Don't Miss!
- News
ವಿಜಯಪುರದ ಆಲಮೇಲದಲ್ಲಿ ನೂರಾರು ಮಕ್ಕಳಿಗೆ ದಡಾರ: ಎಚ್ಚರಿಕೆ ವಹಿಸಲು ಜಿಲ್ಲಾಡಳಿತ ಮನವಿ
- Sports
ಆಕ್ಯುಪ್ರೆಶರ್ ಚಿಕಿತ್ಸೆ ಪಡೆಯುತ್ತಿರುವ ಚಿತ್ರವನ್ನು ಹಂಚಿಕೊಂಡ ಶ್ರೇಯಸ್ ಅಯ್ಯರ್
- Technology
ಅತಿ ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್ವಾಚ್ ಪರಿಚಯಿಸಿದ ಫೈರ್ಬೋಲ್ಟ್ !
- Lifestyle
ನಿಮ್ಮ ಗಂಡ 'ಅಮ್ಮನ ಮಗ'ವಾಗಿರುವುದರಿಂದ ತುಂಬಾನೇ ಸಮಸ್ಯೆ ಆಗುತ್ತಿದೆಯೇ?
- Finance
ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ದರ್ಶನ್ ಗೆ ಕ್ಯೂಟ್ ಆದ ಉಡುಗೊರೆ ಕೊಟ್ಟ ಚಿಕ್ಕಣ್ಣ
ನಟ ದರ್ಶನ್ ಗೆಳೆಯರ ಬಳಗ ದೊಡ್ಡದು. ಸಿನಿಮಾರಂಗದ ಒಳಗಿನವರು, ಹೊರಗಿನವರು ಸಾಕಷ್ಟು ಜನ ಗೆಳೆಯರಿದ್ದಾರೆ ದರ್ಶನ್‌ಗೆ.
Recommended Video

ಹಿರಿ ನಟ-ಕಿರಿ ನಟ, ಪೋಷಕ ನಟ-ಹಾಸ್ಯ ನಟ ಎಂಬೆಲ್ಲಾ ಭೇದವಿಲ್ಲದೆ ಎಲ್ಲರೊಂದಿಗೆ ಸ್ನೇಹ ಹೊಂದಿದ್ದಾರೆ ದರ್ಶನ್. ಸ್ಯಾಂಡಲ್‌ವುಡ್‌ನಲ್ಲಿ ದರ್ಶನ್ ರಸ ಆತ್ಮೀಯ ಗೆಳೆಯರಲ್ಲೊಬ್ಬರಾದ ಚಿಕ್ಕಣ್ಣನ ಮನೆಗೆ ಭೇಟಿ ನೀಡಿದ್ದರು.
ನಟ ಚಿಕ್ಕಣ್ಣ ಮೈಸೂರಿನ ಆರ್‌ಟಿ ನಗರದ ಬಳಿ ಶ್ರೀ ಚಾಮುಂಡೇಶ್ವರಿ ಕೋಳಿ-ಕುರಿ ಫಾರ್ಮ್ ಒಂದನ್ನು ಮಾಡಿದ್ದು, ಆ ಫಾರಂ ಗೆ ಸಹ ಭೇಟಿಕೊಟ್ಟು, ಚಿಕ್ಕಣ್ಣನ ಮನೆಯಲ್ಲಿ ಆತಿಥ್ಯವನ್ನು ಸಹ ಸ್ವೀಕರಿಸಿದ್ದಾರೆ. ದರ್ಶನ್ ಜೊತೆಯಲ್ಲಿ ನಟ ಪ್ರಜ್ವಲ್ ದೇವರಾಜ್, ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಸಹ ಜೊತೆಗಿದ್ದರು.
ಮನೆಗೆ ಬಂದ ಅತಿಥಿಗೆ ಮುದ್ದಾದ ಉಡುಗೊರೆಯೊಂದನ್ನು ನೀಡಿದ್ದಾರೆ ಚಿಕ್ಕಣ್ಣ. ಒಂದು ಕುರಿಮರಿಯನ್ನು ದರ್ಶನ್‌ಗೆ ಪ್ರೀತಿಯಿಂದ ಕೊಟ್ಟಿದ್ದಾರೆ. ಪ್ರಾಣಿ ಪ್ರಿಯ ದರ್ಶನ್, ತಮ್ಮದೇ ಒಂದು ಫಾರಂ ಮಾಡಿಕೊಂಡಿದ್ದು, ಸಾಕಷ್ಟು ಪ್ರಾಣಿಗಳನ್ನು ಸಾಕಿದ್ದಾರೆ, ಈ ಕುರಿಮರಿಯೂ ಆ ಫಾರಂ ಸೇರಲಿದೆ.
ಈ ಹಿಂದೆ ನಟ ದರ್ಶನ್ ಅವರೊಂದಿಗೆ ಸಫಾರಿಗಳಲ್ಲಿ ಭಾಗವಹಿಸಿದ್ದರು ನಟ ಚಿಕ್ಕಣ್ಣ. ದರ್ಶನ್ ಸೆರೆಹಿಡಿದಿದ್ದ ವನ್ಯ ಜೀವಿಗಳ ಛಾಯಾಚಿತ್ರವನ್ನು ದುಬಾರಿ ಮೊತ್ತ ಖರೀದಿಸಿದ್ದರು. ಛಾಯಾಚಿತ್ರ ಮಾರಿದ ಹಣವನ್ನು ಪ್ರಾಣಿ ರಕ್ಷಣೆ ಸಂಘ-ಸಂಸ್ಥೆಗಳಿಗೆ ದಾನ ಮಾಡುವ ಹವ್ಯಾಸವಿಟ್ಟುಕೊಂಡಿದ್ದಾರೆ ನಟ ದರ್ಶನ್.
ಇನ್ನು ಚಿಕ್ಕಣ್ಣ ಅವರ ಸಿನಿಮಾಗಳ ವಿಷಯಕ್ಕೆ ಬರುವುದಾದರೆ, ಹಾಸ್ಯ ನಟರಾಗಿದ್ದ ಚಿಕ್ಕಣ್ಣ ಈಗ ನಾಯಕ ನಟರಾಗುತ್ತಿದ್ದಾರೆ. 'ಉಪಾಧ್ಯಕ್ಷ' ಸಿನಿಮಾದಲ್ಲಿ ಪೂರ್ಣ ಪ್ರಮಾಣದ ನಾಯಕರಾಗುತ್ತಿದ್ದಾರೆ ಚಿಕ್ಕಣ್ಣ.