For Quick Alerts
  ALLOW NOTIFICATIONS  
  For Daily Alerts

  'ಮಿಸ್ಟರ್ ಐರಾವತ' ಡಬ್ಬಿಂಗ್ ಮುಗಿಸಿದ ಮಾ.ವಿನೀಶ್

  By Suneetha
  |

  ಸ್ಯಾಂಡಲ್ ವುಡ್ ಬಾಕ್ಸಾಫೀಸ್ ಸುಲ್ತಾನ ದರ್ಶನ್ ಅವರ ಈ ವರ್ಷದ ಬಹು ನಿರೀಕ್ಷಿತ ಚಿತ್ರ 'ಮಿಸ್ಟರ್ ಐರಾವತ' ರಿಲೀಸ್ ಗೆ ತಯಾರಾಗಿದ್ದು, ವಿಶೇಷವಾಗಿ ಈ ಚಿತ್ರದಲ್ಲಿ ದರ್ಶನ್ ತೂಗುದೀಪ್ ಅವರ ಮುದ್ದಿನ ಮಗ ವಿನೀಶ್ ತೂಗುದೀಪ್ ಅವರು ಕಾಣಿಸಿಕೊಂಡಿದ್ದಾರೆ.

  ಹೌದು ಚಾಲೆಂಜಿಂಗ್ ಸ್ಟಾರ್ ಪುತ್ರ ಮರಿ ದರ್ಶನ್ ವಿನೀಶ್ ತೂಗುದೀಪ್ ಅವರು 'ಮಿಸ್ಟರ್ ಐರಾವತ' ಚಿತ್ರದಲ್ಲಿ ಮಿಂಚಿದ್ದು, ಇದೀಗ ಲಿಟಲ್ ಚಾಂಪ್ ವಿನೀಶ್ ಅವರು ತಮ್ಮ ಪಾತ್ರದ ಡಬ್ಬಿಂಗ್ ಮುಗಿಸಿಕೊಟ್ಟಿದ್ದಾರೆ ಎಂದು ಚಿತ್ರದ ನಿರ್ದೇಶಕ ಎ.ಪಿ ಅರ್ಜುನ್ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡುವ ಮೂಲಕ ದರ್ಶನ್ ಅಭಿಮಾನಿಗಳಿಗೆ ತಿಳಿಸಿದ್ದಾರೆ.

  ಗಾಂಧಿನಗರದಲ್ಲಿರುವ ದರ್ಶನ್ ಅಭಿಮಾನಿಗಳು ಭಾರಿ ನಿರೀಕ್ಷೆಯಿಂದ ಕಾಯುತ್ತಿರುವ ಭರ್ಜರಿ ಆಕ್ಷನ್ ಜೊತೆಗೆ ಫೈಟ್ ಸೀನ್ ಇರುವ 'ಮಿಸ್ಟರ್ ಐರಾವತ' ಆಕ್ಟೋಬರ್ 1 ರಂದು ಗ್ರ್ಯಾಂಡ್ ಆಗಿ ತೆರೆ ಕಾಣುತ್ತಿದೆ.

  ತುಂಬಾ ದಿನಗಳ ನಂತರ ಬಾಕ್ಸಾಫೀಸ್ ಸುಲ್ತಾನ ದರ್ಶನ್ ಅವರ ಬಹು ನಿರೀಕ್ಷೆಯ ಚಿತ್ರವೊಂದು ತೆರೆ ಮೇಲೆ ಬರುತ್ತಿದ್ದು, ಪ್ರೇಕ್ಷಕರು, ಅಭಿಮಾನಿಗಳು ಸೇರಿದಂತೆ ಸ್ವತಃ ದರ್ಶನ್ ಅವರೇ ಭಾರಿ ಕುತೂಹಲ ಇಟ್ಟುಕೊಂಡಿದ್ದಾರೆ.

  ಈ ಚಿತ್ರದಲ್ಲಿ ಇದೇ ಮೊದಲ ಬಾರಿಗೆ ಬಾಲಿವುಡ್ ನಟಿ ಊರ್ವಶಿ ರೌಟೇಲ ದರ್ಶನ್ ಜೊತೆ ರೋಮ್ಯಾನ್ಸ್ ಮಾಡಿದ್ದಾರೆ. ಬ್ಲಾಕ್ ಬಸ್ಟರ್ ಹಿಟ್ ಚಿತ್ರಗಳಾದ 'ಅಂಬಾರಿ', 'ಅದ್ದೂರಿ', ಹಾಗೂ 'ರಾಟೆ'ಯ ನಿರ್ದೇಶಕ ಎ.ಪಿ ಅರ್ಜುನ್ ಅವರ ನಿರ್ದೇಶನದಲ್ಲಿ ಮತ್ತೊಂದು ಹಿಟ್ ಚಿತ್ರ 'ಮಿಸ್ಟರ್ ಐರಾವತ' ಅಗುತ್ತ ಅನ್ನೊದನ್ನ ಚಿತ್ರ ತೆರೆ ಕಂಡ ಮೇಲೆ ನೋಡಬೇಕಿದೆ.

  ಅಂದಹಾಗೆ ಬಾಲಿವುಡ್ ತಾರೆ ಊರ್ವಶಿ ರೌಟೇಲ ಹಾಗೂ ದರ್ಶನ್ ಅವರ ಕೆಮಿಸ್ಟ್ರಿ ತೆರೆ ಮೇಲೆ ಸಖತ್ತಾಗಿ ವರ್ಕೌಟ್ ಆಗಿದೆ. ಇನ್ನುಳಿದಂತೆ ಬಹುಭಾಷಾ ನಟ ಪ್ರಕಾಶ್ ರೈ ನೆಗೆಟಿವ್ ರೋಲ್ ನಲ್ಲಿ ಮಿಂಚಿದ್ದು, ಅಭಿಮಾನಿಗಳಂತೂ ದರ್ಶನ್ ಹಾಗೂ ಪ್ರಕಾಶ್ ರೈ ಅವರು ಕದನ ನೋಡಲು ಕಾತರದಿಂದ ಕಾಯುತ್ತಿದ್ದಾರೆ.

  ಅದೇನೇ ಇರಲಿ ಒಟ್ನಲ್ಲಿ ಎಲ್ಲರ ನಿರೀಕ್ಷೆಯಂತೆ ಬಹು ನಿರೀಕ್ಷೆಯ ಚಿತ್ರ ಅಕ್ಟೋಬರ್ 1 ರಂದು ತೆರೆ ಮೇಲೆ ಅಪ್ಪಳಿಸಲಿದ್ದು, ಅಭಿಮಾನಿಗಳ ಕುತೂಹಲ ಹಾಗೂ ಪ್ರಶ್ನೆಗೂ ಅಂದೇ ಉತ್ತರ ದೊರೆಯಲಿದೆ. ಜೊತೆಗೆ ಕಿಚ್ಚ ಸುದೀಪ್ ಅವರ ತಮಿಳು ಚಿತ್ರ 'ಪುಲಿ' ಕೂಡ ಅಂದೇ ತೆರೆ ಮೇಲೆ ಬರಲಿದ್ದು, ಪ್ರೇಕ್ಷಕರು ಯಾರನ್ನೂ ಗೆಲ್ಲಿಸುತ್ತಾರೆ ಅನ್ನೋದನ್ನ ಕಾದು ನೋಡಬೇಕು.

  English summary
  Mr Airavata is the most expected and anticipated movie of Challenging Star Darshan. The movie also marks as debut of Darshan's son Vineesh Thoogudeep. According to the latest reports directly from the director Ap Arjun, the little champ Vineesh has completed the dubbing for Mr Airavata. The action entertainer is slated to release on October 1 and team Mr Airavata is gearing up for a grand release.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X