»   » 'ಬುಗುರಿ' ಗೆ 'ಚಾಲೆಂಜಿಂಗ್ ಸ್ಟಾರ್' ದರ್ಶನ್ ವಾಯ್ಸ್

'ಬುಗುರಿ' ಗೆ 'ಚಾಲೆಂಜಿಂಗ್ ಸ್ಟಾರ್' ದರ್ಶನ್ ವಾಯ್ಸ್

Posted By:
Subscribe to Filmibeat Kannada

ಇತ್ತೀಚೆಗೆ ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬದ ದಿನ ಅವರ 25ನೇ ಚಿತ್ರ 'ಬುಗುರಿ' ಟ್ರೈಲರ್ ಹಾಗೂ ಆಡಿಯೋ ರಿಲೀಸ್ ಆಗಿತ್ತು. ಈಗಾಗಲೇ ಶೂಟಿಂಗ್ ಪ್ರಾರಂಭ ಮಾಡಿರುವ 'ಬುಗುರಿ' ಚಿತ್ರಕ್ಕೆ 'ಚಾಲೆಂಜಿಂಗ್ ಸ್ಟಾರ್' ದರ್ಶನ್ ವಾಯ್ಸ್ ಕೊಡುತ್ತಾರಂತೆ.

ಈಗಾಗಲೇ ಬಿಡುಗಡೆಯಾಗಿರುವ 'ಬುಗುರಿ' ಚಿತ್ರದ ಟ್ರೈಲರ್ ಹಾಗೂ ಹಾಡುಗಳು ಸಖತ್ ರೆಸ್ಪಾನ್ಸ್ ಪಡೆದುಕೊಳ್ಳುತ್ತಿವೆ. 'ಪ್ರೀತಿಯ ಸುತ್ತಾ' ಎನ್ನುವ ಅಡಿಬರಹ ಇರುವ 'ಬುಗುರಿ' ಚಿತ್ರದಲ್ಲಿ ಗಣೇಶ್ ಇಬ್ಬರು ನಾಯಕಿಯರ ಜೊತೆ ಡ್ಯುಯೆಟ್ ಹಾಡಿದ್ದಾರೆ.[ಗಣೇಶ್ ಬರ್ತಡೆಗೆ 'ಬುಗುರಿ' ಟ್ರೈಲರ್ ಗಿಫ್ಟ್]

darshan

ಇದೀಗ ಚಿತ್ರದ ನಿರ್ದೇಶಕ ಎಂ.ಡಿ.ಶ್ರೀಧರ್ ಅವರು ಬಾಕ್ಸ್ ಆಫೀಸ್ ಸುಲ್ತಾನ ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಬುಗುರಿ' ಚಿತ್ರಕ್ಕೆ ವಾಯ್ಸ್ ಕೊಡೋದು ಪಕ್ಕಾ ಎಂದಿದ್ದಾರೆ. ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಗೆಳೆಯನ ಪಾತ್ರ ಮಾಡಿರುವವನಿಗೆ, ದರ್ಶನ್ 2 ನಿಮಿಷಗಳ ಕಾಲ ವಾಯ್ಸ್ ನೀಡಿದ್ದಾರೆ.

ಇದು ಸ್ಟಾರ್-ವಾರ್ ಅಂತಾ ಬಾಯಿ-ಬಾಯಿ ಬಡ್ಕೊಳ್ಳುವವರಿಗೆ ಸಿಹಿ ಸುದ್ದಿಯಾಗಿದೆ. ಏನೇ ಆಗಲಿ ಚಿತ್ರರಂಗದ ಎಲ್ಲಾ ನಟ-ನಟಿಯರು ಒಬ್ಬರಿಗೊಬ್ಬರು ಸಹಾಯ ಮಾಡಿಕೊಂಡರೆ ನಮ್ಮ ಕನ್ನಡ ಇಂಡಸ್ಟಿಗೆ ಒಳ್ಳೆಯದಲ್ವಾ.

ganesh

ಗಣೇಶ್ ಹಿಟ್ ಚಿತ್ರಗಳಾದ 'ಚೆಲ್ಲಾಟ' ಮತ್ತು 'ಕೃಷ್ಣ' ಚಿತ್ರಕ್ಕೆ ನಿರ್ದೇಶನ ಮಾಡಿದ್ದ ಎಂ.ಡಿ ಶ್ರೀಧರ್ 'ಬುಗುರಿ' ಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ್ದಾರೆ. ಸ್ಯಾಂಡಲ್ ವುಡ್ ಗೆ ಮೊದಲನೇ ಬಾರಿಗೆ ಕಾಲಿಡುತ್ತಿರುವ ರೀಚಾ ಪನೈ ಮತ್ತು 'ನಿನ್ನಿಂದಲೇ' ಖ್ಯಾತಿಯ ಎರಿಕಾ ಪೆರ್ನಾಂಡೀಸ್ ಗಣೇಶ್ ಜೊತೆ ರೊಮ್ಯಾನ್ಸ್ ಮಾಡುತ್ತಿದ್ದಾರೆ.

English summary
Challenging Star's Voice over for Kannada Movie 'Buguri'. The movie features Kannada actor Ganesh, Kannada Actress Erica fernandes, Richa Panai in the lead role, The movie is directed by M.D.Sridhar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada