»   » ಮಹದಾಯಿ ಹೋರಾಟದ ಬಗ್ಗೆ ಚೇತನ್ ಕೊಟ್ಟ ಹೇಳಿಕೆಗೆ ತಿರುಗಿ ಬಿದ್ದ ಚಿತ್ರರಂಗ

ಮಹದಾಯಿ ಹೋರಾಟದ ಬಗ್ಗೆ ಚೇತನ್ ಕೊಟ್ಟ ಹೇಳಿಕೆಗೆ ತಿರುಗಿ ಬಿದ್ದ ಚಿತ್ರರಂಗ

Posted By:
Subscribe to Filmibeat Kannada
ಮಹದಾಯಿ ಪ್ರತಿಭಟನೆ : ಕನ್ನಡದ ನಂತರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ನಟ ಚೇತನ್ | Oneindia Kannada

ಬೆಂಗಳೂರಿನಲ್ಲಿ ನಡೆಯುತ್ತಿರುವ ಮಹದಾಯಿ ನೀರಿನ ಹಂಚಿಯ ಹೋರಾಟದ ಕಾವು ಹೆಚ್ಚಾಗಿದೆ. ಎರಡು ವರ್ಷದ ಹಿಂದೆ ಹುಬ್ಬಳ್ಳಿಗೆ ಹೋಗಿ ಹೋರಾಟ ಮಾಡಿದ್ದ ಸಿನಿಮಾರಂಗದ ತಾರೆಯರು ಈಗಲೂ ರೈತರಿಗೆ ಬೆಂಬಲ ಸೂಚಿಸುತ್ತಿದ್ದಾರೆ.

ನಟ ಶಿವರಾಜ್ ಕುಮಾರ್ , ಉಪೇಂದ್ರ, ಗಣೇಶ್, ಯಶ್ ಇನ್ನೂ ಅನೇಕರು ನಾವು ರೈತರ ಹೋರಾಟದಲ್ಲಿ ಭಾಗಿಯಾಗಲು ಸಿದ್ಧವಾಗಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ.

ರೈತರ ಜೊತೆ ಹೋರಟಕ್ಕೆ ಮುಂದಾದ ಶಿವರಾಜ್ ಕುಮಾರ್ ಹಾಗೂ ಯಶ್

ನಿನ್ನೆಯ ಪ್ರತಿಭಟನೆಯಲ್ಲಿ ಸಾಕಷ್ಟು ಕಲಾವಿದರು ಹಾಗೂ ತಂತ್ರಜ್ಞರು ರೈತರ ಜೊತೆ ಕೂತು ನ್ಯಾಯಕ್ಕಾಗಿ ಪ್ರತಿಭಟನೆ ಮಾಡಿದ್ದಾರೆ. ಹೋರಾಟದಲ್ಲಿ ಮಾತನಾಡಿನ 'ಆ ದಿನಗಳು' ಸಿನಿಮಾ ಖ್ಯಾತಿಯ ನಟ ಚೇತನ್ 'ಚಿತ್ರರಂಗದ ಕಲಾವಿದರು ಹೋರಾಟಕ್ಕೆ ಬರಬೇಕು, ಮೂರು ದಿನವಾದರೂ ಕಲಾವಿದರು ಕಾಣಿಸಿಕೊಳ್ಳುತ್ತಿಲ್ಲ' ಎಂದು ಹೇಳಿಕೆ ನೀಡಿದ್ದರು. ಆದರೆ ಇದೀಗ ಚೇತನ್ ಮಾತಿಗೆ ಚಿತ್ರರಂಗದ ಅನೇಕರು ವಿರೋಧ ವ್ಯಕ್ತ ಪಡಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಮುಂದೆ ಓದಿ....

ಬಣ್ಣಹಚ್ಚಿ ಹುಲಿಯಾದ ನರಿ ಕಥೆ ಆಗಬಾರದು ಬದುಕು

ಚೇತನ್ ಹೇಳಿಕೆ ಬಗ್ಗೆ ಟ್ವೀಟ್ ಮಾಡಿರುವ ಜಗ್ಗೇಶ್ "ಯಾಕೆ ಪಾಪ ಈತ ಹೀಗೆ..! ಪ್ರತಿನಡೆಯ ತಮ್ಮ ಉದ್ದೇಶ ಜಾಣ ಪ್ರೇಕ್ಷಕನಿಗೆ ಅರಿವಾಗಿದೆ..! ನಮ್ಮತನ ವೃದ್ಧಿಸಿಕೊಳ್ಳುವ ಜಾತ್ರೆಗಿಂತ ಹೃದಯ ದೇವರು ಜನಮೆಚ್ಚುವಂತೆ ಮಾಡುವ ಕಾರ್ಯ ಶ್ರೇಷ್ಠ! ಬಣ್ಣಹಚ್ಚಿ ಹುಲಿಯಾದ ನರಿ ಕಥೆ ಆಗಬಾರದು ಬದುಕು..! ಅನೇಕ ಹಿರಿಯ ನಟರು ಬಾಳಿ ಒಳ್ಳೆ ಸಂದೇಶ ಕೊಟ್ಟ ರಂಗ ನಮ್ಮದು..! ಬೆಳೆಯಲು ಪ್ರತಿಭೆ ಬಳಸಿ ವಾಮಮಾರ್ಗ ಬೇಡ" ಎಂದು ಹೇಳಿದ್ದಾರೆ.

'ಖ್ಯಾತೆ ನಟ ಚೇತನ್' ಎಂದ ಪ್ರಥಮ್

ಚೇತನ್ ಹೇಳಿಕೆಯನ್ನ ಖಂಡಿಸಿ ಪ್ರಥಮ್ "ಖ್ಯಾತೆ ನಟ(ಖ್ಯಾತ ನಟ!) ಚೇತನ್ ಅತಿರಥ, ನಿಮಗ್ಯಾಕೆ ಯಡಿಯೂರಪ್ಪರನ್ನು ಕಂಡರೆ ಕೊತ ಕೊತಾ..? ಮಹಾದಯಿ ವಿಚಾರವಾಗಿ ಯಡಿಯೂರಪ್ಪರಿಂದ ಸ್ವಲ್ಪ ಆತುರವಾಗಿದೆ ನಿಜ ಹಾಗಂತ mike ಸಿಕ್ಕಿದ ಕೂಡಲೇ action film hero range ಗೆ ತಪ್ಪೆಲ್ಲಾ ಯಡಿಯೂರಪ್ಪರದ್ದು ಅಂತ ಹೇಳೋದ್ ದೊಡ್ಡ ತಪ್ಪಲ್ವಾ ಅತಿರಥ?" ಎಂದು ಪ್ರಶ್ನೆ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಖಂಡನೆ

ಚೇತನ್ ಹೇಳಿಕೆ ಬಗ್ಗೆ ಟ್ವಿಟ್ಟರ್ ಹಾಗೂ ಫೇಸ್ ಬುಕ್ ನಲ್ಲಿ ತೀವ್ರ ಖಂಡನೆ ವ್ಯಕ್ತವಾಗಿದೆ. 'ನೀನು ಒಬ್ಬ ಕಲಾವಿದ ಅನ್ನೋದು ನೆನಪಿರಲಿ, ಹುಬ್ಬಳ್ಳಿಗೆ ಕಲಾವಿದರು ಬರೀ ಕೈ ಬೀಸಿ ಮೆರವಣಿಗೆ ಮಾಡಲು ಹೋಗಿರಲಿಲ್ಲ' ಎಂದು ಅನೇಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿದ್ದಾರೆ.

ಚಿತ್ರರಂಗದ ಭಾಗಿ ಯಾಕಿಲ್ಲ? ಎಂದ ಚೇತನ್

''ಚಿತ್ರರಂಗದ ಹಿರಿಯರು ಕುಳಿತು ಏನು ಮಾಡಬಹುದು ಎಂಬುದರ ಬಗ್ಗೆ ಚರ್ಚೆ ಮಾಡಬೇಕು. ಎಷ್ಟೋ ವರ್ಷದ ಹಿಂದೆ ಉತ್ತರ ಕರ್ನಾಟಕಕ್ಕೆ ಹೋಗಿ ಹೋರಾಟದಲ್ಲಿ ಭಾಗಿಯಾಗಿದ್ದರು. ಅದು ಒಳ್ಳೆಯ ಕೆಲಸನೇ. ಆದರೆ ಹೋರಾಟ ಅಂದರೆ ಬರಿ ಒಂದು ಕಡೆ ಹೋಗಿ ಕೈ ಆಡಿಸಿ ಮೆರವಣಿಗೆ ಮಾಡುವುದು ಅಲ್ಲ. ಹೋರಾಟ ಅಂದರೆ ಅದು ಬಗೆ ಹರಿಯುವ ವರೆಗೆ ಜನರ ಜೊತೆ ಇರಬೇಕು.'' ಎಂದು ಚೇತನ್ ಒಂದು ಹೇಳಿಕೆ ನೀಡಿದ್ದರು.

English summary
Kannada Actor Chetan's statement in mahadayi protest was opposed by the kannada stars ,talking about artists has been opposed on the social networking site.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X