»   » ಗಾಂಧಿನಗರದ ಗಾಸಿಪ್ಪಿಗೆ ಮಂಗಳ ಹಾಡಿದ ದರ್ಶನ್

ಗಾಂಧಿನಗರದ ಗಾಸಿಪ್ಪಿಗೆ ಮಂಗಳ ಹಾಡಿದ ದರ್ಶನ್

Posted By:
Subscribe to Filmibeat Kannada

ಕಳೆದ ಒಂದು ವಾರದಿಂದ ಗಾಂಧಿನಗರದ ಗಲ್ಲಿಗಳಲ್ಲಿ ತಲೆಬುಡವಿಲ್ಲದೇ ಗಿರಿಗಿಟ್ಲೆ ಹೊಡೆಯುತ್ತಿದ್ದ ಅಂತೆ ಕಂತೆ ಸುದ್ದಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಂಗಳ ಹಾಡಿದ್ದಾರೆ. ತನ್ನ ಮುಂದಿನ ಐರಾವತ ಚಿತ್ರದ ಸುತ್ತ ಸುತ್ತುತ್ತಿದ್ದ ಗಾಸಿಪ್ ಸುದ್ದಿಗಳು 'ಬೇಸ್ ಲೆಸ್' ಎಂದು ದರ್ಶನ್ ಸ್ಪಷ್ಟನೆ ನೀಡಿದ್ದಾರೆ.

ದರ್ಶನ್ ಮತ್ತು ಎರಿಕಾ ಫರ್ನಾಂಡಿಸ್ ಪ್ರಮುಖ ಭೂಮಿಕೆಯಲ್ಲಿರುವ 'ಐರಾವತ' ಚಿತ್ರ ಸೆಟ್ಟೇರುವ ಸಾಧ್ಯತೆ ಕಮ್ಮಿ. ಚಿತ್ರದ ನಿರ್ದೇಶಕ ಎ ಪಿ ಅರ್ಜುನ್ ಮತ್ತು ದರ್ಶನ್ ಸಹೋದರ್ ದಿನಕರ್ ತೂಗುದೀಪ್ ನಡುವೆ ಮನಸ್ತಾಪ ಉಂಟಾಗಿರುವುದರಿಂದ ಚಿತ್ರ ಡ್ರಾಪ್ ಆಗಲಿದೆ ಎಂದು ಸುದ್ದಿ ಹರಡಿತ್ತು. (ದರ್ಶನ್ ಚಿತ್ರದಲ್ಲಿ ಪ್ರಕಾಶ್ ರೈ)

ಕೆಲವು ದಿನಗಳ ಹಿಂದೆ ದೈನಿಕವೊಂದರಲ್ಲಿ ಲೇಖನವೊಂದು ಪ್ರಕಟವಾಗಿತ್ತು. ನಿರ್ದೇಶಕ ಅರ್ಜುನ್ ಮತ್ತು ದರ್ಶನ್ ಸಹೋದರನ ನಡುವೆ ಚಿತ್ರದ ಕಥೆಯ ವಿಚಾರದಲ್ಲಿ ಸಣ್ಣಮಟ್ಟಿನ ಜಗಳವಾಗಿದೆ.

ದಿನಕರ್ ಚಿತ್ರದ ಕಥೆಯನ್ನು ನಿರ್ದೇಶಕ ಅರ್ಜುನ್ ಬಳಿ ಕೇಳಿದ್ದರು. ಆದರೆ ಕಥೆ ಹೇಳಲು ಅರ್ಜುನ್ ನಿರಾಕರಿಸಿದ್ದಾರೆ. ಇದರಿಂದ ದರ್ಶನ್ ಈ ಚಿತ್ರದಿಂದ ಹಿಂದೆ ಸರಿಯಲಿದ್ದಾರೆಂದು ಸುದ್ದಿ ಹರಡಿತ್ತು.

ಈ ಬಗ್ಗೆ ದರ್ಶನ್ ಮತ್ತು ಅರ್ಜುನ್ ಇಬ್ಬರೂ ಸ್ಪಷ್ಟನೆ ನೀಡಿದ್ದಾರೆ.

ದರ್ಶನ್ ಹೇಳಿದ್ದೇನು?

ಈ ಬಗ್ಗೆ ಪ್ರಕಟವಾದ ಸುದ್ದಿಗೆ ತಲೆಬುಡವಿಲ್ಲ. ಐರಾವತ ಚಿತ್ರ ನಿಗದಿಯಂತೆ ಸೆಟ್ಟೇರಲಿದೆ. ಈ ರೀತಿ ಸುದ್ದಿ ಹೇಗೆ ಹರಡಿತು ಎಂದು ನನಗೆ ಆಶ್ಚರ್ಯವಾಗಿದೆ. ಇದೊಂದು ಕಂಪ್ಲೀಟ್ ಸುಳ್ಳುಸುದ್ದಿ.

ಜುಲೈನಲ್ಲಿ ಸೆಟ್ಟೇರಲಿದೆ

ಅಂಬರೀಶ ಚಿತ್ರದ ಚಿತ್ರೀಕರಣ ಫೈನಲ್ ಹಂತ ತಲುಪಿದೆ. ಇದಾದ ಮೇಲೆ ಐರಾವತ ಚಿತ್ರ ಸೆಟ್ಟೇರುತ್ತದೆ, ಎಲ್ಲಾ ಅಂದು ಕೊಂಡಂತಾದರೆ ಬರುವ ಜುಲೈ ಮೂರನೇ ಅಥವಾ ನಾಲ್ಕನೇ ವಾರದಲ್ಲಿ ಚಿತ್ರೀಕರಣ ಆರಂಭವಾಗಲಿದೆ.

ನಿರ್ದೇಶಕರ ಬಗ್ಗೆ

ಎ ಪಿ ಅರ್ಜುನ್ ಒಬ್ಬ ಪ್ರತಿಭಾನ್ವಿತ ನಿರ್ದೇಶಕ. ಅವರ ಹಿಂದಿನ ಚಿತ್ರಗಳನ್ನು ನೋಡಿದ್ದೇನೆ. ಅವರು ನನ್ನ ಬಳಿ ಬಂದು ಕಥೆ ಹೇಳಿದಾಗ ಸಂತೋಷದಿಂದ ಒಪ್ಪಿ ಕಾಲ್ ಶೀಟ್ ಕೊಟ್ಟಿದ್ದೇನೆ. ಅರ್ಜುನ್ ಮತ್ತು ದಿನಕರ ನಡುವೆ ಮನಸ್ತಾಪ ಎನ್ನುವ ಸುದ್ದಿಗೆ ತಲೆಬುಡವಿಲ್ಲ.

ನಿರ್ದೇಶಕ ಅರ್ಜುನ್ ಹೇಳಿದ್ದೇನು?

ನನ್ನ ಮತ್ತು ದಿನಕರ್ ನಡುವೆ ಕಥೆಯ ವಿಚಾರದಲ್ಲಿ ಸುಳ್ಳು ಸುದ್ದಿ ಹೇಗೆ ಹರಡಿತೋ ನನಗೆ ಗೊತ್ತಿಲ್ಲ. ದಿನಕರ್ ನನ್ನಲ್ಲಿ ಕಥೆ ಕೇಳಲು ಬಂದಿಲ್ಲ. ಕೇಳಿದರೆ ಖಂಡಿತಾ ಹೇಳುತ್ತೇನೆ. ಐರಾವತ ಒಳ್ಳೆ ಕಥೆಯನ್ನು ಹೊಂದಿದೆ. ಚಿತ್ರದಲ್ಲಿ ನಟಿಸಲು ಒಪ್ಪಿದ್ದಕ್ಕೆ ನಾನು ದರ್ಶನ್ ಅವರಿಗೆ ಆಭಾರಿಯಾಗಿದ್ದೇನೆ.

ಪ್ರಕಾಶ್ ರೈ

ಸಂದೇಶ್ ನಾಗರಾಜ್ ನಿರ್ಮಿಸುತ್ತಿರುವ ಚಿತ್ರದಲ್ಲಿ ತೆಲುಗು, ತಮಿಳು ಚಿತ್ರಗಳಲ್ಲಿ ಖಳನಟನಾಗಿ ಮಿಂಚಿದ ಕನ್ನಡದ ಪ್ರತಿಭೆ ಪ್ರಕಾಶ್ ರೈ ನಟಿಸುತ್ತಿದ್ದಾರೆ. ಪರಭಾಷಾ ಚಿತ್ರಗಳಲ್ಲಿ ತಮ್ಮದೇ ಆದಂತಹ ಛಾಪು ಮೂಡಿಸಿದ ಪ್ರಕಾಶ್ ರೈ ಇದೀಗ ಕನ್ನಡದಲ್ಲಿ ಖಳನಟನಾಗಿ ತಮ್ಮ ಪ್ರತಿಭೆ ಪ್ರದರ್ಶಿಸಲು ಹೊರಟಿದ್ದಾರೆ.

English summary
Challenging Star Darshan rubbishes rumours about Airavatha Movie.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada