»   » 'ಚಾಲೆಂಜಿಂಗ್ ಸ್ಟಾರ್' ಸಾಕು 'ಮೈಸೂರು ರತ್ನ' ಯಾಕೆ?

'ಚಾಲೆಂಜಿಂಗ್ ಸ್ಟಾರ್' ಸಾಕು 'ಮೈಸೂರು ರತ್ನ' ಯಾಕೆ?

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್.......ಅಭಿಮಾನಿಗಳು ಪ್ರೀತಿಯಿಂದ ನಟ ದರ್ಶನ್ ಅವರಿಗೆ ನೀಡಿರುವ ಬಿರುದು. ಇದರ ಜೊತೆಗೆ 'ಕರುನಾಡ ಕಲಾರತ್ನ', 'ಬಾಕ್ಸ್ ಆಫೀಸ್ ಸುಲ್ತಾನ್', 'ಮೈಸೂರು ಹುಲಿ' ಹೀಗೆ ಸಾಲು ಸಾಲು ಬಿರುದುಗಳು ದರ್ಶನ್ ಅವರ ಮುಡಿಗೇರಿದೆ. ಆದ್ರೆ, ದರ್ಶನ್ ಅವರ ಮಾತ್ರ ಚಾಲೆಂಜಿಂಗ್ ಸ್ಟಾರ್ ಎಂದು ಕರೆಸಿಕೊಳ್ಳಲು ತುಂಬಾ ಇಷ್ಟಪಡ್ತಾರೆ.

ಈ ಕಥೆ ಯಾಕೆ ಈಗ ಅಂತೀರಾ.....ವಿಷ್ಯ ಇದೆ. ಇತ್ತೀಚೆಗಷ್ಟೇ 'ಕರಿಯ-2' ಚಿತ್ರದ ಆಡಿಯೋವನ್ನ ನಟ ದರ್ಶನ್ ಬಿಡುಗಡೆ ಮಾಡಿದ್ದರು. ಸಂತೋಷ್ ಅಭಿನಯದ ಈ ಚಿತ್ರವನ್ನ ಆನೇಕಲ್ ಬಾಲರಾಜ್ ನಿರ್ಮಾಣ ಮಾಡಿದ್ದಾರೆ. ವಿಶೇಷ ಅಂದ್ರೆ, ದರ್ಶನ್ ಅಭಿನಯಿಸಿದ್ದ 'ಕರಿಯ' ಚಿತ್ರವನ್ನ ಇದೇ ಅನೇಕಲ್ ಬಾಲರಾಜ್ ನಿರ್ಮಾಣ ಮಾಡಿದ್ದರು. ಹೀಗಾಗಿ, ದರ್ಶನ್ ಅಂದ್ರೆ ಈ ನಿರ್ಮಾಪಕರಿಗೆ ತುಂಬಾ ಅಭಿಮಾನ.

ಒಂದೇ ದಿನದಲ್ಲಿ 3 ಬಿರುದು ದಕ್ಕಿಸಿಕೊಂಡ ಚಾಲೆಂಜಿಂಗ್ ಸ್ಟಾರ್

Challenging Star Darshan Rejects Mysore rathna Title

ಈ ಅಭಿಮಾನದ ಸಂಕೇತವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ 'ಕರಿಯ-2' ಚಿತ್ರತಂಡ 'ಮೈಸೂರು ರತ್ನ' ಎಂಬ ಬಿರುದನ್ನ ನೀಡಿದೆ. ಚಿತ್ರತಂಡದ ಪ್ರೀತಿಗೆ ಮನತುಂಬಿ ಮಾತನಾಡಿದ ದರ್ಶನ್, ''ನನಗೆ ಈಗಾಗಲೇ ಚಾಲೆಂಜಿಂಗ್ ಸ್ಟಾರ್ ಅಂತ ಬಿರುದು ಇದೆ. ನನಗ್ಯಾಕೆ....ನಮ್ಮ ಹೀರೋ ಸಂತೋಷ್ ಗೆ ಮೈಸೂರು ರತ್ನ ಅಂತ ಇಡಿ ಎಂದು ಸಂತೋಷ ವ್ಯಕ್ತಪಡಿಸಿದರು.

'ಕರುನಾಡ ಕಲಾರತ್ನ'ನಾದ ಚಾಲೆಂಜಿಂಗ್ ಸ್ಟಾರ್ ದರ್ಶನ್

English summary
Challenging Star Darshan Rejects Mysore rathna Title. recently Kariya-2 movie team gives Mysore rathna titled to darshan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada