»   » ರವಿಚಂದ್ರನ್ 'ಅಪೂರ್ವ' ದೃಶ್ಯಕಾವ್ಯದ ಫಸ್ಟ್ ಲುಕ್

ರವಿಚಂದ್ರನ್ 'ಅಪೂರ್ವ' ದೃಶ್ಯಕಾವ್ಯದ ಫಸ್ಟ್ ಲುಕ್

Posted By:
Subscribe to Filmibeat Kannada

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮತ್ತೊಂದು ಒನ್ ಮ್ಯಾನ್ ಶೋ ಈ 'ಅಪೂರ್ವ' ಚಿತ್ರ. ಕೇವಲ ಎರಡೇ ಎರಡು ಪಾತ್ರಗಳನ್ನಿಟ್ಟುಕೊಂಡು ತೆರೆಯ ಮೇಲೆ ಬರುತ್ತಿದ್ದಾರೆ ರವಿಮಾಮ. ಕಥೆಗಳ ಆಯ್ಕೆ, ವೈವಿಧ್ಯಮಯ ಪಾತ್ರಗಳ ಕಡೆಗೆ ಕನಸುಗಾರ ಈಗ ಗಮನಹರಿಸುತ್ತಿರುವುದು ಗೊತ್ತೇ ಇದೆ.

ಇದೀಗ ಅವರು ಕೈಗೆತ್ತಿಕೊಂಡಿರುವ ಚಿತ್ರವೂ ವೈವಿಧ್ಯಮಯವಾಗಿದೆ. ರವಿಚಂದ್ರನ್ ಅವರ ಗೆಟಪ್, ಕುತೂಹಲಭರಿತ ಕಥೆ ಈ ಚಿತ್ರದ ಹೈಲೈಟ್ ಎನ್ನಬಹುದು. ಈಗ ಅವರು ಅಪೂರ್ವ ಚಿತ್ರಕ್ಕೆ ಸಂಬಂಧಿಸಿದ ಕೆಲವು ರಸವತ್ತಾದ ಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ. [ಕ್ರೇಜಿಸ್ಟಾರ್ ರವಿಚಂದ್ರನ್ 'ಅಪೂರ್ವ' ಅಮೋಘ ದಾಖಲೆ]


ರವಿಚಂದ್ರನ್ ಅವರೇ ಆಕ್ಷನ್ ಕಟ್ ಹೇಳುತ್ತಿರುವ ಕಾರಣ ಚಿತ್ರದ ಬಗೆಗಿನ ನಿರೀಕ್ಷೆಗಳು ದುಪ್ಪಟ್ಟಾಗಿವೆ. ಚಿತ್ರದಲ್ಲಿ ರವಿಚಂದ್ರನ್ ಅವರು 61ರ ವಯಸ್ಸಿನಲ್ಲಿ ಕಾಣಿಸಿದರೆ ನಾಯಕಿ ವಯಸ್ಸು ಕೇವಲ ಇನ್ನೂ 19ರ ಪ್ರಾಯ. ಇವರಿಬ್ಬರ 'ಅಪೂರ್ವ' ಸಂಗಮದ ಕಥೆಯೇ ಈ ಚಿತ್ರ. ಸ್ಲೈಡ್ ನಲ್ಲಿ ನೋಡಿ 'ಅಪೂರ್ವ' ಜೋಡಿಯ ಚಿತ್ರಗಳು.


ರವಿಚಂದ್ರನ್ 'ಅಪೂರ್ವ' ದೃಶ್ಯಕಾವ್ಯದ ಫಸ್ಟ್ ಲುಕ್

ನವತಾರೆ ಅಪೂರ್ವ ಈ ಚಿತ್ರದ ನಾಯಕಿ. ಚಿತ್ರದಲ್ಲಿ ಅವರು 19ರ ಪ್ರಾಯದ ತರುಣಿಯಾಗಿ ಕಾಣಿಸುತ್ತಿದ್ದಾರೆ. ಎರಡು ಪಾತ್ರಗಳ ಸುತ್ತುವ ಕಥೆ ಇದಾಗಿದೆ. 61ರ ಆಸುಪಾಸಿನ ನಾಯಕ ಹಾಗೂ 19ರ ಹರೆಯದ ಯುವತಿ ನಡುವೆ ಲಿಫ್ಟ್ ಒಂದರಲ್ಲಿ ನಡೆಯುವ ಸನ್ನಿವೇಶಗಳೇ ಚಿತ್ರದ ಕಥಾವಸ್ತು.


ರವಿಚಂದ್ರನ್ 'ಅಪೂರ್ವ' ದೃಶ್ಯಕಾವ್ಯದ ಫಸ್ಟ್ ಲುಕ್

ರವಿಚಂದ್ರನ್ ಅವರ ಮನೆಯಲ್ಲೇ ಲಿಫ್ಟ್ ಸೆಟ್ ಹಾಕಿ ಚಿತ್ರೀಕರಿಸಲಾಗಿದೆ. ಈ ರೀತಿಯ ಚಿತ್ರ ನಾನು ಹಿಂದೆ ಮಾಡಿಲ್ಲ ಮುಂದೆ ಮಾಡುತ್ತೇನೆ ಎಂಬ ನಂಬಿಕೆ ಇಲ್ಲ ಎನ್ನುವ ರವಿ, ಚಿತ್ರ ನೋಡಿದರೆ ನೀಮಗೂ ಥಿಯೇಟರ್ ನಿಂದ ಹೊರ ಬರುವ ಮನಸ್ಸು ಬರಲ್ಲ.


ರವಿಚಂದ್ರನ್ 'ಅಪೂರ್ವ' ದೃಶ್ಯಕಾವ್ಯದ ಫಸ್ಟ್ ಲುಕ್

ಪ್ರೇಕ್ಷಕರ ಕಣ್ಣಂಚಲಿ ನೀರಿರುತ್ತದೆ. ಹಾಗಂತ ಇದು ಕಣ್ಣೀರಧಾರೆ ಕಥೆ ಎಂದುಕೊಳ್ಳಬೇಡಿ ಎನ್ನುತ್ತಾರೆ ರವಿಮಾಮ. ಅತಿಥಿ ಪಾತ್ರದಲ್ಲಿ ಸುದೀಪ್ ಇದ್ದಾರೆ ಎಂಬುದು ಇನ್ನೊಂದು ವಿಶೇಷ. ಇಷ್ಟಕ್ಕೂ ಸಂಪೂರ್ಣ ಕಥೆ ಏನು ಎಂಬುದನ್ನು ಮಾತ್ರ ರವಿಮಾಮ ಬಿಟ್ಟುಕೊಟ್ಟಿಲ್ಲ.


ರವಿಚಂದ್ರನ್ 'ಅಪೂರ್ವ' ದೃಶ್ಯಕಾವ್ಯದ ಫಸ್ಟ್ ಲುಕ್

ಈ ಚಿತ್ರದ ನಾಯಕಿ ಯಾರು ಎಂಬ ಗುಟ್ಟನ್ನೂ ಇಷ್ಟು ದಿನ ರವಿಚಂದ್ರನ್ ಕಾಯ್ದಿರಿಸಿದ್ದರು. ಈಗ ಅವರ ಮುಖವನ್ನು ಅನಾವರಣಗೊಳಿಸಿದ್ದಾರೆ. ಮೈಸೂರು ಮೂಲದ ಇವರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಹೆಸರು ಅಪೂರ್ವ ಎಂದಷ್ಟೇ ಗೊತ್ತು.


ರವಿಚಂದ್ರನ್ 'ಅಪೂರ್ವ' ದೃಶ್ಯಕಾವ್ಯದ ಫಸ್ಟ್ ಲುಕ್

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಇಷ್ಟೊತ್ತಿಗಾಗಲೆ ಅಪೂರ್ವ ಚಿತ್ರದ ಹಾಡುಗಳು ಕಿವಿಗೆ ಬೀಳಬೇಕಾಗಿತ್ತು. ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆಯಾಗಬೇಕಿದ್ದ ಅಪೂರ್ವ ಆಡಿಯೋ ಕಾರಣಾಂತರಗಳಿಂದ ಮುಂದೂಡಲ್ಪಟ್ಟಿದೆ.


ರವಿಚಂದ್ರನ್ 'ಅಪೂರ್ವ' ದೃಶ್ಯಕಾವ್ಯದ ಫಸ್ಟ್ ಲುಕ್

ಈ ಓಲ್ಡ್ ಮ್ಯಾನಿಗೂ ಯಂಗ್ ಲೇಡಿಗೂ ಲವ್ ಆಗೈತಿ ಕಣ್ರಿ, ಪ್ರಪಂಚವು ಕಾಣದು ಪ್ರೀತಿಗೆ ಬಿದ್ದರೆ, ಕಣ್ಣಲ್ಲಿ ನೂರಾರು ಕಥೆಗಳು ಅಡಗಿವೆ, ಏನಿದು ಯಾಕಿದು ಯೋಚಿಸಲಾಗದ ಈ ಪ್ರೀತಿಯ ನಿಯಮ, 'Death' a reason to die...'Love' a reason to die ಎಂಬ ಸಾಲುಗಳನ್ನು ರವಿ ಬರೆದಿರುವುದು ಇದು ಮತ್ತೊಂದು 'ಪ್ರೇಮಲೋಕ'ವೇ ಎಂಬ ಕುತೂಹಲ ಮೂಡಿಸಿದೆ.


English summary
Crazy Star Ravichandran's one man show 'Apoorva' is out with its first look. The makers of the film recently unveiled the pictures on Facebook. The film has only two main characters.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada