For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಮೇಲಿನ ಅಭಿಮಾನ ಹೆಚ್ಚಾಗೋದು ಇದೇ ಕಾರಣಕ್ಕೆ ನೋಡಿ.!

  |

  Recommended Video

  Darshan help his fan family like this..? | FILMIBEAT KANNADA

  ಅನ್ಯಾಯ ಮಾಡಿದವರನ್ನು ಬಗ್ಗು ಬಡಿಯುವುದು, ದುಷ್ಟರ ಸಂಹಾರ ಮಾಡುವುದು, ಕಷ್ಟದಲ್ಲಿ ಇದ್ದವರಿಗೆ ಸಹಾಯ ಹಸ್ತ ಚಾಚುವುದು, ನೊಂದವರ ಕಣ್ಣೀರು ಒರೆಸುವುದು... ಇವೆಲ್ಲವೂ ತೆರೆ ಮೇಲೆ ತುಂಬಾ ಸುಲಭ. ಆದರೆ, ನಿಜ ಜೀವನದಲ್ಲಿಯೂ ಸಂಕಷ್ಟದಲ್ಲಿ ಇದ್ದವರ ಬಾಳಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬೆಳಕಾಗುತ್ತಿದ್ದಾರೆ. ಹೀಗಾಗಿ, ತೆರೆಮೇಲೆ ಮಾತ್ರ ಅಲ್ಲ.. ರಿಯಲ್ ಲೈಫ್ ನಲ್ಲೂ ದರ್ಶನ್ 'ಅಕ್ಷರಶಃ' ಹೀರೋನೇ.

  ಈಗಾಗಲೇ ಹಲವರಿಗೆ ದರ್ಶನ್ ಸಹಾಯ ಮಾಡಿರುವ ಬಗ್ಗೆ ನೀವು ನೋಡಿರ್ತೀರಾ, ಕೇಳಿರ್ತೀರಾ. ಇದೀಗ ಅಂತದ್ದೇ ಮತ್ತೊಂದು ನಿದರ್ಶನವನ್ನು ಹೇಳ್ತೀವಿ ಕೇಳಿ.

  ಮೊನ್ನೆಮೊನ್ನೆಯಷ್ಟೇ (ಅಕ್ಟೋಬರ್ 31) ದರ್ಶನ್ ಪುತ್ರ ವಿನೀಶ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಒಂದು ಕುಟುಂಬಕ್ಕೆ ನೆರವಾಗಲು ನಿಮ್ಮೆಲ್ಲರ ಪ್ರೀತಿ ದಾಸ ದರ್ಶನ್ ಮನಸ್ಸು ಮಾಡಿದ್ದಾರೆ. ಮುಂದೆ ಓದಿರಿ...

  ಕಳೆದ ವರ್ಷ ನಡೆದಿದ್ದೇನು.?

  ಕಳೆದ ವರ್ಷ ನಡೆದಿದ್ದೇನು.?

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬವನ್ನು ಅಭಿಮಾನಿಗಳು ಸಂಭ್ರಮದಿಂದ ಹೇಗೆ ಆಚರಿಸುತ್ತಾರೋ, ಅಷ್ಟೇ ಸಡಗರದಿಂದ ಪುತ್ರ ವಿನೀಶ್ ಜನ್ಮದಿನವನ್ನೂ ಫ್ಯಾನ್ಸ್ ಸೆಲೆಬ್ರೇಟ್ ಮಾಡುತ್ತಾರೆ. ಕಳೆದ ವರ್ಷ ಕೂಡ ವಿನೀಶ್ ಬರ್ತಡೇ ಸೆಲೆಬ್ರೇಟ್ ಮಾಡಲು ದರ್ಶನ್ ಕಟ್ಟಾ ಅಭಿಮಾನಿ ರಾಕೇಶ್ ರಾಜರಾಜೇಶ್ವರಿ ನಗರಕ್ಕೆ ಬರುತ್ತಿದ್ದರು. ಆ ವೇಳೆ ಅಪಘಾತ ಸಂಭವಿಸಿ ರಾಕೇಶ್ ಮೃತಪಟ್ಟಿದ್ದರು.

  ಹುಟ್ಟುಹಬ್ಬದ ಸಂಭ್ರಮದಲ್ಲಿ ವಿನೀಶ್ ದರ್ಶನ್ಹುಟ್ಟುಹಬ್ಬದ ಸಂಭ್ರಮದಲ್ಲಿ ವಿನೀಶ್ ದರ್ಶನ್

  ರಾಕೇಶ್ ಕುಟುಂಬಕ್ಕೆ ಧನಸಹಾಯ

  ರಾಕೇಶ್ ಕುಟುಂಬಕ್ಕೆ ಧನಸಹಾಯ

  ಪುತ್ರ ವಿನೀಶ್ ಹುಟ್ಟುಹಬ್ಬದ ದಿನ ಇಂತಹ ಘಟನೆ ನಡೆದಿರುವುದು ದರ್ಶನ್ ಗೆ ತೀರಾ ಬೇಸರ ತಂದಿತ್ತು. ಅಂದು ರಾಕೇಶ್ ಕುಟುಂಬಕ್ಕೆ ದರ್ಶನ್ ಹಣ ಸಹಾಯ ಮಾಡಿದ್ದರು. ರಾಕೇಶ್ ಫ್ಯಾಮಿಲಿಗೆ ದರ್ಶನ್ ಎರಡು ಲಕ್ಷ ರೂಪಾಯಿ ನೀಡಿದ್ದರು. ಇಂದು ಅದೇ ಕುಟುಂಬಕ್ಕೆ ಆಸರೆ ಆಗಿ ನಿಲ್ಲಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನಸ್ಸು ಮಾಡಿದ್ದಾರೆ.

  ರಸ್ತೆ ಅಪಘಾತದ ಬಗ್ಗೆ ಅಭಿಮಾನಿಗಳಿಗೆ ದರ್ಶನ್ ಮನವಿರಸ್ತೆ ಅಪಘಾತದ ಬಗ್ಗೆ ಅಭಿಮಾನಿಗಳಿಗೆ ದರ್ಶನ್ ಮನವಿ

  ಮದುವೆಗೆ ಸಹಾಯ ಮಾಡಲು ದರ್ಶನ್ ನಿರ್ಧಾರ

  ಮದುವೆಗೆ ಸಹಾಯ ಮಾಡಲು ದರ್ಶನ್ ನಿರ್ಧಾರ

  ಮೊನ್ನೆ ಅಕ್ಟೋಬರ್ 31 ರಂದು ನಡೆದ ವಿನೀಶ್ ಹುಟ್ಟುಹಬ್ಬದ ಸಂದರ್ಭದಲ್ಲಿ ರಾಕೇಶ್ ಕುಟುಂಬದವರನ್ನು ದರ್ಶನ್ ಕರೆಯಿಸಿಕೊಂಡಿದ್ದರು. ಇದೇ ಸಂದರ್ಭದಲ್ಲಿ ರಾಕೇಶ್ ಕುಟುಂಬದ ಹೆಣ್ಣುಮಕ್ಕಳ ಮದುವೆಗೆ ಹಣ ಸಹಾಯ ಮಾಡುವುದಾಗಿ ದರ್ಶನ್ ಭರವಸೆ ನೀಡಿದ್ದಾರೆ. ಖಾಸಗಿ ಕಾರ್ಖಾನೆಯೊಂದರಲ್ಲಿ ರಾಕೇಶ್ ಕೆಲಸ ಮಾಡುತ್ತಿದ್ದರು. ರಾಕೇಶ್ ಗೆ ಕೀರ್ತನಾ ಮತ್ತು ನಾಗವೇಣಿ ಎಂಬ ಸಹೋದರಿಯರು ಇದ್ದಾರೆ. ರಾಕೇಶ್ ಸಹೋದರಿಯರ ಮದುವೆ ಖರ್ಚನ್ನ ವಹಿಸಿಕೊಳ್ಳಲು ದರ್ಶನ್ ನಿರ್ಧಾರ ಮಾಡಿದ್ದಾರೆ.

  ಅಭಿಮಾನ ಹೆಚ್ಚಾಗುವುದು ಈ ಕಾರಣಕ್ಕೆ.!

  ಅಭಿಮಾನ ಹೆಚ್ಚಾಗುವುದು ಈ ಕಾರಣಕ್ಕೆ.!

  ಕಷ್ಟದಲ್ಲಿ ಇದ್ದವರಿಗೆ, ನೊಂದವರಿಗೆ ದರ್ಶನ್ ಹೀಗೆ ಒಂದಲ್ಲಾ ಒಂದು ರೀತಿ ಸಹಾಯ ಮಾಡುತ್ತಾ ಬರುತ್ತಿದ್ದಾರೆ. ದರ್ಶನ್ ಮೇಲಿನ ಅಭಿಮಾನ ಹೆಚ್ಚಾಗುವುದು ಇಂತಹ ಕಾರಣಗಳಿಗೆ. ರಾಕೇಶ್ ಸಾವಿನ ಕುರಿತು ನೊಂದಿರುವ ದರ್ಶನ್ 'ಸೇಫ್ ಡ್ರೈವ್' ಬಗ್ಗೆ ಅಭಿಮಾನಿಗಳಲ್ಲಿ ಅರಿವು ಮೂಡಿಸುತ್ತಿದ್ದಾರೆ. ದೂರದ ಊರುಗಳಿಗೆ ಹೋಗುವಾಗ ದ್ವಿಚಕ್ರ ವಾಹನ ಬಳಸದಂತೆ ಮನವಿ ಮಾಡುತ್ತಿದ್ದಾರೆ.

  English summary
  Challenging Star Darshan has promised to help Fan Rakesh Family.
  Friday, November 8, 2019, 9:02
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X