For Quick Alerts
  ALLOW NOTIFICATIONS  
  For Daily Alerts

  ಕಾಲೆಳೆದ ನೆಟ್ಟಿಗನಿಗೆ ಚಂದನ್ ಶೆಟ್ಟಿ ಖಡಕ್ ಉತ್ತರ

  |

  ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಗಳ ಅಬ್ಬರ ದಿನೇ-ದಿನೇ ಹೆಚ್ಚಾಗುತ್ತಲೇ ಇದೆ. ಯಾವುದೇ ವಿಷಯ ಹಂಚಿಕೊಂಡಿರು ಟ್ರೋಲ್ ಮಾಡುವವರು ಹಾಜರಾಗಿ ಕಾಲೆಳೆಯುವುದು, ಬೈಯುವುದು ಸಾಮಾನ್ಯ ಎಂಬಂತಾಗಿಬಿಟ್ಟಿದೆ.

  ಕಿಂಡಲ್ ಮಾಡಿದವರಿಗೆ ಸರಿಯಾದ ಉತ್ತರ ಕೊಟ್ಟ ಚಂದನ್ ಶೆಟ್ಟಿ | Filmibeat Kannada

  ಬಾಲಿವುಡ್‌ ನಟ-ನಟಿಯರಿಗೆ ಈ ಟ್ರೋಲ್ ಹಾವಳಿ ಹೆಚ್ಚು, ಹಾಗೆಂದು ಕನ್ನಡದ ನಟ-ನಟಿಯರಿಗೆ ಇಲ್ಲವೆಂದಲ್ಲ. ಇದೀಗ ಹೀಗೆಯೇ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಕಾಲೆಳೆಯಲು ಯತ್ನಿಸಿದ ವ್ಯಕ್ತಿಯೊಬ್ಬನಿಗೆ ರ್ಯಾಪರ್, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಸಖತ್ ಆಗಿ ಟಾಂಗ್ ಕೊಟ್ಟಿದ್ದಾರೆ.

  ನಾಯಿ ಜೊತೆ ಕಾಶ್ಮೀರ ಕಣಿವೆಯಲ್ಲಿ ನಟ ರಕ್ಷಿತ್ ಶೆಟ್ಟಿನಾಯಿ ಜೊತೆ ಕಾಶ್ಮೀರ ಕಣಿವೆಯಲ್ಲಿ ನಟ ರಕ್ಷಿತ್ ಶೆಟ್ಟಿ

  ನಟ ಚಂದನ್ ಶೆಟ್ಟಿ ಹಾಗೂ ಪತ್ನಿ ನಿವೇದಿತಾ ಸಾಮಾಜಿಕ ಜಾಲತಾಣದಲ್ಲಿ ರಸಂ ಬ್ರ್ಯಾಂಡ್ ಒಂದರ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಈ ಬಗ್ಗೆ ನೆಟ್ಟಿಗನೊಬ್ಬ ಚಂದನ್ ಶೆಟ್ಟಿ ಕಾಲೆಳೆದಿದ್ದ.

  'ಕನ್ನಡವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತೇನೆ ಎಂದು ಹೇಳಿ, ಹೆಂಡತಿ ಜೊತೆ ರಸಂ ಮಾಡ್ತಿದ್ದೀಯಲ್ಲ ಗುರು' ಎಂದು ವ್ಯಕ್ತಿಯೊಬ್ಬ ಚಂದನ್ ಶೆಟ್ಟಿಯ ಪೋಸ್ಟ್‌ಗೆ ಕಮೆಂಟ್‌ ಮಾಡಿದ್ದ.

  ಇದಕ್ಕೆ ಉತ್ತರಿಸಿರುವ ಚಂದನ್ ಶೆಟ್ಟಿ, 'ಗುರು, ನಾನು ರಸಂ ಆದ್ರು ಮಾಡ್ತೀನಿ, ಕೋಳಿ ಸಾರಾದರೂ ಮಾಡ್ತೀನಿ, ನಿನ್ನ ಮನೆ ಸ್ಟೌ ಮೇಲೆ ಮಾಡುತ್ತಿಲ್ಲವಲ್ಲ' ಎಂದಿದ್ದಾರೆ.

  ಪತ್ನಿ ನಿವೇದಿತಾ ಗೆ ಸರ್ಪ್ರೈಸ್ ಉಡುಗೊರೆ ಕೊಟ್ಟ ಚಂದನ್ ಶೆಟ್ಟಿಪತ್ನಿ ನಿವೇದಿತಾ ಗೆ ಸರ್ಪ್ರೈಸ್ ಉಡುಗೊರೆ ಕೊಟ್ಟ ಚಂದನ್ ಶೆಟ್ಟಿ

  ಮುಂದುವರೆದು, 'ನನ್ನ ಕೆಲವು ಹಾಡುಗಳು ಈಗಾಗಲೇ ವಿದೇಶದ ಪಬ್‌ಗಳಲ್ಲಿ ಪ್ರಸಾರ ಆಗುತ್ತಿವೆ. ಕನ್ನಡವನ್ನು ಬೆಂಬಲಿಸುವ ವ್ಯಕ್ತಿಗಳಿಂದ ಮಾತ್ರವೇ ಕನ್ನಡ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲು ಸಾಧ್ಯ, ದ್ವೇಷ ಹರಡಲು ಯತ್ನಿಸುವ ನಿನ್ನಂಥಹವರಿಂದ ಅಲ್ಲ' ಎಂದಿದ್ದಾರೆ ಚಂದನ್ ಶೆಟ್ಟಿ.

  'ಆದರೆ ನಿನ್ನಂಥಹವರು ಇರಬೇಕು, ನಿನ್ನಂಥಹವರಿಂದಲೇ ನನಗೆ ಸ್ಪೂರ್ತಿ ಸಿಗುತ್ತದೆ. ನಾನು ನನ್ನ ಗುರಿ ಮುಟ್ಟುವವರೆಗೂ ನನ್ನ ದ್ವೇಷಿಸುತ್ತಲೇ ಇರಿ' ಎಂದು ಹೇಳಿದ್ದಾರೆ ಚಂದನ್ ಶೆಟ್ಟಿ.

  English summary
  Music director Chandan Shetty answered a guy who try to troll him on social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X