For Quick Alerts
  ALLOW NOTIFICATIONS  
  For Daily Alerts

  ಮುಖ್ಯಮಂತ್ರಿ ಸಿದ್ದರಾಮಯ್ಯ ಕೈಯಲ್ಲಿದೆ 2 ಕನ್ನಡ ಸಿನಿಮಾಗಳು!

  By Bharath Kumar
  |

  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತುಂಬ ಬ್ಯುಸಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಆಡಳಿತ, ಜನಪರ ಕಾರ್ಯಕ್ರಮಗಳು, ಪಕ್ಷ ಸಂಘಟನೆಯಲ್ಲದೇ ರಾಜಕೀಯ ಜಂಜಾಟದಲ್ಲೂ ಪ್ರತಿನಿತ್ಯ ತೊಡಗಿಕೊಂಡಿರುತ್ತಾರೆ.

  ಬಹುಶಃ ಮುಖ್ಯಮಂತ್ರಿಗಳಿಗೆ ನಿದ್ದೆ ಮಾಡಲು ಕೂಡ ಸಮಯವಕಾಶ ಸಿಗುವುದು ತುಂಬಾ ಕಮ್ಮಿ. ಅದಕ್ಕೆ ಅನ್ಸುತ್ತೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಆಗಾಗ ನಿದ್ದೆ ಮಾಡ್ತಿರುತ್ತಾರೆ. ಇಷ್ಟೆಲ್ಲ ಬ್ಯುಸಿ ಇದ್ರೂ, ಸಿನಿಮಾಗಳನ್ನ ನೋಡುವುದು ಮಾತ್ರ ಮರೆಯುವುದಿಲ್ಲ.[ಎಲ್ಲ ಬಿಟ್ಟು ಸಿ.ಎಂ ಸಾಹೇಬ್ರು 'ಬಾಹುಬಲಿ-2' ಚಿತ್ರವನ್ನ ವೀಕ್ಷಿಸಿದ್ಯಾಕೆ.?]

  'ರಾಜಕುಮಾರ', 'ಬಾಹುಬಲಿ', 'ನಿರುತ್ತರ' ಚಿತ್ರಗಳ ನಂತರ ಮತ್ತೆರಡು ಸಿನಿಮಾಗಳು ಸಿಎಂ ಕೈಯಲ್ಲಿದ್ದು, ಈ ಚಿತ್ರಗಳನ್ನ ನೋಡಲಿದ್ದಾರಂತೆ. ಅದು ಯಾವ ಚಿತ್ರಗಳು ಎಂದು ಮುಂದೆ ಓದಿ............

  ಸಿಎಂಗೆ ಸಿನಿಮಾ ತೋರಿಸಲು ಕಾಂಪಿಟೇಶನ್!

  ಸಿಎಂಗೆ ಸಿನಿಮಾ ತೋರಿಸಲು ಕಾಂಪಿಟೇಶನ್!

  ಇತ್ತೀಚೆಗೆ ಕನ್ನಡದ ನಟ ನಿರ್ದೇಶಕರು ಮುಖ್ಯಮಂತ್ರಿಗಳಿಗೆ ತಮ್ಮ ಸಿನಿಮಾಗಳನ್ನ ತೋರಿಸಲು ಮುಗಿಬೀಳುತ್ತಿದ್ದಾರೆ. ಸಿನಿಮಾ ತೆರೆಕಂಡು ಎರಡು ದಿನಗಳು ಆಗುತ್ತಿದ್ದಾಗೆ, ಸಿಎಂ ನಮ್ಮ ಸಿನಿಮಾ ನೋಡಿ ಎಂದು ಆಹ್ವಾನ ನೀಡುತ್ತಿದ್ದಾರೆ.[ಸಾವಿರ ರೂಪಾಯಿ ಕೊಟ್ಟು ಗೋಲ್ಡ್ ಕ್ಲಾಸ್ ನಲ್ಲಿ ಕೂತು 'ಬಾಹುಬಲಿ-2' ನೋಡಿದ ಸಿ.ಎಂ ಸಿದ್ದು.!]

  'ರಾಗ' ಯಾವಾಗ ನೋಡ್ತಿರ ಸಿದ್ದು ಸರ್!

  'ರಾಗ' ಯಾವಾಗ ನೋಡ್ತಿರ ಸಿದ್ದು ಸರ್!

  ಕಳೆದ ಕೆಲ ದಿನಗಳ ಹಿಂದೆಯಷ್ಟೇ 'ರಾಗ' ಚಿತ್ರವನ್ನ ನೋಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಟ ಮಿತ್ರ ಹಾಗೂ ನಿರ್ದೇಶಕ ಪಿ.ಸಿ ಶೇಖರ್ ಮನವಿ ಮಾಡಿಕೊಂಡಿದ್ದರು. ಮುಖ್ಯಮಂತ್ರಿಗಳು ಕೂಡ ನೋಡುವುದಾಗಿ ಭರವಸೆ ನೀಡಿದ್ದರಂತೆ.[2016ನೇ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ]

  ಈಗ 'ಹ್ಯಾಪಿ ನ್ಯೂ ಇಯರ್' ಸರದಿ

  ಈಗ 'ಹ್ಯಾಪಿ ನ್ಯೂ ಇಯರ್' ಸರದಿ

  ಅಷ್ಟರಲ್ಲಾಗಲೇ ಮತ್ತೊಂದು ಕನ್ನಡ ಚಿತ್ರ ಸಿಎಂ ಮನೆ ಬಾಗಿಲು ತಟ್ಟಿದೆ. ಹೌದು, ಕಳೆದ ವಾರವಷ್ಟೇ ಬಿಡುಗಡೆಯಾಗಿದ್ದ 'ಹ್ಯಾಪಿ ನ್ಯೂ ಇಯರ್' ಚಿತ್ರವನ್ನ ನೋಡುವಂತೆ ನಟ ಬಿಸಿ ಪಾಟೀಲ್ ಮುಖ್ಯಮಂತ್ರಿಗಳಿಗೆ ಕೇಳಿದ್ದಾರಂತೆ. ಅದಕ್ಕೆ ಸಿಎಂ ಕೂಡ ಮುಂದಿನ ವಾರ ನೋಡ್ತಿನಿ ಅಂತನೂ ಹೇಳಿದ್ದಾರಂತೆ.

  ಮತ್ತಷ್ಟು ಸಿನಿಮಾಗಳು ಸಿಎಂ ಬಾಗಿಲು ತಟ್ಟಬಹುದು!

  ಮತ್ತಷ್ಟು ಸಿನಿಮಾಗಳು ಸಿಎಂ ಬಾಗಿಲು ತಟ್ಟಬಹುದು!

  ಸದ್ಯ, ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಚಿತ್ರವನ್ನ ಮುಖ್ಯಮಂತ್ರಿಗಳು ನೋಡಿದ್ದರು. ಅದಾದ ಬಳಿಕ ಎಸ್.ಎಸ್.ರಾಜಮೌಳಿ ನಿರ್ದೇಶನದ ತೆಲುಗು ಚಿತ್ರ 'ಬಾಹುಬಲಿ-2' ಚಿತ್ರವನ್ನ ವೀಕ್ಷಿಸಿದ್ದರು. ಅದೇ ದಿನ ಅಪೂರ್ವ ಕಾಸರವಳ್ಳಿ ನಿರ್ದೇಶನದ 'ನಿರುತ್ತರ' ಚಿತ್ರವನ್ನ ಕೂಡ ನೋಡಿದ್ದರು. ಈಗ 'ರಾಗ' ಮತ್ತು 'ಹ್ಯಾಪಿ ನ್ಯೂ ಇಯರ್' ಸಾಲಿನಲ್ಲಿದೆ. ಇನ್ನು ಮುಂದೆ ಮತ್ಯಾವ ಚಿತ್ರಗಳು ಸಿಎಂ ಮನೆ ಬಾಗಿಲಿಗೆ ಹೋಗುತ್ತೋ ಕಾದು ನೋಡಬೇಕಿದೆ.['ರಾಜಕುಮಾರ'ನ ರಾಜ್ಯಭಾರ ಕಂಡು ಪುನೀತ್ ಗೆ ಜೈಕಾರ ಹಾಕಿದ ಸಿದ್ದರಾಮಯ್ಯ.!]

  ಸಿನಿಮಾದಲ್ಲಿ ನಟಿಸಿದ್ರು ಅಚ್ಚರಿಯಿಲ್ಲ!

  ಸಿನಿಮಾದಲ್ಲಿ ನಟಿಸಿದ್ರು ಅಚ್ಚರಿಯಿಲ್ಲ!

  ಕನ್ನಡ ಚಿತ್ರರಂಗ, ಕನ್ನಡ ಚಿತ್ರೋಧ್ಯಮದ ಬಗ್ಗೆ ಹೆಚ್ಚಿನ ಕಾಳಜಿ ತೋರುತ್ತಿರುವ ಮುಖ್ಯಮಂತ್ರಿ ಅವರಿಗೆ ಸ್ಯಾಂಡಲ್ ವುಡ್ ಚಿತ್ರರಂಗ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ. ಮತ್ತೊಂದೆಡೆ ಕನ್ನಡ ಇಂಡಸ್ಟ್ರಿಗೆ ಒಂದೊಂದೆ ಬಂಪರ್ ಕೊಡುಗೆ ನೀಡುತ್ತೆ ಹೋಗುತ್ತಿದ್ದಾರೆ. ಹೀಗಾಗಿ, ಅವಕಾಶ ಸಿಕ್ಕಿದ್ರೆ, ಸಿನಿಮಾದಲ್ಲೂ ಸಿದ್ದರಾಮಯ್ಯ ಅವರು ಅಭಿನಯಿಸಿದ್ರು ಅಚ್ಚರಿಯಿಲ್ಲ.

  English summary
  Pannaga Bharana Directorial, Happy New Year is Running Successfully all over Karnataka. BC Patil Met Karnataka Chief Minister Siddaramaiah and Requested him to Watch Happy New Year. CM has Agreed to watch the film Next week.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X