Don't Miss!
- News
Chennai-Bengaluru Expressway: ₹16,000 ಕೋಟಿ ಯೋಜನೆಯಲ್ಲಿ ಶೇ.15 ಕಾಮಗಾರಿ ಪೂರ್ಣ- ಎಲ್ಲಿಂದ ಎಲ್ಲಿಯವರಿಗೆ? ಇಲ್ಲಿದೆ ಮಾಹಿತಿ
- Automobiles
ಹೊಸ ಸಿಯೆರಾ ಕಾರಿನ ವಿನ್ಯಾಸದ ಹಿಂದೆ ಇದೆ ರತನ್ ಟಾಟಾ ಐಡಿಯಾ
- Technology
ನೀವು ದಿನವೂ ಬಳಸುವ ಗೂಗಲ್ನ ಈ ಆಪ್ಗಳಲ್ಲಿ ಎಐ ಹೇಗೆ ಕೆಲಸ ಮಾಡಲಿದೆ!?; ಇಲ್ಲಿದೆ ವಿವರ
- Sports
U-19 Women's T20 World Cup 2023: ನ್ಯೂಜಿಲೆಂಡ್ ಮಣಿಸಿ ಫೈನಲ್ಗೆ ಲಗ್ಗೆ ಇಟ್ಟ ಭಾರತ ವನಿತೆಯರು
- Finance
PM kisan: ಬಜೆಟ್ನಲ್ಲಿ ಪಿಎಂ ಕಿಸಾನ್ ಯೋಜನೆ ಮೊತ್ತ ಏರಿಸಲಾಗುತ್ತಾ?
- Lifestyle
ತೂಕ ಇಳಿಕೆಗೆ ಟ್ರೈ ಮಾಡುತ್ತಿದ್ದೀರಾ? ಈ ಪಾನೀಯಗಳನ್ನು ನಿಮ್ಮ ತೂಕ ಇಳಿಕೆಯ ಡಯಟ್ನಲ್ಲಿ ಸೇರಿಸಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಚಂದನ್-ಕವಿತಾ ನಡುವೆ ಸ್ನೇಹನಾ-ಪ್ರೀತಿನಾ: ಅಭಿಮಾನಿಗಳ ಕುತೂಹಲಕ್ಕೆ ಈ ಫೋಟೋಗಳೇ ಕಾರಣ!
'ಲಕ್ಷ್ಮಿ ಬಾರಮ್ಮ' ಖ್ಯಾತಿಯ ಚಂದನ್ ಕುಮಾರ್ ಮತ್ತು ಕವಿತಾ ಗೌಡ ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸುದ್ದಿಯಲ್ಲಿದ್ದಾರೆ. ಇವರಿಬ್ಬರ ಆತ್ಮೀಯತೆ, ಸ್ನೇಹ, ಬಾಂಧವ್ಯ ನೋಡುತ್ತಿದ್ದರು 'ಇದು ಮೇಡ್ ಫಾರ್ ಈಚ್ ಅದರ್'' ಎನ್ನುವಂತಿದೆ. ಕಳೆದ ಒಂದು ತಿಂಗಳಲ್ಲಿ ಚಂದನ್ ಹಂಚಿಕೊಂಡಿರುವ ಫೋಟೋಗಳು ಭಾರಿ ಕುತೂಹಲಕ್ಕೆ ಕಾರಣವಾಗಿದೆ.
Recommended Video
ಇದು 'ಸ್ನೇಹನಾ ಅಥವಾ ಪ್ರೀತಿನಾ' ಎಂದು ಕೇಳುತ್ತಿದ್ದಾರೆ. ಇನ್ನು ಕೆಲವರು 'ಇಬ್ಬರು ಒಳ್ಳೆಯ ಜೋಡಿ ಮದುವೆಯಾಗಿ' ಎಂದು ಸಲಹೆ ನೀಡುತ್ತಿದ್ದಾರೆ. ವರ್ಷಗಳ ಹಿಂದೆಯಿಂದಲೂ ಚಂದನ್ ಮತ್ತು ಕವಿತಾ ಸ್ನೇಹಿತರು. ಒಟ್ಟಿಗೆ ಧಾರಾವಾಹಿ ಆರಂಭಿಸಿದ್ದರು. ಆದರೆ, ಇತ್ತೀಚಿನ ಕೆಲವು ಘಟನೆಗಳು ಇವರಿಬ್ಬರ ಬಗ್ಗೆ ಕುತೂಹಲ ಮೂಡಿಸುವಂತೆ ಮಾಡಿದೆ. ಏನದು? ಮುಂದೆ ಓದಿ...

ಕವಿತಾ ಬರ್ತಡೇಗೆ ಸರ್ಪ್ರೈಸ್ ಕೊಟ್ಟ ಚಂದನ್
ಕವಿತಾ ಗೌಡ ಅವರು ಜುಲೈ 26ರಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಆ ದಿನ ಕವಿತಾ ಮನೆಗೆ ಭೇಟಿ ನೀಡಿದ್ದ ಚಂದನ್, ಕವಿತಾಗೆ ಸರ್ಪ್ರೈಸ್ ಕೊಟ್ಟಿದ್ದರು. ಜೊತೆಗೆ ಬರ್ತಡೇ ಉಡುಗೊರೆ ಸಹ ನೀಡಿದ್ದರು. ಅಲ್ಲಿಂದ ನಿರಂತರವಾಗಿ ಕವಿತಾ ಮತ್ತು ಚಂದನ್ ಫೋಟೋಗಳು ಇನ್ಸ್ಟಾಗ್ರಾಂನಲ್ಲಿ ಹೆಚ್ಚು ಸಕ್ರಿಯವಾಗಿದೆ.
ಶಿವಗಂಗೆ
ತೀರ್ಥ
ಕಂಬದ
ಬಳಿ
ಶೂ
ಧರಿಸಿ
ನಿಂತ
ನಟ
ಚಂದನ್-ಕವಿತಾ:
ನೆಟ್ಟಿಗರ
ಆಕ್ರೋಶ

ಶಿವಗಂಗೆಯಲ್ಲಿ ಚಂದನ್-ಕವಿತಾ
ಬರ್ತಡೇ ಆದ ಬಳಿಕ ಶಿವಗಂಗೆಯಲ್ಲಿ ಚಂದನ್ ಮತ್ತು ಕವಿತಾ ಜೋಡಿ ಕಾಣಿಸಿಕೊಂಡಿದೆ. ನೇಹಾಗೌಡ, ಕವಿತಾ ಗೌಡ, ಚಂದನ್ ಹಾಗೂ ಇನ್ನಿತರ ಸ್ನೇಹಿತರೆಲ್ಲರೂ ಶಿವಗಂಗೆಗೆ ಪ್ರವಾಸ ಹೋಗಿದ್ದಾರೆ. ಈ ಟ್ರಿಪ್‌ನಲ್ಲೂ ಈ ಜೋಡಿ ಗಮನ ಸೆಳೆದಿದೆ.

ಆಗಸ್ಟ್ 15 ಸಂಭ್ರಮ
ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ಸಹ ಕವಿತಾ ಜೊತೆಯಲ್ಲಿ ಚಂದನ್ ಆಚರಿಸಿದ್ದಾರೆ. ಆ ದಿನವೂ ಇಬ್ಬರು ಒಟ್ಟಿಗೆ ಇರುವ ಫೋಟೋವನ್ನು ಚಂದನ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ಮದುವೆ
ಆಗ್ಬಿಟ್ರಾ
ಚಂದನ್.!
ಫೋಟೋ
ನೋಡಿ
ಫುಲ್
ಕನ್ಫ್ಯೂಷನ್

ಏರ್‌ಪೋರ್ಟ್‌ಗೆ ಡ್ರಾಪ್ ಮಾಡಿದ ಕವಿತಾ
ಅದಾದ ಬಳಿಕ, ಚಂದನ್ ಅವರನ್ನು ಏರ್‌ಪೋರ್ಟ್‌ವರೆಗೂ ಡ್ರಾಪ್ ಮಾಡಲು ಕವಿತಾ ಗೌಡ ತೆರಳಿದ್ದರು. ಈ ಪೋಸ್ಟ್ ಸಹ ಚಂದನ್ ಹಂಚಿಕೊಂಡು, 'ಕವಿತಾ ನಿನಗೆ ಹೊಸ ಕೆಲಸಕ್ಕೆ ಆಫರ್ ಇದೆ' ಎಂದು ಕ್ಯಾಪ್ಷನ್ ಹಾಕಿದ್ದರು. ಈ ಫೋಟೋ ಸಹ ಹೆಚ್ಚು ಚರ್ಚೆಯಾಗಿದೆ.

ಟ್ರೆಕ್ಕಿಂಗ್ ಫೋಟೋ
ನಾಲ್ಕು ದಿನಗಳ ಹಿಂದೆಯಷ್ಟೇ ಕವಿತಾ ಜೊತೆ ಟ್ರೆಕ್ಕಿಂಗ್ ಹೋಗಿದ್ದ ಫೋಟೋವನ್ನು ಚಂದನ್ ಹಂಚಿಕೊಂಡಿದ್ದರು. ಈ ಫೋಟೋದಲ್ಲಿ ಕವಿತಾ ಎಕ್ಸ್‌ಪ್ರೆಶನ್ ಬಹಳ ಇಂಪ್ರೆಸ್ ಮಾಡಿದೆ. ''ಮುಂದಿನ ಟ್ರೆಕ್ಕಿಂಗ್ ವರೆಗೂ'' ಎಂದು ಕ್ಯಾಪ್ಷನ್ ಹಾಕಿದ್ದರು. ವರ್ಷಗಳಿಂದ ಚಂದನ್ ಇನ್ಸ್ಟಾಗ್ರಾಂನಲ್ಲಿ ಕಾಣದ ಕವಿತಾ ಫೋಟೋಗಳು, ಕಳೆದ ಒಂದು ತಿಂಗಳಲ್ಲಿ ಹೆಚ್ಚು ಪೋಸ್ಟ್ ಆಗಿದೆ. ಇದು ಸಹಜವಾಗಿ ಅಭಿಮಾನಿಗಳ ಕುತೂಹಲ ಕೆರಳಿಸಿದೆ

ಮದುವೆ ಆಗಲು ರೆಡಿಯಾಗಿ
ಚಂದನ್ ಕುಮಾರ್ ಮತ್ತು ಕವಿತಾ ಅವರ ಫೋಟೋಗೆ ಓರ್ವ ವ್ಯಕ್ತಿ ಕಾಮೆಂಟ್ ಮಾಡಿದ್ದು, ''ಸಮಯ ಬರುತ್ತೆ, ಹೋಗುತ್ತೆ....ನೀವು ಬೇಗ ಮದುವೆಯಾಗಲು ರೆಡಿಯಾಗಿ. ಅದ್ಭುತ ಜೋಡಿ' ಎಂದು ಸಲಹೆ ನೀಡಿದ್ದಾರೆ.

ಬರ್ತಡೇ ಆದ್ಮೇಲೆ ಇಷ್ಟೊಂದು ಕ್ಲೋಸ್!
''ಬಹುಶಃ ನಿಮ್ಮ ಸ್ಟೋರಿ ನೋಡಿದರೆ ಲವ್ ಮಾಕ್‌ಟೈಲ್ ಜೋಡಿಯ ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ಅವರಂತೆ ಅನಿಸುತ್ತಿದೆ. ಕವಿತಾ ಅವರ ಹುಟ್ಟುಹಬ್ಬ ಆದ್ಮೇಲೆ ಆತ್ಮೀಯತೆ ಹೆಚ್ಚು ಕಾಣುತ್ತಿದೆ. ಏನಾದರೂ ಸಿಹಿ ಸುದ್ದಿನಾ?'' ಎಂದು ಮತ್ತೋರ್ವ ವ್ಯಕ್ತಿ ಕಾಮೆಂಟ್ ಮಾಡಿದ್ದಾರೆ.

ಮದುವೆ ಅಗಿ ಚಂದನ್!
''ಒಳ್ಳೆಯ ಜೋಡಿ....ಮದುವೆ ಆಗಿ ಚಂದನ್. ಇದು ನಮ್ಮ ಸಲಹೆ'' ಎಂದು ವ್ಯಕ್ತಿಯೊಬ್ಬ ಹೇಳಿದ್ದರೆ, ಮತ್ತೊಬ್ಬ ''ಅಣ್ಣ....ಅತ್ತಿಗೆ'' ಎಂದು ಕಾಮೆಂಟ್ ಮಾಡಿದ್ದಾನೆ.

ನಮ್ಮ ಅತ್ತಿಗೆ ಆಗಬಹುದು
''ಮುಂದೆ ಅತ್ತಿಗೆ ಆಗಬಹುದು ಅನಿಸುತ್ತದೆ...'' ಎಂದು ಅಭಿಮಾನಿಯೊಬ್ಬ ಕಾಮೆಂಟ್ ಮಾಡಿದ್ದರೆ, ಮತ್ತೊಬ್ಬ ವ್ಯಕ್ತಿ ''ಏನೋ ಏನೋ ಆಗಿದೆ...ನಮಗೂ ಗೊತ್ತು ಆಗಿದೆ'' ಎಂದು ಹೇಳಿದ್ದಾರೆ. ಈ ರೀತಿ ಸಾವಿರಾರು ಕಾಮೆಂಟ್‌ಗಳು ಚಂದನ್ ಅವರ ಫೋಟೋಗೆ ಬಂದಿದೆ. ಆದರೆ, ಕೆಲವೊಂದು ಕಾಮೆಂಟ್‌ಗಳನ್ನು ಮಾತ್ರ ಇಲ್ಲಿ ಆಯ್ಕೆ ಮಾಡಲಾಗಿದೆ.