»   » ನಿಜಕ್ಕೂ '3-ಪೆಗ್' ಸಾಂಗ್ ಯಾರದ್ದು.? 'ಇತಿಹಾಸ' ಬಿಚ್ಚಿಟ್ಟ ಚಂದನ್ ಶೆಟ್ಟಿ

ನಿಜಕ್ಕೂ '3-ಪೆಗ್' ಸಾಂಗ್ ಯಾರದ್ದು.? 'ಇತಿಹಾಸ' ಬಿಚ್ಚಿಟ್ಟ ಚಂದನ್ ಶೆಟ್ಟಿ

Posted By:
Subscribe to Filmibeat Kannada
ನಿಜಕ್ಕೂ '3-ಪೆಗ್' ಸಾಂಗ್ ಯಾರದ್ದು.? 'ಸತ್ಯ' ಬಿಚ್ಚಿಟ್ಟ ಚಂದನ್ ಶೆಟ್ಟಿ | Filmibeat Kannada

ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿಗೆ ಬಹುದೊಡ್ಡ ಯಶಸ್ಸು ತಂದುಕೊಟ್ಟಿದ್ದು '3-ಪೆಗ್' ಹಾಡು. ಈ ಹಾಡಿನ ನಂತರವೇ ಚಂದನ್ ಶೆಟ್ಟಿ ಎಂಬ Rap ಸಿಂಗರ್ ಕನ್ನಡದಲ್ಲಿದ್ದಾರೆ ಎಂಬುದು ಸಮಾಜಕ್ಕೆ ಗೊತ್ತಾಗಿದ್ದು ಅಂದ್ರೆ ತಪ್ಪಾಗಲಾರದು.

ಆದ್ರೆ, ಇತ್ತೀಚಿಗೆ ಈ ಹಾಡಿನ ಸುತ್ತಾ ವಿವಾದಗಳು ಹುಟ್ಟಿಕೊಂಡಿತ್ತು. ಈ ಹಾಡಿನ ಟ್ಯೂನ್ ಬೇರೊಂದು ಆಲ್ಬಂನಿಂದ ಕದ್ದಿರೋದು ಎಂಬುದು ಒಂದು ಕಡೆಯಾದ್ರೆ, '3-ಪೆಗ್' ಸಾಂಗ್ ಚಂದನ್ ಶೆಟ್ಟಿಯದ್ದಲ್ಲ ಎಂಬ ಸುದ್ದಿ ದೊಡ್ಡ ಚರ್ಚೆಯಾಗಿತ್ತು.

ಚಂದನ್ ಶೆಟ್ಟಿಯ '3-PEG' ಸಾಂಗ್ ಕದ್ದಿರೋದಂತೆ.! ಸಾಕ್ಷಿ ಇಲ್ಲಿದೆ ನೋಡಿ

'3-ಪೆಗ್' ಹಾಡಿಗೆ ಸಂಗೀತ ನಿರ್ದೇಶನ ಮಾಡಿದ್ದ ವಿಜೇತ್ ಕೃಷ್ಣ ಅವರು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಆದ್ರೆ, ಚಂದನ್ ಶೆಟ್ಟಿ ಎಲ್ಲಿಯೂ ಈ ಬಗ್ಗೆ ಮಾತನಾಡಿರಲಿಲ್ಲ. ಇದೀಗ, ಮೊದಲ ಭಾರಿಗೆ '3-ಪೆಗ್' ಹಾಡಿನ ವಿವಾದದ ಬಗ್ಗೆ ಮೌನಮುರಿದಿದ್ದಾರೆ. ಹಾಗಿದ್ರೆ, '3-ಪೆಗ್' ಸಾಂಗ್ ಯಾರು ರಚಿಸಿದ್ದು.? ಮುಂದ ಓದಿ....

ನನಗೆ ಆಶ್ಚರ್ಯವಾಯಿತು

''ಈ ಸುದ್ದಿ ಕೇಳಿ ನನಗೆ ಆಶ್ಚರ್ಯವಾಯಿತು. ಈ ಬಗ್ಗೆ ವಿಜೇತ್ ಬಳಿಯೂ ಮಾತನಾಡಿದೆ. ಆದ್ರೆ, ಅವರು ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಗೊಂದಲದಿಂದ ಏನೇನೋ ಮಾತನಾಡಿದೆ ಅಂದ. ನನಗೆ ಇದನ್ನೆಲ್ಲಾ ಮುಂದೆವರೆಸಿಲು ಇಷ್ಟವಿರಲಿಲ್ಲ. ಅದೇ ಕಾರಣಕ್ಕೆ ಸುಮ್ಮನಾಗಿಬಿಟ್ಟೆ'' ಎಂದರು.

ಲಿರಿಕ್ಸ್ ಬರೆದು ಹಾಡಿದ್ದು ನಾನು

''ಕೆಲವು ವರ್ಷಗಳ ಹಿಂದೆ ನಮ್ಮಿಬ್ಬರ ಭೇಟಿಯಾದಾಗ ವಿಜೇತ್ ಒಂದು ಟ್ಯೂನ್ ಮಾಡಿಕೊಂಡಿದ್ದರು. ಕೇಳಿ ಖುಷಿಯಾಯಿತು. ಅದಕ್ಕೆ ಸಾಹಿತ್ಯ ಬರೆದು ಹಾಡಿದ್ದೆ. ಆದ್ರೆ, ಕಾರಣಾಂತರಗಳಿಂದ ಅದು ಬಿಡುಗಡೆಯಾಗಿಲ್ಲ. ನಂತರ ಒಂದೆರೆಡು ವರ್ಷದ ನಂತರ ರಿಲೀಸ್ ಆಗಿ ಸೂಪರ್ ಹಿಟ್ ಆಯಿತು''

ಅವರ ಹೆಸರು ಯಾಕೆ ಪ್ರಸ್ತಾಪವಾಗಿಲ್ಲ.?

''ಹಾಡಿನ ಕೊನೆಯಲ್ಲಿ ನನ್ನ ಹೆಸರು, ಐಂದ್ರಿತಾ ರೈ ಹೆಸರು ಮತ್ತು ವಿಜೇತ್ ಹೆಸರು ಬರುತ್ತೆ. ಅಷ್ಟಕ್ಕೂ, 3 ಪೆಗ್ ಆಲ್ಬಂ ನಿರ್ಮಾಪಕ ನಾನಲ್ಲ. ನಾನು ಗಾಯಕ ಅಷ್ಟೇ. ವಿಜೇತ್ ಗೆ ಏನೂ ಸಿಗಬೇಕು ಎನ್ನುವುದನ್ನ ನಿರ್ಧರಿಸಬೇಕಾಗಿರುವುದು ನಿರ್ಮಾಪಕರು''

ಹಣದ ಬಗ್ಗೆ ನಾನೇನೂ ಮಾತನಾಡಲ್ಲ

''ವಿಜೇತ್ ಗೆ ಕೇವಲ 15 ಸಾವಿರ ಹಣ ಸಂದಾಯವಾಗಿದೆ ಎಂಬ ಮಾತಿದೆ. ಅದು ಸುಳ್ಳು ಅದಕ್ಕಿಂತ ಹೆಚ್ಚು ಹಣ ಸಿಕ್ಕಿದೆ. ಈ ಬಗ್ಗೆ ನಾನೇನೂ ಮಾತನಾಡಲ್ಲ. ನಿರ್ಮಾಪಕರು ಇದ್ದಾರೆ. ಅವರೇ ಹೇಳಲಿ'' ಎನ್ನುತ್ತಾರೆ ಚಂದನ್ ಶೆಟ್ಟಿ

ಚಂದನ್ ಶೆಟ್ಟಿಗೆ ಬಂಪರ್ ಆಫರ್ ಕೊಟ್ಟ ನಿರ್ಮಾಪಕ ಮುನಿರತ್ನ

Rap ಸಿಂಗರ್ ಚಂದನ್ ಶೆಟ್ಟಿ ಮೇಲೆಯೇ Rap ಸಾಂಗ್ ಬರೆದ ಪುಟ್ಟ ಬಾಲಕಿ

English summary
Bigg boss kannada 5 winner and singer Chandan shetty react about 3 peg song controversy.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada