Don't Miss!
- Sports
IND vs NZ 3rd T20: ಶುಭ್ಮನ್ ಗಿಲ್, ಹಾರ್ದಿಕ್ ಪಾಂಡ್ಯ ಮಿಂಚು; ನ್ಯೂಜಿಲೆಂಡ್ ವಿರುದ್ಧ ಸರಣಿ ಗೆದ್ದ ಭಾರತ
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- News
ತಂಬಾಕು ನಿಯಂತ್ರಣಕ್ಕೆ ಮೈಸೂರು ಜಿಲ್ಲಾಧಿಕಾರಿ ತೆಗೆದುಕೊಂಡ ಕ್ರಮಗಳು, ಇಲ್ಲಿದೆ ವಿವರ
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕನ್ನಡ ಸರ್ಕಾರಿ ಶಾಲೆಗಳ ಕಥೆ ಪ್ಯಾನ್ ಇಂಡಿಯಾ ಸಿನಿಮಾ ಹೇಗೆ? 'ಧರಣಿ' ಹಾಡಿನಲ್ಲೇ ಸಿಕ್ತು ಉತ್ತರ!
ಭಾರತೀಯ ಚಿತ್ರರಂಗದಲ್ಲೀಗ ಪ್ಯಾನ್ ಇಂಡಿಯಾ ಸಿನಿಮಾ ಟ್ರೆಂಡ್ ನಡೀತಿದೆ. ದರ್ಶನ್ ನಟನೆಯ 'ಕ್ರಾಂತಿ' ಕೂಡ ಇದೇ ಹಾದಿಯಲ್ಲಿದೆ. ದರ್ಶನ್ ನಾನು ಡಬ್ ಮಾಡಿ ಕೊಡುತ್ತೇನೆ. ಹೊರ ರಾಜ್ಯಕ್ಕೆ ಪ್ರಮೋಷನ್‌ಗೆ ಹೋಗಲ್ಲ. ಕರ್ನಾಟಕ ನನ್ನ ಟೆರಿಟರಿ. ಇಲ್ಲಿನ ಪ್ರೇಕ್ಷಕರಿಗೆ ನಾನು ಸಿನಿಮಾ ಮಾಡೋದು ಎಂದಿದ್ದರು.
'ಕ್ರಾಂತಿ' ಸಿನಿಮಾ ಗಾನ ಬಜಾನಾ ಶುರುವಾಗಿದೆ. ಮೈಸೂರಿನಲ್ಲಿ ಚಿತ್ರದ ಮೊದಲ ಹಾಡನ್ನು ಚಿತ್ರತಂಡ ಅದ್ಧೂರಿಯಾಗಿ ಬಿಡುಗಡೆ ಮಾಡಿದೆ. ವಿ. ಹರಿಕೃಷ್ಣ ಸಂಗೀತ, ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯದ ಹಾಡು ಅಭಿಮಾನಿಗಳ ಮನಗೆದ್ದಿದೆ. ಅಚ್ಚ ಕನ್ನಡದ ಪದಗಳನ್ನು ಪೋಣಿಸಿ ಕನ್ನಡ ಭಾಷೆ ಹಾಗೂ ಕರ್ನಾಟಕದ ಹಿರಿಮೆ ಗರಿಮೆಯನ್ನು ಹಾಡಿನಲ್ಲಿ ಸಾರಿ ಹೇಳಿದ್ದಾರೆ. ಕನ್ನಡ ಮಾತ್ರವಲ್ಲದೇ ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲೂ ಹಾಡು ಬಿಡುಗಡೆಯಾಗಿದೆ. ಹಾಡು ಲಕ್ಷ ಲಕ್ಷ ವೀವ್ಸ್ ಸಾಧಿಸಿ ಸದ್ದು ಮಾಡ್ತಿದೆ.
ಅಪ್ಪು
ನೆಚ್ಚಿನ
ಊರಿನಲ್ಲಿ
ಈ
ದಿನಾಂಕದಂದು
'ಕ್ರಾಂತಿ'
2ನೇ
ಹಾಡು
ಬಿಡುಗಡೆ;
ದರ್ಶನ್ರಿಂದ
ಅಧಿಕೃತ
ಘೋಷಣೆ
'ಕ್ರಾಂತಿ' ಚಿತ್ರವನ್ನ ಘೋಷಿಸಿದಾಗಲೇ ಪ್ಯಾನ್ ಇಂಡಿಯಾ ಸಿನಿಮಾ ಎಂದು ಚಿತ್ರತಂಡ ಹೇಳಿತ್ತು. ನಂತರ ಇದು ಅಕ್ಷರ 'ಕ್ರಾಂತಿ' ಕಥೆ. ಅಂದರೆ ಕನ್ನಡ ಸರ್ಕಾರಿ ಶಾಲೆಗಳ ಕಥೆ ಅನ್ನುವುದು ಗೊತ್ತಾಗಿತ್ತು. ಹಾಗಾದರೆ ಈ ಕಥೆ ಪ್ಯಾನ್ ಇಂಡಿಯಾಗೆ ಹೇಗೆ ರೀಚ್ ಆಗುತ್ತದೆ. ಬೇರೆ ಭಾಷೆಗಳಲ್ಲಿ ಅಲ್ಲಿನ ನೆಟಿವಿಟಿಗೆ ಹೊಂದಿಕೊಳ್ಳುತ್ತಾ? ನಿಜಕ್ಕೂ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಾ? ಎನ್ನುವ ಗೊಂದಲ ಶುರುವಾಗಿತ್ತು. ಅದಕ್ಕೆಲ್ಲಾ ಈಗ ಬ್ರೇಕ್ ಬಿದ್ದಿದೆ.

ಕನ್ನಡ ಶಾಲೆ ಕಥೆ ಎಲ್ಲಾ ಕಡೆ
ರೀಮೆಕ್ ಸಿನಿಮಾ, ಡಬ್ ಸಿನಿಮಾ ಅಂದಾಕ್ಷಣ ಅಲ್ಲಿನ ನೆಟಿವಿಟಿಗೆ ತಕ್ಕಂತೆ ಒಂದಷ್ಟು ಬದಲಾವಣೆ ಮಾಡುತ್ತಾರೆ. ಇಲ್ಲಿದ್ದ ಊರಿನ ಹೆಸರುಗಳನ್ನು ಅಲ್ಲಿನ ಊರಿನ ಹೆಸರಾಗಿ ಬದಲಿಸುವುದು. ಕನ್ನಡ ನಾಮ ಫಲಕ ಇದ್ದರೆ ಅದನ್ನು ಆಯಾ ಭಾಷೆಗೆ ಗ್ರಾಫಿಕ್ಸ್‌ನಲ್ಲಿ ಬದಲಾಯಿಸುವುದು ಮಾಡುತ್ತಾರೆ. ಆದರೆ ಇತ್ತೀಚಿಗೆ ಅದು ಕಮ್ಮಿ ಆಗಿದೆ. ಬಲವಂತವಾಗಿ ಪ್ರೇಕ್ಷಕರನ್ನು ಒಪ್ಪಿಸುವ ಕೆಲಸ ಮಾಡುತ್ತಿಲ್ಲ. 'ಕ್ರಾಂತಿ' ಚಿತ್ರದ ವಿಚಾರದಲ್ಲೂ ಅದೇ ಆಗುತ್ತಿದೆ. ಕನ್ನಡ ಶಾಲೆಗಳ ಸಮಸ್ಯೆಯ ಕಥೆಯೇ ಎಲ್ಲಾ ಭಾಷೆಗೂ ಹೋಗುತ್ತಿದೆ.

'ಕ್ರಾಂತಿ' ಒನ್‌ಲೈನ್ ಸ್ಟೋರಿ?
ಸರ್ಕಾರಿ ಕನ್ನಡ ಶಾಲೆಗಳ ಸ್ಥಿತಿಗತಿ ಬಗ್ಗೆ 'ಕ್ರಾಂತಿ' ಚಿತ್ರದಲ್ಲಿ ಚರ್ಚಿಸಲಾಗುತ್ತಿದೆ. ಇನ್ನು ಚಿತ್ರದ ಒನ್ ಲೈನ್ ಸ್ಟೋರಿ ಏನು ಎನ್ನುವುದನ್ನು ಇತ್ತೀಚೆಗೆ ದರ್ಶನ್ ಹೇಳಿದ್ದಾರೆ. ಸರ್ಕಾರಿ ಕನ್ನಡ ಶಾಲೆಯಲ್ಲಿ ಓದಿದ ವಿದ್ಯಾರ್ಥಿ ಒಬ್ಬ ಅಂತರಾಷ್ಟ್ರಿಯಮಟ್ಟದಲ್ಲಿ ಸಾಧನೆ ಮಾಡಿ ಬರುತ್ತಾನೆ. ತೀರ ಇಲ್ಲಿ ಬಂದು ನೋಡಿದರೆ ತನ್ನ ಸಾಧನೆಗೆ ಬುನಾದಿ ಹಾಕಿದ ಶಾಲೆಯ ಸ್ಥಿತಿ ಕಂಡು ಮರುಗುವಂತಾಗುತ್ತದೆ. ಮುಂದೆ ಆತ ತನ್ನ ಶಾಲೆಯ ಜೊತೆಗೆ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳನ್ನು ಚೆಂದಗಾಣಿಸಲು ಏನೆಲ್ಲಾ ಮಾಡುತ್ತಾನೆ ಎನ್ನುವುದು ಸಿನಿಮಾ ಕಥೆ.

ದುರ್ಗಾ ತಾಲೂಕಿನ ವಿದ್ಯಾಮಂದಿರ ಕಥೆ
'ಕಾಂತ್ರಿ' ಸಿನಿಮಾ ಕಥೆ ದುರ್ಗಾ ತಾಲೂಕಿನ ಪೇಟೆ ಬೀದಿ ಸಂಪಿಗೆ ರಸ್ತೆಯ ವಿದ್ಯಾಮಂದಿರ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಸುತ್ತಾ ಸುತ್ತುತ್ತದೆ. ಬೇರೆ ಭಾಷೆಗಳಲ್ಲೂ ಕೂಡ ಇದೇ ರೀತಿ ಕಥೆ ಆಗಲಿದೆ. ಯಾಕಂದರೆ ಇದು ಕನ್ನಡ ಸರ್ಕಾರಿ ಶಾಲೆಗಳ ಕಥೆ. ಹಾಗಾಗಿ ಅದನ್ನೇ ಎಲ್ಲಾ ಭಾಷೆಗಳಲ್ಲೂ ಹೇಳುವ ಪ್ರಯತ್ನ ಮಾಡಲಾಗುತ್ತದೆ. ನೆಟಿವಿಟಿ ಕಾರಣಕ್ಕೆ ತಮಿಳು ಶಾಲೆ, ಹಿಂದಿ ಶಾಲೆ ಎಂದ ಬದಲಾಯಿಸುವ ಗೋಜಿಗೆ ಹೋಗುತ್ತಿಲ್ಲ. ಇದನ್ನು ಬೇರೆ ಭಾಷೆಗಳಲ್ಲಿ ಬಿಡುಗಡೆ ಆಗಿರುವ ಮೊದಲ ಹಾಡಿನಲ್ಲಿ ಗಮನಿಸಬಹುದು.

'ಧರಣಿ' ಹಾಡಿಗೆ ಅದ್ಭುತ ಪ್ರತಿಕ್ರಿಯೆ
ಚಿತ್ರದ ಮೊದಲ ಹಾಡು ಬಿಡುಗಡೆಯಾಗಿ ಸಖತ್ ಸದ್ದು ಮಾಡುತ್ತಿದೆ. ಚಿತ್ರದ ಥೀಮ್‌ಗೆ ತಕ್ಕಂತೆ ಹಾಡನ್ನು ಕಟ್ಟಿಕೊಡಲಾಗಿದೆ. ರಚಿತಾ ರಾಮ್, ರವಿಚಂದ್ರನ್, ಅಚ್ಯುತ್‌ಕುಮಾರ್ ಲುಕ್ ಹೇಗಿರುತ್ತದೆ ಎನ್ನುವುದನ್ನು ನೋಡಬಹುದು. ಅಚ್ಚ ಕನ್ನಡದ ಸಾಹಿತ್ಯ ಗಮನ ಸೆಳೆಯುತ್ತಿದೆ. ತೆಲುಗು ಹಾಡಿನ ಸಾಹಿತ್ಯ ಬಗ್ಗೆಯೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಡಬ್ಬಿಂಗ್ ಗುಣಮಟ್ಟ ಕೂಡ ಬಹಳ ಚೆನ್ನಾಗಿರುವಂತೆ ಕಾಣುತ್ತಿದೆ.

ಜನವರಿ 26ಕ್ಕೆ ದರ್ಶನ್ 'ಕ್ರಾಂತಿ'
'ರಾಬರ್ಟ್' ಸಕ್ಸಸ್ ನಂತರ 'ಕ್ರಾಂತಿ' ಸಿನಿಮಾ ಬಗ್ಗೆ ಭಾರೀ ನಿರೀಕ್ಷೆ ಇದೆ. ಎಲ್ಲಾ ಕಮರ್ಷಿಯಲ್ ಅಂಶಗಳನ್ನು ಬೆರಸಿ ಈ ಮಾಸ್ ಎಂಟರ್‌ಟೈನರ್ ಸಿನಿಮಾ ಕಟ್ಟಿಕೊಡಲಾಗಿದೆ. ಚಿತ್ರದಲ್ಲಿ ಒಂದು ಒಳ್ಳೆ ಸಂದೇಶ ಕೂಡ ಇದೆ. ಜನವರಿ 26ಕ್ಕೆ ಸಿನಿಮಾ 5 ಭಾಷೆಗಳಲ್ಲಿ ಏಕಕಾಲಕ್ಕೆ ವಿಶ್ವದಾದ್ಯಂತ ತೆರೆಗಪ್ಪಳಿಸಲಿದೆ.