»   » ಮತದಾನದ ಹಕ್ಕಿನಿಂದ ವಂಚಿತರಾದ ನಟ 'ಚಿಕ್ಕಣ್ಣ'

ಮತದಾನದ ಹಕ್ಕಿನಿಂದ ವಂಚಿತರಾದ ನಟ 'ಚಿಕ್ಕಣ್ಣ'

Posted By:
Subscribe to Filmibeat Kannada

ಕನ್ನಡ ಸಿನಿಮಾರಂಗದಲ್ಲಿ ಸಾಕಷ್ಟು ಚಿತ್ರಗಳ ಮೂಲಕ ತಮ್ಮ ಅಭಿನಯದಿಂದಲೇ ನಕ್ಕು ನಗಿಸುವ ನಟ ಚಿಕ್ಕಣ್ಣ ಮತದಾನದ ಹಕ್ಕಿನಿಂದ ವಂಚಿತರಾಗಿದ್ದಾರೆ. ಸಿನಿಮಾ ಕಲಾವಿದರೆಲ್ಲರೂ ತಮ್ಮ ಹಕ್ಕನ್ನು ಚಲಾಯಿಸಿ ಅನೇಕರಿಗೆ ಮಾದರಿಯಾದರೆ ಚಿಕ್ಕಣ್ಣ ಮಾತ್ರ ಮತದಾನ ಮಾಡದೇ ಬೇಸರಗೊಂಡಿದ್ದಾರೆ.

ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಮತದಾರರಾಗಿರುವ ನಟ ಚಿಕ್ಕಣ್ಣ. ಮತದಾನಕ್ಕಾಗಿ ಚಿತ್ರೀಕರಣದಿಂದ ಬ್ರೇಕ್ ತೆಗೆದುಕೊಂಡು ಬೆಂಗಳೂರಿನಿಂದ ಮೈಸೂರಿಗೆ ಆಗಮಿಸಿದ್ದರು. ಮೈಸೂರಿನ ಬಲ್ಲಹಳ್ಳಿ ಗ್ರಾಮದ ನಿವಾಸಿಯಾಗಿರುವ ಕಾಮಿಡಿ ಕಿಂಗ್ ಬೆಂಗಳೂರಿನಲ್ಲಿ ಗುರುತಿನ ಚೀಟಿ ಮಾಡಿಸಿಕೊಳ್ಳದೆ ಹುಟ್ಟೂರಿನಲ್ಲಿ ಮತದಾನದ ಹಕ್ಕನ್ನ ಉಳಿಸಿಕೊಂಡಿದ್ದರು.

ಮತದಾನ ಮಾಡಿದ ಕಿಚ್ಚನಿಗೆ ಸಿಕ್ಕಿತು ಉಡುಗೊರೆ

ಮತದಾನ ಮಾಡಬೇಕೆಂದು ಮೈಸೂರಿಗೆ ಆಮಗಮಿಸಿ ಮತಗಟ್ಟೆಗೆ ಭೇಟಿ ನೀಡಿದಾಗ ತನ್ನ ಹೆಸರಿನ ಮೇಲೆ ಡಿಲಿಟ್ ಎಂದು ಉಲ್ಲೇಖ ಆಗಿರುವುದನ್ನ ತಿಳಿದು ಬೇಸರಗೊಂಡಿದ್ದಾರೆ. ಮೈಸೂರಿನ ಬಲ್ಲಹಳ್ಳಿ ಗ್ರಾಮದಲ್ಲಿ ವಾಸವಿಲ್ಲದ ಕಾರಣ ಡಿಲಿಟ್ ಆಗಿರುವ ಬಗ್ಗೆ ಸಬೂಬು ಹೇಳಿದ್ದಾರೆ ಮತಗಟ್ಟೆ ಸಿಬ್ಬಂದಿಗಳು.

Chikanna name has been deleted from the voter list .

ನಟ ಚಿಕ್ಕಣ್ಣ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದರು ಕೂಡ ಮತದಾನ ಮಾಡುವುದು ನಮ್ಮ ಹಕ್ಕು ಎಂದು ಪರಿಗಣಿಸಿ ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣ ಬೆಳೆಸಿದ್ದರು. ಆದರೆ ಕೊನೆಗು ಮತದಾನ ಮಾಡದೆ ಬೆಂಗಳೂರಿಗೆ ವಾಪಸ್ ಆಗಿದ್ದಾರೆ ನಟ ಚಿಕ್ಕಣ್ಣ.

English summary
Kannada film actor Chikanna has not been able to vote in the assembly polls this time, because his name has been deleted from the voter list .

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X