Don't Miss!
- Finance
ಕಾಲ್ಸೆಂಟರ್ನಲ್ಲಿ 8,000 ಪಡೆಯುತ್ತಿದ್ದ ವ್ಯಕ್ತಿ ಈಗ 2,094 ಕೋಟಿ ರೂ ಒಡೆಯ!
- News
ದೇಶದ 1,000 ಸ್ಮಾರಕಗಳ ಖಾಸಗೀಕರಣಗೊಳಿಸಿದ ಸರ್ಕಾರ
- Sports
Ind Vs Aus Test : ಜಸ್ಪ್ರೀತ್ ಬುಮ್ರಾ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಆಡೋದೆ ಅನುಮಾನ !
- Technology
ಗ್ರಾಹಕರೇ ಈ ಕಡಿಮೆ ಬೆಲೆಯ ಪ್ಲ್ಯಾನ್ ರೀಚಾರ್ಜ್ ಮಾಡಿದ್ರೂ, ಉಚಿತ ಡೇಟಾ ಲಭ್ಯ!
- Automobiles
ವಿದೇಶದಲ್ಲಿ 20 ಲಕ್ಷವಿದ್ದ ಕಾರು ಭಾರತಕ್ಕೆ ಬಂದರೆ 50 ಲಕ್ಷ ರೂ. ದುಬಾರಿಯಾಗಲು ಕಾರಣವೇನು..?
- Lifestyle
Horoscope Today 26 Jan 2023: ಗುರುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕ್ರಿಕೆಟ್ ತಂಡದಲ್ಲಿ ದಲಿತರಿಗೆ ಸ್ಥಾನವೇ ಇಲ್ಲ, ಅಲ್ಲಿಯೂ ಮೀಸಲಾತಿ ಬೇಕು: ಚೇತನ್ ಅಹಿಂಸ
ನಟ ಚೇತನ್ ಅಹಿಂಸ, ರಾಜಕೀಯವಾಗಿಯೂ ಸಕ್ರಿಯವಾಗಿದ್ದಾರೆ. ನಿರ್ದಿಷ್ಟ ಪಕ್ಷದೊಟ್ಟಿಗೆ ಗುರುತಿಸಿಕೊಂಡು ಪಕ್ಷ ರಾಜಕೀಯದಲ್ಲಿ ತೊಡಗಿಲ್ಲವಾದರೂ ಸಾಮಾಜಿಕ ವಿಷಯಗಳ ಬಗ್ಗೆ ಸದಾ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
ಬಿಜೆಪಿ ಹಾಗೂ ಇನ್ನಿತರೆ ಕೆಲವು ರಾಜಕೀಯ ಪಕ್ಷಗಳ ಧ್ಯೇಯ, ಆದರ್ಶಗಳಿಗೆ ವಿರುದ್ಧವಾದ ನಿಲವುಗಳನ್ನು ಹೊಂದಿರುವ ಚೇತನ್ ಅಹಿಂಸ, ತಮ್ಮ ಅಭಿಪ್ರಾಯಗಳನ್ನು ನಿರ್ಭಿಡೆಯಿಂದ ಹೇಳುತ್ತಾ ಬಂದಿದ್ದಾರೆ. ಇದರಿಂದಾಗಿ ಹಲವು ಬಾರಿ ವಿರೋಧವನ್ನು, ಕೆಲವರಿಂದ ಸಹಮತವನ್ನೂ ಗಳಿಸಿದ್ದಾರೆ. ಒಮ್ಮೆ ಜೈಲಿಗೂ ಹೋಗಿ ಬಂದಿದ್ದಾರೆ.
ಥುಳಿತಕ್ಕೊಳಗಾದವರ, ದಲಿತರ ಅಲ್ಪಸಂಖ್ಯಾತರ ಪರ ದನಿ ಎತ್ತುತ್ತಾ ಬಂದಿರುವ ಚೇತನ್ ಅಹಿಂಸ, ಸಾಮಾಜಿಕ ನ್ಯಾಯಕ್ಕಾಗಿ ಮೀಸಲಾತಿಯ ಅಗತ್ಯತೆಯ ಆಗಾಗ್ಗೆ ಮಾತನಾಡುತ್ತಲೇ ಇರುತ್ತಾರೆ. ಇತ್ತೀಚೆಗೆ ಮೀಸಲಾತಿ ವಿಷಯದ ಬಗ್ಗೆ ಚೇತನ್ ಅಹಿಂಸ ಆಡಿರುವ ಮಾತುಗಳಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಚೇತನ್ ಹೇಳಿಕೆಯನ್ನು ವಿರೋಧಿಸಿದ್ದರೆ, ಕೆಲವರು ಹಾಸ್ಯ ಮಾಡಿದ್ದಾರೆ. ಕೆಲವರು ಸಹಮತವನ್ನೂ ವ್ಯಕ್ತಪಡಿಸಿದ್ದಾರೆ.
ಭಾರತೀಯ ಕ್ರಿಕೆಟ್ ತಂಡವು ಸತತ ಕ್ರಿಕೆಟ್ ಆಡುತ್ತಿದ್ದು, ಇತ್ತೀಚೆಗೆ ಟಿ20 ವಿಶ್ವಕಪ್ ಸೋಲು, ಆ ಬಳಿಕ ನ್ಯೂಜಿಲೆಂಡ್ ಸರಣಿ ಸೋಲನ್ನು ಅನುಭವಿಸಿದೆ. ಇದರ ಬೆನ್ನಲ್ಲೆ ನಟ ಚೇತನ್ ಅಹಿಂಸ, ಕ್ರಿಕೆಟ್ ತಂಡದಲ್ಲಿಯೂ ಮೀಸಲಾತಿ ಜಾರಿ ಆಗಬೇಕು ಎಂದು ಹೇಳಿದ್ದಾರೆ. ಇದು ವಿರೋಧಕ್ಕೂ ಹಾಸ್ಯಕ್ಕೂ ವಸ್ತುವಾಗಿದೆ.
'ಎಲ್ಲ ಸಾರ್ವಜನಿಕ ಕ್ಷೇತ್ರದಲ್ಲಿ ಎಲ್ಲರ ಪಾಲ್ಗೊಳ್ಳುವಿಕೆ ಬೇಕು. ಶಿಕ್ಷಣ, ರಾಜಕೀಯ ಎಲ್ಲದರಲ್ಲೂ ಬೇಕು. ಬಿಸಿಸಿಐ, ಭಾರತ ಕ್ರಿಕೆಟ್ ತಂಡದ ಸುದೀರ್ಘ ಇತಿಹಾಸವನ್ನು ಗಮನಿಸಿದರೆ ಅದರಲ್ಲಿ ದಲಿತರಿಗೆ ಪ್ರಾತಿನಿಧ್ಯ ಬಹಳ ಕಡಿಮೆ. ನನ್ನ ಅಧ್ಯಯನದ ಪ್ರಕಾರ ಹಾಗೂ ಅಂಕಿ-ಅಂಶಗಳ ಪ್ರಕಾರ ಇಷ್ಟು ದಶಕಗಳಲ್ಲಿ ಕೇವಲ ನಾಲ್ಕು ಮಂದಿಯಷ್ಟೆ ದಲಿತರು ಭಾರತ ಕ್ರಿಕೆಟ್ ತಂಡದಲ್ಲಿ ಆಡಿದ್ದಾರೆ'' ಎಂದಿದ್ದಾರೆ ಚೇತನ್.
''ಭಾರತದಲ್ಲಿ ದಲಿತರು, ಆದಿವಾಸಿಗಳು ಸೇರಿದರೆ ಸುಮಾರು 30% ಜನಸಂಖ್ಯೆ ಆಗುತ್ತಾರೆ. ಹಾಗಿದ್ದರೆ ಕೇವಲ ನಾಲ್ಕು ಜನ ಭಾರತ ತಂಡದಲ್ಲಿ ಆಡುವುದೆಂದರೆ ಅದು ಅನ್ಯಾಯ. ಇದು ಉದ್ದೇಶಪೂರ್ವಕವಾಗಿ ಹೀಗಾಗಿದೆ ಎನ್ನುವುದಕ್ಕಿಂತಲೂ ಇದು ರಚನಾತ್ಮಕ ಸಮಸ್ಯೆ ಎಂದು ನನಗೆನಿಸುತ್ತದೆ. ಕೇವಲ ದೊಡ್ಡ ಖಾಸಗಿ ಶಾಲೆಗಳಷ್ಟೆ ಕ್ರಿಕೆಟ್‌ಗೆ ಪ್ರಾಧಾನ್ಯತೆ ನೀಡುತ್ತಿವೆ. ಅಲ್ಲಿ ಎಲ್ಲ ಶ್ರೀಮಂತರ ಮಕ್ಕಳಷ್ಟೆ ಕಲಿಯುತ್ತಿರುತ್ತಾರೆ. ಅಲ್ಲಿ ದಲಿತರಿಗೆ ಅವಕಾಶವೇ ಇರುವುದಿಲ್ಲ. ಸರ್ಕಾರಿ ಶಾಲೆಗಳಲ್ಲಿಯೂ ಅತ್ಯುತ್ತಮ ಪ್ರತಿಭಾವಂತರಿದ್ದಾರೆ ಆದರೆ ಅವಕಾಶವೇ ಸಿಗುತ್ತಿಲ್ಲ'' ಎಂದಿದ್ದಾರೆ ಚೇತನ್.