For Quick Alerts
  ALLOW NOTIFICATIONS  
  For Daily Alerts

  ಫಿಲ್ಮ್ ಚೇಂಬರ್ ನೂತನ ಅಧ್ಯಕ್ಷರಾದ ಪಾರ್ವತಮ್ಮ ಸಹೋದರ ಚಿನ್ನೇಗೌಡ

  By Bharath Kumar
  |
  ಪಾರ್ವತಮ್ಮ ಸಹೋದರನಿಗೆ ಒಲಿದ ಅಧ್ಯಕ್ಷ ಸ್ಥಾನ..!! | Filmibeat kannada

  ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷರಾಗಿ ಖ್ಯಾತ ವಿತರಕ ಹಾಗೂ ಹಿರಿಯ ನಿರ್ಮಾಪಕ ಎಸ್ ಎ ಚಿನ್ನೇಗೌಡ ಅವರು ಆಯ್ಕೆಯಾಗಿದ್ದಾರೆ.

  ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ, ಉಪಾದ್ಯಕ್ಷ, ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳ ಸ್ಥಾನಕ್ಕೆ ಮಂಗಳವಾರ (ಜೂನ್ 26) ರಂದು ಚುನಾವಣೆ ನಡೆದಿದ್ದು, ಪಾರ್ವತಮ್ಮ ರಾಜ್ ಕುಮಾರ್ ಸಹೋದರ ಹಾಗೂ ನಿರ್ಮಾಪಕರಾದ ಚಿನ್ನೇಗೌಡ ಅವರು ಆಯ್ಕೆಯಾಗಿದ್ದಾರೆ. ಇವರ ಎದುರು ವಿತರಕ ಮಾರ್ಸ್ ಸುರೇಶ್ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದರು.

  ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣಾ ಕಣದಲ್ಲಿ ಘಟಾನುಘಟಿಗಳು!ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣಾ ಕಣದಲ್ಲಿ ಘಟಾನುಘಟಿಗಳು!

  ಎಸ್ ಎ ಚಿನ್ನೇಗೌಡ ಅವರು ಡಾ ಪಾರ್ವತಮ್ಮ ಅವರ ಸಹೋದರ. ನಟ ಶ್ರೀಮುರಳಿ ಮತ್ತು ವಿಜಯ ರಾಘವೇಂದ್ರ ಅವರ ತಂದೆ.

  ಇನ್ನುಳಿದಂತೆ ಕರ್ನಾಟಕ ವಾಣಿಜ್ಯ ಮಂಡಳಿಯ ನೂತನ ಪದಾದಿಕಾರಿಗಳ ಪಟ್ಟಿ ಹೀಗಿದೆ....

  ಎಸ್ ಎ ಚಿನ್ನೇಗೌಡ - ಅಧ್ಯಕ್ಷರು ಚಲನಚಿತ್ರ ವಾಣಿಜ್ಯ ಮಂಡಳಿ
  ಕರಿಸುಬ್ಬು - ಉಪಾಧ್ಯಕ್ಷರು, ನಿರ್ಮಾಪಕರ ವಲಯ
  ಕೆ ಮಂಜು - ಉಪಾಧ್ಯಕ್ಷರು, ವಿತರಕರ ವಲಯ
  ಭಾ ಮಾ ಹರೀಶ್ - ಗೌರವ ಕಾರ್ಯದರ್ಶಿ
  ಕೆ ಎಂ ವೀರೇಶ್ - ಖಜಾಂಚಿ

  English summary
  Film distributor and producer Chinne Gowda was on tuesday elected president of Karnataka Film Chamber of Commerce (KFCC).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X