸೆಜ್ ವಾಲ್ ಅವರ ಚಿತ್ರಕಥೆ ಇದೆ. ಇವರು ಶಾರುಖ್ ಖಾನ್ ಅವರ 'ಚೆನ್ನೈ ಎಕ್ಸ್ ಪ್ರೆಸ್' ಚಿತ್ರಕ್ಕೆ ಸ್ಕ್ರಿಪ್ಟ್ ರೈಟರ್ ಆಗಿ ಕೆಲಸ ಮಾಡಿದ್ದರು. ಮುಂಬೈನ ಆರ್ಎಚ್ ಎಂಟರ್ ಟೇನ್ ಮೆಂಟ್ ಸಂಸ್ಥೆ ಜಗ್ಗು ದಾದಾ ಚಿತ್ರವನ್ನು ನಿರ್ಮಿಸುತ್ತಿದೆ. ರಾಘವೇಂದ್ರ ಅವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ. (ಏಜೆನ್ಸೀಸ್)

English summary
Challenging Star Darshan changed his track from action to comedy. The actor is known best for his mass-oriented action roles. His upcoming movie Jaggu Dada is a out and out comedy entertainer.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada