»   » ಕಾಮಿಡಿ ಚಿಕ್ಕಣ್ಣನಿಗೆ ನಿದ್ರೆಯಿಲ್ಲದಂತೆ ಮಾಡಿರೋರ್ಯಾರು?

ಕಾಮಿಡಿ ಚಿಕ್ಕಣ್ಣನಿಗೆ ನಿದ್ರೆಯಿಲ್ಲದಂತೆ ಮಾಡಿರೋರ್ಯಾರು?

By: ಜೀವನರಸಿಕ
Subscribe to Filmibeat Kannada

ಸ್ಯಾಂಡಲ್ವುಡ್ ಸದ್ಯದ ಹಾಟ್ ಫೇವರೀಟ್ ಕಾಮಿಡಿಯನ್ ಅಂದ್ರೆ ಚಿಕ್ಕಣ್ಣ. ಪ್ರೇಕ್ಷಕರು ಚಿಕ್ಕಣ್ಣನ ಯದ್ವಾ ತದ್ವಾ ಕಾಮಿಡಿಗೆ ಹೊಟ್ಟೆ ಹುಣ್ಣಾಗುವಷ್ಟು ನಗ್ತಿದ್ದಾರೆ, ವಿಶಿಷ್ಟ ಆಂಗಿಕ ಅಭಿನಯಕ್ಕೆ ಮನಸೋತಿದ್ದಾರೆ. ಇತ್ತೀಚೆಗಷ್ಟೇ ತೆರೆಕಂಡ ಚಿಕ್ಕಣ್ಣ ಮತ್ತು ಇತರರ ಅಭಿನಯದ ಬಾಂಬೆ ಮಿಠಾಯಿ ಹಿಟ್ಟಾಗಿದೆ. 'ರನ್ನ' ಇನ್ನೆರಡು ದಿನಗಳಲ್ಲಿ ಬರಲಿದೆ (ಜೂ. 4 ಬಿಡುಗಡೆ).

ಬಾಂಬೆ ಮಿಠಾಯಿ ಹಿಟ್ಟಾಗಿರೋದ್ರ ಹಿಂದಿರೋದು ಚಿಕ್ಕಣ್ಣ ಅನ್ನೋ ಕಾಮಿಡಿ ಮಾಸ್ಟರ್ ಅನ್ನೋದು ಪ್ರೇಕ್ಷಕರ ಅಭಿಮತ. ರಾಕಿಂಗ್ಸ್ಟಾರ್ ಯಶ್ ಜೊತೆ ಕಿರಾತಕ ಸಿನಿಮಾದಿಂದ ಹೆಚ್ಚು ಮಿಂಚೋಕೆ ಶುರುವಾದ ಚಿಕ್ಕಣ್ಣ ಈಗ 10ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬ್ಯುಸಿ. 'ರಾಜಾ ಹುಲಿ' ಚಿತ್ರದ ನಟನೆಗಾಗಿ ಸೈಮಾ ಬೆಸ್ಟ್ ಕಾಮಿಡಿಯನ್ ಪ್ರಶಸ್ತಿ ಕೂಡ ಬಗಲಿಗಿಳಿಸಿಕೊಂಡಿದ್ದಾರೆ. [ಚಿಕ್ಕಣ್ಣಗೆ 'ರನ್ನ' ಸುದೀಪ್ ದುಬಾರಿ ಉಡುಗೊರೆ!]

Chikkanna most wanted comedian for Kannada producers

ಸದ್ಯ ನಿರ್ಮಾಪಕರು ಸ್ಟಾರ್ ನಟರ ರೇಂಜಿಗೆ ಚಿಕ್ಕಣ್ಣನ ಹಿಂದೆ ಬಿದ್ದಿದ್ದು ನಮ್ಗೆ ಕಾಲ್ಶೀಟ್ ಬೇಕೇ ಬೇಕು ಅಂತ ಈ ಕಾಮಿಡಿ ಕಿಲಾಡಿಯ ಬೆನ್ನುಬಿದ್ದಿದ್ದಾರೆ. ಹಾಗಾಗೀನೇ ರಾತ್ರಿ ಹಗಲು ಎನ್ನದೇ ಶೂಟಿಂಗ್ನಲ್ಲಿ ಬ್ಯುಸಿಯಾಗಿರೋ ಚಿಕ್ಕಣ್ಣನ ಡೇಟ್ಸ್ ಗಾಗಿ ರಾತ್ರೀ ಹಗಲೂ ಕಾಲ್ ಮಾಡೋ ನಿರ್ಮಾಪಕರು ಹೆಚ್ಚಾಗಿದ್ದು ಯಾವಾಗಲೂ ಚಿಕ್ಕಣ್ಣ ಕಣ್ಣು ಎಣ್ಣೆ ಹೊಡೆದವರಂತೆ ಕೆಂಪಾಗಿರುತ್ತೆ ಅಂತಿದೆ ಗಾಂಧಿನಗರದ ಗಲ್ಲಿಮೂಲೆ.. ಹಾಗಿದ್ರೆ ಚಿಕ್ಕಣ್ಣನೂ ಫುಲ್ ಪ್ರಮಾಣದ ಹೀರೋ ಆಗೋ ದಿನಗಳು ದೂರವಿಲ್ಲ! [ಕಿಚ್ಚ ಸುದೀಪ್ ಅಂದ್ರೆ ಹುಲಿ ಅಂತಾರೆ ಚಿಕ್ಕಣ್ಣ]

English summary
Comedy actor Chikkanna is in demand for the fabulous comedy acting in many of super hit Kannada movies. People are saying that Bombay Mittai is liked by many for Chikkanna's acting. His another movie Ranna will hit screen on June 4. All the best Chikkanna.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada